High Blood Pressure: ಅಧಿಕ ರಕ್ತದೊತ್ತಡ ಸಮಸ್ಯೆ ಕಂಡು ಹಿಡಿಯುವುದು ಹೇಗೆ; ಯಾವ ಪದಾರ್ಥಗಳ ಸೇವನೆ ಮುಖ್ಯ?

ಅಧಿಕ ರಕ್ತದೊತ್ತಡ ಸಮಸ್ಯೆ ಯಾವುದೇ ನಿರ್ದಿಷ್ಟ ಲಕ್ಷಣಗಳನ್ನು ಹೊಂದಿಲ್ಲ. ಹಾಗಾಗಿ ಇದನ್ನು ಮೂಕ ಕೊಲೆಗಾರ ಎಂದು ಕರೆಯುತ್ತಾರೆ. ಅಧಿಕ ರಕ್ತದೊತ್ತಡ ಸಾಮಾನ್ಯವಾಗಿ ಕಾಲಾನಂತರದಲ್ಲಿ ಬೆಳೆಯುತ್ತ ಹೋಗುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ರಕ್ಷಿಸಲು ಆಹಾರವು ಪ್ರಾಥಮಿಕವಾಗಿ ನಿಮಗೆ ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅಧಿಕ ರಕ್ತದೊತ್ತಡ ಸಮಸ್ಯೆಯನ್ನು (High Blood Pressure Problem) ಸೈಲೆಂಟ್ ಕಿಲ್ಲರ್ ಕಾಯಿಲೆ ಎಂದು ಕರೆಯುತ್ತಾರೆ. ಕೆಲವು ಸಾಂಕ್ರಾಮಿಕ ಅಲ್ಲದ ಕಾಯಿಲೆಗಳು (Disease) ಭಾರತದಲ್ಲಿನ ಒಟ್ಟು ಸಾವುಗಳ ಸುಮಾರು 63 ಪ್ರತಿಶತ ಕಾರಣವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಅದರಲ್ಲಿ 27% ನಷ್ಟು ಸಾವುಗಳು ಹೃದ್ರೋಗ ಸಮಸ್ಯೆಯಿಂದ ಉಂಟಾಗುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದು 40 ರಿಂದ 69 ವಯಸ್ಸಿನ 45 ಪ್ರತಿಶತ ಜನರ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡವು ಹೃದಯ ಸಂಬಂಧಿ ಕಾಯಿಲೆಗೆ ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಒಂದು ಆಗಿದೆ ಎಂದು ತಿಳಿಸಿದೆ.

    ಇನ್ನು 2025 ರ ವೇಳೆಗೆ ದೇಶದ ಜನಸಂಖ್ಯೆಯ ಸುಮಾರು 25 ಪ್ರತಿಶತ ಜನರು ಅಧಿಕ ರಕ್ತದೊತ್ತಡಕ್ಕೆ ಬಲಿಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಹಾಗಿದ್ದರೆ ಅಧಿಕ ರಕ್ತದೊತ್ತಡ ಸಮಸ್ಯೆ ಇದೆ ಎಂಬುದನ್ನು ತಿಳಿಯುವುದು ಹೇಗೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

    ಅಧಿಕ ರಕ್ತದೊತ್ತಡ ಸಮಸ್ಯೆ ಕಂಡು ಹಿಡಿಯುವುದು ಹೇಗೆ?

    ಅಧಿಕ ರಕ್ತದೊತ್ತಡ ಸಮಸ್ಯೆ ಯಾವುದೇ ನಿರ್ದಿಷ್ಟ ಲಕ್ಷಣಗಳನ್ನು ಹೊಂದಿಲ್ಲ. ಹಾಗಾಗಿ ಇದನ್ನು ಮೂಕ ಕೊಲೆಗಾರ ಎಂದು ಕರೆಯುತ್ತಾರೆ. ಆದಾಗ್ಯೂ, ಅಧಿಕ ರಕ್ತದೊತ್ತಡ ಚಿಹ್ನೆ ಎಂದು ಪರಿಗಣಿಸಬಹುದಾದ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ.

    ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಗೆ ನೈಸರ್ಗಿಕ ಪರಿಹಾರ, ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ

    ಇವುಗಳಲ್ಲಿ ತಲೆನೋವು, ಭಾರ, ವಾಕರಿಕೆ, ತಲೆ ತಿರುಗುವಿಕೆ ಮತ್ತು ಹಠಾತ್ ತ್ವರಿತ ಹೃದಯ ಬಡಿತ ಸೇರಿವೆ. ನೀವು ಸರಿಯಾದ ಸಮಯದಲ್ಲಿ ಬಿಪಿ ನಿಯಂತ್ರಣ ಮಾಡದಿದ್ದರೆ, ನೀವು ಭವಿಷ್ಯದಲ್ಲಿ ಪಾರ್ಶ್ವವಾಯು, ಹೃದಯ ವೈಫಲ್ಯ, ಹೃದಯಾಘಾತ ಗಂಭೀರ ಸಮಸ್ಯೆ ಎದುರಿಸುತ್ತಾರೆ.

    ಬಿಪಿ ಹೇಗೆ ಹೆಚ್ಚಾಗುತ್ತದೆ?

    ಅಧಿಕ ರಕ್ತದೊತ್ತಡ ಸಾಮಾನ್ಯವಾಗಿ ಕಾಲಾನಂತರದಲ್ಲಿ ಬೆಳೆಯುತ್ತ ಹೋಗುತ್ತದೆ. ಕಳಪೆ ಆಹಾರ, ದೈಹಿಕ ಚಟುವಟಿಕೆಯ ಕೊರತೆ, ಮಧುಮೇಹ ಮತ್ತು ಬೊಜ್ಜು ಸೇರಿದಂತೆ ಕೆಲವು ಆರೋಗ್ಯ ಪರಿಸ್ಥಿತಿಗಳು ರಕ್ತದೊತ್ತಡ ನಿಯಂತ್ರಣ ಮಾಡುವುದಿಲ್ಲ.

    ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ರಕ್ಷಿಸಲು ಆಹಾರವು ಪ್ರಾಥಮಿಕವಾಗಿ ನಿಮಗೆ ಸಹಾಯ ಮಾಡುತ್ತದೆ. ಕೆಲವು ಆಹಾರಗಳ ಹೊರತಾಗಿ ನಿಮ್ಮ ರಕ್ತದೊತ್ತಡ ನಿಯಂತ್ರಿಸಲು ನೀವು ಅಧಿಕ BP ಸ್ನೇಹಿ ಪಾನೀಯ ಸೇವನೆ ಮಾಡಬೇಕು.

    ಬೀಟ್ರೂಟ್ ರಸ

    ಅಧ್ಯಯನದ ಪ್ರಕಾರ, ಬೀಟ್ರೂಟ್ ರಸ ನಿಮ್ಮ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಜೊತೆಗೆ ನೈಟ್ರೇಟ್‌ಗಳು ರಕ್ತದೊತ್ತಡ ಸಾಮಾನ್ಯಗೊಳಿಸುವ ಮೂಲಕ ಹೃದಯ ಕಾಯಿಲೆ ಮತ್ತು ಹೃದಯಾಘಾತ ತಡೆಯುತ್ತದೆ. ಇದು ಉರಿಯೂತ ಗುಣಲಕ್ಷಣ ಹೊಂದಿದೆ.

    ವಿಟಮಿನ್ಗಳು ಮತ್ತು ಖನಿಜಗಳು ಹೃದಯವನ್ನು ಆರೋಗ್ಯವಾಗಿಡಲು ಕೆಲಸ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಲು ಬೀಟ್ರೂಟ್ ಅನ್ನು ಪ್ರತಿದಿನ ಸೇವನೆ ಮಾಡಬಹುದು. ಇದನ್ನು ಕತ್ತರಿಸಿ ಸಲಾಡ್ ರೂಪದಲ್ಲಿ ಅಥವಾ ಅದರ ರಸ ಕುಡಿಯಬಹುದು.

    ದಾಳಿಂಬೆ ರಸ

    ದಾಳಿಂಬೆ ದೇಹದಲ್ಲಿ ರಕ್ತ ಹೆಚ್ಚಿಸುವ ಕೆಲಸ ಮಾಡುತ್ತದೆ. ಅದರ ಆಂಟಿಹೈಪರ್ಟೆನ್ಸಿವ್ ಗುಣಲಕ್ಷಣಗಳು ಸಂಶೋಧನೆಯೊಂದರ ಪ್ರಕಾರ, ರಕ್ತದೊತ್ತಡ ಕಡಿಮೆ ಮಾಡುವ ಗುಣಲಕ್ಷಣ ಜೊತೆಗೆ ಅಪಧಮನಿಗಳಲ್ಲಿ ಕೊಬ್ಬಿನ ಶೇಖರಣೆ ತಡೆಯುವ ಗುಣಲಕ್ಷಣಗಳು ಸಹ ಕಂಡು ಬರುತ್ತವೆ. ದಾಳಿಂಬೆ ಬಳಕೆ ಹೆಚ್ಚಿದ ಕೊಲೆಸ್ಟ್ರಾಲ್ ನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

    ಬ್ಲೂಬೆರ್ರಿ ರಸ

    ನೇಚರ್‌ನಲ್ಲಿ ಪ್ರಕಟವಾದ 2016 ರ ಅಧ್ಯಯನದ ಪ್ರಕಾರ, ಬೆರ್ರಿ ಹಣ್ಣುಗಳ ಸೇವನೆ ಮಾಡುವುದು ಸಂಕೋಚನದ ರಕ್ತದೊತ್ತಡ ಮತ್ತು ಎಲ್‌ಡಿಎಲ್ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಬೆರಿಹಣ್ಣುಗಳು ಹೃದಯ-ಆರೋಗ್ಯಕರ ಗುಣ ಹೊಂದಿದೆ. ಸಕ್ಕರೆ ರಹಿತ ಜ್ಯೂಸ್ ಸೇವಿಸಿ.

    ಟೊಮ್ಯಾಟೋ ರಸ

    ಒಂದು ಅಧ್ಯಯನದ ಪ್ರಕಾರ, ಸಂಶೋಧಕರು ಹೃದ್ರೋಗದ ಅಪಾಯವಿದ್ದವರು ದಿನಕ್ಕೆ ಸರಾಸರಿ ಒಂದು ಕಪ್ ಟೊಮೆಟೊ ರಸ ಕುಡಿಯುತ್ತಾರೆ. ಮತ್ತು ಟೊಮೆಟೊ ರಸವು ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡ ಮತ್ತು ಎಲ್ಡಿಎಲ್ ಕೊಲೆಸ್ಟ್ರಾಲ್ ಸುಧಾರಿಸುತ್ತದೆ.

    ಇದನ್ನೂ ಓದಿ: ಒಂಟಿ ಕಾಲಿನ ಮೇಲೆ ನಿಂತರೆ ಎಷ್ಟೊಂದು ಪ್ರಯೋಜನ! ಮಿಸ್ ಮಾಡಬೇಡಿ

    ಟೊಮೆಟೊಗಳು ಹೃದಯ-ರಕ್ಷಣಾತ್ಮಕ ಗುಣ ಹೊಂದಿವೆ. ಲೈಕೋಪೀನ್, ಬೀಟಾ-ಕ್ಯಾರೋಟಿನ್, ಫೋಲೇಟ್, ಪೊಟ್ಯಾಸಿಯಮ್, ವಿಟಮಿನ್-ಸಿ, ಫ್ಲೇವನಾಯ್ಡ್ಗಳು ಮತ್ತು ವಿಟಮಿನ್-ಇ ಯ ಸಮೃದ್ಧ ಮೂಲವಾಗಿದೆ.
    Published by:renukadariyannavar
    First published: