Breakfast Tips: ಮಸಾಲೆ ದೋಸೆಯಷ್ಟೇ ಟೇಸ್ಟಿ ಈ ಪಾಲಕ್ ದೋಸೆ -ನೀವು ಟ್ರೈ ಮಾಡಿ

Palak Dosa Recipe: ಹಿಂದಿನಿಂದಲೂ ಮಸಾಲೆ ದೋಸೆ ಎಲ್ಲರಿಗೂ ಇಷ್ಟ. ಈ ಮಸಾಲೆಯನ್ನು ಕೊಂಚ ಬದಲಿಸುವ ಮೂಲಕ ಈ ದೋಸೆಯ ರುಚಿಯನ್ನ ಭಿನ್ನವಾಗಿಸಿ ಇನ್ನಷ್ಟು ರುಚಿಕರವಾಗಿಸಬಹುದು. ಪಾಲಕ್ ದೋಸೆಯನ್ನು ಹೆಚ್ಚಿನ ಮನೆಗಳಲ್ಲಿ ಮಾಡುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South India) ಅತ್ಯಂತ ಜನಪ್ರಿಯ ತಿಂಡಿ(Breakfast) ಅಂದರೆ ದೋಸೆ(Dosa). ದೋಸೆಯಲ್ಲಿಯೇ ಹಲವಾರು ವಿಧಗಳನ್ನು ಮಾಡಲಾಗುತ್ತದೆ. ಮಧ್ಯಾಹ್ನದ ಊಟಕ್ಕೂ ಸಹ ಇದನ್ನು ಬೇಡವೆನ್ನುವವರಿಲ್ಲ. ದೋಸೆಗಳಲ್ಲಿ ಅಪಾರವಾದ ವಿಧಗಳಿವೆ. ಒಂದು ರಾತ್ರಿ ನೆನೆಸಿಡಬೇಕಾದ ಉದ್ದಿನ ದೋಸೆಯಿಂದ ಹಿಡಿದು ತಕ್ಷಣ ಮಾಡಬಹುದಾದ ಮೈದಾಹಿಟ್ಟಿನ ದೋಸೆ ಹಅಗೂ ನೀರುದೋಸೆ ಹೀಗೆ ಹಲವಾರು ವಿಧಗಳಿದೆ. ಇಂದು ದೋಸೆ ಹಿಟ್ಟು ಸಿದ್ಧ ರೂಪದಲ್ಲಿ ಅಂಗಡಿಗಳಲ್ಲಿ ಸಿಗುತ್ತಿರುವ ಕಾರಣ ನೆನೆಸಿಟ್ಟು ರುಬ್ಬುವ ತೊಂದರೆಯೇ ಇಲ್ಲ. ಆದರೆ ಮನೆಯಲ್ಲಿಯೇ ಅಕ್ಕಿ, ಉದ್ದಿನಬೇಳೆಯನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ರುಬ್ಬುವ ಮೂಲಕ ಹೆಚ್ಚಿನ ಕಷ್ಟವಿಲ್ಲದೇ ರುಚಿಕರ ದೋಸೆ ತಯಾರಿಸಬಹುದು.

ಹಿಂದಿನಿಂದಲೂ ಮಸಾಲೆ ದೋಸೆ ಎಲ್ಲರಿಗೂ ಇಷ್ಟ. ಈ ಮಸಾಲೆಯನ್ನು ಕೊಂಚ ಬದಲಿಸುವ ಮೂಲಕ ಈ ದೋಸೆಯ ರುಚಿಯನ್ನ ಭಿನ್ನವಾಗಿಸಿ ಇನ್ನಷ್ಟು ರುಚಿಕರವಾಗಿಸಬಹುದು. ಪಾಲಕ್ ದೋಸೆಯನ್ನು ಹೆಚ್ಚಿನ ಮನೆಗಳಲ್ಲಿ ಮಾಡುವುದಿಲ್ಲ. ಆದರೆ ಅದು ಹೆಚ್ಚು ರುಚಿಕರವಾಗಿರುತ್ತದೆ. ಹಾಗಾದ್ರೆ ಪಾಲಕ್​ ದೋಸೆ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಪಾಲಕ್ ದೋಸೆ ಮಾಡಲು ಬೇಕಾಗಿರುವ ಸಾಮಾಗ್ರಿಗಳು 

1 ಕಟ್ಟು ಪಾಲಕ್‌ನ ಸೊಪ್ಪು

ರುಬ್ಬಿದ ದೋಸೆ ಹಿಟ್ಟು  2½ ಕಪ್

ಈರುಳ್ಳಿ - 3 (2 ಮಧ್ಯಮ ಮತ್ತು 1 ಚಿಕ್ಕ).

ಎಣ್ಣೆ - 2 ಚಿಕ್ಕಚಮಚ

ಜೀರಿಗೆ - 1½ ಚಮಚ

ಬೆಳ್ಳುಳ್ಳಿ- 3 ರಿಂದ 4 ಎಸಳು(ಚಿಕ್ಕದಾಗಿ ಹೆಚ್ಚಿಕೊಳ್ಳಿ)

ಇದನ್ನೂ ಓದಿ: ಬೆಳಗ್ಗೆ ತಿಂಡಿ ಏನು ಮಾಡೋದು ಅಂತ ಯೋಚನೆ ಬೇಡ ಘಮ ಘಮಿಸುವ ಬಿಸಿ ಬೇಳೆಬಾತ್ ಮಾಡಿ

ಕೊತ್ತಂಬರಿ ಎಲೆಗಳು- ಸ್ವಲ್ಪ ಚಿಕ್ಕದಾಗಿ ಹೆಚ್ಚಿಕೊಳ್ಳಿಕೆಂಪು

ಮೆಣಸಿನ ಪುಡಿ - 1½ ಚಮಚ (ಕಾಶ್ಮೀರಿ ಚಿಲ್ಲಿ ಪೌಡರ್ ಹೆಚ್ಚು ಉತ್ತಮ)

ಹಸಿಮೆಣಸು - 2 (ಚಿಕ್ಕದಾಗಿ ಹೆಚ್ಚಿದ್ದು)

ಉಪ್ಪು – ರುಚಿಗೆ ತಕ್ಕಷ್ಟು

ಪಾಲಕ್ ದೋಸೆ ಮಾಡುವ ವಿಧಾನ

ಒಂದು ಕಟ್ಟು ಪಾಲಕ್ ಸೊಪ್ಪನ್ನ ತೆಗೆದುಕೊಂಡು ಚನ್ನಾಗಿ ತೊಳೆಯಿರಿ. ಅದನ್ನು ತೊಳೆದ ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಜೊತೆಗೆ ತೊಳೆದ ಪಾಲಕ್ ಸೊಪ್ಪು ಹಾಕಿ ಬಾಡುವ ತನಕ ಹುರಿಯಿರಿ. ಅದು ಚನ್ನಾಗಿ ಬಾಡಿದ ನಂತರ ಆರಲು ಹಾಗೆಯೇ ಬಿಡಿ.  ಅದು ಆರಿದ ನಂತರ ಒಂದು ಮಿಕ್ಸಿಯಲ್ಲಿ ಸೊಪ್ಪು ಮತ್ತು ಉಪ್ಪನ್ನು ಹಾಕಿ ನುಣ್ಣಗೆ ಪೇಸ್ಟ್​ ಮಾಡಿಕೊಳ್ಳಿ.

ನಂತರ ಒಂದು ಚಿಕ್ಕ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಇದಕ್ಕೆ ಜೀರಿಗೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಕೊಂಚವೇ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಮೆಣಸಿನ ಪುಡಿ, ಹಸಿಮೆಣಸು, ಕೊತ್ತಂಬರಿ ಎಲೆಗಳನ್ನು ಹಾಕಿ ಹುರಿದುಕೊಳ್ಳಿ. ಅದನ್ನು ಆರಲು ಬಿಡಿ. ಎಲ್ಲ ಪದಾರ್ಥಗಳು ಆರಿದ ನಂತರ ಮತ್ತೊಮ್ಮೆ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.

ಎಲ್ಲ ಪದಾರ್ಥಗಳು ಹೆಚ್ಚು ನುಣ್ಣಗೆ ಪೇಸ್ಟ್​ ಆಗಬೇಕು.  ನಂತರ ಒಂದು ಪಾತ್ರೆಯಲ್ಲಿ ದೋಸೆಹಿಟ್ಟನ್ನು ಹಾಕಿ ಇದಕ್ಕೆ ಪಾಲಕ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಉಪ್ಪು ಸೇರಿಸಿ ಇನ್ನಷ್ಟು ಚೆನ್ನಾಗಿ ಮಿಶ್ರಣ ಮಾಡಿ.   ಈಗ ಪಾಲಕ್ ದೋಸೆ ಹಿಟ್ಟು ರೆಡಿ. ನಂತರ ದೋಸೆ ಕಾವಲಿಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಚ್ಚಿ ಕಾಯಿಸಿ. ಕಾವಲಿ ನಾನ್ ಸ್ಟಿಕ್ ಆದರೆ ಎಣ್ಣೆ ಅಗತ್ಯವಿಲ್ಲ.

ಈಗ ದೋಸೆ ಹಿಟ್ಟನ್ನು ಒಂದು ಸೌಟಿನಲ್ಲಿ ತೆಗೆದುಕೊಂಡು ಹಿಟ್ಟು ಕಾವಲಿಯ ಎಲ್ಲಾ ಕಡೆಗೆ ಆವರಿಸುವಂತೆ ಹಾಕಿ. ಹೆಚ್ಚು ತೆಳುವಾಗಿರುವಂತೆ ಮಾಡಿ. ಅಗತ್ಯ ಎನಿಸಿದರೆ ಒಂದು ಚಮಚ ಎಣ್ಣೆಯನ್ನು ಅಂಚುಗಳಿಗೆ ಹಾಕಬಹುದು. ಈ ದೋಸೆಯನ್ನು ಮುಚ್ಚಳದಿಂದ ಮುಚ್ಚಿ ಸುಮಾರು ಒಂದರಿಂದ ಎರಡು ನಿಮಿಷ ಬೇಯಲು ಬಿಡಿ.

ಇದನ್ನೂ ಓದಿ: ಉಳಿದ ಅನ್ನದಿಂದಲೂ ಮೃದುವಾದ ಇಡ್ಲಿ ಮಾಡಬಹುದು, ಸುಲಭದ ರೆಸಿಪಿ ಇಲ್ಲಿದೆ

ನಂತರ ಅದನ್ನು ತೆಗೆದು ಒಂದು ಪ್ಲೇಟ್​ನಲ್ಲಿ ಹಾಕಿದರೆ ಸವಿಯಲು ಸಿದ್ಧ. ಇದರಲ್ಲಿ ಹೆಚ್ಚಿನ ಮಸಾಲೆಗಳಿರುವುದರಿಂದ ನಿಮಗೆ ಚಟ್ನಿಯ ಅವಶ್ಯಕತೆ ಸಹ ಇರುವುದಿಲ್ಲ. ಆದರೆ ನಿಮಗೆ ಅಗತ್ಯವಿದ್ದರೆ ಕಾಯಿ ಚಟ್ನಿಯ ಜೊತೆ ಸೇವಿಸಬಹುದು.
Published by:Sandhya M
First published: