• Home
  • »
  • News
  • »
  • lifestyle
  • »
  • Diabetes Myths: ಮಧುಮೇಹದ ಬಗ್ಗೆ ನೀವ್ ಕೇಳಿರೋದೆಲ್ಲಾ ನಿಜಾನಾ? ಇಲ್ಲಿದೆ ನೋಡಿ ಕೆಲ ಸತ್ಯಗಳು

Diabetes Myths: ಮಧುಮೇಹದ ಬಗ್ಗೆ ನೀವ್ ಕೇಳಿರೋದೆಲ್ಲಾ ನಿಜಾನಾ? ಇಲ್ಲಿದೆ ನೋಡಿ ಕೆಲ ಸತ್ಯಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

High Blood Sugar Myths: ಸಕ್ಕರೆ ಕಾಯಿಲೆಗೆ ಅಂದರೆ ಮಧುಮೇಹ ಸಮಸ್ಯೆಗೆ ತುತ್ತಾದರೆ ಸಂಪೂರ್ಣವಾಗಿ ಸಕ್ಕರೆಯನ್ನು ತ್ಯಜಿಸಬೇಕು ಎಂದು ಸಹ ಹೇಳಲಾಗುತ್ತದೆ. ಆದರೆ, ಈ ಮಧುಮೇಹಕ್ಕೆ ಸಂಬಂಧಿಸಿದ ಕೆಲವು ಸತ್ಯಗಳ ಬಗ್ಗೆ ಮಾಹಿತಿ ಇಲ್ಲಿದೆ. 

  • Share this:

ರಕ್ತದಲ್ಲಿ ಅಧಿಕ ಸಕ್ಕರೆ (Sugar) ಇರುವುದು ಅಥವಾ ಮಧುಮೇಹವು (Diabetes) ಗಂಭೀರವಾದ ಆರೋಗ್ಯದ (Health) ಕಾಯಿಲೆಯಾಗಿ ಪರಿಣಮಿಸಿದೆ. ಹಲವಾರು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಒಮ್ಮೆ ಮಧುಮೇಹ ಬಂದರೆ ಅದರ ಹಿಂದೆ ಒಂದೆಲ್ಲಾ ಒಂದು ಆರೋಗ್ಯ ಸಮಸ್ಯೆ ಸಹ ಬೆನ್ನಟ್ಟಿ ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ವಿಶ್ವಾದ್ಯಂತ ಸುಮಾರು 422 ಮಿಲಿಯನ್ ಜನರು ಮಧುಮೇಹ ಸಮಸ್ಯೆಯಿಂದ ಬಳಸಲುತ್ತಿದ್ದಾರೆ. ಇದಲ್ಲದೇ, ಪ್ರತಿ ವರ್ಷ 1.5 ಮಿಲಿಯನ್ ಸಾವುಗಳು ನೇರವಾಗಿ ಮಧುಮೇಹದ ಕಾರಣಕ್ಕೆ ಎನ್ನುವ ಆಘಾತಕಾರಿ ಅಂಶ ಸಹ ಬಹಿರಂಗವಾಗಿದ್ದು, ಇದು ನಿಜಕ್ಕೂ ಚಿಂತಿಸುವ ವಿಚಾರ ಎಂದರೆ ತಪ್ಪಲ್ಲ. ಇದೊಂದು ಒಂದು ದೊಡ್ಡ ಆರೋಗ್ಯ ಅಪಾಯವಾಗಿದ್ದರೂ, ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವು, ನಿಮಗೆ ಇರುವ ಇತರ ಆರೋಗ್ಯ ಸಮಸ್ಯೆಗಳನ್ನು(Health Problem)  ಸಹ ಹೆಚ್ಚು ಮಾಡುತ್ತದೆ. ಇದು ಕಣ್ಣು ಮತ್ತು ಮೂತ್ರಪಿಂಡಗಳಂತಹ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. 


ಜೀವನಶೈಲಿಯ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಧುಮೇಹ ನಿಯಂತ್ರಣಕ್ಕೆ ಕಾರಣವಾಗಿದ್ದರೂ, ಮಧುಮೇಹಕ್ಕೆ ಸಂಬಂಧಿಸಿದ ಬಹಳಷ್ಟು ಕಥೆಗಳು, ಮುಖ್ಯವಾಗಿ ಸುಳ್ಳುಗಳಿವೆ. ಮಧುಮೇಹಕ್ಕೆ ಸಂಬಂಧಿಸಿದ ಬಹಳಷ್ಟು ಸುಳ್ಳುಗಳಿವೆ, ಇವುಗಳನ್ನು ಸಾಮಾನ್ಯ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯು ಮಧುಮೇಹದ ಸಮಸ್ಯೆಯ ಆತಂಕವನ್ನು ಹೆಚ್ಚು ಮಾಡುತ್ತದೆ ಮತ್ತು ಇದು ಚಿಂತೆಗೆ ಕಾರಣವಾಗಬಹುದು. ಹಾಗಾಗಿ, ಈ ಬಗ್ಗೆ ಮಾಹಿತಿ ಪಡೆಯುವುದು ಅತ್ಯಗತ್ಯ.


