Health Tips: ಪ್ರತಿದಿನ ಕೇವಲ 10 ನಿಮಿಷ ವ್ಯಾಯಾಮ ಮಾಡೋದ್ರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Daily Workout: ಇತ್ತೀಚಿಗೆ ಅಮೆರಿಕದಲ್ಲಿ 45ರಿಂದ 85 ವರ್ಷ ವಯಸ್ಸಿನ ವಯಸ್ಕರ ಮೇಲೆ ನಡೆದ ಅಧ್ಯಯನವೊಂದರ ಪ್ರಕಾರ ಪ್ರತಿನಿತ್ಯ ದಿನಕ್ಕೆ ಕೇವಲ 10 ನಿಮಿಷಗಳ ಕಾಲ ವ್ಯಾಯಾಮ ಮಾಡಿದ ಜನರು ತಮ್ಮ ದೇಹವನ್ನು ಆರೋಗ್ಯವಾಗಿಟ್ಟು ಕೊಂಡಿದ್ದಾರಂತೆ

  • Share this:

    ಪ್ರಸ್ತುತ ದಿನಮಾನಗಳಲ್ಲಿ ಆರೋಗ್ಯವನ್ನು (Health) ಉತ್ತಮವಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ.. ಹೀಗಾಗಿ ಪ್ರಪಂಚದ (World) ಪ್ರತಿಯೊಬ್ಬ ಆರೋಗ್ಯ ತಜ್ಞರು (Health Experts) ಪ್ರತಿನಿತ್ಯ ತಪ್ಪದೆ ವ್ಯಾಯಾಮ (Exercise) ಮಾಡಿ ಎಂದು ಎಲ್ಲರಿಗೂ ಸಲಹೆ ನೀಡುತ್ತಾರೆ.. ಅದರಲ್ಲೂ ಕೆಲವರು ಸ್ವಯಂ ಪ್ರೇರಿತರಾಗಿ ತಮ್ಮ ಆರೋಗ್ಯ ಹಾಗೂ ದೇಹವನ್ನು (Body) ಸದೃಢವಾಗಿ ಇಟ್ಟುಕೊಳ್ಳಲು ಪ್ರತಿನಿತ್ಯ ಜಿಮ್ (Gym) ಯೋಗ (Yoga) ಏರೋಬಿಕ್ ಎಂದೆಲ್ಲ ಮಾಡುತ್ತಾರೆ. ಪ್ರತಿನಿತ್ಯ ಹಲವು ಗಂಟೆಗಳ ಕಾಲ ದೇಹವನ್ನು ದಂಡಿಸಿ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ಪ್ರಯತ್ನ ಪಡುತ್ತಾರೆ.. ಆದ್ರೆ ಎಷ್ಟು ಸಮಯ ಪ್ರತಿನಿತ್ಯ ವ್ಯಾಯಾಮ ಮಾಡಬೇಕು ಎಂಬುದು ಬಹುತೇಕರಿಗೆ ತಿಳಿದಿರುವುದು ಇಲ್ಲ.. ಕೆಲವರು ಹೇಳುವ ಪ್ರಕಾರ ಪ್ರತಿನಿತ್ಯ ಎರಡು ಗಂಟೆಗಳ ಕಾಲ ದೇಹವನ್ನು ದಂಡನೆ ಮಾಡಬೇಕಂತೆ.. ಇನ್ನು ಕೆಲವರ ಪ್ರಕಾರ ಪ್ರತಿನಿತ್ಯ 45ರಿಂದ 50 ನಿಮಿಷ ಕಾಲ ನಿತ್ಯ ವ್ಯಾಯಾಮ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಂತೆ.. ಹೀಗಾಗಿಯೇ ಬಹುತೇಕರು 45ರಿಂದ 50 ನಿಮಿಷಗಳ ಕಾಲ ವ್ಯಾಯಾಮ ಮಾಡಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಾರೆ.ಆದರೆ ಹೊಸ ಮಾಹಿತಿಯ ಪ್ರಕಾರ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಕೇವಲ ಹತ್ತು ನಿಮಿಷದ ವ್ಯಾಯಾಮ ಸಾಕಂತೆ..


    ಹತ್ತು ನಿಮಿಷ ವ್ಯಾಯಾಮ ಮಾಡುವುದರಿಂದ ದೇಹ ಆರೋಗ್ಯವಾಗಿ ಇರಲಿದೆಯಂತೆ


    ಪ್ರತಿಯೊಬ್ಬರ ಜೀವನದಲ್ಲೂ ಬಿಡುವಿನ ಸಮಯ ಎಂಬುದು ಇದ್ದೇ ಇರುತ್ತದೆ.. ಅದು ಬೆಳಗ್ಗೆ ಹಾಸಿಗೆಯಿಂದ ಎದ್ದ ನಂತರ, ಸ್ನಾನ ಮಾಡುವ ಮೊದಲು, ಊಟ ಮಾಡಿದ ಬಳಿಕ ಹಾಗೂ ಊಟಕ್ಕೆ ಮುಂಚೆ ಅನೇಕ ಜನರು ಬಿಡುವಿನ ಸಮಯವನ್ನು ಕಳೆಯುತ್ತಾರೆ.. ಇಂತಹ ಸಂದರ್ಭದಲ್ಲಿ ಹತ್ತು ನಿಮಿಷಗಳ ಕಾಲ ಬಿಡುವು ಇಟ್ಟುಕೊಂಡು ವ್ಯಾಯಾಮ ಮಾಡುವುದರಿಂದ ದೇಹ ಆರೋಗ್ಯವಾಗಿ ಇರುತ್ತದೆಯೆಂದು ಆರೋಗ್ಯ ತಜ್ಞರು ಹೇಳುತ್ತಾರೆ.


    ಇದನ್ನೂ ಓದಿ: ಹೊಸದಾಗಿ ನೀವು ಸೂರ್ಯ ನಮಸ್ಕಾರ ಕಲಿಯುವ ಮುನ್ನ ತಪ್ಪದೇ ಈ ನಿಯಮ ಪಾಲನೆ ಮಾಡಿ


    ಇತ್ತೀಚಿಗೆ ಅಮೆರಿಕದಲ್ಲಿ 45ರಿಂದ 85 ವರ್ಷ ವಯಸ್ಸಿನ ವಯಸ್ಕರ ಮೇಲೆ ನಡೆದ ಅಧ್ಯಯನವೊಂದರ ಪ್ರಕಾರ ಪ್ರತಿನಿತ್ಯ ದಿನಕ್ಕೆ ಕೇವಲ 10 ನಿಮಿಷಗಳ ಕಾಲ ವ್ಯಾಯಾಮ ಮಾಡಿದ ಜನರು ತಮ್ಮ ದೇಹವನ್ನು ಆರೋಗ್ಯವಾಗಿಟ್ಟು ಕೊಂಡಿದ್ದಾರಂತೆ..ಇನ್ನು ಮೈಕ್ರೊ ವರ್ಕೌಟ್‌ಗಳು ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಅದನ್ನು ಪ್ರಯತ್ನಿಸುವ ಪ್ರತಿಯೊಬ್ಬರ ಮಾನಸಿಕ ಆರೋಗ್ಯಕ್ಕೂ ಬಹಳ ಮಹತ್ವದ್ದಾಗಿದೆ ಎಂದು ಹೇಳಲಾಗಿದೆ. ಇನ್ನು ಪ್ರತಿನಿತ್ಯ ಹತ್ತು ನಿಮಿಷಗಳ ಕಾಲ ಮಧ್ಯಮ ಗತಿಯಲ್ಲಿ ವ್ಯಾಯಾಮ ಮಾಡುವುದರಿಂದ ವಾರ್ಷಿಕವಾಗಿ ಸುಮಾರು 1,10,000 ಸಾವುಗಳನ್ನು ತಡೆಯಬಹುದು ಎಂದು ಅಧ್ಯಯನ ಹೇಳಿದೆ.


