ಜಪಾನ್​ನಲ್ಲಿ ಸಾವಿರಾರು ರೂಪಾಯಿಗೆ ಮಾರಾಟವಾಗುತ್ತಿದೆ ಖರ್ಬೂಜಾ, ಕಾರಣವೇನು ಗೊತ್ತಾ?


Updated:May 27, 2018, 1:22 PM IST
ಜಪಾನ್​ನಲ್ಲಿ ಸಾವಿರಾರು ರೂಪಾಯಿಗೆ ಮಾರಾಟವಾಗುತ್ತಿದೆ ಖರ್ಬೂಜಾ, ಕಾರಣವೇನು ಗೊತ್ತಾ?

Updated: May 27, 2018, 1:22 PM IST
ನ್ಯೂಸ್ 18 ಕನ್ನಡ

ಭಾರತದಲ್ಲಿ ಇತ್ತೀಚೆಗೆ ಖರ್ಬೂಜಾ ಹಣ್ಣಿನ ಸೀಜನ್ ಆರಂಭವಾಗಿದೆ. ಈಗ ಖರ್ಬೂಜಾ ಹಣ್ಣಿನ ಬೆಲೆ ಕಿಲೋ ಒಂದರ ಬೆಲೆ 40 ರೂ. ಯಿಂದ 80 ರೂಪಾಯಿಯವರೆಗೆ ಇದೆ. ಆದರೆ ಜಪಾನ್​ನಲ್ಲಿ ಒಂದು ಖರ್ಬೂಜಾ ಹಣ್ಣಿನ ಬೆಲೆ ಸುಮಾರು 6 ಸಾವಿರದಿಂದ 10 ಸಾವಿರದವರೆಗಿದೆ. ಇಲ್ಲಿ ಈ ಹಣ್ಣನ್ನು ಐಷಾರಾಮಿ ಹಣ್ಣೆಂದೇ ಪರಿಗಣಿಸಲಾಗುತ್ತದೆ. ಇನ್ನು ಕೇವಲ ಇದಷ್ಟೇ ಅಲ್ಲ, ಬದಲಾಗಿ ಇನ್ನೂ ಹಲವಾರು ಹಣ್ಣುಗಳ ಬೆಲೆ ಇಲ್ಲಿ ದುಬಾರಿ.

ಭಾರತದಲ್ಲಿ ಜನರು ನೆಂಟರ ಮನೆಗೆ ಇಲ್ಲವೇ ಪರಿಚಯಸ್ಥರ ಮನೆಗೆ ತೆರಳುವಾಗ ದುಬಾರಿ ಗಿಫ್ಟ್​ಗಳನ್ನು ಕೊಂಡೊಯ್ಯುತ್ತಾರೆ. ಆದರೆ ಜಪಾನ್​ನಲ್ಲಿ ಜನರು ಹಣ್ಣುಗಳನ್ನೇ ಗಿಫ್ಟ್​ನಂತೆ ನೀಡುತ್ತಾರೆ. ಅಷ್ಟಕ್ಕೂ ಜಪಾನ್​ನಲ್ಲಿ ಹಣ್ಣುಗಳು ಇಷ್ಟು ದುಬಾರಿ ಏಕೆ? ಎಂಬ ಪ್ರಶ್ನೆ ಮನದಲ್ಲಿ ಮುಡುವುದು ಸಹಜ. ಇಲ್ಲಿದೆ ಉತ್ತರ

ವಾಸ್ತವವಾಗಿ ಇಲ್ಲಿನ ರೈತರು ಹಣ್ಣಿನ ಆಕಾರಕ್ಕೆ ಬಹಳಷ್ಟು ಗಮನ ನೀಡುತ್ತಾರೆ. ಒಂದು ವೇಳೆ ಹಣ್ಣಿನ ಆಕಾರ ಚೆನ್ನಾಗಿಲ್ಲವೆಂದಾದರೆ ಅವರದನ್ನು ಬಳಸುವುದಿಲ್ಲ. ಉದಾಹರಣೆಗೆ ಖರ್ಬೂಜಾ ಹಣ್ಣು ಆಕಾರದಲ್ಲಿ ಚೆನ್ನಾಗಿದ್ದು, ಗುಂಡಾಗಿದ್ದರಷ್ಟೇ ಇದನ್ನು ಖರೀಧಿಸುತ್ತಾರೆ. ಇದಕ್ಕೆ ತಕ್ಕಂತೆ ತೂಕವೂ ಸಮಾನವಾಗಿರಬೇಕು.

ಇನ್ನು ಎಲ್ಲಾ ಖರ್ಬೂಜಾ ಹಣ್ಣುಗಳು ಒಂದೇ ರೀತಿ ಇರುತ್ತವೆಂದು ಹೇಳಲಾಗುವುದಿಲ್ಲ. ಹೀಗಾಗಿ ಸರಿಯಾದ ಆಕಾರವಿಲ್ಲದ ಹಲವಾರು ಖರ್ಬೂಜಾ ಹಣ್ಣುಗಳು ಹಾಳಾಗುತ್ತವೆ. ಇದೇ ಕಾರಣದಿಂದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹಣ್ಣುಗಳ ಬೆಲೆ ದುಬಾರಿಯಾಗಿರುತ್ತದೆ. ಹಲವಾರು ಬಾರಿ ಈ ಹಣ್ಣುಗಳನ್ನು ಹರಾಜು ಹಾಕಿ ಮಾರಾಟ ಮಾಡಲಾಗುತ್ತದೆ. ಇನ್ನು ಹರಾಜಿನಲ್ಲಿ ಮಾರಾಟವಾಗುವ ಹಣ್ಣುಗಳು ಲಕ್ಷಕ್ಕೂ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತವಚೆ. ಈ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತದೆ.
First published:May 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...