Cholesterol Home Remedy: ಅಧಿಕ ಕೊಲೆಸ್ಟ್ರಾಲ್‌ಗೆ ಕಾರಣಗಳು ಯಾವವು ಮತ್ತು ನಿಯಂತ್ರಿಸಲು ಕೊತ್ತಂಬರಿ ಎಷ್ಟು ಪರಿಣಾಮಕಾರಿ?

ಅಧಿಕ ಕೊಲೆಸ್ಟ್ರಾಲ್‌ ದೂರುಗಳು ಅನುವಂಶಿಕ ಅಂಶಗಳ ಕಾರಣದಿಂದಲೂ ಆಗಿರಬಹುದು. ಆದರೆ ಇದು ಸಾಮಾನ್ಯವಾಗಿ ಅನಾರೋಗ್ಯಕರ ಜೀವನಶೈಲಿ ಪರಿಣಾಮ ಆಗಿದೆ. ರಕ್ತದ ಹೆಚ್ಚಿನ ಕೊಲೆಸ್ಟ್ರಾಲ್ ಯಾವುದೇ ಸ್ಪಷ್ಟ ಲಕ್ಷಣ ಹೊಂದಿರುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚಿನ ಅಧ್ಯಯನಗಳು ಭಾರತದಲ್ಲಿ (India) 25 ರಿಂದ 30 ಪ್ರತಿಶತ ನಗರ (City) ಮತ್ತು 15 ರಿಂದ 20 ಪ್ರತಿಶತ ಗ್ರಾಮೀಣ (Villages) ಜನರು ಅಧಿಕ ಕೊಲೆಸ್ಟ್ರಾಲ್ (High Cholesterol) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತೋರಿಸಿದೆ ಎಂದು NCBI ಹೇಳಿದೆ. ಕೊಲೆಸ್ಟ್ರಾಲ್ ಕಾಯಿಲೆ ಎಂದರೇನು ಎಂಬುದು ಎಲ್ಲರಿಗೂ ತಿಳಿದ ಸಂಗತಿ ಆಗಿದೆ. ಕೊಲೆಸ್ಟ್ರಾಲ್ ನಿಮ್ಮ ರಕ್ತದಲ್ಲಿ ಕಂಡು ಬರುವ ಮೇಣದಂಥ ವಸ್ತು ಆಗಿದೆ. ಆರೋಗ್ಯಕರ ಕೋಶಗಳನ್ನು ನಿರ್ಮಿಸಲು ಪ್ರತಿಯೊಬ್ಬರ ದೇಹಕ್ಕೆ ಕೊಲೆಸ್ಟ್ರಾಲ್ ಅಗತ್ಯ ಇದೆ. ಆದರೆ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ವ್ಯಕ್ತಿಯ ಹೃದಯ ಕಾಯಿಲೆಯ ಅಪಾಯ ಹೆಚ್ಚಿಸುವ ಸಾಧ್ಯತೆ ಹೆಚ್ಚು.

    ಅಧಿಕ ಕೊಲೆಸ್ಟ್ರಾಲ್‌ಗೆ ಕಾರಣಗಳು ಯಾವವು?

    ಅಧಿಕ ಕೊಲೆಸ್ಟ್ರಾಲ್‌ ದೂರುಗಳು ಅನುವಂಶಿಕ ಅಂಶಗಳ ಕಾರಣದಿಂದಲೂ ಆಗಿರಬಹುದು. ಆದರೆ ಇದು ಸಾಮಾನ್ಯವಾಗಿ ಅನಾರೋಗ್ಯಕರ ಜೀವನಶೈಲಿ ಪರಿಣಾಮ ಆಗಿದೆ. ಸಕ್ಕರೆ, ಹಿಟ್ಟು, ತಂಪು ಪಾನೀಯ ಮತ್ತು ಎಣ್ಣೆಯಿಂದ ತಯಾರಿಸಿದ ವಸ್ತುಗಳ ಸೇವನೆ ಮಾಡುವುದು ಕೊಲೆಸ್ಟ್ರಾಲ್ ನ್ನು ಹೆಚ್ಚಿಸುವ ಅಪಾಯ ಹೆಚ್ಚಿಸುತ್ತದೆ.

    ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುವುದು ಹೇಗೆ?

    ಇದನ್ನು ನಿಯಂತ್ರಿಸಲು ಮಾರುಕಟ್ಟೆಯಲ್ಲಿ ಹಲವು ರೀತಿಯ ಔಷಧ ಲಭ್ಯ ಇದ್ದರೂ, ಕೆಲವು ನೈಸರ್ಗಿಕ ವಸ್ತುಗಳ ಸಹಾಯದಿಂದ ಅದನ್ನು ಗುಣಪಡಿಸಬಹುದು. ಅಂತಹ ಒಂದು ಔಷಧೀಯ ಸಸ್ಯವೆಂದರೆ ಅದು ಕೊತ್ತಂಬರಿ. ಇದು ಹಲವು ಅಧ್ಯಯನಗಳಲ್ಲೂ ದೃಢಪಟ್ಟಿದೆ.

    ಇದನ್ನೂ ಓದಿ: ದೇಹದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳ ಕೊರತೆಯ ಲಕ್ಷಣಗಳು ಮತ್ತು ಪದಾರ್ಥಗಳು ಯಾವವು?

    ಕೊಲೆಸ್ಟ್ರಾಲ್ ಹೆಚ್ಚಳವನ್ನು ಗುರುತಿಸುವುದು ಹೇಗೆ?

    ರಕ್ತದ ಹೆಚ್ಚಿನ ಕೊಲೆಸ್ಟ್ರಾಲ್ ಯಾವುದೇ ಸ್ಪಷ್ಟ ಲಕ್ಷಣ ಹೊಂದಿರುವುದಿಲ್ಲ. ಆದರೆ ಇದು ಆಂಜಿನಾ ಅಂದ್ರೆ ಎದೆ ನೋವು, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಇತ್ಯಾದಿ ರೋಗ ಲಕ್ಷಣ ಉಂಟು ಮಾಡುವ ಪರಿಸ್ಥಿತಿಗೆ ನಿಮ್ಮ ಅಪಾಯ ಹೆಚ್ಚಿಸುವ ಸಾಧ್ಯತೆ ಇದೆ.

    ಹಸಿರು ಕೊತ್ತಂಬರಿ ಸೇವನೆ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಪ್ರಯೋಜನಕಾರಿ

    ಒಂದು ಅಧ್ಯಯನದ ಪ್ರಕಾರ, ಕೆಲವು ಪ್ರಾಣಿ ಮತ್ತು ಪರೀಕ್ಷಾ-ಟ್ಯೂಬ್ ಅಧ್ಯಯನಗಳು ಕೊತ್ತಂಬರಿಯು ಅಧಿಕ ರಕ್ತದೊತ್ತಡ ಮತ್ತು LDL (ಕೆಟ್ಟ) ಕೊಲೆಸ್ಟ್ರಾಲ್ ಮಟ್ಟ ಹೃದ್ರೋಗದ ಅಪಾಯಕಾರಿ ಅಂಶ ಕಡಿಮೆ ಮಾಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕೊತ್ತಂಬರಿ ಸೊಪ್ಪನ್ನು ಇತರ ಮಸಾಲೆಗಳೊಂದಿಗೆ ಸೇವಿಸುವ ಜನಸಂಖ್ಯೆಯಲ್ಲಿ ಹೃದ್ರೋಗದ ಪ್ರಮಾಣ ಕಡಿಮೆ ಎಂದು ತಜ್ಞರು ಹೇಳುತ್ತಾರೆ.

