• Home
  • »
  • News
  • »
  • lifestyle
  • »
  • Winter Season: ಚಳಿಗಾಲದಲ್ಲಿ ನಿಮ್ಮ ಕೊಲೆಸ್ಟ್ರಾಲ್ ಜಾಸ್ತಿ ಆಗ್ತಿದೆಯಾ? ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಿ

Winter Season: ಚಳಿಗಾಲದಲ್ಲಿ ನಿಮ್ಮ ಕೊಲೆಸ್ಟ್ರಾಲ್ ಜಾಸ್ತಿ ಆಗ್ತಿದೆಯಾ? ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಿ

ಕೊಲೆಸ್ಟ್ರಾಲ್​

ಕೊಲೆಸ್ಟ್ರಾಲ್​

ಇದಕ್ಕೆ ಮುಖ್ಯವಾದ ಕಾರಣ ಅಂತ ಹೇಳಿದರೆ ತುಂಬಾ ಚಳಿ ಇರುವುದರಿಂದ ನಾವು ಹೆಚ್ಚಾಗಿ ಮನೆಯಿಂದ ಹೊರಗೆ ಹೋಗುವುದಿಲ್ಲ ಮತ್ತು ಈ ರೀತಿಯಾಗಿ ನಾವು ಒಂದು ರೀತಿಯ ಜಡತ್ವದ ಜೀವನಶೈಲಿಗೆ ಹೊಂದಿಕೊಂಡಿರುತ್ತೇವೆ ಅಂತ ಹೇಳಬಹುದು.

  • Share this:

ಚಳಿಗಾಲವು (Winter Season) ಹಲವಾರು ಕಾಯಿಲೆಗಳು ಮತ್ತು ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದಕ್ಕೆ ಮುಖ್ಯವಾದ ಕಾರಣ ಅಂತ ಹೇಳಿದರೆ ತುಂಬಾ ಚಳಿ ಇರುವುದರಿಂದ ನಾವು ಹೆಚ್ಚಾಗಿ ಮನೆಯಿಂದ ಹೊರಗೆ ಹೋಗುವುದಿಲ್ಲ ಮತ್ತು ಈ ರೀತಿಯಾಗಿ ನಾವು ಒಂದು ರೀತಿಯ ಜಡತ್ವದ ಜೀವನಶೈಲಿಗೆ (Lifestyle) ಹೊಂದಿಕೊಂಡಿರುತ್ತೇವೆ ಅಂತ ಹೇಳಬಹುದು. ಬೇಸಿಗೆಕಾಲ ಮತ್ತು ಮಳೆಗಾಲಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ನಾವು ಸ್ವಲ್ಪ ಹೆಚ್ಚು ಆಹಾರವನ್ನು ಸೇವಿಸುತ್ತೇವೆ. ಅದರಲ್ಲೂ ಬಿಸಿ ಬಿಸಿಯಾದ ಮತ್ತು ಎಣ್ಣೆಯಲ್ಲಿ ಕರಿದಂತಹ ಈರುಳ್ಳಿ ಪಕೋಡಾಗಳು, ಫ್ರೈಗಳು, ಬ್ರೆಡ್ ರೋಲ್ ಗಳನ್ನು ನಾವು ಸಂಜೆ ಹೊತ್ತಿನ ಒಂದು ಕಪ್ ಚಹಾ (Tea)ದೊಂದಿಗೆ ಸೇವಿಸುವುದನ್ನು ಅಭ್ಯಾಸ ಮಾಡಿಕೊಂಡು ಬಿಟ್ಟಿರುತ್ತೇವೆ.


ಇದು ನಾಲಿಗೆಗೆ ರುಚಿ ನೀಡುತ್ತದೆ, ಆದರೆ ಇಂತಹ ಆಹಾರಗಳನ್ನು ನಿಯಮಿತವಾಗಿ ಸೇವಿಸಿದರೆ ನಮ್ಮ ಕೊಲೆಸ್ಟ್ರಾಲ್ ಮಟ್ಟ ಜಾಸ್ತಿಯಾಗದೆ ಇನ್ನೇನಾಗುತ್ತದೆ ಹೇಳಿ? ಕೊಲೆಸ್ಟ್ರಾಲ್ ನಮ್ಮ ದೇಹದ ಜೀವಕೋಶಗಳಲ್ಲಿ ಇರುವ ಮೇಣದ ರೀತಿಯ ವಸ್ತುವಾಗಿದ್ದು, ಇದು ಹಾರ್ಮೋನುಗಳು, ವಿಟಮಿನ್ ಡಿ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ವಸ್ತುಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚಿನ ಕೊಬ್ಬು ದೇಹದಲ್ಲಿ ಸಂಗ್ರಹವಾದರೆ ಅದು ಹೃದಯದ ತೊಂದರೆ ಸೇರಿ ಇತರೆ ಅಪಾಯಗಳಿಗೆ ಕಾರಣವಾಗುತ್ತದೆ.


ಚಳಿಗಾಲದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದರ ಬಗ್ಗೆ ಏನ್ ಹೇಳ್ತಾರೆ ವೈದ್ಯರು?


"ಚಳಿಗಾಲದಲ್ಲಿ ಬಹುತೇಕರು ಕೆಲಸ ಮಾಡದೆ ಮತ್ತು ತುಂಬಾ ಹೊರಗೆ ಓಡಾಡದೆ ಸೋಮಾರಿಯಾಗುವುದರಿಂದ ಜನರು ಹೆಚ್ಚಿನ ಕೊಲೆಸ್ಟ್ರಾಲ್ ನಿಂದ ಬಳಲುವ ಅಪಾಯವಿದೆ. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಕೊಲೆಸ್ಟ್ರಾಲ್ ಅಗತ್ಯವಿದೆ, ಆದರೆ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಅಪಧಮನಿಗಳ ಒಳಗೆ ಕೊಬ್ಬಿನ ಶೇಖರಣೆ (ಪ್ಲೇಕ್) ಬೆಳವಣಿಗೆಗೆ ಕಾರಣವಾಗಬಹುದು, ಇದು ಹೃದಯ ಸ್ತಂಭನ ಮತ್ತು ಪಾರ್ಶ್ವವಾಯುಗಳ ಅಪಾಯವನ್ನು ಹೆಚ್ಚಿಸುತ್ತದೆ. ಅನಾರೋಗ್ಯಕರ ಅಥವಾ ಅನಿಯಂತ್ರಿತ ಮಟ್ಟದ ಕೊಲೆಸ್ಟ್ರಾಲ್ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅನಿಯಮಿತ ಹೃದಯ ಲಯಗಳಂತಹ ಹಲವಾರು ಸಹ-ಅಸ್ವಸ್ಥತೆಗಳಿಗೆ ಕಾರಣವಾಗಬಹುದು" ಎಂದು ಗುರಗ್ರಾಂ ನ ವೈದ್ಯಕೀಯ ಸಲಹೆಗಾರ ಮತ್ತು ಮ್ಯಾಕ್ಸ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನ ಹಿರಿಯ ನಿರ್ದೇಶಕರಾದ ಡಾ. ಅಶುತೋಷ್ ಶುಕ್ಲಾ ಹೇಳುತ್ತಾರೆ.


ಅನಾರೋಗ್ಯ ಸಮಸ್ಯೆಗಳಿಂದ ದೂರವಿರಲು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಮುಖ್ಯ


ಚಳಿಗಾಲದಲ್ಲಿ ಸಂಭವಿಸಬಹುದಾದ ಆರೋಗ್ಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುವುದು ತುಂಬಾನೇ ಮುಖ್ಯವಾಗುತ್ತದೆ.


ನವದೆಹಲಿಯ ಫೋರ್ಟಿಸ್ ಎಸ್ಕಾರ್ಟ್ಸ್ ನಲ್ಲಿ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಸಲಹೆಗಾರರಾದ ಡಾ. ಸುಮನ್ ಭಂಡಾರಿ ಅವರು ಚಳಿಗಾಲದಲ್ಲಿ ನಮ್ಮ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಕೆಲವು ಉಪಯುಕ್ತ ಸಲಹೆಗಳನ್ನು ಹಂಚಿಕೊಂಡಿದ್ದಾರೆ ನೋಡಿ.


1.ಹೊರಗಡೆ ತುಂಬಾ ಚಳಿ ಇದೆಯಂತ ಹೊರಗೆ ಹೋಗಿ ವ್ಯಾಯಾಮ ಮಾಡಲು ಆಗದೆ ಇದ್ದರೂ ಸಹ ಮನೆಯಲ್ಲಿ ವ್ಯಾಯಾಮ ಮಾಡುವುದನ್ನು ಮಾತ್ರ ಮಿಸ್ ಮಾಡಬೇಡಿ. ಹೊರಗೆ ಚಳಿ ಜಾಸ್ತಿ ಇದ್ದಾಗ ಅನೇಕ ಪದರಗಳ ಬಟ್ಟೆಗಳು, ಉಣ್ಣೆ ಟೋಪಿ, ಮಫ್ಲರ್ ಅನ್ನು ಧರಿಸಿಕೊಂಡು ಮನೆಯಿಂದ ಹೊರಗೆ ಹೆಜ್ಜೆ ಹಾಕಿರಿ.


2. ಎಣ್ಣೆಯಲ್ಲಿ ಕರಿದ ಮತ್ತು ಹೆಚ್ಚು ಸಕ್ಕರೆಯಿರುವ ಆಹಾರ ಪದಾರ್ಥಗಳನ್ನು ಆದಷ್ಟು ಸೇವಿಸಬೇಡಿ. ಇವುಗಳ ಬದಲಿಗೆ ದಿನದಲ್ಲಿ ತಾಜಾ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಸೇವಿಸಿ. ಮೂಲಂಗಿ, ಕ್ಯಾರೆಟ್ ಇತ್ಯಾದಿಗಳನ್ನು ಲಘು ಆಹಾರವಾಗಿ ಸೇವಿಸಿ. ಸೊಪ್ಪು ತರಕಾರಿಗಳು, ಬದನೆಕಾಯಿ, ಬೆಂಡೆಕಾಯಿ, ಓಟ್ಸ್, ಬಾರ್ಲಿಯಂತಹ ಧಾನ್ಯ ಮತ್ತು ಸಂಪೂರ್ಣ ಬೇಳೆಕಾಳುಗಳನ್ನು ಸೇರಿಸುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
3. ಸಿಹಿಯಾದ ಪಾನೀಯಗಳು ಮತ್ತು ಐಸ್ ಕ್ರೀಮ್, ಸಿಹಿತಿಂಡಿಗಳು, ಕೇಕ್, ಪೇಸ್ಟ್ರಿ ಮತ್ತು ಕುಕೀಸ್ ಗಳನ್ನು ಹೆಚ್ಚಾಗಿ ಸೇವಿಸಬೇಡಿ.


4. ಕುರಿ ಮಾಂಸ ಎಂದರೆ ಮಟನ್, ಹಂದಿ ಮಾಂಸ ಹೀಗೆ ಕೆಂಪು ಮಾಂಸವನ್ನು ಸೇವಿಸಬೇಡಿ ಮತ್ತು ಇದರ ಬದಲಿಗೆ ಮೀನು ಮತ್ತು ಕೋಳಿ ಮಾಂಸವನ್ನು ಸೇವಿಸಿ.


5. ಅತಿಯಾದ ಮದ್ಯಪಾನ ಅಥವಾ ಧೂಮಪಾನವನ್ನು ಮಾಡಬೇಡಿ.


6. 2 ಗ್ರಾಂ ಸಸ್ಯ ಸ್ಟೀರಾಯ್ಡ್ ನೊಂದಿಗೆ ಬಲಪಡಿಸಲಾದ ಆಹಾರಗಳು (ಮಾರ್ಗರೀನ್ ಮತ್ತು ಗ್ರಾನುಲಾ ಬಾರ್ ಗಳು) ಎಲ್‌ಡಿಎಲ್ ಅನ್ನು 10 ಪ್ರತಿಶತದಷ್ಟು ಕಡಿಮೆ ಮಾಡಬಹುದು.


ಇದನ್ನೂ ಓದಿ: ಕಬ್ಬಿನಿಂದ ಇಷ್ಟೆಲ್ಲಾ ಲಾಭ ಇದ್ಯಾ? ಕೇಳಿದ್ರೆ ಇಂದಿನಿಂದಲೇ ತಿನ್ನಲು ಆರಂಭಿಸ್ತೀರಿ


7. ಕೊಬ್ಬಿನ ಮೀನುಗಳಂತಹ ಒಮೆಗಾ-3 ಪೂರಕಗಳು ಟ್ರೈಗ್ಲಿಸರೈಡ್ ಗಳನ್ನು ಕಡಿಮೆ ಮಾಡುತ್ತದೆ.


8. ಸೋಯಾ ಹಾಲು (ಎರಡೂವರೆ ಕಪ್) ಅಥವಾ ಟೋಫು 25 ಗ್ರಾಂ ಸೇವಿಸುವುದರಿಂದ ಎಲ್‌ಡಿಎಲ್ ಅನ್ನು 5 ರಿಂದ 6 ಪ್ರತಿಶತದಷ್ಟು ಕಡಿಮೆ ಮಾಡಬಹುದು.


9. ಬಾದಾಮಿ, ವಾಲ್ನಟ್, ಕಡಲೆಕಾಯಿಯಂತಹ ಬೀಜಗಳನ್ನು ದಿನಕ್ಕೆ 2 ಔನ್ಸ್ ನಷ್ಟು ತಿನ್ನುವುದರಿಂದ ಇತರ ಹೃದಯ ಆರೋಗ್ಯಕರ ಅಂಶಗಳ ಜೊತೆಗೆ ಎಲ್‌ಡಿಎಲ್ ಅನ್ನು 5% ವರೆಗೆ ಕಡಿಮೆ ಮಾಡಬಹುದು.


"ಸ್ಯಾಚುರೇಟೆಡ್ ಕೊಬ್ಬುಗಳು ಅಥವಾ ಟ್ರಾನ್ಸ್ ಕೊಬ್ಬುಗಳ ಸೇವನೆಯನ್ನು ಕಡಿಮೆ ಮಾಡಿ. ಕೆಟ್ಟ ಮಟ್ಟದ ಕೊಲೆಸ್ಟ್ರಾಲ್ ಗೆ ಅತ್ಯಂತ ಸಾಮಾನ್ಯ ಕಾರಣಗಳಲ್ಲಿ ಒಂದು ನಾವು ತಿನ್ನುವ ಕಳಪೆ ಆಹಾರ ಅಂತ ಹೇಳಬಹುದು. ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡುವುದರಿಂದ ಚಳಿಗಾಲದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು" ಎಂದು ಡಾ. ಶುಕ್ಲಾ ಹೇಳುತ್ತಾರೆ.

First published: