• Home
  • »
  • News
  • »
  • lifestyle
  • »
  • Diabetes: ಟೈಪ್ 2 ಮಧುಮೇಹ ಇದ್ಯಾ? ಈ 7 ಆಹಾರ ಪದಾರ್ಥಗಳಿಂದ ದೂರವಿರಿ

Diabetes: ಟೈಪ್ 2 ಮಧುಮೇಹ ಇದ್ಯಾ? ಈ 7 ಆಹಾರ ಪದಾರ್ಥಗಳಿಂದ ದೂರವಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಿಹಿ ತಿಂಡಿಗಳು ಸಂಸ್ಕರಿಸಿದ ಸಕ್ಕರೆಯನ್ನು ಹೊಂದಿರುತ್ತವೆ. ಹಾಗಾಗಿ ಇದು ಮಧುಮೇಹ ಹೊಂದಿರುವ ಜನರಿಗೆ ತುಂಬಾನೇ ಅಪಾಯಕಾರಿಯಾಗಿದೆ.

  • Trending Desk
  • Last Updated :
  • Karnataka, India
  • Share this:

ಈಗಂತೂ ಈ ಮಧುಮೇಹವು (Diabetes) ಪ್ರಪಂಚದಾದ್ಯಂತ ಅನೇಕರನ್ನು ತುಂಬಾನೇ ಕಾಡುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಧುಮೇಹ ಹೊಂದಿರುವ ಜನರ ಸಂಖ್ಯೆ 1980 ರಲ್ಲಿ 108 ಮಿಲಿಯನ್ ನಿಂದ 2014 ರಲ್ಲಿ 422 ಮಿಲಿಯನ್ ಗೆ ಏರಿದೆ. ಕಳಪೆ ಮಟ್ಟದ ಆಹಾರದ ಆಯ್ಕೆಗಳು (Food Choices) ಮತ್ತು ಜಡ ಜೀವನಶೈಲಿ ಮತ್ತು ಒತ್ತಡದೊಂದಿಗೆ ಹೆಚ್ಚಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar Level) ವರದಿ ಮಾಡುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


7 ಆಹಾರ ಪದಾರ್ಥಗಳಿಂದ ದೂರವಿರಿ


ಅದರಲ್ಲೂ ನೀವು ಈ ಟೈಪ್ 2 ಮಧುಮೇಹದಿಂದ ಬಳಲುತ್ತಿದ್ದರೆ, ಕೆಲವು ಆಹಾರ ಪದಾರ್ಥಗಳ ಕಡೆಗೆ ಮುಖ ಮಾಡಿ ಸಹ ನೋಡಬಾರದು, ಇದು ನಿಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಮುಖ್ಯವಾಗುತ್ತದೆ.


ಮಧುಮೇಹವನ್ನು ನಿಯಂತ್ರಿಸುವಲ್ಲಿ ಆಹಾರವು ಅತ್ಯಂತ ಪ್ರಮುಖ ಅಂಶವಾಗಿದೆ ಮತ್ತು ನಾವು ಆಗಾಗ್ಗೆ ತಿನ್ನಬೇಕಾದ ಆಹಾರಗಳ ಮೇಲೆ ಗಮನ ಹರಿಸುವಾಗ, ನಾವು ಮಧುಮೇಹದ ಕುಟುಂಬ ಇತಿಹಾಸವನ್ನು ಹೊಂದಿದ್ದರೆ ನಾವು ದೂರವಿರಬೇಕಾದ 7 ಆಹಾರ ಪದಾರ್ಥಗಳನ್ನು ನೋಡೋಣ ಬನ್ನಿ.


High blood sugar Fruit juice to French fries 7 food items to avoid in Type 2 diabetes
ಸಾಂದರ್ಭಿಕ ಚಿತ್ರ


ಮಧುಮೇಹವನ್ನು ನಿಯಂತ್ರಿಸಲು ಈ ಆಹಾರಗಳಿಂದ ದೂರವಿರಿ


1. ಸಿಹಿ ತಿಂಡಿಗಳು ಮತ್ತು ಸಿಹಿ ಪಾನೀಯಗಳು


 ಹೆಚ್ಚಿನ ಸಿಹಿ ತಿಂಡಿಗಳು ಸಂಸ್ಕರಿಸಿದ ಸಕ್ಕರೆಯನ್ನು ಹೊಂದಿರುತ್ತವೆ. ಹಾಗಾಗಿ ಇದು ಮಧುಮೇಹ ಹೊಂದಿರುವ ಜನರಿಗೆ ತುಂಬಾನೇ ಅಪಾಯಕಾರಿಯಾಗಿದೆ ಅಂತ ಹೇಳಬಹುದು. ಅವು ರಕ್ತದಲ್ಲಿನ ಸಕ್ಕರೆ ಮಟ್ಟಗಳಲ್ಲಿ ತೀಕ್ಷ್ಣವಾದ ಏರಿಕೆಗೆ ಕಾರಣವಾಗಬಹುದು ಮತ್ತು ಯಾವುದೇ ಪೌಷ್ಠಿಕಾಂಶದ ಪ್ರಯೋಜನಗಳನ್ನು ನೀಡದೆ ಕ್ಯಾಲೊರಿಗಳನ್ನು ಸೇರಿಸಬಹುದು. ತಯಾರಿಸಿಟ್ಟ ಜ್ಯೂಸ್ ಗಳು, ಸೋಡಾಗಳು ಮತ್ತು ಎಲ್ಲಾ ಸಿಹಿ ಪಾನೀಯಗಳ ವಿಷಯದಲ್ಲೂ ಇದು ನಿಜವಾಗಿದೆ. ಈ ಪಾನೀಯಗಳಲ್ಲಿ ಹೆಚ್ಚಿನ ಫ್ರಕ್ಟೋಸ್ ಇರುತ್ತದೆ ಮತ್ತು ಮಧುಮೇಹಿಗಳಿಗೆ ಇದು ಒಳ್ಳೆಯದಲ್ಲ.


2. ಜೇನುತುಪ್ಪ ಮತ್ತು ಮೇಪಲ್ ಸಿರಪ್


ಬಿಳಿ ಸಕ್ಕರೆಯನ್ನು ಜೇನುತುಪ್ಪದೊಂದಿಗೆ ಬದಲಾಯಿಸುವುದು ಆರೋಗ್ಯಕರ ಎಂದು ಅನೇಕರು ಹೇಳುತ್ತಾರೆ, ಆದರೆ ಜೇನುತುಪ್ಪವು ನಿಮ್ಮ ರಕ್ತದ ಸಕ್ಕರೆಯನ್ನು ಮೇಪಲ್ ಸಿರಪ್ ಅಥವಾ ಕಂದು ಸಕ್ಕರೆಯಂತೆ ಹೆಚ್ಚಿಸಲು ಕಾರಣವಾಗಬಹುದು. ಇವುಗಳನ್ನು ಹೆಚ್ಚಾಗಿ ಬಿಳಿ ಸಕ್ಕರೆಗೆ ಆರೋಗ್ಯಕರ ಪರ್ಯಾಯಗಳು ಎಂದು ಹೇಳಲಾಗುತ್ತದೆ, ಅವುಗಳ ಕಾರ್ಬೋಹೈಡ್ರೇಟ್ ಅಂಶವು ಹೆಚ್ಚು ಅಲ್ಲದಿದ್ದರೂ ಒಂದೇ ಆಗಿರುತ್ತದೆ.


3. ರೆಡಿ-ಟು-ಈಟ್ ಉಪಾಹಾರ ಆಯ್ಕೆಗಳು


ಬೆಳಗಿನ ಉಪಾಹಾರ ಧಾನ್ಯಗಳೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದು ಒಳ್ಳೆಯದು. ಏಕದಳ ಧಾನ್ಯಗಳು ಹೆಚ್ಚು ಸಂಸ್ಕರಿಸಲ್ಪಡುತ್ತವೆ, ಕಾರ್ಬೋಹೈಡ್ರೇಟುಗಳಲ್ಲಿ ಅಧಿಕವಾಗಿರುತ್ತವೆ, ಪ್ರೋಟೀನ್ ಗಳಲ್ಲಿ ಕಡಿಮೆ ಇರುತ್ತವೆ ಮತ್ತು ಗಮನಾರ್ಹ ಪೌಷ್ಠಿಕಾಂಶದ ಮೌಲ್ಯವನ್ನು ಹೊಂದಿರುವುದಿಲ್ಲ. ಏಕದಳ ಧಾನ್ಯಗಳಿರುವುದಕ್ಕಿಂತ ಮೊಟ್ಟೆಗಳ ಉಪಾಹಾರವು ತುಂಬಾ ಉತ್ತಮವಾಗಿದೆ.


4. ಫ್ರೆಂಚ್ ಫ್ರೈಸ್


ಫ್ರೆಂಚ್ ಫ್ರೈಸ್ ತಿನ್ನಲು ತುಂಬಾನೇ ರುಚಿಕರವೆಂದು ತೋರಬಹುದು, ಆದರೆ ಫ್ರೆಂಚ್ ಫ್ರೈಗಳು ಮಧುಮೇಹಿಗಳಿಗೆ ಒಳ್ಳೆಯ ಆಹಾರ ಪದಾರ್ಥವಲ್ಲ. ಆಲೂಗಡ್ಡೆಗಳಲ್ಲಿ ಕಾರ್ಬ್ ಇರುತ್ತದೆ ಮತ್ತು ನೀವು ಸಿಪ್ಪೆ ಸುಲಿದು ಅವುಗಳನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದಾಗ, ಅದು ಇನ್ನೂ ಅನಾರೋಗ್ಯಕರವಾಗುತ್ತದೆ. ಅವು ಉರಿಯೂತವನ್ನು ಉತ್ತೇಜಿಸಬಹುದು ಮತ್ತು ಅದು ನಂತರ ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು.


5. ಹಣ್ಣಿನ ಜ್ಯೂಸ್


ಹಣ್ಣಿನ ಜ್ಯೂಸ್ ಆರೋಗ್ಯಕರ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸುವುದರಿಂದ ಇದು ಆಶ್ಚರ್ಯಕರವಾಗಬಹುದು. ಅವು ಖನಿಜಗಳು ಮತ್ತು ಜೀವಸತ್ವಗಳಲ್ಲಿ ಅಧಿಕವಾಗಿದ್ದರೂ, ದುರದೃಷ್ಟವಶಾತ್, ಹೆಚ್ಚಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೊಂದಿರುವವರಿಗೆ ಅವು ಸುರಕ್ಷಿತ ಆಯ್ಕೆಗಳಲ್ಲ. ನೀವು ಜ್ಯೂಸ್ ಅನ್ನು ತಯಾರಿಸುವಾಗ, ನೀವು ಸಕ್ಕರೆ ಅಥವಾ ಸಿಹಿಕಾರಕಗಳನ್ನು ಸೇರಿಸದಿದ್ದರೂ, ಜ್ಯೂಸ್ ನಲ್ಲಿ ಸಾಂದ್ರೀಕೃತ ಪ್ರಮಾಣದ ಹಣ್ಣಿನ ಸಕ್ಕರೆಯನ್ನು ಹೊಂದಿರುತ್ತದೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ.


6. ಡೈರಿ ಉತ್ಪನ್ನಗಳು


ಫುಲ್ ಮ್ಯಾಟ್ ಕ್ರೀಮ್, ಹಾಲು, ಮೊಸರು, ಚೀಸ್ ನಂತಹ ಎಲ್ಲಾ ಡೈರಿ ಉತ್ಪನ್ನಗಳಿಂದ ಮಧುಮೇಹಿಗಳು ದೂರವಿರುವುದು ಒಳ್ಳೆಯದು. ಡೈರಿ ಉತ್ಪನ್ನಗಳಲ್ಲಿನ ಸ್ಯಾಚುರೇಟೆಡ್ ಕೊಬ್ಬುಗಳು ಇನ್ಸುಲಿನ್ ಪ್ರತಿರೋಧವನ್ನು ತಡೆಯಬಹುದು ಮತ್ತು ಆದ್ದರಿಂದ ಹೆಚ್ಚಿನ ಕೊಲೆಸ್ಟ್ರಾಲ್ ಮಾತ್ರವಲ್ಲದೆ, ಇದು ಹೆಚ್ಚಿನ ರಕ್ತದ ಸಕ್ಕರೆ ಮಟ್ಟಕ್ಕೂ ಸಹ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸಿವೆ.


ಇದನ್ನೂ ಓದಿ: Anita Hassanandani Reddy: ಡಯೆಟ್‌ ಮಾಡದೇ ತೂಕ ಇಳಿಸಿಕೊಂಡ ನಟಿ ಅನಿತಾ ಹಸನಂದಿನಿ, ಇದು ಹೇಗೆ ಸಾಧ್ಯ ಆಯ್ತು ಗೊತ್ತಾ?


7. ಪರಿಮಳಯುಕ್ತ ಮೊಸರು


ಕಾರ್ಬೋಹೈಡ್ರೇಟ್ ಗಳು ಮತ್ತು ಸಕ್ಕರೆಯಿಂದ ತುಂಬಿರುವ, ಪರಿಮಳಯುಕ್ತ ಮೊಸರನ್ನು ಮಧುಮೇಹಿಗಳು ಸೇವಿಸಲೇಬಾರದು. ಇದರ ಬದಲಿಗೆ, ಸಾದಾ ಮೊಸರನ್ನು ಸೇವಿಸಿರಿ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು