High-Protein Lunch: ಚಿತ್ರಾನ್ನ, ವಡೆ ಬಿಟ್ಟು ಕಡಲೆ ಬೇಳೆಯಲ್ಲಿ ಮಾಡಬಹುದು ಈ ಟೇಸ್ಟಿ ತಿಂಡಿಗಳನ್ನು

ನೀವು ಮನೆಯಲ್ಲಿ ಇದ್ದರೆ, ನೀವು ತಯಾರು ಮಾಡಿಕೊಳ್ಳುವ ಆಹಾರವು ಪೌಷ್ಟಿಕವಾಗಿರಬೇಕು ಮತ್ತು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡಬೇಕು ಅಂತ ನಿಮಗೆ ಅನ್ನಿಸಿದರೆ, ಈ ಚನಾ ದಾಲ್ ಎಂದರೆ ಕಡಲೆ ಬೆಳೆಯಿಂದ ಮಾಡಿಕೊಳ್ಳುವ ಪಾಕವಿಧಾನಗಳನ್ನು ಮನೆಯಲ್ಲಿ ಪ್ರಯತ್ನಿಸಿರಿ. ಇಲ್ಲಿ ನಾವು ಪ್ರೋಟೀನ್ ನಿಂದ ತುಂಬಿರುವ ಮತ್ತು ಯಾವುದೇ ಸಮಯದಲ್ಲಿ ತಯಾರಿಸಬಹುದಾದ ರುಚಿಕರವಾದ ಕಡಲೆ ಬೇಳೆ ಪಾಕವಿಧಾನಗಳ ಪಟ್ಟಿಯನ್ನು ನಿಮಗಾಗಿ ನೀಡಿದ್ದೇವೆ.

 ಕಡಲೆ ಬೇಳೆಯ ಪಾಕವಿಧಾನ

ಕಡಲೆ ಬೇಳೆಯ ಪಾಕವಿಧಾನ

  • Share this:
ನಿಮ್ಮ ಮಧ್ಯಾಹ್ನದ ಊಟದಲ್ಲಿ (Lunch) ಅಧಿಕವಾದ ಪ್ರೋಟೀನ್ ಇರಬೇಕು ಅಂತ ನೀವು ಅಂದುಕೊಂಡರೆ, ಈ ಪಾಕವಿಧಾನಗಳನ್ನು (recipe) ಒಮ್ಮೆ ಮನೆಯಲ್ಲಿ ಟ್ರೈ ಮಾಡಿಕೊಂಡು ತಿನ್ನಿರಿ. ನೀವು ಮನೆಯಲ್ಲಿ ಇದ್ದರೆ, ನೀವು ತಯಾರು ಮಾಡಿಕೊಳ್ಳುವ ಆಹಾರವು ಪೌಷ್ಟಿಕವಾಗಿರಬೇಕು (Nutritious) ಮತ್ತು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡಬೇಕು ಅಂತ ನಿಮಗೆ ಅನ್ನಿಸಿದರೆ, ಈ ಚನಾ ದಾಲ್ (Chana Dal) ಎಂದರೆ ಕಡಲೆ ಬೆಳೆಯಿಂದ ಮಾಡಿಕೊಳ್ಳುವ ಪಾಕವಿಧಾನಗಳನ್ನು ಮನೆಯಲ್ಲಿ ಪ್ರಯತ್ನಿಸಿರಿ. ಇಲ್ಲಿ ನಾವು ಪ್ರೋಟೀನ್ ನಿಂದ (protein) ತುಂಬಿರುವ ಮತ್ತು ಯಾವುದೇ ಸಮಯದಲ್ಲಿ ತಯಾರಿಸಬಹುದಾದ ರುಚಿಕರವಾದ ಕಡಲೆ ಬೇಳೆ ಪಾಕವಿಧಾನಗಳ ಪಟ್ಟಿಯನ್ನು ನಿಮಗಾಗಿ ನೀಡಿದ್ದೇವೆ.

ನೀವು ಮನೆಯಲ್ಲಿಯೇ ತಯಾರಿಸಬಹುದಾದ 5 ಕಡಲೆ ಬೇಳೆ ಪಾಕವಿಧಾನಗಳು
1. ಚನಾ ದಾಲ್ ಬಿರಿಯಾನಿ
ಸುವಾಸನೆಭರಿತ ಬಿರಿಯಾನಿ ತುಂಬಿದ ತಟ್ಟೆಯನ್ನು ಯಾರು ಇಷ್ಟಪಡುವುದಿಲ್ಲ ಹೇಳಿ? ಈ ಕಡಲೆ ದಾಲ್ ಬಿರಿಯಾನಿ ಹೈದರಾಬಾದಿ ಭಕ್ಷ್ಯವಾಗಿದೆ ಮತ್ತು ಕ್ಲಾಸಿಕ್ ಮಾಂಸಾಹಾರಿ ಬಿರಿಯಾನಿಗೆ ಉತ್ತಮ ಪರ್ಯಾಯವಾಗಿದೆ. ಇದು ಪ್ರೋಟೀನ್ ಸಮೃದ್ಧವಾಗಿದೆ ಮತ್ತು ಇದನ್ನು ತಯಾರಿಸುವುದು ಸಹ ತುಂಬಾನೇ ಸುಲಭವಾಗಿದೆ. ಇದನ್ನು ಸಲಾಡ್ ಅಥವಾ ರೈತಾದೊಂದಿಗೆ ಜೋಡಿಸಿಕೊಂಡು ಮಧ್ಯಾಹ್ನ ಸೇವಿಸಿದರೆ ಎಂತಹ ಮಜಾ.

2. ಬಂಗಾಳಿ ಶೈಲಿಯ ಚನಾ ದಾಲ್
ಈ ಕಡಲೆ ಬೇಳೆ ಪಾಕವಿಧಾನದಲ್ಲಿ, ಬೇಳೆಕಾಳುಗಳನ್ನು ಕನಿಷ್ಠ 10 ನಿಮಿಷಗಳ ಕಾಲ ನೆನೆಸಿ ನಂತರ ತುಪ್ಪ ಮತ್ತು ಗಿಡಮೂಲಿಕೆಗಳು ಮತ್ತು ಸುವಾಸನೆಭರಿತ ಮಸಾಲೆಗಳ ಮಿಶ್ರಣದಲ್ಲಿ ಬೇಯಿಸಲಾಗುತ್ತದೆ. ತುಪ್ಪವು ಈ ಭಕ್ಷ್ಯದಲ್ಲಿ ದಟ್ಟವಾಗಿ ಹರಡುವುದಲ್ಲದೆ ಇದನ್ನು ಆರೋಗ್ಯಕರವಾಗಿಸುತ್ತದೆ. ಅನ್ನ ಅಥವಾ ನಿಮ್ಮ ಆಯ್ಕೆಯ ಯಾವುದೇ ರೋಟಿ, ಚಪಾತಿ ಅಥವಾ ತಂದೂರಿ ರೋಟಿ ಯೊಂದಿಗೆ ಇದನ್ನು ಜೋಡಿಸಿಕೊಂಡು ತಿಂದರೆ, ಇದಕ್ಕಿಂತಲೂ ರುಚಿ ಬೇರೊಂದಿರುವುದಿಲ್ಲ ಅಂತ ಹೇಳಬಹುದು.

ಇದನ್ನೂ ಓದಿ:  Coconut Simple Recipes: ತೆಂಗು ಇದ್ರೆ ಮಂಗನೂ ಅಡುಗೆ ಮಾಡುತ್ತಂತೆ! ತೆಂಗಿನಕಾಯಿಯ ಸಿಂಪಲ್ ರೆಸಿಪಿ ಇಲ್ಲಿದೆ!

3. ಚನಾ ದಾಲ್ ಪುಲಾವ್
ಪುಲಾವ್, ಬಹುತೇಕರು ಮೆಚ್ಚುವಂತಹ ಒಂದು ಸ್ವಾದಿಷ್ಟಕರವಾದ ಭಕ್ಷ್ಯವಾಗಿದ್ದು, ಇದು ನಿಮಗೆ ಪ್ರಯೋಗಕ್ಕೆ ಸಾಕಷ್ಟು ಅವಕಾಶವನ್ನು ನೀಡುತ್ತದೆ. ಇಲ್ಲಿ ನಾವು ನಿಮಗೆ ಕಡಲೆ ಬೇಳೆಯನ್ನು ಒಳಗೊಂಡಿರುವ ಪುಲಾವ್ ಪಾಕದ ಬಗ್ಗೆ ಹೇಳುತ್ತಿದ್ದೇವೆ. ಅಕ್ಕಿಯೊಂದಿಗೆ ಮಾಡಲಾಗುವ ಈ ಭಕ್ಷ್ಯ ಮಸಾಲೆಯುಕ್ತ ಹಾಗೂ ಸುವಾಸನೆಯುಕ್ತವಾಗಿರುತ್ತದೆ. ನೀವು ಮಧ್ಯಾಹ್ನದ ಊಟಕ್ಕೆ ಹಗುರವಾದುದ್ದನ್ನು ಮತ್ತು ಆರೋಗ್ಯಕರವಾಗಿರುವುದನ್ನು ತಿನ್ನಲು ಬಯಸಿದರೆ, ಇದು ನಿಮಗೆ ಪರಿಪೂರ್ಣ ಪಾಕವಿಧಾನವಾಗಿದೆ.

4. ದಾಲ್ ದಾಲ್ಚಾ
ದಾಲ್ ದಾಲ್ಚಾ ನಿಧಾನವಾಗಿ ಬೇಯಿಸಿದ ಭಕ್ಷ್ಯವಾಗಿದ್ದು, ಇದನ್ನು ಬೇಳೆಗಳು ಮತ್ತು ಸೌಮ್ಯ ಮಸಾಲೆಗಳಿಂದ ತಯಾರಿಸಲಾಗುತ್ತದೆ. ಇದನ್ನು ಕಡಲೆ ಬೇಳೆಯನ್ನು ಬಳಸಿ ತಯಾರಿಸಲಾಗುತ್ತದೆ ಹಾಗೂ ಇದು ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ. ಕರಿಬೇವಿನ ಎಲೆಗಳು, ಬೆಳ್ಳುಳ್ಳಿ ಮತ್ತು ಮೆಣಸಿನ ಕಾಯಿ ಈ ದಾಲ್ಚಾ ನ ಪರಿಮಳವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದನ್ನು ಸ್ವಲ್ಪ ಬೇಯಿಸಿದ ಅನ್ನದೊಂದಿಗೆ ಮಧ್ಯಾಹ್ನದ ಹೊತ್ತಿನಲ್ಲಿ ಸೇವಿಸಬಹುದು.

ಇದನ್ನೂ ಓದಿ: Breakfast Recipe: ಮಕ್ಕಳ ಫೇವರಿಟ್​ ಭೇಲ್​ ಪುರಿ ಸ್ಯಾಂಡ್​ವಿಚ್​ ಮನೆಯಲ್ಲಿಯೇ ಮಾಡಿ ಸವಿಯಿರಿ

5. ಧಾಬಾ ಶೈಲಿಯ ಚನಾ ದಾಲ್ ಫ್ರೈ
ನೀವು ಪ್ರಯತ್ನಿಸಬೇಕಾದ ಮತ್ತೊಂದು ಕಡಲೆ ಬೇಳೆ ಪಾಕವಿಧಾನವೆಂದರೆ ಈ ಧಾಬಾ ಶೈಲಿಯ ಚನಾ ದಾಲ್ ಫ್ರೈ. ಡಬಲ್ ಟೆಂಪರಿಂಗ್ ನೊಂದಿಗೆ ತಯಾರಿಸಲಾದ ಕ್ಲಾಸಿಕ್ ಕಡಲೆ ಬೇಳೆ ಪಾಕವಿಧಾನ ಇದು. ಹೌದು, ನೀವು ನಮ್ಮ ಮಾತುಗಳನ್ನು ಸರಿಯಾಗಿಯೇ ಕೇಳಿಸಿಕೊಂಡಿದ್ದೀರಿ. ಕ್ರ್ಯಾಕ್ಲಿಂಗ್ ತಡ್ಕಾ ಇದಕ್ಕೆ ಬೋಲ್ಡ್ ಪರಿಮಳವನ್ನು ನೀಡುತ್ತದೆ. ಎಷ್ಟು ರುಚಿಕರವಾಗಿರುತ್ತದೆ ಎಂದರೆ ಇದನ್ನು ನೀವು ಮತ್ತೆ ಮತ್ತೆ ಸೇವಿಸುವ ಬಯಕೆ ವ್ಯಕ್ತಪಡಿಸುತ್ತೀರಿ.
Published by:Ashwini Prabhu
First published: