• Home
 • »
 • News
 • »
 • lifestyle
 • »
 • Health Care: ಸಸ್ಯಾಹಾರಿಗಳು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಹೀಗೆ ಕಂಟ್ರೋಲ್ ಮಾಡ್ಬಹುದು

Health Care: ಸಸ್ಯಾಹಾರಿಗಳು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಹೀಗೆ ಕಂಟ್ರೋಲ್ ಮಾಡ್ಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಸ್ಯಾಹಾರವು ಹೃದ್ರೋಗ ಮತ್ತು ಅಕಾಲಿಕ ಮರಣದ ಅಪಾಯ ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಹೇಳಿವೆ. ಟೈಪ್ 2 ಮಧುಮೇಹ ನಿಯಂತ್ರಿಸಲು ಸಹಕಾರಿ. ಕ್ಯಾನ್ಸರ್ ಅಪಾಯ ತಡೆಯುತ್ತದೆ. ಆರೋಗ್ಯಕರ ಜೀವನಶೈಲಿಗಾಗಿ ಆರೋಗ್ಯಕರ ಆಹಾರ ಸೇವನೆ ತುಂಬಾ ಮುಖ್ಯ. ಸಸ್ಯ ಆಧಾರಿತ ಆಹಾರ ಅತ್ಯುತ್ತಮ ಆರೋಗ್ಯಕರ ಆಹಾರ ಎಂದು ಕರೆಯಲ್ಪಟ್ಟಿದೆ.

ಮುಂದೆ ಓದಿ ...
 • Share this:

  ಆಹಾರ ಪದ್ಧತಿಯಲ್ಲಿ (Food Plan) ಹಲವು ವಿಧಗಳಿವೆ. ಅದರಲ್ಲಿ ಶಾಖಾಹಾರ ಅಂದ್ರೆ ಸಸ್ಯಾಹಾರಿಗಳ (Vegetarians) ಆಹಾರ ಪದ್ಧತಿ ಬೆಸ್ಟ್ ಹಾಗೂ ಆರೋಗ್ಯಕ್ಕೆ ಪ್ರಯೋಜನಕಾರಿ (Health Benefits) ಎಂದು ಹೇಳಲಾಗುತ್ತದೆ. ಹಲವು ತಜ್ಞರು (Experts) ಉತ್ತಮ ಆರೋಗ್ಯಕ್ಕೆ ಸಸ್ಯಾಧಾರಿತ ಆಹಾರ ಪದ್ಧತಿ ಫಾಲೋ ಮಾಡಲು ಸಲಹೆ ನೀಡುತ್ತಾರೆ. ಸಸ್ಯಾಹಾರ ಪದ್ಧತಿ ಆಧರಿಸಿದ ಜೀವನಶೈಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಇತ್ತೀಚಿನ ದಿನಗಳಲ್ಲಿ ಮಾಂಸಾಹಾರ ಪದ್ಧತಿ ಹೆಚ್ಚುತ್ತಿದೆ. ಹೆಚ್ಚಿನ ಜನರು ದೈನಂದಿನ ಆಹಾರದಲ್ಲಿ ಪ್ರಾಣಿ ಮೂಲದ ಆಹಾರ ಸೇವಿಸುತ್ತಿರುವುದು ಹೆಚ್ಚಿದೆ. ಆದರೆ ಮಾಂಸಾಹಾರ ಸೇವನೆ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.


  ಸಸ್ಯಾಹಾರದ ಬಗ್ಗೆ ಜಾಗೃತಿ ಮತ್ತು ಪ್ರಯೋಜನದ ಅರಿವು ಮೂಡಿಸುವುದು


  ಮಾಂಸಾಹಾರ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ಅನೇಕ ರೋಗಗಳ ಅಪಾಯ ಹೆಚ್ಚಿಸುತ್ತದೆ. ಹೀಗಾಗಿ ಪ್ರಪಂಚದಾದ್ಯಂತ ವಿಶ್ವ ಸಸ್ಯಾಹಾರಿ ದಿನವನ್ನು ನವೆಂಬರ್ 1 ರಂದು ಆಚರಿಸುವ ಮೂಲಕ ಸಸ್ಯಾಹಾರದ ಬಗ್ಗೆ ಜಾಗೃತಿ ಮತ್ತು ಪ್ರಯೋಜನದ ಅರಿವು ಮೂಡಿಸಲಾಗುತ್ತದೆ.


  ಮಾಂಸ, ಮೀನು, ಹಾಲಿನ ಉತ್ಪನ್ನಗಳಿಂದಲೂ ದೂರವಿರಲು ಸಲಹೆ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಕಾಳಜಿ ಹೆಚ್ಚುತ್ತಿದ್ದು, ಹೆಚ್ಚಿನ ಜನರು ಸಸ್ಯಾಹಾರದತ್ತ ಮುಖ ಮಾಡ್ತಿದ್ದಾರೆ.


  ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


  ಸಸ್ಯಾಹಾರಿ ಜೀವನಶೈಲಿ


  ಪ್ರತಿ ವರ್ಷ ನವೆಂಬರ್ 1 ರಂದು ವಿಶ್ವ ಸಸ್ಯಾಹಾರಿ ದಿನವನ್ನು ಆಚರಿಸುವ ಮೂಲಕ ಸಸ್ಯಾಹಾರಿ ಜೀವನಶೈಲಿ ಅನುಸರಿಸಲು ಮತ್ತು ಸಸ್ಯಾಹಾರದ ಬಗ್ಗೆ ಜಾಗೃತಿ ಮೂಡಿಸಲು ಪ್ರೇರೇಪಿಸಲಾಗುತ್ತದೆ. ಪರಿಸರ ಸಂರಕ್ಷಣೆ, ಪ್ರಾಣಿವಧೆ ತಪ್ಪಿಸಲು ಅರಿವು ಮೂಡಿಸಲಾಗುತ್ತದೆ.


  ಇಂಗ್ಲೆಂಡ್‌ನಲ್ಲಿ 1994 ರಲ್ಲಿ ಮೊದಲು ವಿಶ್ವ ಸಸ್ಯಾಹಾರಿ ದಿನವನ್ನು ಆರಂಭಿಸಲಾಯಿತು. ಸಮಾಜ ಸೇವಕ ಲೂಯಿಸ್ ವಾಲಿಸ್ ಯುಕೆಯಲ್ಲಿ ವೆಗಾನ್ ಸೊಸೈಟಿ ಸ್ಥಾಪಿಸಿ ಅದರ ಅಧ್ಯಕ್ಷರಾದರು. ಅವರು ಸಸ್ಯ ಆಧಾರಿತ ಆಹಾರದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಸಸ್ಯಾಹಾರಿ ದಿನ ಪ್ರಾರಂಭಿಸಿದರು.


  ಸಸ್ಯಾಹಾರವು ಹೃದ್ರೋಗ ಮತ್ತು ಅಕಾಲಿಕ ಮರಣದ ಅಪಾಯ ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಹೇಳಿವೆ. ಟೈಪ್ 2 ಮಧುಮೇಹ ನಿಯಂತ್ರಿಸಲು ಸಹಕಾರಿ. ಕ್ಯಾನ್ಸರ್ ಅಪಾಯ ತಡೆಯುತ್ತದೆ. ಆರೋಗ್ಯಕರ ಜೀವನಶೈಲಿಗಾಗಿ ಆರೋಗ್ಯಕರ ಆಹಾರ ಸೇವನೆ ತುಂಬಾ ಮುಖ್ಯ. ಸಸ್ಯ ಆಧಾರಿತ ಆಹಾರ ಅತ್ಯುತ್ತಮ ಆರೋಗ್ಯಕರ ಆಹಾರ ಎಂದು ಕರೆಯಲ್ಪಟ್ಟಿದೆ.


  ಸಸ್ಯಾಹಾರಿ ಆಹಾರವು BMI, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ


  ಸಸ್ಯ ಆಧಾರಿತ ಆಹಾರ ಕಡಿಮೆ ಅಪಾಯಕಾರಿ ಅಂಶ ಹೊಂದಿರುತ್ತವೆ ಎಂದು ಸಂಶೋಧನೆ ತೋರಿಸುತ್ತದೆ. ಇದು ದೇಹದ ದ್ರವ್ಯರಾಶಿ ಸೂಚ್ಯಂಕ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ವ್ಯಕ್ತಿಯು ದೀರ್ಘಕಾಲದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರೆ ಅದನ್ನು ತೆಗೆದು ಹಾಕಲು ಸಹಕಾರಿ. ಔಷಧಿ ತೆಗೆದುಕೊಳ್ಳುವುದನ್ನು ಕಡಿಮೆ ಮಾಡುತ್ತದೆ.


  ಇದು ರಕ್ತದ ಕೊರತೆಯ ಹೃದ್ರೋಗದ ಮರಣ ಅಪಾಯ ಕಡಿಮೆ ಮಾಡುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಅಥವಾ ಬೊಜ್ಜು ಹೊಂದಿರುವ ರೋಗಿಗಳಿಗೆ ಎಲ್ಲಾ ವೈದ್ಯರು ಸಸ್ಯ ಆಧಾರಿತ ಆಹಾರ ಸೇವನೆಗೆ ಶಿಫಾರಸು ಮಾಡ್ತಾರೆ.


  ಉತ್ತಮ ಆರೋಗ್ಯಕ್ಕಾಗಿ ಸಸ್ಯ ಆಧಾರಿತ ಆಹಾರ


  ಸಸ್ಯ ಆಧಾರಿತ ಆಹಾರಗಳ ಜಾಗೃತಿ ಭಾರತದಲ್ಲಿ ಹೆಚ್ಚು ವೇಗವಾಗಿದೆ. ಈ ಆಹಾರಗಳು ರೋಗ ಮುಕ್ತವಾಗಿವೆ. ಅವು ಅನೇಕ ರೋಗಗಳಿಂದ ದೇಹವನ್ನು ರಕ್ಷಿಸುವ ಸಾಮರ್ಥ್ಯ ಹೊಂದಿವೆ. ಹೆಚ್ಚು ಪರಿಸರ ಸ್ನೇಹಿ ಆಹಾರ ಪದ್ಧತಿಯಾಗಿದೆ. ಪರಿಸರ ವ್ಯವಸ್ಥೆಯನ್ನು ಸುಧಾರಿಸುತ್ತದೆ.


  ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


  ಸಸ್ಯ ಆಧಾರಿತ ಆಹಾರ ಹೆಚ್ಚುತ್ತಿರುವ ತಾಪಮಾನ, ಹೆಚ್ಚುತ್ತಿರುವ ಝೂನೋಟಿಕ್ ರೋಗ, ಮಣ್ಣಿನ ಸವಕಳಿ ಸಮಸ್ಯೆ ಕಡಿಮೆ ಮಾಡುತ್ತದೆ.

  Published by:renukadariyannavar
  First published: