Cholesterol Problem: ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುವುದನ್ನು ನಿಯಂತ್ರಿಸುವುದು ಹೇಗೆ?

ಕೊಲೆಸ್ಟ್ರಾಲ್ ನಿಮ್ಮ ಚಯಾಪಚಯ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಜೊತೆಗೆ ದೇಹದಲ್ಲಿ ವಿಟಮಿನ್ ಡಿ ಉತ್ಪಾದನೆಗೆ ಅಗತ್ಯವಾಗಿದೆ. ಅಧಿಕ ಕೊಲೆಸ್ಟ್ರಾಲ್‌ ಯಾವುದೇ ಗೋಚರ ಲಕ್ಷಣಗಳು ಕಂಡು ಬರಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊಲೆಸ್ಟ್ರಾಲ್ (Cholesterol) ನಿಮ್ಮ ದೇಹದ (Body) ಅತ್ಯಗತ್ಯ ಮುಖ್ಯ ಭಾಗ (Parts) ಆಗಿದೆ. ಕೊಲೆಸ್ಟ್ರಾಲ್ ಇದು ಯಕೃತ್ತಿನಿಂದ (Liver) ಉತ್ಪತ್ತಿಯಾಗುತ್ತದೆ. ಆದರೆ ನೀವು ತಿನ್ನುವ (Eating) ಮತ್ತು ಕುಡಿಯುವ ಪ್ರಾಣಿ ಉತ್ಪನ್ನಗಳಲ್ಲಿ ಕೊಲೆಸ್ಟ್ರಾಲ್ ನ್ನು ಕಾಣಬಹುದು. ಕೊಲೆಸ್ಟ್ರಾನ್ ನಲ್ಲಿ ಎರಡು ವಿಧಗಳಿವೆ. ಉತ್ತಮ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್. ಹಾಗಿದ್ರೆ ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಏಕೆ ಮುಖ್ಯ ಎಂಬ ಪ್ರಶ್ನೆ ಎದುರಾಗುತ್ತದೆ. ಯಾಕೆಂದ್ರೆ ನಿಮ್ಮ ದೇಹವು ಜೀವಕೋಶದ ಪೊರೆಗಳ ರಚನೆ ನಿರ್ಮಿಸಲು ಬಳಕೆ ಮಾಡುವುದರಿಂದ ವ್ಯಕ್ತಿಯ ರಕ್ತದಲ್ಲಿ ಸಣ್ಣ ಪ್ರಮಾಣದ ಕೊಲೆಸ್ಟ್ರಾಲ್ ಅಗತ್ಯವಿದೆ. ಇದು ದೇಹದಲ್ಲಿ ಈಸ್ಟ್ರೊಜೆನ್, ಟೆಸ್ಟೋಸ್ಟೆರಾನ್ ಮತ್ತು ಮೂತ್ರಜನಕಾಂಗದಂತಹ ಹಾರ್ಮೋನು ಉತ್ಪತ್ತಿ ಮಾಡುತ್ತದೆ.

    ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುವುದು

    ಇದು ನಿಮ್ಮ ಚಯಾಪಚಯ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಜೊತೆಗೆ ದೇಹದಲ್ಲಿ ವಿಟಮಿನ್ ಡಿ ಉತ್ಪಾದನೆಗೆ ಅಗತ್ಯ ಆಗಿರುತ್ತದೆ. ಆದರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುವುದು ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಮುಂತಾದ ಸಮಸ್ಯೆ ಎದುರಿಸುವಂತೆ ಮಾಡುತ್ತದೆ.

    ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ಜನರು ತಮ್ಮ ಆಹಾರ ಪದ್ಧತಿ ಮತ್ತು ತಿನ್ನುವ ಪದಾರ್ಥಗಳನ್ನು ಬದಲಾಯಿಸುವಂತೆ ಹಾಗೂ ಆರೋಗ್ಯಕರ ಪದಾರ್ಥ ಸೇರಿಸುವಂತೆ ಸಲಹೆ ನೀಡುತ್ತಾರೆ. ಅಂತಹ ಸ್ಥಿತಿಯಲ್ಲಿ, ನೀವು ಅಧಿಕ ಕೊಲೆಸ್ಟ್ರಾಲ್ ಅನ್ನು ಹೊಂದಿದ್ದರೆ, ಆವಕಾಡೊ ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಆಗಿದೆ.

    ಇದನ್ನೂ ಓದಿ: ಕಣ್ಣುಗಳಲ್ಲಿ ಉಂಟಾಗುವ ಈ ಸಮಸ್ಯೆಗಳು ಗಂಭೀರ ತೊಂದರೆಗೆ ಕಾರಣವಾಗುತ್ತವೆ

    ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುದನ್ನು ತಿಳಿಯುವುದು ಹೇಗೆ?

    ಮೇಯೊ ಕ್ಲಿನಿಕ್ ಪ್ರಕಾರ, ಅಧಿಕ ಕೊಲೆಸ್ಟ್ರಾಲ್‌ ಯಾವುದೇ ಗೋಚರ ಲಕ್ಷಣಗಳು ಕಂಡು ಬರಲ್ಲ. ರಕ್ತ ಪರೀಕ್ಷೆ ನಂತರವೇ ಇದನ್ನು ಕಂಡು ಹಿಡಿಯಬಹುದು. ಅದಕ್ಕಾಗಿಯೇ ತಜ್ಞರು ಪ್ರತಿ ಐದು ವರ್ಷಗಳಿಗೊಮ್ಮೆ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿಕೊಳ್ಳಲು ಶಿಫಾರಸು ಮಾಡುತ್ತಾರೆ.

    ಕೊಳಕು ಕೊಲೆಸ್ಟ್ರಾಲ್ ರಕ್ತದಲ್ಲಿ ಹೇಗೆ ಸಂಗ್ರಹಗೊಳ್ಳಲು ಆರಂಭಿಸುತ್ತದೆ?

    ಅನಾರೋಗ್ಯಕರ ಆಹಾರ

    ಬೊಜ್ಜು

    ದೈಹಿಕ ಚಟುವಟಿಕೆ ಕೊರತೆ

    ಮದ್ಯದ ದುರ್ಬಳಕೆ

    ದೀರ್ಘ ಕಾಲದ ಮೂತ್ರಪಿಂಡ ಕಾಯಿಲೆ

    ಮಧುಮೇಹ

    ಎಚ್ಐವಿ / ಏಡ್ಸ್

    ಹೈಪೋಥೈರಾಯ್ಡಿಸಮ್

    ಆವಕಾಡೊ ಕೆಟ್ಟ ಕೊಲೆಸ್ಟ್ರಾಲ್ ನ್ನು ನಿವಾರಣೆ ಮಾಡುತ್ತದೆ

    ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​​​ಪ್ರಕಟಿಸಿದ ಸಂಶೋಧನೆ ಪ್ರಕಾರ, ಪ್ರತಿದಿನ ಆವಕಾಡೊ ಸೇವನೆ ಮಾಡುವುದರಿಂದ ನಿಮ್ಮ ರಕ್ತದಲ್ಲಿ ಸಂಗ್ರಹವಾಗುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಬೆಣ್ಣೆ ರುಚಿಯ ಈ ಹಣ್ಣನ್ನು ಬೆಣ್ಣೆ ಹಣ್ಣು ಎಂದೂ ಕರೆಯುತ್ತಾರೆ. ಇದರಲ್ಲಿರುವ ಸಮೃದ್ಧ ಪೋಷಕಾಂಶಗಳು ಮತ್ತು ಅದರ ಆರೋಗ್ಯ ಪ್ರಯೋಜನಗಳ ಕಾರಣ, ಇದನ್ನು ಸೂಪರ್ ಫುಡ್ ಪಟ್ಟಿಯಲ್ಲಿ ಸೇರಿಸಲಾಗಿದೆ.

    ಆವಕಾಡೊದಲ್ಲಿ ಕಂಡು ಬರುವ ಪೋಷಕಾಂಶಗಳು

    ಉತ್ತಮ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಗುಣಲಕ್ಷಣಗಳ ಜೊತೆಗೆ, ಆವಕಾಡೊ ಅಂಗಾಂಶಗಳ ಬೆಳವಣಿಗೆ ಮತ್ತು ದುರಸ್ತಿಗಾಗಿ ವಿಟಮಿನ್ ಸಿ, ರಕ್ತದ ಆರೋಗ್ಯಕ್ಕೆ ವಿಟಮಿನ್ ಕೆ, ಜೀವಕೋಶ ಮತ್ತು ಅಂಗಾಂಶ ಕಾರ್ಯಕ್ಕಾಗಿ ಫೋಲೇಟ್, ಪ್ರತಿರಕ್ಷಣಾ ಕಾರ್ಯಕ್ಕಾಗಿ ವಿಟಮಿನ್ ಬಿ-6, ಫೈಬರ್ ಮತ್ತು ಹೆಚ್ಚಿನದನ್ನು ಸಹ ಒಳಗೊಂಡಿದೆ.

    ಇದನ್ನೂ ಓದಿ: ಮೂಳೆಗಳಲ್ಲಿ ಕಿರ್ ಎಂಬ ಶಬ್ಧ ಉಂಟಾಗುವುದು ಏಕೆ? ಇದಕ್ಕೆ ಕಾರಣವೇನು?

    ಜೊತೆಗೆ ಇದು ಅಯೋಡಿನ್, ಪ್ರೋಟೀನ್, ಖನಿಜ ಅಂಶಗಳು, ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್, ರಂಜಕ, ಸತು, ವಿಟಮಿನ್ ಸಿ, ವಿಟಮಿನ್ ಬಿ -12, ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ, ಥಯಾಮಿನ್ ನ್ನು ಹೊಂದಿದೆ. ರೈಬೋಫ್ಲಾವಿನ್, ನಿಯಾಸಿನ್ ಹೇರಳವಾಗಿದೆ.
    Published by:renukadariyannavar
    First published: