• Home
  • »
  • News
  • »
  • lifestyle
  • »
  • High Cholesterol: ಅಧಿಕ ಕೊಲೆಸ್ಟ್ರಾಲ್ ಕೋವಿಡ್ ಅಪಾಯವನ್ನು ಹೆಚ್ಚಿಸುತ್ತಂತೆ

High Cholesterol: ಅಧಿಕ ಕೊಲೆಸ್ಟ್ರಾಲ್ ಕೋವಿಡ್ ಅಪಾಯವನ್ನು ಹೆಚ್ಚಿಸುತ್ತಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

High Cholesterol Will Increase Covid: ದೀರ್ಘ ಕೋವಿಡ್ ಒಂದು ಅಪಾಯವಿರುವ ಕಾಯಿಲೆಯಾಗಿದೆ. ಈ ಸಮಯದಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.

  • Share this:

ಕೊರೋನಾವೆಂಬ (Corona) ಮಹಾಮಾರಿ ಕಳೆದೆರಡು ವರ್ಷಗಳಲ್ಲಿ ಜಗತ್ತನ್ನೇ ಅಲ್ಲೋಲ ಕಲ್ಲೋಲವಾಗಿಸಿದೆ. ಕಣ್ಣಿಗೆ ಕಾಣದ ಸೋಂಕು (virus) ತ್ವರಿತವಾಗಿ ಹರಡಿ ಎಲ್ಲರೂ ಹೈರಾಣಾದರು. ಕರ್ಫ್ಯೂ, ಲಾಕ್‌ಡೌನ್‌ ಹೇರಿದ್ದರೂ ವೈರಸ್ ಎಲ್ಲಾ ಕಡೆ ಹರಡಿತು. ಕೋಟ್ಯಾಂತರ ಮಂದಿ ಮೃತಪಟ್ಟರು. ಅದೆಷ್ಟೋ ಮಂದಿ ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡರು. ಕೋವಿಡ್‌ (Covid) ಸೋಂಕು ತಗುಲಿದ ಅದೆಷ್ಟೋ ಮಂದಿಯಲ್ಲಿ ಆರೋಗ್ಯ ಸಮಸ್ಯೆ (Health Problem) ಇನ್ನೂ ಸಹ ಕಡಿಮೆಯಾಗಿಲ್ಲ. ತಲೆನೋವು, ಕೂದಲು ಉದುರುವುದು, ಜ್ವರ, ಶೀತ, ಎದೆನೋವು ಮೊದಲಾದ ಸಮಸ್ಯೆಗಳು ಆಗಿಂದಾಗೆ ಕಾಣಿಸಿಕೊಳ್ಳುತ್ತಿವೆ.


ಆದರೆ ದೀರ್ಘವಾಗಿ ಕೋವಿಡ್‌ ನಿಂದ ಬಳಲುತ್ತಿರುವವರಿಗೆ ಮುಖ್ಯವಾಗಿ ಅಧಿಕ ಕೊಲೆಸ್ಟ್ರಾಲ್ ಕಾರಣವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ.


ಮಾನವ ಜೀವಕ್ಕೆ ಅಧಿಕ ಕೊಲೆಸ್ಟ್ರಾಲ್ ಯಾವಾಗಲೂ ಗಂಭೀರ ಅಪಾಯವಿರುವ ಸೂಚನೆಯಾಗಿದೆ. ದೀರ್ಘ ಕೋವಿಡ್ ಅನ್ನು ಇತ್ತೀಚೆಗೆ ಹೆಚ್ಚು ಅಪಾಯವಿರುವ ಕಾಯಿಲೆಯಾಗಿ ನೋಡಲಾಗುತ್ತಿದೆ. ಈ ಆರೋಗ್ಯ ಸಮಸ್ಯೆ ನಿಧಾನಗತಿಯಲ್ಲಿ ದೇಹದಲ್ಲಿ ಹಲವು ಗಂಭೀರ ರೋಗಗಳಿಗೆ ಕಾರಣವಾಗುತ್ತದೆ.


ಅಧಿಕ ಕೊಲೆಸ್ಟ್ರಾಲ್‌ನಿಂದ ದೀರ್ಘ ಕೋವಿಡ್‌ ಸಂಭವ ಹೆಚ್ಚು ಎಂದು ಸಂಶೋಧನೆಗಳ ಅಧ್ಯಯನಗಳು ತಿಳಿಸಿವೆ. ಆ ಅಧ್ಯಯನಗಳು ಏನ್‌ ಹೇಳ್ತಿವೆ ಅಂತ ತಿಳಿಯೋಣ ಬನ್ನಿ.


ಅಧಿಕ ಕೊಲೆಸ್ಟ್ರಾಲ್‌ ದೀರ್ಘ ಕೋವಿಡ್‌ಗೆ ನೇರ ಕಾರಣವೇ?ಹೌದು ಅಂತಿದ್ದಾರೆ ಸಂಶೋಧನಾ ವಿಜ್ಞಾನಿಗಳು. ಅಧಿಕ ಕೊಲೆಸ್ಟ್ರಾಲ್‌ ನೇರವಾಗಿ ದೀರ್ಘ ಕೋವಿಡ್‌ಗೆ ಕಾರಣವಾಗುತ್ತಿದೆ ಎಂದು ಇತ್ತಿಚೀನ ಸಂಶೋಧನೆಗಳು ಹೇಳುತ್ತಿವೆ. ಸಾಮಾನ್ಯ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವವರಿಗಿಂತ ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವ ಜನರು ದೀರ್ಘ COVID ಅನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಸಾಧ್ಯತೆಯಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.


2021 ರ ಸಂಶೋಧನಾ ಅಧ್ಯಯನದ ಪ್ರಕಾರ “ಕೊಲೆಸ್ಟ್ರಾಲ್ ಏಕಕಾಲದಲ್ಲಿ ಆಂಜಿಯೋಟೆನ್ಸಿನೋಜೆನ್ ಪರಿವರ್ತಿಸುವ ಕಿಣ್ವವನ್ನು (ACE2) ಎಂಡೋಸೈಟಿಕ್ ಪ್ರವೇಶ ಸೈಟ್‌ಗೆ ಸಾಗಿಸುತ್ತದೆ. ಅಲ್ಲಿ SARS-CoV-2 ಸಂಭಾವ್ಯವಾಗಿ ಜೀವಕೋಶದ ಪ್ರವೇಶವನ್ನು ಬಳಸಿಕೊಳ್ಳುತ್ತದೆ. ಇದರಿಂದ ದೀರ್ಘ ಕೋವಿಡ್‌ ಬರುವ ಸಾಧ್ಯತೆ ಹೆಚ್ಚು” ಎಂದು ಹೇಳಿದೆ.


ಸ್ಕ್ರಿಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಸಂಶೋಧಿಸಿದ "ವಯಸ್ಸಿಗೆ ಸಂಬಂಧಿಸಿದ COVID19 ಮಾರಕತೆಯಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್‌ನ ಪಾತ್ರ" ಎಂಬ ಶೀರ್ಷಿಕೆಯ ಅಧ್ಯಯನವು ಕಡಿಮೆ ಕೊಲೆಸ್ಟ್ರಾಲ್‌ಗೆ ಹೋಲಿಸಿದರೆ ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವ ಜೀವಕೋಶಗಳಲ್ಲಿ ಈ ಕೋವಿಡ್‌ ವೈರಲ್ ಸೋಂಕು 3 ಪಟ್ಟು ಹೆಚ್ಚಾಗಿದೆ ಎಂದು ಕಂಡುಹಿಡಿದಿದೆ.


ದೀರ್ಘಾವಧಿ ಕೋವಿಡ್‌ ಇರೋ ವಯಸ್ಕರಲ್ಲಿ ಕೊಲೆಸ್ಟ್ರಾಲ್‌ ಅಧಿಕವಾಗಬಹುದೇ?


ಹೌದು, ದೀರ್ಘಾವಧಿ ಕೋವಿಡ್‌ನಿಂದ ಬಳಲುತ್ತಿರುವ ವಯಸ್ಕರು ಅಧಿಕ ಕೊಲೆಸ್ಟ್ರಾಲ್‌ ಅನ್ನು ಹೊಂದುವ ಸಂಭವ ಹೆಚ್ಚೆಂದು ಇದೀಗ ಅಧ್ಯಯನಗಳಿಂದ ಬಹಿರಂಗಗೊಂಡಿದೆ.


ದಿ ಲ್ಯಾನ್ಸೆಟ್ ಸಾಂಕ್ರಾಮಿಕ ರೋಗಗಳ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸೆಪ್ಟೆಂಬರ್ 2022 ರಲ್ಲಿ, ಕೋವಿಡ್ ಸೋಂಕಿತ ಯುವಕರಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆಯಿದೆ. ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವು, COVID ಸೋಂಕು ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (BMI) ಗೆ ಕಾರಣವಾಗುತ್ತದೆ ಎಂಬುದನ್ನು ಕಂಡುಹಿಡಿದಿದೆ.


COVID ಸಮಯದಲ್ಲಿ ಸ್ಟ್ಯಾಟಿನ್‌ ಔಷಧಿಗಳು ಸಹಾಯಕವಾಗಿವೆಯೇ?


ಸ್ಟ್ಯಾಟಿನ್‌ಗಳು ಕೊಲೆಸ್ಟ್ರಾಲ್ ಅನ್ನು ಮಾರ್ಪಡಿಸುವ ಔಷಧಿಗಳಾಗಿವೆ. ಅವು ಆಂಟಿವೈರಲ್ ಪರಿಣಾಮಗಳನ್ನು ಹೊಂದಿವೆ ಎಂದು ನಂಬಲಾಗಿದೆ. ಸ್ಟ್ಯಾಟಿನ್‌ಗಳ ಸಾಮರ್ಥ್ಯವು COVID ಸೋಂಕಿನ ಸಮಯದಲ್ಲಿ ಸಂಭಾವ್ಯ ಪ್ರಯೋಜನಕ್ಕೆ ಕಾರಣವಾಗಬಹುದು.


ಇದನ್ನೂ ಓದಿ: ಕೇವಲ 15 ನಿಮಿಷದಲ್ಲಿ ರೆಡಿಯಾಗುತ್ತೆ ಚಾಕೊಲೇಟ್​ ಕುಕ್ಕೀಸ್​, ಇಲ್ಲಿದೆ ರೆಸಿಪಿ


ಸ್ಪ್ಯಾಟಿನ್‌ಗಳು ಅಂದ್ರೇನು?


ಸ್ಟ್ಯಾಟಿನ್‌ಗಳು ರಕ್ತದಲ್ಲಿನ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) ಕೊಲೆಸ್ಟ್ರಾಲ್‌ ಅನ್ನು ('ಕೆಟ್ಟ ಕೊಲೆಸ್ಟ್ರಾಲ್' ಎಂದು ಕರೆಯಲ್ಪಡುವ) ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಲು ಸಹಾಯ ಮಾಡುವ ಔಷಧಿಗಳೇ ಈ ಸ್ಪ್ಯಾಟಿನ್‌ಗಳು.


ದೀರ್ಘ ಕೋವಿಡ್‌ನ ಲಕ್ಷಣಗಳೇನು?


ದೀರ್ಘಾವಧಿಯ COVID ಅನ್ನು ಗುರುತಿಸುವುದು ಕಷ್ಟ ಅಂತಾನೇ ಹೇಳಬಹುದು ಏಕೆಂದರೆ ರೋಗಲಕ್ಷಣಗಳು ವ್ಯಕ್ತಿಯಲ್ಲಿ ದೀರ್ಘಕಾಲದವರೆಗೆ ಇರುತ್ತವೆ ಮತ್ತು 'ಎಷ್ಟು ಕಾಲ' ಇರುತ್ತವೆ ಎಂಬುದರ ಕುರಿತು ಯಾವುದೇ ಸ್ಪಷ್ಟ ಮಾರ್ಗಸೂಚಿಗಳಿಲ್ಲ. ಆದ್ರಿಂದ ಇದನ್ನು ಗುರುತಿಸುವುದು ಕಷ್ಟಸಾಧ್ಯ.


ವಿಶ್ವ ಆರೋಗ್ಯ ಸಂಸ್ಥೆ (WHO) ದೀರ್ಘ COVID ಗೆ ಸಂಬಂಧಿಸಿದ ಹಲವಾರು ರೋಗಲಕ್ಷಣಗಳನ್ನು ಪಟ್ಟಿ ಮಾಡಿದೆ. ಆಯಾಸ, ನಿದ್ರಾಹೀನತೆ, ಎದೆನೋವು, ನಿದ್ರೆಯ ಸಮಸ್ಯೆ, ಜ್ಞಾಪಕ ಶಕ್ತಿ ನಷ್ಟ, ಏಕಾಗ್ರತೆಯ ಸಮಸ್ಯೆ, ಮಾತನಾಡುವಲ್ಲಿ ತೊಂದರೆ, ಸ್ನಾಯು ನೋವು, ವಾಸನೆಯ ನಷ್ಟ, ರುಚಿಯ ನಷ್ಟ, ಖಿನ್ನತೆ, ಆತಂಕ ಮತ್ತು ಜ್ವರ ಇತ್ಯಾದಿಗಳು.


ಏನು ಎಚ್ಚರಿಕೆ ವಹಿಸಬೇಕು?


ದೀರ್ಘ ಕೋವಿಡ್ ಒಂದು ಅಪಾಯವಿರುವ ಕಾಯಿಲೆಯಾಗಿದೆ. ಈ ಸಮಯದಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.


ಇದನ್ನೂ ಓದಿ: ಈ ವ್ಯಾಯಾಮಗಳನ್ನು ಪ್ರತಿದಿನ ಮಾಡಿದ್ರೆ ಆಯಸ್ಸು ಹೆಚ್ಚಾಗುತ್ತಂತೆ


ಸಂಶೋಧನಾ ಅಧ್ಯಯನಗಳ ಪ್ರಕಾರ, ಪ್ರಸ್ತುತ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ದೀರ್ಘ COVID ನಿಂದ ಬಳಲುತ್ತಿದ್ದಾರೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಒಮಿಕ್ರಾನ್‌ನ ರೂಪಾಂತರಗಳ ಕಾರಣದಿಂದ, ಕೋವಿಡ್ ಮತ್ತು ದೀರ್ಘ ಕೋವಿಡ್ ಇವೆರಡು ಜೀವಕ್ಕೆ ಅನೇಕ ಅಪಾಯಗಳನ್ನು ತಂದೊಡ್ಡುತ್ತವೆ ಎಂಬುದು ಸ್ಪಷ್ಟವಾಗಿದೆ.

Published by:Sandhya M
First published: