ಕೆಲಸದ ಚಿಂತೆ ಬಿಡಿ: ಕೇವಲ 10 ಸಾವಿರದಲ್ಲಿ ಮಾಡಬಹುದಾದ 10 ಲಾಭದಾಯಕ ಬ್ಯುಸಿನೆಸ್​ಗಳು ಇಲ್ಲಿವೆ

ಇಂದು ದೊಡ್ಡ ಬಿಸಿನೆಸ್​​ ಮ್ಯಾನ್​​ಗಳಾಗಿ ಬೆಳೆದವರು ಮೊದಲಿಗೆ ಶುರು ಮಾಡುವುದೇ ಸಣ್ಣಪುಟ್ಟ ವ್ಯಾಪರ. ಈ ಸಣ್ಣಪುಟ್ಟ ವ್ಯಾಪರವೇ ಮುಂದೊಂದು ದಿನ ಹೆಮ್ಮರವಾಗಿ ಬೆಳೆದಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರತಿಯೊಬ್ಬರಿಗೂ ಜೀನವದಲ್ಲಿ ಒಳ್ಳೆಯ ಉದ್ಯಮಿ ಆಗಬೇಕೆಂಬ ಕನಸ್ಸಿರುತ್ತದೆ. ಆದರೆ, ಕೈಯ್ಯಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ಯಾವುದೇ ಪ್ರಯತ್ನಕ್ಕೆ ಮುಂದಾಗದೇ ಸುಮ್ಮನೇ ಕೂರುತ್ತಾರೆ. ಇಂದು ದೊಡ್ಡ ಬಿಸಿನೆಸ್​​ ಮ್ಯಾನ್​​ಗಳಾಗಿ ಬೆಳೆದವರು ಮೊದಲಿಗೆ ಶುರು ಮಾಡುವುದೇ ಸಣ್ಣಪುಟ್ಟ ವ್ಯಾಪರ. ಈ ಸಣ್ಣಪುಟ್ಟ ವ್ಯಾಪರವೇ ಮುಂದೊಂದು ದಿನ ಹೆಮ್ಮರವಾಗಿ ಬೆಳೆದಿರುತ್ತದೆ. ಇದಕ್ಕೆ ನಾವು ಕೇವಲ ಬೇಕಾಗಿರುವುದು ಶ್ರಮ, ಏಕಾಗ್ರತೆ, ಶಿಸ್ತು ಮತ್ತು ಕಾಳಜಿಯಷ್ಟೇ.

  ಯಾವುದೇ ಉದ್ಯಮವನ್ನು ಕಾಳಜಿಯಿಂದ ಮಾಡಿದಲ್ಲಿ ಖಂಡಿತವಾಗಿಯೂ ಯಶಸ್ಸು ಸಿಗಲಿದೆ. ಇದಕ್ಕಾಗಿಯೇ ನಾವು ಮೊದಲು ಉದ್ಯಮ ಪ್ರಾರಂಭಿಸಲು ದೊಡ್ಡ ಮೊತ್ತದ ಬಂಡವಾಳ ಅವಶ್ಯಕತೆ ಇದೆ ಬೇಕೆಂಬ ಅಭಿಪ್ರಾಯ ಬಿಡಬೇಕಿದೆ. ಜೊತೆಗೆ ಚಿಕ್ಕ ಬಂಡವಾಳದಲ್ಲೇ ಹೇಗೆ ಬಿಸಿನೆಸ್​​ ಶುರು ಮಾಡಬಹುದು ಎಂದು ತಿಳಿದುಕೊಳ್ಳಬೇಕಿದೆ. ಈಗ ನಾವು ನಿಮಗೆ ಕೇವಲ ಹತ್ತು ಸಾವಿರದಲ್ಲಿ ಮಾಡಬಹುದಾದ ಬಿಸಿನೆಸ್​​ ಬಗ್ಗೆ ಹೇಳುತ್ತೇವೆ ಮುಂದೆ ಓದಿ..

  ಪ್ರಯಾಣ ಸಂಸ್ಥೆ(Travel agency)

  ದಿನೇದಿನೇ ಪ್ರವಾಸೋದ್ಯಮ ಬೆಳೆಯುತ್ತಿದೆ. ಕಳೆದ ಒಂದು ದಶಕದಿಂದ ಜನರು ಯಾವುದಾದರೂ ಒಂದು ಸ್ಥಳಕ್ಕೆ ಪ್ರವಾಸ ಹೋಗುವುದು ಸಾಮಾನ್ಯವಾಗಿದೆ. ಈ ಹಿಂದೇ ಜನರಿಗೆ ಆರ್ಥಿಕ ಸಂಕಷ್ಟವಿತ್ತು. ಈಗ ಜನರು ಆರ್ಥಿಕವಾಗಿ ಸದೃಢರಾಗಿದ್ದು, ಜಗತ್ತನ್ನು ನೋಡಿಬಿಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದನ್ನೇ ನಾವು ಬಂಡವಾಳವಾಗಿಸಿಕೊಂಡು ಟ್ರಾವೆಲ್​​ ಏಜೆನ್ಸಿ ಶುರು ಮಾಡಬಹುದು. ಇದಕ್ಕೆ ಈಗಾಗಲೇ ಹೆಸರು ಗಳಿಸಿರುವ ಸಂಸ್ಥೆಯೊಂದರ ಸಹಭಾಗಿತ್ವ ಅಗತ್ಯವಿರುತ್ತದೆ. ಈ ಉದ್ಯಮಕ್ಕೆ ಅಗತ್ಯವಾದ ARC, CLIA, ಅಥವಾ IATA ಮೊದಲಾದ ಪ್ರಮಾಣೀಕರಣಗಳನ್ನೂ ಶೀಘ್ರದಲ್ಲಿ ಪಡೆಯಬಹುದು. ಈ ಉದ್ಯಮ ಹತ್ತು ಸಾವಿರ ಅಥವಾ ಶೂನ್ಯ ಬಂಡವಾಳದಲ್ಲಿ ನಡೆಸಬಹುದು.

  ಮೊಬೈಲ್ ರೀಚಾರ್ಜ್ ಅಂಗಡಿ

  ಇಂದು ಮೊಬೈಲ್ ಬಳಕೆದಾರರು ಹೆಚ್ಚಾಗಿದ್ದಾರೆ. ಹಾಗಾಗಿ ನಾವು ರೀಚಾರ್ಜ್ ಮಾಡಲು ಆನ್ಲೈನ್ ಸೌಲಭ್ಯ ಒದಗಿಸುವ ಒಂದು ಸಣ್ಣ ಅಂಗಡಿ ತೆರೆಯಬಹುದು. ಇದಕ್ಕೆ ಒಂದು ಚಿಕ್ಕ ಅಂಗಡಿ ಹಾಕಿಕೊಂಡರೇ ಸಾಕಾಗುತ್ತದೆ. ಈ ಉದ್ಯಮಕ್ಕಾಗಿ ನೀವು ಇರುವ ಸ್ಥಳದ ಮೊಬೈಲ್ ಜಾಲ ನಿರ್ವಹಿಸುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಸಗಟು ದರದಲ್ಲಿ ಮೊಬೈಲು ಕೂಪನ್ನುಗಳನ್ನು ಅಥವಾ ಕರೆನ್ಸಿಯನ್ನು ಕೊಳ್ಳಬೇಕಾಗುತ್ತದೆ.

  ಉಪಾಹಾರ ಪಾಯಿಂಟ್

  ಉಪಾಹಾರ ಪಾಯಿಂಟ್ಇಂದು ನಮ್ಮ ಸುತ್ತಮುತ್ತ ಉಪಾಹಾರ ಮಂದಿರಗಳಲ್ಲಿ ಸಾಕಷ್ಟು ಜನ ಗುಂಪುಗೂಡಿರುತ್ತಾರೆ ಎಂಬುದನ್ನು ನೋಡಿದ್ದೇವೆ. ಮಾರುಕಟ್ಟೆಯಲ್ಲಿ ಸಿದ್ಧ ಹಾಗೂ ರುಚಿಕರ, ಆರೋಗ್ಯಕರ ಆಹಾರಕ್ಕೆ ಎಂದಿಗೂ ಬೇಡಿಕೆ ಇದ್ದೇ ಇದೆ. ಈ ಪೈಕಿ ಪ್ರತಿನಿತ್ಯ ಕೆಲಸಕ್ಕೆ ಹೋಗುವರು ಸಿದ್ದ ಉಪಾಹಾರವನ್ನೇ ಆಪೇಕ್ಷಿಸುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ನಾವು ಉಪಾಹಾರ ಪಾಯಿಂಟ್​​ ಶುರು ಮಾಡಬಹುದು. ಆಯಾ ಸ್ಥಳದ ಪಂಚಾಯತಿ ಅಥವಾ ಮುನಿಸಿಪಾಲಿಟಿಯಿಂದ ಅನುಮತಿ ಪಡೆದು ಸಣ್ಣ ಹೋಟೆಲ್​​ ಶುರು ಮಾಡಿದರೇ ಸಾಕು.

  ಇದನ್ನೂ ಓದಿ: ನಾನು ಕೆಪಿಸಿಸಿ ಅಧ್ಯಕ್ಷನಾದರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ; ಕಾಂಗ್ರೆಸ್ಸಿಗಾಗಿ ದುಡಿವೆ - ಡಿಕೆಶಿ

  ಮನೆ ಶಿಕ್ಷಣ ಕೇಂದ್ರ (Tuition centre)

  ಅತಿ ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಬಹುದಾದ ಉದ್ಯಮವೆಂದರೆ ಮನೆಯಲ್ಲಿಯೇ ಪಾಠ ಹೇಳುವುದು. ಇದಕ್ಕೆ ಮನೆಯ ಒಂದು ಕೋಣೆಯನ್ನು ಮೀಸಲಾಗಿಟ್ಟರೆ ಬಂಡವಾಳವೇ ಬೇಕಾಗಿಲ್ಲ. ಸಾಮಾನ್ಯವಾಗಿ ಮನೆಪಾಠ ಹೇಳುವ ಶಿಕ್ಷಕರು ತಮ್ಮ ಮನೆಯಲ್ಲಿಯೇ ಪಾಠ ಹೇಳುವುದರಿಂದ ಬಾಡಿಗೆ ಹಾಗೂ ಇತರ ಸೌಲಭ್ಯಗಳಿಗಾಗಿ ನೀಡಬೇಕಾದ ಹಣ ನಿವ್ವಳವಾಗಿ ಉಳಿಯುತ್ತದೆ.

  ಹಣ್ಣಿನ ರಸದ ಪುಟ್ಟ ಮಳಿಗೆ

  ಬೇಸಿಗೆ ಕಾಲದಲ್ಲಿ ಹಣ್ಣಿನ ಅಂಗಡಿಗೆ ಭಾರೀ ಬೇಡಿಕೆ ಇದೆ. ಇದಕ್ಕಾಗಿ ಹಣ್ಣಿನ ರಸ ಹಿಂಡುವ ಉಪಕರಣಗಳು, ಜ್ಯೂಸರ್, ಕೆಲಸದವರ ಸಂಬಳ ಇತ್ಯಾದಿಗಳನ್ನು ಭರಿಸಬೇಕಾಗುತ್ತದೆ. ಮೂಲ ಬಂಡವಾಳ ಮಾತ್ರವೇ ಹೆಚ್ಚೇ ಹೊರತು ಉಳಿದಂತೆ ವಿದ್ಯುತ್ ಮತ್ತು ಇತರ ಖರ್ಚುಗಳು ಕಡಿಮೆಯೇ ಇರುತ್ತದೆ.

  ಆನ್ಲೈನ್ ಬೇಕರಿ

  ಇಂದು ಆನ್ಲೈನ್ ಮೂಲಕ ಆಹಾರ ತರಿಸುವವರ ಸಂಖ್ಯೆ ಹೆಚ್ಚಾಗಿದ್ದು, ಈ ಉದ್ಯಮ ಸಾಂಪ್ರಾದಾಯಿಕ ಉದ್ಯಮವನ್ನು ಹಿಂದಿಕ್ಕುವ ಎಲ್ಲಾ ಸೂಚನೆಗಳನ್ನು ನೀಡುತ್ತಿದೆ. ವಿಶೇಷವಾಗಿ ಬೇಕರಿ ಉತ್ಪನ್ನಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇದಕ್ಕೆ ಹಲವು ಜನರ ಸಹಯೋಗದ ಅಗತ್ಯವಿಲ್ಲ, ಒಬ್ಬರೂ ನಿರ್ವಹಿಸಬದಾಗಿದೆ. ಉದ್ಯಮ ಜನಪ್ರಿಯತೆ ಗಳಿಸುತ್ತಾ ಸಾಗಿದಂತೆ ನಾನು ಇದರ ಗಳಿಕೆಯ ಹಣವನ್ನು ಜ಼ೊಮಾಟೋ, ಕಸ್ಟಮ್ ಬಾಕ್ಸ್, ಕೇಕ್ ಬೋರ್ಡ್ ಮೊದಲಾದ ಕಡೆಗಳಲ್ಲಿಯೂ ಹೂಡಿಕೆ ಮಾಡಬಹುದು.

  ಈವೆಂಟ್​ ಮ್ಯಾನೇಜ್​ಮೆಂಟ್​

  ಸಾಮಾನ್ಯವಾಗಿ ಕಾರ್ಯಕ್ರಮ ಸಂಘಟಕರು ದಿನವಿಡೀ ತಮ್ಮ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ. ಕಾರ್ಯಕ್ರಮವೊಂದು ಯಶಸ್ವಿಯಾಗಿ ನಡೆಯಬೇಕಾದರೆ ಇದಕ್ಕೆ ಹತ್ತು ಹಲವು ಪೂರ್ವ ಸಿದ್ದತೆಗಳು ಮಾಡಿಕೊಳ್ಳಬೇಕು. ಹೀಗಾಗಿ ಇಂತವರಿಗೆ ಮಾಹಿತಿ ನೀಡಲು ನಾವು ಈವೆಂಟ್​​ ಮ್ಯಾನೇಜ್​​ಮೆಂಟ್​ ಶುರು ಮಾಡಬಹುದು. ಇದಕ್ಕಾಗಿ ಆನ್ಲೈನ್ ಮಾರುಕಟ್ಟೆ ವ್ಯವಹಾರವನ್ನೂ ಕಲಿತುಕೊಳ್ಳಬೇಕಾಗಿ ಬರಬಹುದು.

  ಛಾಯಾಗ್ರಹಣ

  ವೃತ್ತಿಪರ ಛಾಯಾಗ್ರಾಹಕರಾಗಬೇಕಾದರೆ ನಿಮ್ಮಲ್ಲೊಂದು ಉತ್ತಮ ಗುಣಮಟ್ಟದ ಹೆಚ್ ಡಿ ಕ್ಯಾಮೆರಾ ಇರಬೇಕು ಹಾಗೂ ಇದರ ಮೂಲಕ ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯುವ ಚಾಕಚಕ್ಯತೆ ಹಾಗೂ ನೈಪುಣ್ಯವೂ ಅಗತ್ಯವಿದೆ. ಈ ಕ್ಯಾಮೆರಾ ಹಾಗೂ ನಿಮ್ಮ ಚಿತ್ರಗಳನ್ನು ಸರಿಪಡಿಸಲು ಅಗತ್ಯವಿರುವ ಫೋಟೋಶಾಪ್ ಮೊದಲಾದ ಸಾಫ್ಟ್ವೇರ್ ಗಳನ್ನು ಕೊಳ್ಳಲು ಕೊಂಚ ಹೆಚ್ಚಿನ ಬಂಡವಾಳ ಬೇಕಾಗುತ್ತದೆ.
  First published: