High Cholesterol: ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಉಂಟಾದಾಗ ಚರ್ಮ ಮತ್ತು ಕಣ್ಣಿನ ಭಾಗದಲ್ಲಿ ಈ ಲಕ್ಷಣಗಳು ಗೋಚರಿಸುತ್ತವೆ!

ಅಧಿಕ ಕೊಲೆಸ್ಟ್ರಾಲ್ ಯಾರಲ್ಲಿ ಇರುತ್ತದೆಯೋ ಅದು ವ್ಯಕ್ತಿಗೆ ಮಾರಣಾಂತಿಕವಾಗುತ್ತದೆ. ಮತ್ತು ಹಠಾತ್ ಸಾವಿನ ಅಪಾಯವನ್ನೂ ಹೆಚ್ಚಿಸುವ ಸಾಧ್ಯತೆ ಹೆಚ್ಚಿಸುತ್ತದೆ. ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳನ್ನು ಮಟ್ಟವನ್ನು ಸರಳ ರಕ್ತ ಪರೀಕ್ಷೆಯಿಂದ ಮೇಲ್ವಿಚಾರಣೆ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅಧಿಕ ಕೊಲೆಸ್ಟ್ರಾಲ್ (High Cholesterol) ರಕ್ತದಲ್ಲಿ (Blood) ಹೆಚ್ಚಾದಾಗ ಸಾಕಷ್ಟು ತೊಂದರೆ (Problem), ಕಾಯಿಲೆಗಳನ್ನು (Disease) ಉಂಟು ಮಾಡುತ್ತದೆ. ನಿಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಎಂಬ ಕೊಬ್ಬಿನ ಅಂಶ ಹೆಚ್ಚಾದಾಗ ಅಧಿಕ ಕೊಲೆಸ್ಟ್ರಾಲ್ ಉಂಟಾಗುತ್ತದೆ. ಇದು ಮುಖ್ಯವಾಗಿ ಕೊಬ್ಬಿನ ಆಹಾರ ಸೇವನೆ, ಸಾಕಷ್ಟು ವ್ಯಾಯಾಮ ಮಾಡದೇ ಇರುವುದು, ಕೆಟ್ಟ ಜೀವನಶೈಲಿ, ಅಧಿಕ ತೂಕ, ಧೂಮಪಾನ ಮತ್ತು ಮದ್ಯಪಾನದಿಂದ ಉಂಟಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಇದು ಆನುವಂಶಿಕವೂ ಆಗಿರುತ್ತದೆ. ಹೆಚ್ಚು ಕೊಲೆಸ್ಟ್ರಾಲ್ ನಿಮ್ಮ ರಕ್ತನಾಳಗಳ ಮೇಲೆ ನಿರ್ಬಂಧ ಹೇರುತ್ತವೆ. ಇದು ಹೃದಯ ಸಂಬಂಧಿ ಕಾಯಿಲೆ ಅಥವಾ ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಹೆಚ್ಚಿಸುತ್ತದೆ.

    ಅಧಿಕ ಕೊಲೆಸ್ಟ್ರಾಲ್ ಮಾರಣಾಂತಿಕ

    ಅಧಿಕ ಕೊಲೆಸ್ಟ್ರಾಲ್ ಯಾರಲ್ಲಿ ಇರುತ್ತದೆಯೋ ಅದು ವ್ಯಕ್ತಿಗೆ ಮಾರಣಾಂತಿಕವಾಗುತ್ತದೆ. ಮತ್ತು ಹಠಾತ್ ಸಾವಿನ ಅಪಾಯವನ್ನೂ ಹೆಚ್ಚಿಸುವ ಸಾಧ್ಯತೆ ಹೆಚ್ಚಿಸುತ್ತದೆ. ಅಧಿಕ ಕೊಲೆಸ್ಟ್ರಾಲ್‌ನ ಯಾವುದೇ ಲಕ್ಷಣಗಳು ಬೇಗ ಕಂಡು ಬರುವುದಿಲ್ಲ.

    ಆದರೆ ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಸರಳ ರಕ್ತ ಪರೀಕ್ಷೆಯಿಂದ ಮೇಲ್ವಿಚಾರಣೆ ಮಾಡಬಹುದು. ಅಧಿಕ ಕೊಲೆಸ್ಟ್ರಾಲ್ ಬಗ್ಗೆ ಸೌಂದರ್ಯದ ಚಿಕಿತ್ಸಾಲಯದ ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್, ಕಾಸ್ಮೆಟಿಕ್ ಡರ್ಮಟಾಲಜಿಸ್ಟ್ ಮತ್ತು ಡರ್ಮಟೊ-ಶಸ್ತ್ರಚಿಕಿತ್ಸಕ ರಿಂಕಿ ಕಪೂರ್ ಉತ್ತಮವಾಗಿ ವಿವರಣೆ ನೀಡಿದ್ದಾರೆ.

    ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

    ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವವರಾಗಿದ್ದರೆ, ನಿಮಗೆ ಹೆಚ್ಚಿನ ಕೊಲೆಸ್ಟ್ರಾಲ್‌ನ ಸೂಕ್ಷ್ಮ ಚಿಹ್ನೆಗಳು ಗೊತ್ತಾಗುತ್ತವೆ. ಅಧಿಕ ಕೊಲೆಸ್ಟ್ರಾಲ್ ಲಕ್ಷಣಗಳು ನಿಮ್ಮ ಚರ್ಮದ ಮೇಲೆ ಸುಲಭವಾಗಿ ಕಂಡು ಬರುತ್ತವೆ.

    ಅಧಿಕ ಕೊಲೆಸ್ಟ್ರಾಲ್ ಲಕ್ಷಣಗಳು ಕಣ್ಣುಗಳ ಚರ್ಮದ ಬಳಿ ಗೋಚರಿಸುತ್ತವೆ

    ವ್ಯಕ್ತಿಯ ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಪ್ರಮಾಣವು ಅಧಿಕವಾಗಿದ್ದರೆ, ಈ ಸಮಯದಲ್ಲಿ ಕಣ್ಣುಗಳಲ್ಲಿ ಕೆಲವು ಬದಲಾವಣೆಗಳು ಕಂಡು ಬರುತ್ತವೆ. ಈ ಸ್ಥಿತಿಯನ್ನು ಕ್ಸಾಂಥೆಲಾಸ್ಮಾ ಎಂದು ಕರೆಯುತ್ತಾರೆ. ಇದರಲ್ಲಿ, ಹಳದಿ ಮತ್ತು ಕಿತ್ತಳೆ ಬಣ್ಣದ ಮೇಣದ ಪದರವು ಕಣ್ಣುಗಳ ಕೆಳಗೆ ಹಾಗೂ ಕೆಲ ಭಾಗಗಳಲ್ಲಿ  ಕಂಡು ಬರುತ್ತವೆ. ಚರ್ಮದ ಅಡಿಯಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದೇ ಇದಕ್ಕೆ ಕಾರಣ.

    ಅಧಿಕ ಕೊಲೆಸ್ಟ್ರಾಲ್ ಲಕ್ಷಣಗಳು ಪಾದಗಳು ಮತ್ತು ಅಂಗೈಗಳ ಚರ್ಮದ ಮೇಲೆ ಗೋಚರ

    ಕಣ್ಣುಗಳ ಚರ್ಮದ ಸ್ಥಿತಿಯು ಕ್ಸಾಂಥೋಮಾದಂತೆಯೇ ಇರುತ್ತದೆ. ಇದರಲ್ಲಿ ಹಳದಿ ಬಣ್ಣದ ಮೇಣದಂಥ ಪದರವು ಕೆಳಗಿನ ಕಾಲುಗಳ ಚರ್ಮದ ಮೇಲೆ ಮತ್ತು ಅಂಗೈಗಳ ಹಿಂಭಾಗದಲ್ಲಿ ಸಂಗ್ರಹಗೊಳ್ಳುತ್ತದೆ. ನಿಮ್ಮ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು ಅದನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

    ಅಧಿಕ ಕೊಲೆಸ್ಟ್ರಾಲ್ ಸೋರಿಯಾಸಿಸ್ ಅಪಾಯ ಹೆಚ್ಚಿಸುತ್ತದೆ

    ಇತ್ತೀಚಿನ ಸಂಶೋಧನೆಯು ಸೋರಿಯಾಸಿಸ್ ಮತ್ತು ಅಧಿಕ ಕೊಲೆಸ್ಟ್ರಾಲ್ ಮಟ್ಟಗಳ ನಡುವಿನ ಸಂಬಂಧದ ಬಗ್ಗೆ ಹೇಳಿದೆ. ಇದನ್ನು ಹೈಪರ್ಲಿಪಿಡೆಮಿಯಾ ಎಂದು ಕರೆಯುತ್ತಾರೆ. ಈ ಪದವು ನಿಮ್ಮ ರಕ್ತದಲ್ಲಿ ಲಿಪಿಡ್ ಎಂದು ಕರೆಯಲ್ಪಡುವ ಹೆಚ್ಚಿನ ಕೊಬ್ಬನ್ನು ಉಂಟು ಮಾಡುವ ಹಲವಾರು ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ.

    ಹೈಪರ್ಲಿಪಿಡೆಮಿಯಾ ಚಿಕಿತ್ಸೆ ನೀಡಬಹುದು. ಆದರೆ ಇದು ಸಾಮಾನ್ಯವಾಗಿ ಜೀವಿತಾವಧಿಯ ಸ್ಥಿತಿ ಆಗಿದೆ. ಸಮತೋಲಿತ ಜೀವನಶೈಲಿಯು ಇದನ್ನು ನಿವಾರಿಸಲು ಸಹಾಯ ಮಾಡುತ್ತದೆ.

    ಚರ್ಮದ ಬಣ್ಣ ಬದಲಾವಣೆ ಮತ್ತು ಶುಷ್ಕತೆ

    ಅಧಿಕ ಕೊಲೆಸ್ಟ್ರಾಲ್ ಮಟ್ಟವು ನಿಮ್ಮ ಚರ್ಮದ ಅಡಿಯಲ್ಲಿ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಇದರಿಂದ ಚರ್ಮದ ಜೀವಕೋಶಗಳು ಸಾಕಷ್ಟು ಪೋಷಣೆ ಪಡೆಯಲು ಸಾಧ್ಯವಾಗುವುದಿಲ್ಲ. ಮತ್ತು ಚರ್ಮದ ಬಣ್ಣ ಬದಲಾಗುತ್ತದೆ. ನೀವು ಹೆಚ್ಚು ಹೊತ್ತು ನಿಂತರೆ ನಿಮ್ಮ ಪಾದಗಳು ನೇರಳೆ ಬಣ್ಣಕ್ಕೆ ತಿರುಗುತ್ತವೆ. ನಿಮ್ಮ ಪಾದಗಳು ಎತ್ತರದಲ್ಲಿದ್ದರೆ ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು ಆಗಿದೆ.

    ಇದನ್ನೂ ಓದಿ: ಸಿಗರೇಟ್ ಸೇದುವುದರಿಂದ ಕೂದಲು ಉದುರುತ್ತವೆಯೇ? ಪೌಷ್ಟಿಕ ತಜ್ಞರು ಹೇಳಿದ್ದೇನು?   

    ವೈದ್ಯರ ಸಲಹೆ

    ರಿಂಕಿ ಕಪೂರ್, ಆರೋಗ್ಯದ ಬಗ್ಗೆ ಉತ್ತಮ ಕಾಳಜಿ ವಹಿಸುವುದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಮತ್ತು ಚರ್ಮದ ಸಮಸ್ಯೆ ತಡೆಯಲು ಸಹಾಯ ಮಾಡುತ್ತದೆ ಎಂದಿದ್ದಾರೆ.
    Published by:renukadariyannavar
    First published: