High Blood Cholesterol: ಅಧಿಕ ರಕ್ತದ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಆಹಾರ ಪದ್ಧತಿಯಲ್ಲಿ ಈ ಪದಾರ್ಥಗಳ ಸೇರ್ಪಡೆ ಮಾಡಿ!

ಅಧಿಕ ರಕ್ತದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ದಿನ ನಿತ್ಯ ತಪ್ಪದೇ ವ್ಯಾಯಾಮ ಮಾಡುವುದು. ಮತ್ತು ಕೊಬ್ಬು ಅಥವಾ ಎಣ್ಣೆಯುಕ್ತ ವಸ್ತುಗಳ ಸೇವನೆಯನ್ನು ಕಡಿಮೆ ಮಾಡುವುದು ಎಂದು ವೈದ್ಯರು ಮತ್ತು ತಜ್ಞರು ಸಲಹೆ ನೀಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೆಟ್ಟ ಜೀವನಶೈಲಿ (Bad Lifestyle), ಕಳಪೆ ಆಹಾರ (Food) ಪದ್ಧತಿ ಆರೋಗ್ಯಕ್ಕೆ (Health) ತುಂಬಾ ಮಾರಕ. ಯಾಕೆಂದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು (Problem) ನಮ್ಮ ಕೆಟ್ಟ ಜೀವನಶೈಲಿಯಿಂದಲೇ ಆರಂಭವಾಗುತ್ತವೆ. ಅದರಲ್ಲಿ ಅಧಿಕ ರಕ್ತದ ಕೊಲೆಸ್ಟ್ರಾಲ್ (High Blood Cholesterol) ಸಮಸ್ಯೆ ಕೂಡ ಒಂದು. ಕೆಲವೊಮ್ಮೆ ಮತ್ತು ಕೆಲವರಲ್ಲಿ ಆನುವಂಶಿಕ ಸಮಸ್ಯೆಯಿಂದ ಅಧಿಕ ರಕ್ತದ ಕೊಲೆಸ್ಟ್ರಾಲ್ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಕಾರಣ ಏನೇ ಇರಲಿ, ದೇಹದಲ್ಲಿ ಅಧಿಕ ರಕ್ತದ ಕೊಲೆಸ್ಟ್ರಾಲ್ ಇದರ ಹೆಚ್ಚಳವು ಆರೋಗ್ಯಕ್ಕೆ ಅಪಾಯಕಾರಿ ಆಗಿದೆ. ನೀವು ಆರೋಗ್ಯವಾಗಿರಲು ಬಯಸಿದರೆ ಅಧಿಕ ರಕ್ತದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನೀವು ಒತ್ತು ನೀಡಬೇಕು.

    ಅಧಿಕ ಕೊಲೆಸ್ಟ್ರಾಲ್ ರಕ್ತನಾಳಗಳ ಅಡಚಣೆ ಅಥವಾ ಕಿರಿದಾಗುವಿಕೆಗೆ ಕಾರಣವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.

    ಅಧಿಕ ರಕ್ತದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಹೇಗೆ?

    ಅಧಿಕ ರಕ್ತದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ದಿನ ನಿತ್ಯ ತಪ್ಪದೇ ವ್ಯಾಯಾಮ ಮಾಡುವುದು. ಮತ್ತು ಕೊಬ್ಬು ಅಥವಾ ಎಣ್ಣೆಯುಕ್ತ ವಸ್ತುಗಳ ಸೇವನೆಯನ್ನು ಕಡಿಮೆ ಮಾಡುವುದು ಎಂದು ವೈದ್ಯರು ಮತ್ತು ತಜ್ಞರು ಸಲಹೆ ನೀಡುತ್ತಾರೆ.

    ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

    ಹಾಗಾದರೆ ಅಧಿಕ ರಕ್ತದ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ಯಾವ ಪದಾರ್ಥಗಳ ಸೇವನೆ ಮಾಡುವುದು ಉತ್ತಮ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ನೀವು ಕೆಲವು ಪೂರಕಗಳ ಸಹಾಯ ಬೇಕಾದರೂ ತೆಗೆದುಕೊಳ್ಳಬಹುದು. ಉತ್ತಮ ಪೂರಕವೆಂದರೆ ಕರಗುವ ಫೈಬರ್ ಆಗಿದೆ ಎಂದು ಮೇಯೊ ಕ್ಲಿನಿಕ್ ಹೇಳುತ್ತದೆ.

    ಫೈಬರ್ ಎಂದರೇನು?

    ಫೈಬರ್ ನಲ್ಲಿ ಎರಡು ವಿಧಗಳಿವೆ. ಕರಗದ ಫೈಬರ್ ಮತ್ತು ಕರಗುವ ಫೈಬರ್. ಕರಗದ ಫೈಬರ್, ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಬೃಹತ್ ಪ್ರಮಾಣದಲ್ಲಿ ನಿರ್ಮಿಸಲು ಸಹಾಯ ಮಾಡುತ್ತದೆ. ಅತ್ಯಧಿಕ ಆಹಾರ ಪ್ರಯೋಜನ ನೀಡುವಲ್ಲಿ ಕೊಡುಗೆ ನೀಡುತ್ತದೆ. ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ.

    ಕರಗುವ ಫೈಬರ್, ಆಹಾರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ. ಮತ್ತು ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.

    ಕರಗುವ ಫೈಬರ್ ಕೊಲೆಸ್ಟ್ರಾಲ್ ಅನ್ನು ಹೇಗೆ ಕಡಿಮೆ ಮಾಡುತ್ತದೆ?

    ಕರಗುವ ಫೈಬರ್, ಜೀರ್ಣಾಂಗದಲ್ಲಿ ಕೊಲೆಸ್ಟ್ರಾಲ್ ಒಳಗೊಂಡಿರುವ ಪದಾರ್ಥಗಳನ್ನು ಬಂಧಿಸುತ್ತದೆ. ಆದ್ದರಿಂದ ಅವು ರಕ್ತಪ್ರವಾಹ ಹೀರುವುದಿಲ್ಲ. ಹೀಗಾಗಿ ನಿಮ್ಮ ದೇಹದಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಸಂಗ್ರಹ ಆಗುವುದಿಲ್ಲ. ಆದ್ದರಿಂದ ಕರಗುವ ಫೈಬರ್ ರಕ್ತದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

    ಯಾವ ಆಹಾರ ಪದಾರ್ಥಗಳಲ್ಲಿ ಕರಗುವ ಫೈಬರ್ ಕಂಡು ಬರುತ್ತದೆ?

    ಬೀನ್ಸ್, ಆವಕಾಡೊ, ಹಣ್ಣು ಮತ್ತು ಓಟ್ಸ್‌ನಂತಹ ಆಹಾರಗಳಲ್ಲಿ ಕರಗುವ ಫೈಬರ್ ಅನ್ನು ನೈಸರ್ಗಿಕವಾಗಿ ನೀವು ಪಡೆಯಬಹುದು. ಇದಕ್ಕಾಗಿ ನೀವು ಪೂರಕಗಳನ್ನು ಸಹ ತೆಗೆದುಕೊಳ್ಳಬಹುದು. ಕರಗಬಲ್ಲ ಫೈಬರ್ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಲು ಸಾಧ್ಯವಾಗದ ಜನರಿಗೆ ಪೂರಕವು ಸಾಮಾನ್ಯವಾಗಿ ಹೆಚ್ಚು ಪ್ರಯೋಜನಕಾರಿ.

    ದೇಹಕ್ಕೆ ಎಷ್ಟು ಕರಗುವ ಫೈಬರ್ ಬೇಕು?

    ದಿನಕ್ಕೆ 5 ರಿಂದ 10 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಕರಗುವ ಫೈಬರ್ ನಿಮ್ಮ ರಕ್ತದಲ್ಲಿನ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

    ಇದನ್ನೂ ಓದಿ: ಮಹಿಳೆಯರಲ್ಲಿ ಗರ್ಭಾಶಯದಲ್ಲಿನ ಗಡ್ಡೆ ಆದಾಗ ಯಾವ ಲಕ್ಷಣಗಳು ಕಂಡು ಬರುತ್ತವೆ? ಆಯುರ್ವೇದ ಪರಿಹಾರವೇನು?

    ಅಧಿಕ ರಕ್ತದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಇತರೆ ಮಾರ್ಗಗಳು ಯಾವವು?

    ಕರಗುವ ಫೈಬರ್ ಪೂರಕ ಸೇವನೆ ಮಾಡುವುದರಿಂದ ಜೊತೆಗೆ ಕೆಟ್ಟ ಜೀವನಶೈಲಿಯನ್ನು ಬದಲಾಯಿಸುವುದು ಸಹಕಾರಿ. ನಿಮ್ಮ ಊಟ ಮತ್ತು ತಿಂಡಿಗಳಲ್ಲಿ ಹೆಚ್ಚು ಫೈಬರ್ ಭರಿತ ಆಹಾರ ಸೇವನೆ ಮಾಡಿ. ನಟ್ಸ್ ಮತ್ತು ಆಲಿವ್ ಎಣ್ಣೆ ಮತ್ತು ಆವಕಾಡೊ ತಿನ್ನಬಹುದು.
    Published by:renukadariyannavar
    First published: