Hair Care: ಬಿಳಿ ಕೂದಲ ಸಮಸ್ಯೆಯಾ? ರಾಸಾಯನಿಕ ಪದಾರ್ಥ ಬದಲು ಈ ಮನೆಮದ್ದು ಟ್ರೈ ಮಾಡಿ

ಬೀಟ್ರೂಟ್ ನಿಂದ ಕೂದಲಿಗೆ ಬಣ್ಣ ಮಾಡುವ ಪಾಕ ವಿಧಾನವು ದೀರ್ಘಕಾಲದವರೆಗೆ ಇರುವುದಿಲ್ಲ. ಆದರೆ ಇದು ರಾಸಾಯನಿಕ ಉತ್ಪನ್ನಗಳಿಗಿಂತ ಪ್ರಯೋಜನಕಾರಿ ಆಗಿದೆ. ಬೀಟ್ರೂಟ್ ಕೂದಲಿಗೆ ಬರ್ಗಂಡಿ ಲುಕ್ ನೀಡುತ್ತದೆ. ಬೀಟ್ರೂಟ್ ಕೂದಲಿಗೆ ನೈಸರ್ಗಿಕ ಕೂದಲಿನ ಬಣ್ಣವಾಗಿ ಕಾರ್ಯ ನಿರ್ವಹಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬಿಳಿ ಕೂದಲು (White Hair) ಮರೆಮಾಚಲು ಸಾಕಷ್ಟು ಜನರು (People) ಅನೇಕ ರೀತಿಯ ಪ್ರಯತ್ನ ಮಾಡುತ್ತಾರೆ. ಹಲವರು ಬಿಳಿ ಕೂದಲು ಮರೆಮಾಚಲು ಬಣ್ಣ (Color) ಬಳಿಯುತ್ತಾರೆ. ಅಥವಾ ಹೊಸ ಸ್ಟೈಲ್ (New Style) ಅಳವಡಿಸಿಕೊಳ್ಳಲು ಮುಂದಾಗುತ್ತಾರೆ. ಇಲ್ಲವೇ ಕೂದಲಿಗೆ ಕಲರಿಂಗ್ ಮಾಡಲು ಮುಂದಾಗುತ್ತಾರೆ. ಇನ್ನು ಕೆಲವರು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವ ಬಣ್ಣವನ್ನು ತಮ್ಮ ಕೂದಲಿಗೆ ಹಾಕಲು ಹಿಂಜರಿಯುತ್ತಾರೆ. ಅಂತಹ ಸ್ಥಿತಿಯಲ್ಲಿ ಕೂದಲಿಗೆ ಬಣ್ಣ ಹಚ್ಚಲು ನೈಸರ್ಗಿಕ ಬಣ್ಣದ ಮೊರೆ ಹೋಗುವದು ಉತ್ತಮ ಉಪಾಯವಾಗಿದೆ. ಪ್ರತಿ ಮನೆಯಲ್ಲೂ ನೈಸರ್ಗಿಕ ಬಣ್ಣವಾಗಿ ಕಾರ್ಯ ನಿರ್ವಹಿಸುವ ಒಂದು ಪದಾರ್ಥವಿದೆ. ನಾವು ಕೂದಲು ಬಣ್ಣಕ್ಕಾಗಿ ಬೀಟ್ರೂಟ್ ಹಾಕುವ ಬಗ್ಗೆ ಯೋಚಿಸಬಹುದು.

    ಬೀಟ್ರೂಟ್ ನಿಂದ ಕೂದಲಿಗೆ ಬಣ್ಣ ಮಾಡುವ ಪಾಕ ವಿಧಾನ

    ಬೀಟ್ರೂಟ್ ನಿಂದ ಕೂದಲಿಗೆ ಬಣ್ಣ ಮಾಡುವ ಪಾಕ ವಿಧಾನವು ದೀರ್ಘಕಾಲದವರೆಗೆ ಇರುವುದಿಲ್ಲ. ಆದರೆ ಇದು ರಾಸಾಯನಿಕ ಉತ್ಪನ್ನಗಳಿಗಿಂತ ಪ್ರಯೋಜನಕಾರಿ ಆಗಿದೆ. ಬೀಟ್ರೂಟ್ ಕೂದಲಿಗೆ ಬರ್ಗಂಡಿ ಲುಕ್ ನೀಡುತ್ತದೆ. ಇದು ಹೇಗೆ ಎಂಬ ಬಗ್ಗೆ ನಾವು ಇಂದು ಇಲ್ಲಿ ತಿಳಿಯೋಣ.

    ಬೀಟ್ರೂಟ್ ಕೂದಲಿಗೆ ನೈಸರ್ಗಿಕ ಕೂದಲಿನ ಬಣ್ಣವಾಗಿ ಕಾರ್ಯ ನಿರ್ವಹಿಸುತ್ತದೆ. ವಾಸ್ತವದಲ್ಲಿ  ಎನ್‌ಸಿಬಿಐ - ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಬೀಟ್‌ರೂಟ್ ಬೀಟಾಲೈನ್‌ಗಳ ಅಂದ್ರೆ ಬಣ್ಣದ ವರ್ಣ ದ್ರವ್ಯಗಳು ನೈಸರ್ಗಿಕ ಮೂಲವಾಗಿದೆ.

    ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಾಗುವುದು ಆರೋಗ್ಯಕರ? ತಜ್ಞರು ಹೇಳೋದೇನು?

    ಇದನ್ನು ಬಳಸುವುದು ಕೂದಲಿಗೆ ಬಣ್ಣ ಸೇರಿಸಬಹುದು. ಸುರಕ್ಷಿತವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೇರ್ ಡೈಗಳನ್ನು ತಯಾರಿಸಲು ಬೀಟ್ರೂಟ್ ಅನ್ನು ಸಹ ಬಳಸುತ್ತಾರೆ. ಅದರ ಛಾಯೆಯ ಪರಿಣಾಮವು ಕೂದಲಿನ ಆರೋಗ್ಯ ಮತ್ತು ಪ್ರಸ್ತುತ ಬಣ್ಣದ ಮೇಲೆ ಅವಲಂಬಿಸಿರುತ್ತದೆ.

    ಕೂದಲಿಗೆ ಬಣ್ಣ ಹಚ್ಚಲು ಬೀಟ್ರೂಟ್ ನ್ನು ಯಾವ ಐದು ವಿಧಾನಗಳಲ್ಲಿ ಬಳಸುವುದು ಉತ್ತಮ?

    ಬೀಟ್ಗೆಡ್ಡೆ, ಶುಂಠಿ ಮತ್ತು ಆಲಿವ್ ಎಣ್ಣೆ

    ಎರಡು ದೊಡ್ಡ ಬೀಟ್ರೂಟ್ ಗಡ್ಡೆ ರಸ, ಒಂದು ಟೀ ಚಮಚ ತುರಿದ ಶುಂಠಿ ಅಥವಾ ಶುಂಠಿ ಎಣ್ಣೆ, ಎರಡು ಚಮಚ ಆಲಿವ್ ಎಣ್ಣೆ

    ಬಳಸುವ ವಿಧಾನ: ಒಂದು ಪಾತ್ರೆಯಲ್ಲಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ನೆತ್ತಿಗೆ ಸ್ವಲ್ಪ ಸಮಯ ಮಸಾಜ್ ಮಾಡಿ. ಮತ್ತು ಒಂದರಿಂದ ಎರಡು ಗಂಟೆ ಬಿಡಿ. ನಂತರ ಸರಳ ನೀರು ಮತ್ತು ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

    ಬೀಟ್ರೂಟ್ ಮತ್ತು ತೆಂಗಿನ ಎಣ್ಣೆ

    ಒಂದು ದೊಡ್ಡ ಬೀಟ್ರೂಟ್, 4 ರಿಂದ 5 ಹನಿಗಳು ತೆಂಗಿನ ಎಣ್ಣೆ

    ಬಳಸುವ ವಿಧಾನ: ಬೀಟ್ರೂಟ್ ಅನ್ನು ಕತ್ತರಿಸಿ ಅದರ ಜ್ಯೂಸ್ ಮಾಡಿ. ನಂತರ ರಸದಲ್ಲಿ ತೆಂಗಿನ ಎಣ್ಣೆ ಮಿಶ್ರಣ ಮಾಡಿ. ಈಗ ಅದನ್ನು ಹೇರ್ ಬ್ರಶ್ ಸಹಾಯದಿಂದ ಕೂದಲಿಗೆ ಹಚ್ಚಿ. ಒಂದರಿಂದ ಎರಡು ಗಂಟೆಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ.

    ಗೋರಂಟಿ- ಬೀಟ್ರೂಟ್ ಕೂದಲಿನ ಮುಖವಾಡ

    ಒಂದು ಕಪ್ ಬೀಟ್ರೂಟ್ ಜ್ಯೂಸ್ ಒಂದು ಕಪ್, ಕೂದಲಿಗೆ ಬೇಕಾದ ಗೋರಂಟಿ ಪುಡಿ, ಆಮ್ಲಾ ಪೌಡರ್ ಒಂದು ಚಮಚ

    ಬಳಸುವ ವಿಧಾನ : ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಹೇರ್ ಬ್ರಶ್ ಸಹಾಯದಿಂದ ಕೂದಲು ಮತ್ತು ಬೇರುಗಳಿಗೆ ಚೆನ್ನಾಗಿ ಹಚ್ಚಿರಿ. ಒಂದೆರಡು ಗಂಟೆಗಳ ನಂತರ ನೀರಿನಿಂದ ಕೂದಲನ್ನು ತೊಳೆಯಿರಿ.

    ಬೀಟ್ರೂಟ್ ಮತ್ತು ಶಾಂಪೂ

    ಒಂದು ದೊಡ್ಡ ಬೀಟ್ರೂಟ್, ಶಾಂಪೂ

    ಬಳಸುವ ವಿಧಾನ: ಬೀಟ್ರೂಟ್ ಅನ್ನು ತುರಿದು ಅದರ ರಸ ಹೊರತೆಗೆದು ಶಾಂಪೂ ಸೇರಿಸಿ. ಅದನ್ನು ಕೂದಲಿಗೆ ಹಚ್ಚಿ ಮತ್ತು ಸ್ವಲ್ಪ ಸಮಯ ಮಸಾಜ್ ಮಾಡಿ. ನಂತರ ನೀರಿನಿಂದ ಕೂದಲನ್ನು ತೊಳೆಯಿರಿ.

    ಇದನ್ನೂ ಓದಿ: ಕರುಳಿನ ಆರೋಗ್ಯಕ್ಕೆ ಬಾದಾಮಿಯನ್ನು ಹೀಗೆ ತಿಂದರೆ ಪ್ರಯೋಜನಕಾರಿ ಅನ್ನುತ್ತೆ ಆಯುರ್ವೇದ! 

    ಬೀಟ್ರೂಟ್, ಬ್ಲ್ಯಾಕ್ ಟೀ ಮತ್ತು ರೋಸ್ ವಾಟರ್

    ಒಂದು ಮಧ್ಯಮ ಗಾತ್ರದ ಬೀಟ್ರೂಟ್ ರಸ, ಕಪ್ ಕಪ್ಪು ಚಹಾ, ಕಪ್ ರೋಸ್ ವಾಟರ್

    ಬಳಸುವ ವಿಧಾನ : ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ಈಗ ಈ ಮಿಶ್ರಣದಿಂದ ಕೂದಲನ್ನು ತೊಳೆಯಿರಿ.
    Published by:renukadariyannavar
    First published: