Sunday Special Recipe: ಸ್ಪೆಷಲ್ ಸಂಡೇಗೆ ಬಾಯಲ್ಲಿ ನೀರೂರಿಸುವ ಕೂರ್ಗ್​ ಸ್ಟೈಲ್ ಪಂದಿ ಕರಿ..

Coorg Pandi Curry: ಇನ್ನು ಪೋರ್ಕ್‌ ಪ್ರಿಯರಿಗೆ ಕೊಡಗಿನ ಪಂದಿಕರಿ  ಎಂದರೆ  ಬಹಳ ಇಷ್ಟ.  ಅದನ್ನು ತಿನ್ನಲು ಕೊಡಗಿಗೆ ಹೋಗುವವರು ಹೆಚ್ಚು. ಅರೇ ಪಂದಿ ಕರಿಯನ್ನು ಎಲ್ಲರೂ ಮಾಡುತ್ತಾರೆ, ಅದರಲ್ಲಿ ಕೊಡಗಿನ ಪಂದಿ ಕರಿ ಯಾಕೆ ಫೇಮಸ್ ಎಂದು ನೀವು ಯೋಚನೆ ಮಾಡ್ತಿದ್ರೆ ಉತ್ತರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಆಹಾರಗಳು ಹೆಚ್ಚು ಪ್ರಸಿದ್ಧವಾಗಿರುತ್ತದೆ. ಉದಾಹರಣೆಗೆ ಕರ್ನಾಟಕದ ಕರಾವಳಿ(Coastal) ಭಾಗದಲ್ಲಿ ಮೀನಿನ(Fish Food) ಆಹಾರಗಳು ಹೆಚ್ಚು ಹೆಸರುವಾಸಿ. ಹಾಗೆಯೇ  ಕರ್ನಾಟಕದ ಕಾಶ್ಮೀರ ಎಂದೇ ಕರೆಯಲ್ಪಡುವ ಜಿಲ್ಲೆ ಕೊಡಗು. ಈ ಕೊಡಗು(Coorg) ನೋಡಲು ಎಷ್ಟು ಸುಂದರವೋ ಅಷ್ಟೇ ಅದರ ಆಹಾರಶೈಲಿ, ಉಡುಗೆ-ತೊಡುಗೆ ಎಲ್ಲದರಲ್ಲೂ  ಬಹಳ ವಿಭಿನ್ನ.  ನೀವು ಗಮನಿಸಿ ನೋಡಿ ಕೊಡಗಿನಲ್ಲಿ ವಿಶೇಷ ಆಹಾರ ಏನು ಎಂದು ಕೇಳಿ, ಅಥವಾ ಕೊಡಗಿನ ಯಾವ ಆಹಾರ ಬಹಳ ಇಷ್ಟ ಎಂದು ಯಾರನ್ನಾದರು ಕೇಳಿ ಪ್ರತಿಯೊಬ್ಬರು  ಪಂದಿಕರಿ ಎಂದೇ  ಹೇಳುವುದು. ಇಲ್ಲಿ ಪ್ರಮುಖ ಹಬ್ಬಗಳಲ್ಲಿ  ಕೈಲ್‌ ಮುಹೂರ್ತದಲ್ಲಿ ಪಂದಿ ಕರಿ ಇದ್ದೇ ಇರುತ್ತದೆ. ಇನ್ನು ಮದುವೆ, ಇತರ ಸಂಭ್ರಗಳಲ್ಲಿನ ವಿಶೇಷ ಅಡುಗೆಗಳಲ್ಲಿ ಪಂದಿ ಕರಿ(Pandi Curry) ಇದ್ದೇ ಇರುತ್ತದೆ.ಪಂದಿ ಕರಿ ಇಲ್ಲದೇ ಇವರ ಊಟ ಪೂರ್ಣವಾಗುವುದಿಲ್ಲ.

ಇನ್ನು ಪೋರ್ಕ್‌ ಪ್ರಿಯರಿಗೆ ಕೊಡಗಿನ ಪಂದಿಕರಿ  ಎಂದರೆ  ಬಹಳ ಇಷ್ಟ.  ಅದನ್ನು ತಿನ್ನಲು ಕೊಡಗಿಗೆ ಹೋಗುವವರು ಹೆಚ್ಚು. ಅರೇ ಪಂದಿ ಕರಿಯನ್ನು ಎಲ್ಲರೂ ಮಾಡುತ್ತಾರೆ, ಅದರಲ್ಲಿ ಕೊಡಗಿನ ಪಂದಿ ಕರಿ ಯಾಕೆ ಫೇಮಸ್ ಎಂದು ನೀವು ಯೋಚನೆ ಮಾಡ್ತಿದ್ರೆ ಉತ್ತರ ಇಲ್ಲಿದೆ. ಇತರ ಕಡೆ ಮಾಡುವುದಕ್ಕಿಂತ ಸ್ವಲ್ಪ ವಿಭಿನ್ನವಾಗಿ ಇಲ್ಲಿ ಪಂದಿ ಕರಿ ತಯಾರು ಮಾಡಲಾಗುತ್ತದೆ. ಹಾಗಾದ್ರೆ ನಿಮ್ಮ ಮನೆಯಲ್ಲಿ  ಕೂರ್ಗ್ ಪಂದಿ ಕರಿ ಮಾಡುವ ಸುಲಭ ವಿಧಾನ ಇಲ್ಲಿದೆ..

ಬೇಕಾಗುವ ಪದಾರ್ಥಗಳು  

ಪೋರ್ಕ್‌ (ಹಂದಿ ಮಾಂಸ) 1 ಕೆಜಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ

ಅರಿಶಿಣ ಪುಡಿ 1/2 ಚಮಚ

ಖಾರದ ಪುಡಿ  2 ಚಮಚ

ಕೊತ್ತಂಬರಿ ಪುಡಿ4 ಚಮಚ

ಇದನ್ನೂ ಓದಿ: ಸಖತ್ ಸಂಡೇಗೆ ಚಿಕನ್ ಪುಳಿಮುಂಚಿ, ರೆಸಿಪಿ ಇಲ್ಲಿದೆ..ಟ್ರೈ ಮಾಡಿ!

(ಪೋರ್ಕ್ ಮಸಾಲ ಬಳಸುವುದಾದರೆ ಖಾರದ ಪುಡಿ, ಕೊತ್ತಂಬರಿ 1/2 ಚಮಚದಷ್ಟೂ ಬಳಸಿದರೂ ನಡೆಯುತ್ತೆ) ಉಪ್ಪು 1 ಚಮಚ (ರುಚಿಗೆ ತಕ್ಕಷ್ಟು)

ಕರಿಬೇವು

ಸ್ವಲ್ಪ ಕೊತ್ತಂಬರಿ ಸೊಪ್ಪು

ಬೆಳುಳ್ಳಿ 4-5  ಎಸಳು

ಜೀರಿಗೆ ಪುಡಿ 1/3 ಚಮಚ

ಚಿಟಿಕೆಯಷ್ಟು ಮೆಂತೆ ಪುಡಿ

(ಒಂದು ಇಂಚು  ಶುಂಠಿ ಈರುಳ್ಳಿ 1 ಹಸಿ ಮೆಣಸು 1-2 (ನಿಮ್ಮ ಖಾರಕ್ಕೆ ತಕ್ಕಷ್ಟು) ಕಾಳು ಮೆಣಸಿನ ಪುಡಿ 1ಚಮಚ ಕಾಚಂ ಪುಳಿ ಅಥವಾ ನಿಂಬೆ ರಸ 1 ಚಮಚ)

ಮಾಡುವ ವಿಧಾನ

ನೀವು ಪೋರ್ಕ್ ಮಸಾಲ ಬಳಸುವುದಾದರೆ ಅದನ್ನು ಸ್ವಲ್ಪ ಹುರಿಯಿರಿ. ಅದನ್ನು ಸುಮಾರು 1-2 ನಿಮಿಷ ಹುರಿದರೆ ಸಾಕು.

ಪೋರ್ಕ್‌ ಮಸಾಲ ಇಲ್ಲದಿದ್ದರೆ ಕೊತ್ತಂಬರಿ ಪುಡಿ ಹಾಗೂ ಖಾರದ ಪುಡಿ ಸ್ವಲ್ಪ ಕಾಫಿ ಹುಡಿ ಬಣ್ಣಕ್ಕೆ ಬರುವಷ್ಟು ಹೊತ್ತು ಕಡಿಮೆ ಉರಿಯಲ್ಲಿ ಹುರಿಯಿರಿ.

ನಂತರ ಒಂದು  ಪಾತ್ರೆಗ ತೆಗೆದುಕೊಂಡು ಪೋರ್ಕ್ ತೊಳೆದು ಹಾಕಿ, ಅದಕ್ಕೆ ಮಸಾಲ ಪದಾರ್ಥಗಳಾದ ಖಾರದ ಪುಡಿ, ಜೀರಿಗೆ ಪುಡಿ, ಪೋರ್ಕ್ ಮಸಾಲ, ಎಲ್ಲವನ್ನು  ಹಾಕಿ ಮಿಕ್ಸ್ ಮಾಡಿ, ಕೇವಲ ಕಾಲು ಲೋಟ  ನೀರು ಹಾಕಿದರೆ ಸಾಕು. ಅದು ಸ್ವಲ್ಪ ಕುದಿಯಲು ಆರಂಭಿಸಿದಾಗ  ಅದಕ್ಕೆ ಕಾಚಂಪುಳಿ ಅಥವಾ ನಿಂಬೆರಸ ಹಾಕಿ ಮಿಶ್ರಣ ಮಾಡಿ.

ಇದನ್ನೂ ಓದಿ: ಕಾಫಿ ಕುಡಿಯೋದು ಕಮ್ಮಿ ಮಾಡೋದು ಒಳ್ಳೆಯದು, ಹೀಗೆ ಮಾಡಿದ್ರೆ ಸುಲಭವಾಗಿ ಬಿಡಬಹುದು ಅಂತಾರೆ ವೈದ್ಯರು

ಈಗ ಬೇಯಿಸಿ, ಸಾಧಾರಣ ಉರಿಯಲ್ಲಿ 45-50 ನಿಮಿಷ ಬೇಯಿಸಿ. ಆಗಾಗ ಅದನ್ನು ತಿರುಗಿಸಿ,  ಇಲ್ಲದಿದ್ದರೆ ಅದರ  ತಳ ಹಿಡಿಯಬಹುದು.  ನಂತರ  ಅದನ್ನು ಆಫ್ ಮಾಡುವ 2-3 ನಿಮಿಷ ಮೊದಲು 4 ಹನಿ ಕಾಚಂ ಪುಳಿ ಹಾಕಿ ಅಥವಾ 1 ಚಮಚ ನಿಂಬೆರಸ ಸೇರಿಸಿ, ಮಿಶ್ರಣ ಮಾಡಿದರೆ ಪಂದಿ ಕರಿ ರೆಡಿ.. ಇದನ್ನು  ಕಡಬು ಅಥವಾ ಇಡ್ಲಿ ಜೊತೆ ಸವಿಯಲು ಸೂಪರ್ ಆಗಿರುತ್ತದೆ.
Published by:Sandhya M
First published: