• Home
  • »
  • News
  • »
  • lifestyle
  • »
  • Uric Acid And Giloy: ಅಧಿಕ ಯೂರಿಕ್ ಆಮ್ಲ ಸಮಸ್ಯೆ ಕಡಿಮೆ ಮಾಡುತ್ತದೆ ಗಿಲೊಯ್, ಜೀವನಶೈಲಿಯಲ್ಲಿ ಬದಲಾವಣೆ ಮಾಡಿ

Uric Acid And Giloy: ಅಧಿಕ ಯೂರಿಕ್ ಆಮ್ಲ ಸಮಸ್ಯೆ ಕಡಿಮೆ ಮಾಡುತ್ತದೆ ಗಿಲೊಯ್, ಜೀವನಶೈಲಿಯಲ್ಲಿ ಬದಲಾವಣೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚಿನ ಮಟ್ಟದ ಯೂರಿಕ್ ಆಮ್ಲವು ಮಧುಮೇಹ ಹೈಪೋಥೈರಾಯ್ಡಿಸಮ್ ಕೆಲವು ರೀತಿಯ ಕ್ಯಾನ್ಸರ್ ಮತ್ತು ಸೋರಿಯಾಸಿಸ್‌ನಂತಹ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.

  • Share this:

    ನಿಮ್ಮ ಮೂತ್ರಪಿಂಡಗಳು (Kidney) ಯೂರಿಕ್ ಆಮ್ಲವನ್ನು (Uric Acid) ಪರಿಣಾಮಕಾರಿಯಾಗಿ ತೊಡೆದು ಹಾಕದೇ ಇದ್ದಾಗ ಹೆಚ್ಚಿನ ಯೂರಿಕ್ ಆಮ್ಲದ ಮಟ್ಟಗಳು ಹೆಚ್ಚಾಗಿ ಸಂಭವಿಸುತ್ತವೆ ಎಂದು ಹೇಳುತ್ತದೆ ಮೇಯೊ ಕ್ಲಿನಿಕ್. ಯೂರಿಕ್ ಆಮ್ಲ ನಿಧಾನವಾಗಿ ತೆಗೆದು ಹಾಕಲು ಕಾರಣವಾಗುವ ಅಂಶಗಳೆಂದರೆ ಪ್ಯೂರಿನ್-ಭರಿತ ಆಹಾರ (Food) ಸೇವನೆ ಮಾಡುವುದು, ಅಧಿಕ ತೂಕ (Weight Gain), ಮಧುಮೇಹ, ಮೂತ್ರವರ್ಧಕ ಮಾತ್ರೆಗಳನ್ನು ಸೇವನೆ ಮಾಡುವುದು ಮತ್ತು ಹೆಚ್ಚು ಮದ್ಯಪಾನ ಮಾಡುವುದು ಯೂರಿಕ್ ಆಮ್ಲ ಹೆಚ್ಚಾಗಲು ಕಾರಣ ಆಗುತ್ತದೆ. ರಕ್ತದಲ್ಲಿ ಹೆಚ್ಚಿದ ಯೂರಿಕ್ ಆಮ್ಲದ ಸ್ಥಿತಿಯನ್ನು ಹೈಪರ್ಯುರಿಸೆಮಿಯಾ ಎಂದು ಕರೆಯುತ್ತಾರೆ. ಯೂರಿಕ್ ಆಮ್ಲದ ಹೆಚ್ಚಳವು ಕಲ್ಲುಗಳ ರೂಪ ಪಡೆದಾಗ ವ್ಯಕ್ತಿಗೆ ತುಂಬಾ ಅಪಾಯಕಾರಿಯಾಗಿ ಪರಿಣಮಿಸುತ್ತದೆ.


    ಗಂಭೀರ ಆರೋಗ್ಯ ಸಮಸ್ಯೆ ಕಾಡುತ್ತವೆ


    ಹೀಗಾಗಿ ನೀವು ಗೌಟ್, ಸಂಧಿವಾತ ಅಥವಾ ಮೂತ್ರಪಿಂಡದ ಕಲ್ಲುಗಳು ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುತ್ತವೆ. ಅಲ್ಲದೆ ಹೆಚ್ಚಿನ ಮಟ್ಟದ ಯೂರಿಕ್ ಆಮ್ಲವು ಮಧುಮೇಹ, ಹೈಪೋಥೈರಾಯ್ಡಿಸಮ್, ಕೆಲವು ರೀತಿಯ ಕ್ಯಾನ್ಸರ್ ಮತ್ತು ಸೋರಿಯಾಸಿಸ್‌ನಂತಹ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.


    ಅಂತಹ ಸ್ಥಿತಿಯಲ್ಲಿ, ಸಮಯಕ್ಕೆ ಅದರ ಚಿಕಿತ್ಸೆಯು ಬಹಳ ಮುಖ್ಯ ಆಗಿದೆ. ಆದ್ದರಿಂದ ನೀವು ಅದನ್ನು ಮನೆಯಲ್ಲಿಯೇ ಸರಿಪಡಿಸಬಹುದು.


    ಇದನ್ನೂ ಓದಿ: ಕಣ್ಣುಗಳಲ್ಲಿ ಉಂಟಾಗುವ ಈ ಸಮಸ್ಯೆಗಳು ಗಂಭೀರ ತೊಂದರೆಗೆ ಕಾರಣವಾಗುತ್ತವೆ


    ಅಧಿಕ ಯೂರಿಕ್ ಆಮ್ಲ ಸಮಸ್ಯೆ


    ಗೌಟ್ (ಅಧಿಕ ಯೂರಿಕ್ ಆಮ್ಲ), ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯ ಆಗಿದೆ ಎಂದು ಆಯುರ್ವೇದ ವೈದ್ಯ ದೀಕ್ಷಾ ಭಾವಸರ್ ಹೇಳುತ್ತಾರೆ. ಇದಕ್ಕೆ ಬಿಪಿ, ಮಧುಮೇಹದಂತಹ ಮಾತ್ರೆಗಳನ್ನು ಜನರು ಪ್ರತಿದಿನ ಸೇವನೆ ಮಾಡುತ್ತಾರೆ.


    ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ ಅದನ್ನು ಮನೆಯಲ್ಲಿಯೇ ಹೇಗೆ ಸರಿಪಡಿಸಬಹುದು ಎಂದು ಇಲ್ಲಿ ತಿಳಿಯೋಣ. ಿದಕ್ಕಾಗಿ ನೀವು ನಿಮ್ಮ ಜೀವನದುದ್ದಕ್ಕೂ ಔಷಧಿ ಸೇವನೆ ಮಾಡುವ ಅಗತ್ಯವಿಲ್ಲ.


    ಅಧಿಕ ಯೂರಿಕ್ ಆಮ್ಲಕ್ಕೆ ಕಾರಣಗಳು


    ಕಳಪೆ ಕರುಳಿನ ಆರೋಗ್ಯ


    ದೈಹಿಕ ಚಟುವಟಿಕೆಯ ಕೊರತೆ


    ಹೆಚ್ಚು ಪ್ರೋಟೀನ್ ಮತ್ತು ಕಡಿಮೆ ಕೊಬ್ಬಿನ ಸೇವನೆ


    ರಾತ್ರಿ ಭಾರೀ ಭೋಜನ


    ನಿದ್ರೆ ಮತ್ತು ತಿನ್ನುವ ಸಮಯದಲ್ಲಿ ಅನಿಯಮಿತತೆ


    ಕಡಿಮೆ ನೀರಿನ ಸೇವನೆ


    ದುರ್ಬಲ ಮೂತ್ರಪಿಂಡಗಳು


    ಅತಿಯಾಗಿ ತಿನ್ನುವುದು


    ಅಧಿಕ ಯೂರಿಕ್ ಆಮ್ಲ ನಿಯಂತ್ರಿಸಲು ಜೀವನಶೈಲಿಯಲ್ಲಿ ಯಾವ ಬದಲಾವಣೆ ಅಗತ್ಯ


    ಪ್ರತಿದಿನ 45 ನಿಮಿಷಗಳ ಕಾಲ ವ್ಯಾಯಾಮ ಮಾಡಿ.


    ಸಾಕಷ್ಟು ನೀರು ಕುಡಿಯಿರಿ.


    ರಾತ್ರಿಯ ಊಟದಲ್ಲಿ ಬೇಳೆಕಾಳುಗಳು/ಬೀನ್ಸ್ ಮತ್ತು ಗೋಧಿ ಪದಾರ್ಥ ಕಡಿಮೆ ಸೇವಿಸಿ.


    8 ಗಂಟೆಗೆ ಊಟ ತಿನ್ನಲು ಪ್ರಯತ್ನಿಸಿ.


    ಸಿಟ್ರಸ್ ಹಣ್ಣುಗಳಾದ ಆಮ್ಲಾ, ಬೆರ್ರಿ ಇತ್ಯಾದಿ ಸೇವಿಸಿ.


    ಚಯಾಪಚಯ ಸಮತೋಲನದಲ್ಲಿಡಿ.


    ಕಡಿಮೆ ಒತ್ತಡ ತೆಗೆದುಕೊಳ್ಳಿ.


    ಪ್ರತಿದಿನ ಸಾಕಷ್ಟು ನಿದ್ರೆ ಪಡೆಯಿರಿ.


    ಯೂರಿಕ್ ಆಮ್ಲಕ್ಕೆ ರಾಮಬಾಣ ಯಾವುದು?


    ನಾವು ಗಿಲೋಯ್ ಎಂದು ಕರೆಯುವ ಗುಡುಚಿ ಹೆಚ್ಚಿದ ಯೂರಿಕ್ ಆಮ್ಲಕ್ಕೆ ಔಷಧಿಯಂತೆ ಕೆಲಸ ಮಾಡುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯೆ ದೀಕ್ಷಾ ಭಾವಸರ್. ಇದು ಗೌಟ್‌ಗೆ ಅದ್ಭುತ ಮತ್ತು ಅತ್ಯುತ್ತಮ ಆಯುರ್ವೇದ ಮೂಲಿಕೆ ಆಗಿದೆ.


    ಇದನ್ನೂ ಓದಿ: ಮೂಳೆಗಳಲ್ಲಿ ಕಿರ್ ಎಂಬ ಶಬ್ಧ ಉಂಟಾಗುವುದು ಏಕೆ? ಇದಕ್ಕೆ ಕಾರಣವೇನು?


    ಗಿಲೋಯ್ ಅನ್ನು ಬಳಸುವುದು ಹೇಗೆ?


    ನಿಮ್ಮ ಮನೆಯಲ್ಲಿ ಒಂದು ಗಿಡ ಇದ್ದರೆ ಅದನ್ನು ಸುಲಭವಾಗಿ ಬಳಸಬಹುದು. ಇದಕ್ಕಾಗಿ, ತಾಜಾ ಎಲೆಗಳು ಮತ್ತು ಕಾಂಡವನ್ನು ರಾತ್ರಿಯಿಡೀ ನೆನೆಸಿ, ಬೆಳಿಗ್ಗೆ ಒಂದು ಲೋಟ ನೀರಿನಲ್ಲಿ ರುಬ್ಬಿ ಮತ್ತು ಅರ್ಧವಾಗುವವರೆಗೆ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ. ನೀವು ಇದನ್ನು ಜ್ಯೂಸ್, ಪೌಡರ್, ಟ್ಯಾಬ್ಲೆಟ್‌ನಂತಹ ಇತರ ರೂಪಗಳಲ್ಲಿ ಸೇವನೆ ಮಾಡಬಹುದು.

    Published by:renukadariyannavar
    First published: