ಚಹಾ ಕುಡಿಯುತ್ತಾ ಧೂಮಪಾನ ಮಾಡುತ್ತೀರಾ? ಹಾಗಿದ್ರೆ ನೀವು ಹೆಚ್ಚು ಕಾಲ ಬದುಕುವುದು ಡೌಟ್

ಧೂಮಪಾನ ಮಾಡುವಾಗ ಒಂದು ಕಪ್ ಚಹಾ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬುದು ಧಮ್​ ಪ್ರಿಯರ ಮಾತು. ಆದರೆ ನೆನಪಿಟ್ಟುಕೊಳ್ಳಿ, ಇದರಿಂದ ಆಗುವ ಹಾನಿ ಅಷ್ಟಿಷ್ಟಲ್ಲ.

zahir | news18
Updated:March 20, 2019, 5:46 PM IST
ಚಹಾ ಕುಡಿಯುತ್ತಾ ಧೂಮಪಾನ ಮಾಡುತ್ತೀರಾ? ಹಾಗಿದ್ರೆ ನೀವು ಹೆಚ್ಚು ಕಾಲ ಬದುಕುವುದು ಡೌಟ್
@Unsplash
  • News18
  • Last Updated: March 20, 2019, 5:46 PM IST
  • Share this:
ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂದು ಸಿಗರೇಟ್​, ಬೀಡಿ ಪ್ಯಾಕ್​ಗಳ ಮೇಲೆ ಒತ್ತಿ ಹೇಳಲಾಗಿದೆ. ಆದರೂ ಕೆಲವರು ಧಮ್​ನ ಗಮ್ಮತ್ತಿನಿಂದ ಹೊರ ಬರುವುದಿಲ್ಲ. ಈ ದುರಾಭ್ಯಾಸದ ವೇಳೆ ಕೆಲವರು ಟೀ ಕುಡಿಯುವ ಹವ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ.

ಧೂಮಪಾನ ಮಾಡುವಾಗ ಒಂದು ಕಪ್ ಚಹಾ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬುದು ಧಮ್​ ಪ್ರಿಯರ ಮಾತು. ಆದರೆ ನೆನಪಿಟ್ಟುಕೊಳ್ಳಿ, ಇದರಿಂದ ಆಗುವ ಹಾನಿ ಅಷ್ಟಿಷ್ಟಲ್ಲ. ಏಕೆಂದರೆ ಧೂಮಪಾನದಿಂದ ಕ್ಯಾನ್ಸರ್​ ಬರುವುದೇನು ನಿಜ. ಅದರಲ್ಲೂ ಚಹಾದೊಂದಿಗೆ ಸಿಗರೇಟ್, ಬೀಡಿ ಸೇವನೆಯ ಅಭ್ಯಾಸ ನೀವು ಬೆಳೆಸಿಕೊಂಡಿದ್ದರೆ ನೀವು ಗಂಟಲು ಮತ್ತು ಹೊಟ್ಟೆ ಎರಡನ್ನೂ ಕಳೆದುಕೊಳ್ಳುತ್ತೀರಿ.

ಏಕೆಂದರೆ ಇಂತಹದೊಂದು ಅಭ್ಯಾಸದಿಂದ ಎಸ್ಸೊಫೆಗಲ್ ಎಂಬ ಕ್ಯಾನ್ಸರ್ ಬಹುಬೇಗನೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಧಮ್ ಹಾಗೂ ಟೀ ಕಾಂಬಿನೇಷನ್ ಎಸ್ಸೊಫೆಗಲ್ ಕ್ಯಾನ್ಸರ್​ನ ಅಪಾಯವನ್ನು ಐದು ಪಟ್ಟು ಹೆಚ್ಚಿಸುತ್ತದೆ ಎನ್ನುತ್ತಿದೆ ಅಧ್ಯಯನ. ಇದರಿಂದ ಹೊಟ್ಟೆ ಹಾಗೂ ಗಂಟಲಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಒಂದು ಬಾರಿ ಈ ಕ್ಯಾನ್ಸರ್​ ಕಾಣಿಸಿಕೊಂಡರೆ ಬದುಕುಳಿಯುವ ಸಾಧ್ಯತೆ ಕೂಡ ಕಡಿಮೆ. ಇಷ್ಟೇ ಅಲ್ಲದೆ ಗರಂ ಚಹಾ ಹಾಗೂ ಧೂಮಪಾನ ಸೇವನೆಯಿಂದ ಟ್ಯೂಮರ್​ನಂತಹ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತದೆ ಎಂದಿದ್ದಾರೆ ಸಂಶೋಧಕರು.

ಹೀಗಾಗಿ ಧೂಮಪಾನವನ್ನು ಮಾಡಬೇಡಿ. ಇದರ ಹೊರತಾಗಿ ಧಮ್ ಹೊಡೆಯುವ ಅಭ್ಯಾಸವಿದ್ದರೆ ಚಹಾ ಕುಡಿಯುತ್ತಾ ಬೀಡಿ, ಸಿಗರೇಟ್ ಸೇದಬೇಡಿ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಯಾವ ವಯಸ್ಸಿನಲ್ಲಿ ಮಹಿಳೆಯರು ಹೆಚ್ಚು ಲೈಂಗಿಕ ಸುಖ ಪಡೆಯುತ್ತಾರೆ? ಸಂಶೋಧನೆಯಿಂದ ಹೊರ ಬಿತ್ತು ಹೊಸ ಸತ್ಯ

First published:March 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