    ಹತ್ತು ನಿಮಿಷ ವ್ಯಾಯಾಮ ಮಾಡುವುದರಿಂದ ಆಗುವ ಪ್ರಯೋಜನ


    1) ಒತ್ತಡವನ್ನು ನಿವಾರಣೆ: ಪ್ರತಿ ನಿತ್ಯ ನಿಯಮಿತವಾಗಿ ಹತ್ತು ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ಮನಸ್ಸಿನ ಆಹ್ಲಾದಕರವಾಗಿ ಇಟ್ಟುಕೊಳ್ಳಬಹುದು. ಅಲ್ಲದೆ ಒತ್ತಡದಿಂದ ಬಳಲುತ್ತಿರುವವರಿಗೆ ಇದು ಸಹಕಾರಿಯಾಗಿದೆ.


    2) ಹೃದಯದ ಆರೋಗ್ಯ ಕಾಪಾಡಲು: ಪ್ರತಿದಿನ 10 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ರಕ್ತದಲ್ಲಿ ಆಮ್ಲಜನಕ ಸಂಚಾರಕ್ಕೆ ಸಹಾಯಕವಾಗಿದೆ. ಇದರಿಂದಾಗಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು.


    3) ಚರ್ಮದ ಆರೋಗ್ಯ ಕಾಪಾಡಲು: ಪ್ರತಿನಿತ್ಯ ಹತ್ತು ನಿಮಿಷಗಳ ಕಾಲ ಮೈಕ್ರೋ ವರ್ಕೌಟ್ ಮಾಡುವುದರಿಂದ ಚರ್ಮದ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ನಾವು ವ್ಯಾಯಾಮ ಮಾಡಿದಷ್ಟು ನಮ್ಮ ಚರ್ಮದ ಮೇಲಿನ ಹಿಡಿತ ಕಡಿಮೆಯಾಗಿ ಸುಂದರ ತ್ವಚೆ ಪಡೆಯಬಹುದು.


    4) ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ: ಹತ್ತು ನಿಮಿಷದ ಮೈಕ್ರೋ ವರ್ಕೌಟ್ ಮೆದುಳಿನ ಮೇಲೆ ಸಾಕಷ್ಟು ಪರಿಣಾಮ ಬೀರಿ ಒತ್ತಡ ಕಡಿಮೆ ಮಾಡಲಿದೆ.. ನೆನಪಿನ ಶಕ್ತಿ ಹೆಚ್ಚಳ ಮಾಡಿಕೊಳ್ಳಲು ಇದು ಉಪಯೋಗಕಾರಿ.


    ಇದನ್ನೂ ಓದಿ: ಈ ನಾಲ್ಕು ಟಿಪ್ಸ್ ಫಾಲೋ ಮಾಡಿದ್ರೆ ಸಾಕಂತೆ 2 ತಿಂಗಳಲ್ಲಿ ತೂಕ ಇಳಿಸಬಹುದಂತೆ


    5) ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ: ನಿಯಮಿತ ವ್ಯಾಯಾಮವು ಮಧುಮೇಹ ಮತ್ತು ಪ್ರಿಡಿಯಾಬಿಟಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳು ಸಾಬೀತುಪಡಿಸಿವೆ.


    6) ತೂಕ ಇಳಿಕೆ: ತೂಕ ಇಳಿಕೆ ಮಾಡಿಕೊಳ್ಳಬೇಕು ಎಂದು ಬಯಸುವವರು ಪ್ರತಿನಿತ್ಯ ವ್ಯಾಯಾಮ ಮಾಡುವುದು ಬಹುಮುಖ್ಯ.. ತೂಕ ಇಳಿಕೆ ಮಾಡಿಕೊಳ್ಳಲು ಆರೋಗ್ಯಕರವಾದ ಆಹಾರ ಪದಾರ್ಥ ಸೇವನೆ ಮಾಡುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಉತ್ತಮ.. ನಿಮ್ಮ ಬಿಡುವಿಲ್ಲದ ವೇಳೆಯಲ್ಲಿ ನೀವು ಕೇವಲ 10 ನಿಮಿಷ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು.

    Published by:ranjumbkgowda1 ranjumbkgowda1
    First published: