• Home
  • »
  • News
  • »
  • lifestyle
  • »
  • High Blood Pressure: ಅಧಿಕ ರಕ್ತದೊತ್ತಡ ಸಮಸ್ಯೆಗೆ ರಾಮಬಾಣ ಈ ಜ್ಯೂಸ್

High Blood Pressure: ಅಧಿಕ ರಕ್ತದೊತ್ತಡ ಸಮಸ್ಯೆಗೆ ರಾಮಬಾಣ ಈ ಜ್ಯೂಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಯಸ್ಸಾದಂತೆ ಅಧಿಕ ರಕ್ತದೊತ್ತಡ ಸಮಸ್ಯೆ ಸಾಮಾನ್ಯವಾಗಿ ಉಂಟಾಗುತ್ತದೆ. ಆದರೆ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಬೇಡಿ. ಏಕೆಂದರೆ ಅದು ಸೈಲೆಂಟ್ ಕಿಲ್ಲರ್ ಆಗಿ ಕೆಲಸ ಮಾಡುತ್ತದೆ. ಅಧಿಕ ರಕ್ತದೊತ್ತಡ ನಿಯಂತ್ರಿಸದೇ ಹೋದರೆ ಗಂಭೀರ ಕಾಯಿಲೆಗೆ ಕಾರಣವಾಗುತ್ತದೆ.

  • Share this:

    ವಯಸ್ಸು (Age) ಹೆಚ್ಚುತ್ತಾ ಹೋದಂತೆ ಅನೇಕ ಕಾಯಿಲೆಗಳು (Disease) ದೇಹವನ್ನು (Body) ಬಾಧಿಸುತ್ತವೆ. ಅವುಗಳಲ್ಲಿ ಮಧುಮೇಹ (Diabetes), ರಕ್ತದೊತ್ತಡ ಹಾಗೂ ಹೊಟ್ಟೆ ಸಮಸ್ಯೆಗಳು (Stomach Problems) ಹೆಚ್ಚುತ್ತವೆ. ಹೆಚ್ಚುತ್ತಿರುವ ವಯಸ್ಸು ಮತ್ತು ಇತರೆ ಮಾನಸಿಕ ಮತ್ತು ದೈಹಿಕ ಒತ್ತಡಗಳು ವ್ಯಕ್ತಿಯನ್ನು ಹೆಚ್ಚು ರೋಗಕ್ಕೆ ತುತ್ತಾಗುತ್ತವೆ. ಅವುಗಳಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಸಾಮಾನ್ಯವಾಗಿ ಹೋಗುತ್ತದೆ. ಆದರೆ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಬೇಡಿ. ಏಕೆಂದರೆ ಅದು ಸೈಲೆಂಟ್ ಕಿಲ್ಲರ್ ಆಗಿ ಕೆಲಸ ಮಾಡುತ್ತದೆ. ಅಧಿಕ ರಕ್ತದೊತ್ತಡ ನಿಯಂತ್ರಿಸದೇ ಹೋದರೆ ಅದು ಹೃದಯಾಘಾತ ಮತ್ತು ಪಾರ್ಶ್ವವಾಯು ಕಾಯಿಲೆಗಳಂತಹ ಮಾರಣಾಂತಿಕ ಪರಿಸ್ಥಿತಿಗೆ ಕಾರಣ ಆಗಬಹುದು.


    ಹೈ ಬಿಪಿ ನಿಯಂತ್ರಿಸಲು ಬೀಟ್ರೂಟ್ ಜ್ಯೂಸ್


    ನಿಮ್ಮ ರಕ್ತದೊತ್ತಡ ಸಹ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚು ಇದ್ದರೆ ಅದಕ್ಕೆ ಮೊದಲು ಚಿಕಿತ್ಸೆ ನೀಡಿ. ತಜ್ಞರ ಪ್ರಕಾರ ರಕ್ತದೊತ್ತಡದ ಸಾಮಾನ್ಯ ಮಟ್ಟ 80 ರಿಂದ 120 ಎಂಎಂಎಚ್ ಜಿ ಇರಬೇಕು. ಡಯೆಟಿಷಿಯನ್ ಶ್ವೇತಾ ಶಾ ಹೈ ಬಿಪಿ ನಿಯಂತ್ರಿಸಲು ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಹೇಳಿದ್ದಾರೆ.


    ಡಯೆಟಿಷಿಯನ್ ಶ್ವೇತಾ ಶಾ ಹೈ ಬಿಪಿ ನಿಯಂತ್ರಿಸಲು ಅವರ ಪ್ರಕಾರ, ಬೆಳಿಗ್ಗೆ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡಬಹುದು. ಡಯೆಟಿಷಿಯನ್ ಶ್ವೇತಾ ಶಾ ಅವರು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಡಯೆಟಿಷಿಯನ್ ಕೂಡ ಆಗಿದ್ದಾರೆ. ಶ್ವೇತಾ ಅವರಿಂದ ನಟಿ ದೀಪಿಕಾ ಪಡುಕೋಣೆ ನಿರಂತರವಾಗಿ ಡಯಟ್ ಟಿಪ್ಸ್ ಪಡೆಯುತ್ತಲೇ ಇರುತ್ತಾರೆ.


    ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


    ಅಧಿಕ ರಕ್ತದೊತ್ತಡ ಕಡಿಮೆ ಮಾಡುವ ಮಾರ್ಗ ಯಾವುದು?


    ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಪ್ರತಿದಿನ ಬೀಟ್ರೂಟ್ ಜ್ಯೂಸ್ ಅಥವಾ ರಸ ಕುಡಿಯಬೇಕು ಎಂದು ಪೌಷ್ಟಿಕ ತಜ್ಞೆ ಶ್ವೇತಾ ಶಾ ಹೇಳಿದರು. ಬೀಟ್ರೂಟ್ ರಸ ಕುಡಿಯುವುದರಿಂದ ಸಂಕೋಚನದ ರಕ್ತದೊತ್ತಡವು ಸರಾಸರಿ 4 ರಿಂದ 5 ಪಾಯಿಂಟ್‌ ಕಡಿಮೆ ಆಗುತ್ತದೆ. 2012 ರ ಅಧ್ಯಯನ ಉಲ್ಲೇಖಿಸಿ ಅವರು ಅಧಿಕ ಬ್ಲಡ್ ಪ್ರಶರ್ ಗೆ ಮನೆಮದ್ದನ್ನು ಹೇಳಿದರು.


    ಅಧಿಕ ರಕ್ತದೊತ್ತಡ ಚಿಕಿತ್ಸೆಯಲ್ಲಿ ಬೀಟ್ರೂಟ್ ಹೇಗೆ ಸಹಕಾರಿ?


    ಆಹಾರ ತಜ್ಞರ ಪ್ರಕಾರ, ಬೀಟ್ರೂಟ್ ನೈಸರ್ಗಿಕ ನೈಟ್ರೇಟ್ ಗಳನ್ನು ಹೊಂದಿದೆ. ಇದು ದೇಹಕ್ಕೆ ಹೋಗಿ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುತ್ತದೆ. ಅದರ ಸಹಾಯ ರಕ್ತವನ್ನು ಸಾಗಿಸುವ ಸಿರೆಗಳು ವಿಶ್ರಾಂತಿ ಪಡೆಯುತ್ತವೆ. ಮತ್ತು ರಕ್ತದೊತ್ತಡ ಸಾಮಾನ್ಯ.


    ಬೀಟ್ರೂಟ್ ಜ್ಯೂಸ್ ಕುಡಿಯಲು ಸರಿಯಾದ ಸಮಯ ಯಾವುದು?


    ಬೀಟ್ರೂಟ್ ರಸವನ್ನು ದಿನದ ಯಾವುದೇ ಸಮಯದಲ್ಲಿ ಕುಡಿಯಬಹುದು. ಆದರೆ ತಜ್ಞರ ಪ್ರಕಾರ, ಬೀಟ್ರೂಟ್ ಜ್ಯೂಸ್ ಅನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಉಪಹಾರಕ್ಕೆ 1 ಗಂಟೆ ಮೊದಲು ಕುಡಿಯುವುದರಿಂದ ಅದರ ಸಂಪೂರ್ಣ ಪ್ರಯೋಜನ ಪಡೆಯಬಹುದು.


    ಬೀಟ್ರೂಟ್ ಜ್ಯೂಸ್ ಸೇವನೆ ದೇಹಕ್ಕೆ ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ.


    ಅಧಿಕ ರಕ್ತದೊತ್ತಡ ಸಮಸ್ಯೆ ಕಡಿಮೆ ಮಾಡಲು ಏನು ಮಾಡಬೇಕು? ಎಂಬುದು ಎಲ್ಲರಿಗೂ ಗೊತ್ತಿದೆ. ವೈದ್ಯರ ಸಂಪರ್ಕ ಮಾಡುವುದು, ಮನೆಮದ್ದುಗಳ ಬಳಕೆ ಮಾಡುವುದು ಹೀಗೆ. ಆದರೆ ಬೀಟ್ರೂಟ್ ಜ್ಯೂಸ್ ಸೇವನೆ ಮಾಡುವುದರಿಂದ ಇತರೆ ಅನೇಕ ಪ್ರಯೋಜನ ಸಹ ನೀವು ಕಾಣಬಹುದು.


    ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


    ಹೆಲ್ತ್‌ಲೈನ್ ಹೇಳುವ ಪ್ರಕಾರ, ಅಧಿಕ ರಕ್ತದೊತ್ತಡ ಸಮಸ್ಯೆ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ ಬೀಟ್ರೂಟ್ ಜ್ಯೂಸ್ ಸಹ ತ್ರಾಣ ಹೆಚ್ಚಿಸುತ್ತದೆ. ನೀವು ಬುದ್ಧಿಮಾಂದ್ಯತೆ, ಹೃದ್ರೋಗ, ಬೊಜ್ಜು, ಕೊಲೆಸ್ಟ್ರಾಲ್ ಅಥವಾ ಯಕೃತ್ತಿನ ಕಾಯಿಲೆ ತೊಂದರೆಗೆ ತುತ್ತಾಗಿದ್ದರೆ ನಂತರ ಬೀಟ್ರೂಟ್ ಜ್ಯೂಸ್ ಕುಡಿಯಲು ಪ್ರಾರಂಭಿಸಿ.

    Published by:renukadariyannavar
    First published: