High Blood Pressure: ಅಧಿಕ ರಕ್ತದೊತ್ತಡ ಸಮಸ್ಯೆ ಕಡಿಮೆ ಮಾಡಲು ನೀರನ್ನು ಹೀಗೆ ಕುಡಿಯಬೇಕಂತೆ

ಅಧಿಕ ರಕ್ತದೊತ್ತಡ ವ್ಯಾಪ್ತಿಯು ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತ ಇರುತ್ತದೆ. ಮಹಿಳೆಯರಿಗಿಂತ ಪುರುಷರು ಅಧಿಕ ರಕ್ತದೊತ್ತಡ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಇತ್ತೀಚೆಗೆ ತಜ್ಞರೊಬ್ಬರು ನೀರು ಕುಡಿಯುವುದು ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅಧಿಕ ರಕ್ತದೊತ್ತಡದ (High Blood Pressure) ಸಮಸ್ಯೆ (Problem) ಯನ್ನು ನಿರ್ಲಕ್ಷ್ಯ (Avoid) ಮಾಡುವುದು ಮಾರಣಾಂತಿಕ ಆಗಬಹುದು. ಅಧಿಕ ರಕ್ತದೊತ್ತಡ ಕಳಪೆ ಜೀವನಶೈಲಿಯಿಂದ (Lifestyle) ಹುಟ್ಟಿಕೊಳ್ಳುತ್ತದೆ. ಅಂದರೆ ನಿಮ್ಮ ಕೆಟ್ಟ ಹಾಗೂ ಚಟುವಟಿಕೆ ರಹಿತ ಜೀವನಶೈಲಿಯು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಅಧಿಕ ರಕ್ತದೊತ್ತಡ ಹೊಂದಿರುವ ಜನರು ತಮ್ಮ ಜೀವನಶೈಲಿ ಸುಧಾರಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. ಸಾಮಾನ್ಯ ರಕ್ತದೊತ್ತ 120/80 mmHg ವರೆಗೆ ಇರುತ್ತದೆ. 120 ರಿಂದ 140 ಸಿಸ್ಟೊಲಿಕ್ ಮತ್ತು 80 ರಿಂದ 90 ಡಯಾಸ್ಟೊಲಿಕ್ ನಡುವಿನ ರಕ್ತದೊತ್ತಡವನ್ನು ಪ್ರಿ-ಹೈಪರ್ಟೆನ್ಷನ್ ಎಂದು ಪರಿಗಣಿಸುತ್ತಾರೆ.

  ಅಧಿಕ ರಕ್ತದೊತ್ತಡ ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತದೆ

  ಜೊತೆಗೆ 140/90 ಕ್ಕಿಂತ ಹೆಚ್ಚಿನದನ್ನು ಅಧಿಕ ರಕ್ತದೊತ್ತಡ ಎಂದು ಪರಿಗಣಿಸುತ್ತಾರೆ. ಇದರ ವ್ಯಾಪ್ತಿಯು ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತ ಇರುತ್ತದೆ. ಒಂದು ಸಂಶೋಧನೆ ಪ್ರಕಾರ, ಭಾರತದ ಸುಮಾರು 30 ಪ್ರತಿಶತ ಯುವಕರು ಅಧಿಕ ರಕ್ತದೊತ್ತಡ ದೂರು ಹೊಂದಿದ್ದಾರೆ. ಇವರಲ್ಲಿ ಶೇ.34ರಷ್ಟು ಜನರು ನಗರ ಪ್ರದೇಶದಲ್ಲಿ ಮತ್ತು ಶೇ.28ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

  ಮಹಿಳೆಯರಿಗಿಂತ ಪುರುಷರು ಅಧಿಕ ರಕ್ತದೊತ್ತಡ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಇದು ಮೂರು ಪ್ರತಿಶತ ಹೆಚ್ಚು. ಇತ್ತೀಚೆಗೆ ತಜ್ಞರೊಬ್ಬರು ನೀರು ಕುಡಿಯುವುದು ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಉಂಟಾಗುತ್ತದೆ?

  ಅಧಿಕ ರಕ್ತದೊತ್ತಡ ಬಗ್ಗೆ ತಿಳಿಯಿರಿ

  ಅಧಿಕ ರಕ್ತದೊತ್ತಡ ಎಂದರೆ ನಿಮ್ಮ ಹೃದಯವು ದೇಹದ ಸುತ್ತಲೂ ರಕ್ತ ಪಂಪ್ ಮಾಡುವುದಕ್ಕಿಂತ ಹೆಚ್ಚು ಬಲದಿಂದ ಪಂಪ್ ಮಾಡುತ್ತದೆ. ರಕ್ತದ ಈ ಅಧಿಕ ಒತ್ತಡವು ಹೃದಯ, ಮೆದುಳು, ಮೂತ್ರಪಿಂಡ ಮತ್ತು ಕಣ್ಣುಗಳು ಸೇರಿದಂತೆ ದೇಹದ ಅನೇಕ ಭಾಗಗಳ ಮೇಲೆ ರಕ್ತನಾಳಗಳ ಮೂಲಕ ಹಾದು ಹೋಗಲು ಹೆಚ್ಚುವರಿ ಒತ್ತಡ ಉಂಟು ಮಾಡುತ್ತದೆ. ಅಧಿಕ ರಕ್ತದೊತ್ತಡ ಸಹ ಈ ಸಮಸ್ಯೆ ಉಂಟು ಮಾಡಬಹುದು

  ಹೃದಯಾಘಾತ, ಪಾರ್ಶ್ವವಾಯು, ಹೃದಯ ವೈಫಲ್ಯ, ಅಪಧಮನಿಯ ಕಾಯಿಲೆ, ಬುದ್ಧಿಮಾಂದ್ಯತೆ, ಮೂತ್ರಪಿಂಡ ಕಾಯಿಲೆಗೆ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಉಪ್ಪು ಸೇವನೆ ಮಿತಿಗೊಳಿಸಬೇಕು ಎಂದು ಹೇಳಲಾಗುತ್ತದೆ.

  ಎಷ್ಟು ನೀರು ಕುಡಿದರೆ ಹೈ ಬಿಪಿ ಕಡಿಮೆ ಮಾಡಬಹುದು

  ದಿ ಮಿರರ್ ಪ್ರಕಾರ, ಇಂಗ್ಲೆಂಡ್‌ನ MD, ಡಾ. ಮೋನಿಕಾ ವಾಸ್ಸೆರ್‌ಮ್ಯಾನ್, ಒಟ್ಟಾರೆ ಪೌಷ್ಟಿಕಾಂಶ ತಜ್ಞರಾಗಿ, ನಾನು ಯಾವಾಗಲೂ ರೋಗಿಗೆ ಪ್ರತಿದಿನ ಎಂಟು ಲೋಟ ನೀರು ಕುಡಿಯಲು ಶಿಫಾರಸು ಮಾಡುತ್ತೇನೆ ಎಂದಿದ್ದಾರೆ. ವಾಸ್ತವದಲ್ಲಿ ನೀರು ರಕ್ತವನ್ನು ನಿರ್ವಿಷಗೊಳಿಸುತ್ತದೆ. ಸೋಡಿಯಂ ಅಧಿಕ ಬಿಪಿ ಅಪಾಯ ಹೆಚ್ಚಿಸುವುದು ದೇಹದಿಂದ ಹೆಚ್ಚುವರಿ ಸೋಡಿಯಂ ಅನ್ನು ತೆಗೆದು ಹಾಕುತ್ತದೆ.

  ಕ್ರ್ಯಾನ್‌ಬೆರಿ ಜ್ಯೂಸ್ ಅಧಿಕ ಬಿಪಿ ಕಡಿಮೆ ಮಾಡುತ್ತದೆ. ಕ್ರ್ಯಾನ್‌ಬೆರಿ ಜ್ಯೂಸ್‌ನಲ್ಲಿ ವಿಟಮಿನ್ ಸಿ ಅಧಿಕ ಆಗಿದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಉರಿಯೂತದ ವಿರುದ್ಧ ಹೋರಾಡಲು, ರಕ್ತದ ಹರಿವು ಉತ್ತೇಜಿಸಲು ಮತ್ತು ರಕ್ತನಾಳ ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ.

  ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ. ನೀವು ದಿನಕ್ಕೆ ಎಂಟು ಲೋಟ ನೀರು ಕುಡಿದರೆ, 24 ಗಂಟೆಗಳಲ್ಲಿ ನೀವು ಸುಮಾರು 2 ಲೀಟರ್ ನೀರು ಕುಡಿಯಿರಿ. ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ.

  ಆಹಾರ ಸೇವನೆಯತ್ತ ಗಮನ ಕೊಡಿ

  ವೈದ್ಯೆ ಮೋನಿಕಾ ವಾಸ್ಸೆರ್‌ಮನ್ ಅವರು, ರಕ್ತದೊತ್ತಡ ಕಡಿಮೆ ಮಾಡಲು ಕೊಬ್ಬಿನ ಮೀನುಗಳು ಸಾಲ್ಮನ್, ಟ್ಯೂನ, ಟ್ರೌಟ್, ಸಾರ್ಡೀನ್ಗಳು, ಹೆರಿಂಗ್ ಮತ್ತು ಮ್ಯಾಕೆರೆಲ್ಗಳನ್ನು ಆಹಾರದಲ್ಲಿ ಸೇರಿಸಿ. ಕೊಬ್ಬಿನ ಮೀನುಗಳು ಒಮೆಗಾ -3 ಕೊಬ್ಬಿನಾಮ್ಲಗಳ ಉತ್ತಮ ಮೂಲ. ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ.

  ಯಾರಲ್ಲಿ ಅಧಿಕ ರಕ್ತದೊತ್ತಡ ಅಪಾಯ ಹೆಚ್ಚು?

  - ಅಧಿಕ ತೂಕ ಹೊಂದಿರುವವರು

  - ಹೆಚ್ಚು ಉಪ್ಪು ತಿನ್ನುವವರು

  - ಹಣ್ಣುಗಳು ಮತ್ತು ತರಕಾರಿ ಸೇವಿಸದವರು

  - ವ್ಯಾಯಾಮ ಮಾಡದವರು

  ಇದನ್ನೂ ಓದಿ: ಕೂದಲ ಆರೈಕೆಗೆ ಕಡಲೆ ಹಿಟ್ಟಿನ ಹೇರ್ ಮಾಸ್ಕ್; ತಯಾರಿಸೋದು ಹೇಗೆ?

  - ಹೆಚ್ಚು ಮದ್ಯ ಅಥವಾ ಕಾಫಿ ಕುಡಿಯುವವರು

  - ಹೆಚ್ಚು ಹೊಗೆಯಲ್ಲಿರುವವರು

  – ಅತೀ ನಿದ್ದೆ ಮಾಡುತ್ತಾರೆ

  - 65 ವರ್ಷಕ್ಕಿಂತ ಮೇಲ್ಪಟ್ಟವರು
  Published by:renukadariyannavar
  First published: