ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ (High cholesterol) ಮಟ್ಟ ಜಾಸ್ತಿಯಾಗಿದೆ, ಅದನ್ನು ಕಡಿಮೆ ಮಾಡಿಕೊಳ್ಳಿರಿ ಎಂದು ವೈದ್ಯರು (Doctor) ಹೇಳುವುದನ್ನು ನೀವು ಆಗಾಗ್ಗೆ ಕೇಳಿರುತ್ತೀರಿ. ಆ ವಿಷಯ ತಿಳಿದ ಕೂಡಲೇ ನೀವು ಹೇಗಾದರೂ ಮಾಡಿ ನಿಮ್ಮ ದೇಹದಲ್ಲಿರುವ ಆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣ(Cholesterol Control)ದಲ್ಲಿರಿಸಿಕೊಳ್ಳಲು ಸರಿಯಾದ ಆಹಾರ(Food)ವನ್ನು ತೆಗೆದುಕೊಳ್ಳುವುದರಿಂದ ಹಿಡಿದು ವ್ಯಾಯಾಮದವರೆಗೆ ಎಲ್ಲವನ್ನೂ ಮಾಡಲು ಶುರು ಮಾಡುತ್ತೀರಿ. ನಿಮ್ಮ ದೇಹದಲ್ಲಿನ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ನಿಮ್ಮ ಹೃದಯಕ್ಕೆ (Heart) ತುಂಬಾನೇ ಹಾನಿಕಾರಕವಾಗಬಹುದು. ರಕ್ತದಲ್ಲಿ ಕೊಬ್ಬಿನ ಶೇಖರಣೆಯು ರಕ್ತದ ಕೊಲೆಸ್ಟ್ರಾಲ್ (Blood Cholesterol) ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಈ ಸ್ಥಿತಿಯನ್ನು ಹೈಪರ್ ಕೊಲೆಸ್ಟರಾಲೆಮಿಯಾ (Hypercholesterolemia) ಎಂದು ಸಹ ಕರೆಯಲಾಗುತ್ತದೆ.
ನಿಯಮಿತ ದೈಹಿಕ ಚಟುವಟಿಕೆಯ ಹೊರತಾಗಿ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಆಹಾರದ ನಿಯಮಗಳು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಈ ಆಧುನಿಕ ಜಗತ್ತಿನಲ್ಲಿ, ಪಾನೀಯಗಳು ರುಚಿಕರ ಮತ್ತು ತಯಾರಿಸಲು ಸುಲಭವಾಗಿರುವುದರಿಂದ ಇದರ ಸೇವನೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.
ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಪಾನೀಯಗಳು ಇಲ್ಲಿವೆ ನೋಡಿ:
1.ಟೊಮೆಟೊ ಜ್ಯೂಸ್: ಟೊಮೆಟೊ ತಿನ್ನಲು ಬಹುತೇಕರು ಇಷ್ಟ ಪಡುತ್ತಾರೆ ಮತ್ತು ಅದು ನೋಡಲು ಸಹ ತುಂಬಾನೇ ಚೆನ್ನಾಗಿರುತ್ತದೆ. ಈ ಕೆಂಪು, ಸ್ಕ್ವಿಶಿ ಮತ್ತು ರಸಭರಿತ ಹಣ್ಣುಗಳನ್ನು ಸಲಾಡ್ ಗಳಾಗಿ ಜನಪ್ರಿಯವಾಗಿ ಸೇವಿಸಲಾಗುತ್ತದೆ, ಹಸಿಯಾಗಿ ತಿನ್ನಲಾಗುತ್ತದೆ ಅಥವಾ ಭಕ್ಷ್ಯಗಳಿಗೆ ಸಹ ಸೇರಿಸಲಾಗುತ್ತದೆ.
ಅವುಗಳ ನೀರಿನ ಸಮೃದ್ಧ ಅಂಶವನ್ನು ಹೊರತು ಪಡಿಸಿ, ಟೊಮೆಟೊಗಳು ಕೊಲೆಸ್ಟ್ರಾಲ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದಲ್ಲದೆ, ಟೊಮೆಟೊ ರಸವು ಲೈಕೋಪೀನ್ ನ ಮೂಲವಾಗಿದೆ. ಇದು ದೇಹದ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ: Weight Loss: ತೂಕ ಇಳಿಸಲು ಹರಸಾಹಸ ಪಡ್ತಿದ್ದೀರಾ? ಮನೆಯಲ್ಲಿರೋ ಈ ಪದಾರ್ಥ ಬಳಸಿ ಸುಲಭವಾಗಿ ಬೊಜ್ಜು ಕರಗಿಸಿ
2.ಸಸ್ಯ ಆಧಾರಿತ ಹಾಲಿನ ಸ್ಮೂಥಿಗಳು: ಈ ಸ್ಮೂಥಿಗಳು ನೀವು ತಯಾರಿಸುವಷ್ಟೇ ಆರೋಗ್ಯಕರವಾಗಿವೆ. ಡೈರಿ ಹಾಲು, ಜನಪ್ರಿಯ ಹಾಲಿನ ಆಯ್ಕೆಯಾಗಿದ್ದರೂ, ಕೊಬ್ಬಿನೊಂದಿಗೆ ತುಂಬಿರಬಹುದು, ಇದು ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗಬಹುದು.
ಇದರ ಬದಲಾಗಿ ನೀವು ಸಸ್ಯ ಆಧಾರಿತ ಹಾಲಿನಿಂದ ಸ್ಮೂಥಿ ಮಾಡಿಕೊಂಡು ಸೇವಿಸಿದರೆ ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುವುದಲ್ಲದೇ ಸುಸ್ಥಿರ ಆಹಾರ ಆಯ್ಕೆಎಂದು ಸಾಬೀತುಪಡಿಸುತ್ತದೆ. ನೀವು ಬಳಸಬಹುದಾದ ಕೆಲವು ಆರೋಗ್ಯಕರ ಸಸ್ಯ ಆಧಾರಿತ ಹಾಲು ಎಂದರೆ ಮೇಕೆ ಹಾಲು, ಬಾದಾಮಿ ಹಾಲು, ಸೋಯಾ ಹಾಲು ಇತ್ಯಾದಿಗಳಾಗಿವೆ.
3.ಗ್ರೀನ್ ಟೀ: ಈ ಉತ್ಕರ್ಷಣ ನಿರೋಧಕ ಸಮೃದ್ಧ ಪಾನೀಯವು ಕೆಟ್ಟ ಅಥವಾ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಒಟ್ಟು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಗ್ರೀನ್ ಟೀ ಕೊಲೆಸ್ಟ್ರಾಲ್ ನಿರ್ವಹಣೆ, ತೂಕ ನಷ್ಟ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಸುರಕ್ಷಿತವಾಗಿ ಆಹಾರ ಕ್ರಮದಲ್ಲಿ ಸೇರಿಸಬಹುದು.
4.ಚಾಕೊಲೇಟ್ ಪಾನೀಯಗಳು: ಚಾಕೊಲೇಟ್, ವಿಶೇಷವಾಗಿ ಡಾರ್ಕ್ ಚಾಕೊಲೇಟ್ ಕೊಲೆಸ್ಟ್ರಾಲ್ ನಿರ್ವಹಣೆಗೆ ಪರಿಣಾಮಕಾರಿಯಾಗಬಲ್ಲ ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ.
ಚಾಕೊಲೇಟ್ ಪಾನೀಯಗಳನ್ನು ತಯಾರಿಸುವಾಗ, ವಾಣಿಜ್ಯಿಕವಾಗಿ ತಯಾರಿಸಿದ ಅಥವಾ ಸಕ್ಕರೆ ಸಮೃದ್ಧ ಪಾನೀಯಗಳನ್ನು ಆಯ್ಕೆ ಮಾಡಬೇಡಿ, ಏಕೆಂದರೆ ಅವು ನಿಮ್ಮ ದೇಹದ ತೂಕವನ್ನು ಹೆಚ್ಚಿಸಬಹುದು.
5.ಬೆರ್ರಿ ರಶ್: ನಿಮ್ಮ ಬಳಿ ಈ ಪಾನೀಯವನ್ನು ತಯಾರಿಸಿಕೊಳ್ಳಲು ಹೆಚ್ಚು ಸಮಯವಿಲ್ಲ ಎಂದರೆ ನಿಮ್ಮ ನೆಚ್ಚಿನ ಬೆರ್ರಿಗಳನ್ನು ತೆಗೆದುಕೊಳ್ಳಿ ಮತ್ತು ತಾಜಾ ಮತ್ತು ಕೊಲೆಸ್ಟ್ರಾಲ್ ಸ್ನೇಹಿ ಸ್ಮೂಥಿಗಾಗಿ ಕೆಲವು ಸಸ್ಯ ಆಧಾರಿತ ಹಾಲಿನೊಂದಿಗೆ ಮಿಶ್ರಣ ಮಾಡಿ.
ಇದನ್ನೂ ಓದಿ: Health Benefits: ಮುಂಜಾವದ ಸೆಕ್ಸ್ನಲ್ಲಿದೆ ಆರೋಗ್ಯದ ಗುಟ್ಟು..!
ನೀವು ತೆಗೆದು ಕೊಳ್ಳಬೇಕಾದ ಕೆಲವು ಆರೋಗ್ಯಕರ ಬೆರ್ರಿ ಸ್ಮೂಥಿಗಳೆಂದರೆ ಸ್ಟ್ರಾಬೆರಿ ಸ್ಮೂಥಿಗಳು, ಬ್ಲೂಬೆರಿ ಸ್ಮೂಥಿಗಳು, ಬ್ಲ್ಯಾಕ್ ಬೆರಿ ಸ್ಮೂಥಿಗಳು ಇತ್ಯಾದಿ. ಇದಲ್ಲದೆ, ನೀವು ಈ ಬೆರ್ರಿಗಳನ್ನು ಸಂಯೋಜಿಸಬಹುದು ಮತ್ತು ಒಂದು ಬೆರ್ರಿ ರಶ್ ಸ್ಮೂಥಿಯನ್ನು ಸಹ ಮಾಡಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