    ಹಸಿರು ಕೊತ್ತಂಬರಿ ಸೊಪ್ಪಿನ ಔಷಧೀಯ ಗುಣಗಳು

    ಇದು ಆಂಟಿಮೈಕ್ರೊಬಿಯಲ್ ಮತ್ತು ಆಂಟಿಆಕ್ಸಿಡೆಂಟ್ ಸೇರಿದಂತೆ ಉರಿಯೂತ ಕಡಿಮೆ ಮಾಡುವುದು, ಆಂಟಿಡಿಸ್ಲಿಪಿಡೆಮಿಕ್ ರಕ್ತದಲ್ಲಿನ ಲಿಪಿಡ್‌ ಕಡಿಮೆ ಮಾಡುವುದು, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದು, ನ್ಯೂರೋಪ್ರೊಟೆಕ್ಟಿವ್ ಅಂದ್ರೆ ನರಗಳ ರಕ್ಷಣೆ ಮತ್ತು ಮೂತ್ರವರ್ಧಕ ಹೊಂದಿದೆ. ಇದು ಮಧುಮೇಹ, ಅಪಸ್ಮಾರ, ಆತಂಕ ಮತ್ತು ಖಿನ್ನತೆ ತೆಗೆದು ಹಾಕಲು ಮತ್ತು ದೇಹದಿಂದ ವಿಷ ಶುದ್ಧೀಕರಿಸಲು ಕೆಲಸ ಮಾಡುತ್ತದೆ.

    ಕೊತ್ತಂಬರಿ ಸೊಪ್ಪನ್ನು ಸೇವಿಸುವುದು ಹೇಗೆ?

    ಒಂದು ಅಧ್ಯಯನದ ವೇಳೆ, ಇಲಿಗಳಿಗೆ ಕೊತ್ತಂಬರಿ ಬೀಜಗಳನ್ನು ನೀಡಲಾಯಿತು. ರಕ್ತದಲ್ಲಿ ಎಲ್ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ನಲ್ಲಿ ಇಳಿಕೆ ಮತ್ತು ಎಚ್ಡಿಎಲ್ (ಉತ್ತಮ) ಕೊಲೆಸ್ಟ್ರಾಲ್ನಲ್ಲಿ ಹೆಚ್ಚಳ ಕಂಡು ಬಂದಿದೆ. ಕೊತ್ತಂಬರಿ ಸೊಪ್ಪನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ ಕೊಲೆಸ್ಟ್ರಾಲ್ ಸಮಸ್ಯೆ ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ.

    ಜನರು ಹೆಚ್ಚಾಗಿ ಕೊತ್ತಂಬರಿ ಸೊಪ್ಪನ್ನು ಸಿರಪ್, ಚಟ್ನಿ, ಸಲಾಡ್ ರೂಪದಲ್ಲಿ ಸೇವನೆ ಮಾಡಲಾಗುತ್ತದೆ. ಅದೇ ವೇಳೆ ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ಉಬ್ಬಿಸಿ ಮತ್ತು ಫಿಲ್ಟರ್ ಮಾಡುವ ಮೂಲಕ ಕುಡಿಯಬಹುದು.

    ಇದನ್ನೂ ಓದಿ: ಹಿಮೋಗ್ಲೋಬಿನ್ ಕೊರತೆ ತಪ್ಪಿಸಲು ಈ ಪದಾರ್ಥಗಳ ಸೇವನೆ ಅಗತ್ಯ, ಮಿಸ್ ಮಾಡಬೇಡಿ

    ಕೊತ್ತಂಬರಿ ಸೊಪ್ಪು ಸೇವಿಸುವಾಗ ಈ ವಿಷಯ ನೆನಪಿಡಿ

    ಕೊತ್ತಂಬರಿ ಸೊಪ್ಪನ್ನು ಸ್ವಲ್ಪ ಪ್ರಮಾಣದಲ್ಲಿ ನಿಯಮಿತವಾಗಿ ಸೇವಿಸಿ. ಅಧ್ಯಯನದ ಪ್ರಕಾರ ಕೊತ್ತಂಬರಿ ಸೊಪ್ಪನ್ನು ಹೆಚ್ಚು ಸೇವಿಸುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಯಕೃತ್ತು, ಅಲರ್ಜಿ, ದದ್ದು, ಚರ್ಮದ ಕ್ಯಾನ್ಸರ್ಗೆ ತುರಿಕೆ ಅಪಾಯ ಹೆಚ್ಚಿಸುತ್ತದೆ. ಕೊತ್ತಂಬರಿ ರಕ್ತದೊತ್ತಡ ಕಡಿಮೆ ಮಾಡುತ್ತದೆ.
    Published by:renukadariyannavar
    First published: