ಚರ್ಮ ಮತ್ತು ಕೂದಲಿಗೆ (Skin And Hair) ಮನೆಮದ್ದಾಗಿ (Home Remedy) ಬೀಟ್ರೂಟ್ ರಸ ಬಳಕೆ ಮಾಡುವುದು ಸಾಮಾನ್ಯ. ಹಾಗೆಯೇ ಬೀಟ್ರೂಟ್ ನ್ನು ಆರೋಗ್ಯ ಸಮಸ್ಯೆ (Health Problem) ನಿವಾರಣೆಗೆ ಮತ್ತು ಆರೋಗ್ಯ ವರ್ಧಕವಾಗಿ ಬಳಕೆ ಮಾಡಲಾಗುತ್ತದೆ. ಆದರೆ ಬೀಟ್ರೂಟ್ ಜ್ಯೂಸ್ (Beetroot Juice) ಸೇವನೆ ಮಾಡಿದರೆ ಅನೇಕ ಪ್ರಮುಖ ಆರೋಗ್ಯ ಸಮಸ್ಯೆ ತೊಡೆದು ಹಾಕಲು ಮತ್ತು ಅದು ನಿಮಗೆ ಉತ್ತಮ ಪರಿಹಾರ ನೀಡಲು ಸಹಾಯ ಮಾಡುತ್ತದೆ. ಸರಿಯಾದ ಪೋಷಕಾಂಶ ಇಲ್ಲದಿದ್ದರೆ ದೇಹವು ಹೆಚ್ಚು ಕಾಲ ಆರೋಗ್ಯ ಹೊಂದಲು ಸಾಧ್ಯವಿಲ್ಲ. ನೀವು ಬೀಟ್ರೂಟ್ ರಸ ಸೇವಿಸಿದರೆ ನಿಮ್ಮ ರೋಗ ನಿರೋಧಕ ವ್ಯವಸ್ಥೆ ಆರೋಗ್ಯವಾಗಿರಲು ಇದು ಸಹಾಯ ಮಾಡುತ್ತದೆ.
ಬೀಟ್ರೂಟ್ ಜ್ಯೂಸ್ ಸೇವನೆಯ ಆರೋಗ್ಯ ಲಾಭಗಳು
ಬೀಟ್ರೂಟ್ ಸೇವನೆ ದೀರ್ಘಕಾಲದವರೆಗೆ ಶಕ್ತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೀಟ್ರೂಟ್ ರಸದಲ್ಲಿ ಸತು, ಸೋಡಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ಮ್ಯಾಂಗನೀಸ್, ಸೆಲೆನಿಯಮ್ ಹೇರಳವಾಗಿ ಇದೆ ಅಂತಾರೆ ಆಹಾರ ತಜ್ಞರು.
ಹಾಗಾದ್ರೆ ಇಲ್ಲಿ ನಾವು ಯಾವ ಆರೋಗ್ಯ ಸಮಸ್ಯೆಗಳಲ್ಲಿ ಬೀಟ್ರೂಟ್ ರಸವು ನಿಮಗೆ ಪ್ರಯೋಜನ ನೀಡತ್ತದೆ ಅಂತಾ ಇಲ್ಲಿ ತಿಳಿಯೋಣ.
ತಾಲೀಮು ನಂತರ ಶಕ್ತಿ ನೀಡುತ್ತದೆ
ತಾಲೀಮು ಸಮಯದಲ್ಲಿ ನೀವು ದೌರ್ಬಲ್ಯ ಅನುಭವಿಸಿದರೆ ಅಥವಾ ತ್ರಾಣದ ಕೊರತೆ ಆದರೆ ಬೀಟ್ರೂಟ್ ರಸ ಅದನ್ನು ತೊಡೆದು ಹಾಕುತ್ತದೆ. ಆಹಾರದಲ್ಲಿ ಬೀಟ್ರೂಟ್ ಸೇರಿಸಿ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ನ ಫೆಬ್ರವರಿ 2012 ರ ವರದಿ ಪ್ರಕಾರ,
ಬೀಟ್ರೂಟ್ ಜ್ಯೂಸ್ ಸೇವನೆ ಪ್ಲಾಸ್ಮಾದಲ್ಲಿ ನೈಟ್ರೇಟ್ ಮಟ್ಟ ಹೆಚ್ಚಿಸುತ್ತದೆ. ಇದು ತಾಲೀಮು ಸಮಯದಲ್ಲಿ ಶಕ್ತಿ ನೀಡುತ್ತದೆ. ಸಂಶೋಧನೆ ಪ್ರಕಾರ, ಬೀಟ್ರೂಟ್ ರಸವನ್ನು ಪ್ರತಿದಿನ ಸೇವಿಸಿದ ಸೈಕ್ಲಿಸ್ಟ್ಗಳು 12 ಸೆಕೆಂಡುಗಳಲ್ಲಿ 10 ಕಿಮೀ ಓಡಿದ್ದಾರೆ ಎಂದು ಹೇಳಿದೆ.
ಅಧಿಕ ತೂಕ ತಡೆಗೆ ಸಹಕಾರಿ
ಕಡಿಮೆ ಕ್ಯಾಲೋರಿ ಬೀಟ್ರೂಟ್ ನಲ್ಲಿದೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬೀಟ್ರೂಟ್ ಜ್ಯೂಸ್ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ಫೈಬರ್ ಭರಿತ ಬೀಟ್ರೂಟ್ ರಸದಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನ ಪ್ರಮಾಣವು ಅತ್ಯಲ್ಪ ಎಂದು ಆಯುರ್ವೇದ ಹೇಳಿದೆ. ಹಾಗಾಗಿ ಉಪಹಾರ ಅಥವಾ ತೂಕ ನಷ್ಟ ಪಾನೀಯದಲ್ಲಿ ಬೀಟ್ರೂಟ್ ಸೇರಿಸಿ.
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ
ಅನಾರೋಗ್ಯಕರ ಆಹಾರವು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಇತರ ಆರೋಗ್ಯ ಸಮಸ್ಯೆ ಉಂಟಾಗುತ್ತವೆ. ಬೀಟ್ರೂಟ್ ಜ್ಯೂಸ್ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಜರ್ನಲ್ ಆಫ್ ಫಾರ್ಮಸಿಯಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಬೀಟ್ರೂಟ್ ಜ್ಯೂಸ್ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಯಕೃತ್ತಿನ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೀಟ್ರೂಟ್ನಲ್ಲಿ ಫೈಟೊನ್ಯೂಟ್ರಿಯೆಂಟ್ಗಳ ಉಪಸ್ಥಿತಿಯಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
ಕ್ಯಾನ್ಸರ್ ಅಪಾಯ ತಡೆಯುತ್ತದೆ
ಬೀಟ್ರೂಟ್ನಲ್ಲಿ ಕಂಡು ಬರುವ ಪೋಷಕಾಂಶಗಳು ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಪ್ರಯೋಜನಕಾರಿ. ಆಂಟಿಆಕ್ಸಿಡೆಂಟ್ ಬೀಟಾಲೈನ್ಗಳು ಬೀಟ್ರೂಟ್ ಬಣ್ಣಕ್ಕೆ ಕಾರಣವಾಗಿದೆ. ಇದು ಕ್ಯಾನ್ಸರ್ ಕೋಶಗಳನ್ನು ನಿಲ್ಲಿಸುವ ಕೀಮೋಪ್ರೆವೆಂಟಿವ್ ಸಾಮರ್ಥ್ಯ ಹೊಂದಿದೆ. ಉತ್ಕರ್ಷಣ ನಿರೋಧಕವು ದೇಹದ ಕೆಟ್ಟ ಕೋಶಗಳನ್ನು ತೊಡೆದು ಹಾಕುತ್ತದೆ.
ಇದನ್ನೂ ಓದಿ: ಪ್ರೋಟೀನ್ ಕೊರತೆ ನಿಮ್ಮ ದೇಹದ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತದೆ ಗೊತ್ತಾ..!
ರಕ್ತದೊತ್ತಡ ಸುಧಾರಿಸುತ್ತದೆ
ಆಹಾರದಲ್ಲಿ ಬೀಟ್ರೂಟ್ ರಸ ಸೇರಿಸುವುದು ರಕ್ತದೊತ್ತಡ ನಿಯಂತ್ರಿಸುತ್ತದೆ. ನೈಟ್ರೇಟ್ ಸಂಯುಕ್ತವು ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ. ಅಧಿಕ ರಕ್ತದೊತ್ತಡ ರೋಗಿಗೆ ತಿಂಗಳ ಕಾಲ ನಿರಂತರವಾಗಿ 250 ಮಿಲಿ ಬೀಟ್ರೂಟ್ ರಸ ನೀಡಿದರೆ ರಕ್ತದೊತ್ತಡ ಕಡಿಮೆ ಆಗುತ್ತದೆಂದು ಸಂಶೋಧನೆ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