ಮಧುಮೇಹವನ್ನು ಸುಲಭವಾಗಿ ನಿರ್ವಹಿಸಲು ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ತಜ್ಞರು ಕೆಲ ಮಾಹಿತಿ ನೀಡಿದ್ದು, ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಇಲ್ಲಿದೆ.  ಈ ಮಧುಮೇಹದ ಬಗ್ಗೆ ಸುಳ್ಳು ಮತ್ತು ಸತ್ಯಗಳು ಯಾವುದು ಎಂದು ಡಾ ಅನಿಕೇತ್ ಮುಲೆ ಹಂಚಿಕೊಂಡಿದ್ದಾರೆ. ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದ್ದು, ಇದರಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿದ್ದರೆ, ಆರೋಗ್ಯ ಸಮಸ್ಯೆಗಳು ಬರುತ್ತದೆ.


ಮಧುಮೇಹ ಸಮಸ್ಯೆ ಹೊಂದಿರುವ ಜನರು ಏನು ಮಾಡಬೇಕು ಮತ್ತು ಯಾವುದನ್ನ ತಪ್ಪಿಸಬೇಕು ಎಂಬ ಬಗ್ಗೆ, ಆಗಾಗ ಗೊಂದಲಕ್ಕೆ ಒಳಗಾಗುತ್ತಾರೆ. ಅವರ ಪ್ರಕಾರ ಹೆಚ್ಚು ತಿನ್ನುವುದರಿಂದ ಮಧುಮೇಹ ಉಂಟಾಗುತ್ತದೆ ಎಂದು ಭಾವಿಸಿದ್ದಾರೆ. ಸಕ್ಕರೆ ಕಾಯಿಲೆಗೆ ಅಂದರೆ ಮಧುಮೇಹ ಸಮಸ್ಯೆಗೆ ತುತ್ತಾದರೆ ಸಂಪೂರ್ಣವಾಗಿ ಸಕ್ಕರೆಯನ್ನು ತ್ಯಜಿಸಬೇಕು ಎಂದು ಸಹ ಹೇಳಲಾಗುತ್ತದೆ. ಆದರೆ, ಈ ಮಧುಮೇಹಕ್ಕೆ ಸಂಬಂಧಿಸಿದ ಕೆಲವು ಸತ್ಯಗಳ ಬಗ್ಗೆ ಮಾಹಿತಿ ಇಲ್ಲಿದೆ.




ಸುಳ್ಳು: ಮಧುಮೇಹವು ಗಂಭೀರವಾದ ಕಾಯಿಲೆಯಲ್ಲ, ಇದನ್ನು ನಿರ್ಲಕ್ಷಿಸುವುದು ತಪ್ಪೇನಲ್ಲ


ಸತ್ಯ: ನೀವು ಮಧುಮೇಹ ಸಮಸ್ಯೆ ಹೊಂದಿದ್ದರೆ, ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ. ಮಧುಮೇಹ ಜೀವನಶೈಲಿಯ ರೋಗವಾಗಿದ್ದು, ಇದರ ನಿರ್ವಹಣೆಯ ಅಗತ್ಯವಿದೆ. ಮಧುಮೇಹವನ್ನು ನಿರ್ವಹಿಸಿದ್ದರೆ ಪಾರ್ಶ್ವವಾಯು, ಹೃದಯರಕ್ತನಾಳದ ಕಾಯಿಲೆಗಳು, ಮೂತ್ರಪಿಂಡ ಮತ್ತು ಯಕೃತ್ತಿನ ಸಮಸ್ಯೆಗಳು ಮತ್ತು ನರಗಳ ಹಾನಿಗೆ ಕಾರಣವಾಗಬಹುದು. ಇದು ಗ್ಯಾಂಗ್ರೀನ್ ಮತ್ತು ಕಾಲು ಕತ್ತರಿಸುಂತಹ ಗಂಭೀರ ಪರಿಣಾಮಕ್ಕೆ ಕಾರಣವಾಗಬಹುದು. ಇದು ವ್ಯಕ್ತಿಯ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನೀವು ಮಧುಮೇಹ ಹೊಂದಿದ್ದರೆ ಜಾಗರೂಕರಾಗಿರಬೇಕು.


diabetes patient can eat these 7 foods easily
ಸಾಂದರ್ಭಿಕ ಚಿತ್ರ


ಇದನ್ನೂ ಓದಿ: ಈ 3 ಡ್ರೈ ಫ್ರೂಟ್ಸ್​ಗಳು ತೂಕ ಇಳಿಸೋದರ ಜೊತೆ ದೇಹವನ್ನೂ ಬೆಚ್ಚಗಿರಿಸಲು ಸಹಾಯ ಮಾಡುತ್ತೆ


 ಸುಳ್ಳು: ಒಬ್ಬ ವ್ಯಕ್ತಿಯು ಹೆಚ್ಚು ಸಕ್ಕರೆಯನ್ನು ತಿನ್ನುವುದರಿಂದ ಮಧುಮೇಹ ಸಮಸ್ಯೆ ಬರುತ್ತದೆ


ಸತ್ಯ: ಜೆನೆಟಿಕ್ಸ್, ಕಳಪೆ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ ಮತ್ತು ಬೊಜ್ಜು ಹೀಗೆ ಮಧುಮೇಹ ಸಮಸ್ಯೆ ಬರಲು ಈ ಕೆಲವು ಅಪಾಯಕಾರಿ ಅಂಶಗಳು ಕಾರಣವಾಗುತ್ತದೆ. ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುವುದಿಲ್ಲ. ಆದರೆ ನೀವು ಸಿಹಿತಿಂಡಿಗಳು ಮತ್ತು ಸಕ್ಕರೆ ಪಾನೀಯಗಳನ್ನು ಅತಿಯಾಗಿ ತಿನ್ನುವುದು, ಕುಡಿಯುವುದು ಮಾಡಬಾರದು.


ಸುಳ್ಳು: ಸಮಸ್ಯೆ ಇರುವವರು ಇನ್ಸುಲಿನ್‌ ತೆಗೆದುಕೊಳ್ಳುತ್ತಿದ್ದರೆ, ಅವರು ಯಾವುದೇ ರೀತಿಯಲ್ಲಿ ಜೀವನಶೈಲಿಯನ್ನು ಬದಲಾಯಿಸಬಾರದು ಎಂದರ್ಥ


ಸತ್ಯ: ಯಾರಿಗಾದರೂ ಮಧುಮೇಹ ಸಮಸ್ಯೆ ಇರುವುದು ಪತ್ತೆಯಾದಾಗ ಆಹಾರ, ವ್ಯಾಯಾಮ ಮತ್ತು ಔಷಧಿಗಳ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಬಹುದು. ಆದರೆ, ಕೆಲವು ಜನರ ವಿಷಯದಲ್ಲಿ ಔಷಧಗಳು ಪರಿಣಾಮಕಾರಿಯಾಗಿರುವುದಿಲ್ಲ ಮತ್ತು ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡಲು ಇನ್ಸುಲಿನ್ ಇಣಜೆಕ್ಷನ್ ಅಗತ್ಯವಿರಬಹುದು. ಆದರೆ, ಸಮಸ್ಯೆ ಇರುವವರು ಇನ್ಸುಲಿನ್‌ ತೆಗೆದುಕೊಳ್ಳುತ್ತಿದ್ದರೆ ಇನ್ನೂ ಸರಿಯಾದ ಆಹಾರ ಮತ್ತು ವ್ಯಾಯಾಮದ ದಿನಚರಿಯನ್ನು ಅನುಸರಿಸಬೇಕಾಗುತ್ತದೆ.


ಸುಳ್ಳು: ಮಧುಮೇಹ ಹೊಂದಿರುವ ಮಹಿಳೆಯರು ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ


ಸತ್ಯ: ಮಧುಮೇಹ ಸಮಸ್ಯೆಯನ್ನು ಹೊಂದಿರುವ ಮಹಿಳೆಯರು ಸಾಮಾನ್ಯ ಗರ್ಭಧಾರಣೆ ಮಾಡಬಹುದು ಮತ್ತು ಆರೋಗ್ಯಕರ ಮಗುವಿಗೆ ಜನ್ಮ ನೀಡಬಹುದು.


ಇದನ್ನೂ ಓದಿ: ಅರಿಶಿನದಲ್ಲೂ ಇದೆ ಹಲವು ವಿಧ, ಈ ಕಪ್ಪು ಅರಿಶಿನದ ಬಗ್ಗೆ ನಿಮಗೆಷ್ಟು ಗೊತ್ತು?


 ಸುಳ್ಳು: ಮಧುಮೇಹ ಇರುವವರು ವ್ಯಾಯಾಮ ಮಾಡುವುದನ್ನು ತಪ್ಪಿಸಬೇಕು ಏಕೆಂದರೆ ಅದು ಸುರಕ್ಷಿತವಲ್ಲ.


ಸತ್ಯ: ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ವಾಸ್ತವವಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರತಿದಿನ ವ್ಯಾಯಾಮ ಮಾಡಬೇಕು. ಇನ್ಸುಲಿನ್‌ಗೆ ದೇಹದ ಸೂಕ್ಷ್ಮತೆಯನ್ನು ಹೆಚ್ಚಿಸಲು ವ್ಯಾಯಾಮ ಸಹಾಯ ಮಾಡುತ್ತದೆ. ವಾರದಲ್ಲಿ 5 ದಿನ ಕನಿಷ್ಠ ಒಂದು ಗಂಟೆಯಾದರೂ ವ್ಯಾಯಾಮ ಮಾಡುವುದು ಉತ್ತಮ. ಯಾವ ವ್ಯಾಯಾಮವು ನಿಮಗೆ ಸೂಕ್ತವಾಗಿದೆ ಎಂಬುದರ ಕುರಿತು ನೀವು ತಜ್ಞರ ಸಹಾಯವನ್ನು ತೆಗೆದುಕೊಳ್ಳಬಹುದು.

Published by:Sandhya M
First published: