Fitness: 40ನೇ ವಯಸ್ಸಿನಲ್ಲಿ ವರ್ಕೌಟ್ ಆರಂಭಿಸುವವರಿಗೆ ಇಲ್ಲಿವೆ ಕೆಲವು ಟಿಪ್ಸ್​..!

ಒಂದು ಕಡೆ ದೇಹಕ್ಕೆ ವಯಸ್ಸು ಆಗುತ್ತಿರುವ ಚಿಂತೆಯಾಚರೆ, ಮತ್ತೊಂದು ಕಡೆ ಆರೋಗ್ಯದತ್ತ ಕಾಳಜಿ ಹೆಚ್ಚುತ್ತದೆ. ಹೀಗಾಗಿಯೇ ವಯಸ್ಸು 40ರ ಗಡಿ ದಾಟುತ್ತಿದ್ದಂತೆಯೇ ವ್ಯಾಯಾಮ ಮಾಡಲು ಸಾಕಷ್ಟು ಮಂದಿ ಮುಂದಾಗುತ್ತಾರೆ. ಅಂತಹವರಿಗೆ ಇಲ್ಲಿವೆ ಕೆಲವು ಟಿಪ್ಸ್​..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮಲ್ಲಿ ಹೆಚ್ಚಿನವರಿಗೆ, 40ನೇ ಹುಟ್ಟುಹಬ್ಬ ಭಯದ ಭಾವನೆಯನ್ನು ಹುಟ್ಟಿಸುತ್ತದೆ. ಸಾಮಾನ್ಯವಾಗಿ 20 ಮತ್ತು 30ರ ವರ್ಷಗಳನ್ನು ನಮ್ಮ ವೃತ್ತಿಜೀವನದ ಮೇಲೆ ಕೇಂದ್ರೀಕರಿಸುತ್ತೇವೆ. ದೇಹ, ಆರೋಗ್ಯ, ವ್ಯಾಯಾಮ ಎಲ್ಲವನ್ನು ಕಡೆಗಣಿಸಿ ದುಡಿಮೆಯನ್ನೇ ಮುಖ್ಯ ಭಾಗವನ್ನಾಗಿ ಮಾಡಿಕೊಳ್ಳುತ್ತೇವೆ. ಹಾಗಾಗಿ ನಾವು 40 ಆಗುತ್ತಿದ್ದಂತೆ ಆತಂಕ ಶುರುವಾಗುತ್ತದೆ. 

ಒಂದು ಕಡೆ ದೇಹಕ್ಕೆ ವಯಸ್ಸು ಆಗುತ್ತಿರುವ ಚಿಂತೆಯಾಚರೆ, ಮತ್ತೊಂದು ಕಡೆ ಆರೋಗ್ಯದತ್ತ ಕಾಳಜಿ ಹೆಚ್ಚುತ್ತದೆ. ಹೀಗಾಗಿಯೇ ವಯಸ್ಸು 40ರ ಗಡಿ ದಾಟುತ್ತಿದ್ದಂತೆಯೇ ವ್ಯಾಯಾಮ ಮಾಡಲು ಸಾಕಷ್ಟು ಮಂದಿ ಮುಂದಾಗುತ್ತಾರೆ. ಅಂತಹವರಿಗೆ ಇಲ್ಲಿವೆ ಕೆಲವು ಟಿಪ್ಸ್​..!

Things You Need to Know About Doing Aerobic Exercises
ಸಾಂದರ್ಭಿಕ ಚಿತ್ರ


ದೈಹಿಕ ಕಸರತ್ತು ಪ್ರಾರಂಭಿಸಲು 40 ತುಂಬಾ ತಡವಾಯಿತೇ?

ಶಾರೀರಿಕವಾಗಿ ಸಕ್ರಿಯವಾಗಲು 40 ಎಂದಿಗೂ ತಡವಾಗಿಲ್ಲ ಎಂದು ಅಧ್ಯಯನಗಳು ತೋರಿಸುತ್ತವೆ. ಈ ಬಗ್ಗೆ 2014ರಲ್ಲಿ ಫ್ರಾನ್ಸ್‍ನ ರೆನ್ನೆಸ್ ವಿಶ್ವವಿದ್ಯಾಲಯದ ಸಂಶೋಧಕರು ಸಂಶೋಧನೆ ನಡೆಸಿದ್ದರು. ಸಂಶೋಧಕರು 55-70 ವಯಸ್ಸಿನ 40 ಆರೋಗ್ಯವಂತ ಪುರುಷರ ಮೇಲೆ ಓಟ ಮತ್ತು ಸೈಕ್ಲಿಂಗ್ ಪರಿಣಾಮಗಳನ್ನು ಮೌಲ್ಯಮಾಪನ ಮಾಡಿದರು. ಭಾಗವಹಿಸುವವರಲ್ಲಿ ಅರ್ಧದಷ್ಟು ಜನರು 30 ವರ್ಷಕ್ಕಿಂತ ಮುಂಚೆಯೇ ಓಡುವುದನ್ನು ಅಥವಾ ಸೈಕ್ಲಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಉಳಿದ ಅರ್ಧದವರು 40 ವರ್ಷ ವಯಸ್ಸಿನ ನಂತರ ಓಟ, ಸೈಕ್ಲಿಂಗ್ ಪ್ರಾರಂಭಿಸಿದರು. ಒಟ್ಟಾರೆ ಎರಡೂ ಗುಂಪುಗಳು ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದೇ ರೀತಿಯ ಪ್ರಯೋಜನಗಳನ್ನು ಪಡೆದಿವೆ ಎಂದು ಅವರ ಹೃದಯ ಬಡಿತ ಮತ್ತು ರಕ್ತದೊತ್ತಡದಿಂದ ಅಳೆಯಲಾಯಿತು.

ಇದನ್ನೂ ಓದಿ:  Fitness Freak Actors: ಫಿಟ್ನೆಸ್​ ಫ್ರೀಕ್​ ಟಾಲಿವುಡ್​ ನಟರು ಇವರೇ ನೋಡಿ..!

40ರ ವಯಸ್ಸಿನಲ್ಲಿ ನಿಮ್ಮ ದೇಹಕ್ಕೆ ಏನಾಗುತ್ತದೆ?

ಒಂದು, ನಿಮ್ಮ ಚಯಾಪಚಯವು ನಿಧಾನವಾಗುವುದಿಲ್ಲ. ಡ್ಯೂಕ್ ವಿಶ್ವವಿದ್ಯಾಲಯದ ಸಂಶೋಧಕರು ದೇಹದ ಚಯಾಪಚಯವು 20 ರಿಂದ 60 ವರ್ಷಗಳವರೆಗೆ ಹೆಚ್ಚು ಕಡಿಮೆ ಸ್ಥಿರವಾಗಿರುತ್ತದೆ ಎಂದು ಕಂಡುಹಿಡಿದಿದ್ದಾರೆ. ಆದರೆ ನಿಮ್ಮ ಮಧ್ಯವಯಸ್ಸಿನಲ್ಲಿ ತೂಕ ಹೆಚ್ಚಿಸಲು ನಿಮ್ಮ ಚಯಾಪಚಯವನ್ನು ದೂಷಿಸುವುದಿಲ್ಲವಾದರೂ ಸ್ನಾಯುಗಳ ವಿಚಾರದಲ್ಲಿ ಹಾಗಾಗುವುದಿಲ್ಲ. "ನೀವು ಹೆಚ್ಚು ಸ್ನಾಯುಗಳನ್ನು ಹೊಂದಿದ್ದರೆ, ಬಲಶಾಲಿಯಾಗಿದ್ದರೆ ಸೇವಿಸುವ ಆಹಾರವನ್ನು ಜೀರ್ಣಿಸಿಕೊಳ್ಳಲು ನಿಮ್ಮ ದೇಹಕ್ಕೆ ಸುಲಭವಾಗುತ್ತದೆ. ಆದರೆ ನೀವು ವಯಸ್ಸಾದಂತೆ, ನೀವು ಸ್ನಾಯುಗಳನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಸ್ನಾಯುಗಳ ಬೆಳವಣಿಗೆಯು ಕಷ್ಟವಾಗುತ್ತದೆ. ಅದು ನಿಮ್ಮ ತೂಕವನ್ನು ವೇಗವಾಗಿ ಕಳೆದುಕೊಳ್ಳುವುದನ್ನು ತಡೆಯುತ್ತದೆ. ಸ್ನಾಯುಗಳ ನಷ್ಟವು ದೇಹವನ್ನು ಗಾಯಗಳಿಗೆ ಒಳಗಾಗುವಂತೆ ಮಾಡುತ್ತದೆ ಎಂದು ಆಲ್ಫಾ ಕೋಚ್‍ನ ಸಂಸ್ಥಾಪಕ ಮತ್ತು ಸಿಇಒ ಕೇತನ್ ಮಾವಿನ್ಕುರ್ವೆ ಹೇಳುತ್ತಾರೆ. ಇದು ಫಿಟ್ನೆಸ್ ಸ್ಟಾರ್ಟ್ ಅಪ್ ಆಗಿದ್ದು ಅದು ಹೈಪರ್ ವೈಯುಕ್ತಿಕ ಫಿಟ್ನೆಸ್ ತರಬೇತಿ ಮತ್ತು ಪೌಷ್ಠಿಕಾಂಶದ ಸಲಹೆಯನ್ನು ನೀಡುತ್ತದೆ ಮತ್ತು ತನ್ನ ಗ್ರಾಹಕರಿಗೆ ಆರೋಗ್ಯಕರ ಅಭ್ಯಾಸಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

40 ರಿಂದ ವರ್ಕೌಟ್ ಹೇಗೆ ಪ್ರಾರಂಭಿಸುತ್ತೀರಿ?

1. ನಿಮ್ಮ ಗುರಿ ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಒಪ್ಪಿಕೊಳ್ಳಿ

ನೀವು ಯಾವುದೇ ವರ್ಕೌಟ್ ಮಾಡಲು ಹೊರಟಿದ್ದರೂ, ನಿಮ್ಮ ಗುರಿಯನ್ನು ಸಾಧಿಸಲು ನಿಮಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಒಪ್ಪಿಕೊಳ್ಳಿ ಎಂದು ಸಿದ್ಧಾರ್ಥ್ ಬಂಗೇರಾ ಹೇಳುತ್ತಾರೆ. "ನೀವು ತುಂಬಾ ಸೋಮಾರಿಗಳಾಗಿದ್ದರೆ ನಿಮ್ಮ ಗುರಿ ಸಾಧಿಸಲು ಸಮಯ ತೆಗೆದುಕೊಳ್ಳುತ್ತೀರಿ" ಎನ್ನುತ್ತಾರೆ.

2. ಬೃಹತ್ ಕ್ಯಾಲೋರಿ-ಬರ್ನರ್ ಎಂದು ಪ್ರಚಾರ ಮಾಡುವ ತಾಲೀಮು ತಪ್ಪಿಸಿ

"ನೀವು ಎಷ್ಟು ಚಿಕ್ಕವರಾಗಿದ್ದರೂ ಅಥವಾ ಫಿಟ್ ಆಗಿದ್ದರೂ ಪರವಾಗಿಲ್ಲ, ನಿಮ್ಮ ದೇಹವು ನಿರ್ದಿಷ್ಟ ಪ್ರಮಾಣದ ಕ್ಯಾಲೊರಿಗಳನ್ನು ಮಾತ್ರ ಸುಡುತ್ತದೆ ಮತ್ತು ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ" ಎಂದು ಆಲ್ಫಾ ಕೋಚ್‍ನ ಸಹ-ಸಂಸ್ಥಾಪಕ ಮತ್ತು ಉತ್ಪನ್ನ ಮುಖ್ಯಸ್ಥ ವಿಷ್ಣು ವೇಣುಗೋಪಾಲ್ ಹೇಳುತ್ತಾರೆ. ಒಂದು ತಾಲೀಮು ಊಹಿಸಲಾರದಷ್ಟು ಕ್ಯಾಲೊರಿಗಳನ್ನು ಸುಡುತ್ತದೆ ಎಂದು ಹೇಳಿಕೊಂಡರೆ, ಅದು ತುಂಬಾ ತೀವ್ರವಾಗಿರುತ್ತದೆ ಮತ್ತು ಗಾಯಕ್ಕೆ ಕಾರಣವಾಗಬಹುದು.

3. ಸಣ್ಣದಾಗಿ ಪ್ರಾರಂಭಿಸಿ

ವೈಯಕ್ತಿಕ ತರಬೇತುದಾರರನ್ನು ನೇಮಿಸಿಕೊಳ್ಳುವುದು ಮತ್ತು ಎಮ್-ಡಬ್ಲ್ಯೂ-ಎಫ್ ದಿನಚರಿ ಪ್ರಾರಂಭಿಸುವುದು ಬಹುಶಃ ತಾಲೀಮು ದಿನಚರಿಯನ್ನು ಪ್ರಾರಂಭಿಸಲು ಸೋಮಾರಿ ಮಾರ್ಗವಾಗಿದೆ. ಬದಲಾಗಿ, ಪೌಷ್ಟಿಕತಜ್ಞೆ ದೀಪ್ತಿ ಪಟೋಲೆ ಮಾಯೆಂಕಾರ್ ನಿಜವಾಗಿಯೂ ವ್ಯಾಯಾಮಗಳನ್ನು ಹಗುರವಾಗಿ ಪ್ರಾರಂಭಿಸಲು ಸೂಚಿಸುತ್ತಾರೆ. "ನಿಮ್ಮ ಪ್ರತಿ ಹೆಜ್ಜೆಗಳನ್ನು ಎಣಿಸುವ ಮೂಲಕ ತಾಲೀಮು ಪ್ರಾರಂಭಿಸಿ ಮತ್ತು ನೀವು ಎಷ್ಟು ದೂರ ಹೋಗಬಹುದು ಎಂಬುದನ್ನು ನೀವೇ ನೋಡಿ. ನಂತರ, ಕಾಲಾನಂತರದಲ್ಲಿ, ನಿಮ್ಮ ಹೆಜ್ಜೆಯ ಎಣಿಕೆಯನ್ನು ಹೆಚ್ಚಿಸಲು ಪ್ರಯತ್ನಿಸಿ. ಇದು ನೀವು ಎಲ್ಲಿದ್ದೀರಿ ಮತ್ತು ಎಷ್ಟು ದೂರ ಬಂದಿದ್ದೀರಿ ಎಂಬ ಕಲ್ಪನೆಯನ್ನು ನೀಡುತ್ತದೆ "ಎಂದು ಅವರು ಹೇಳುತ್ತಾರೆ.

4. ಸ್ಥಿರವಾಗಿರಿ

ನೀವು ಮಾಡಬೇಕಾಗಿರುವುದು ಪ್ರತಿ ವಾರ 45 ನಿಮಿಷಗಳ ಅವಧಿಯ ಮೂರು ಲಘು ತಾಲೀಮುಗಳ ಗುರಿಯನ್ನು ನೀವು ಇಟ್ಟುಕೊಂಡರೆ ಸಾಕು ಎನ್ನುತ್ತಾರೆ ಆಲ್ಫಾ ಕೋಚ್‍ನ ವಿಷ್ಣು ವೇಣುಗೋಪಾಲ್. ಇದ್ದಕ್ಕಿದ್ದಂತೆ ಯಾವುದೇ ತೀವ್ರವಾದ ವ್ಯಾಯಾಮವನ್ನು ತೆಗೆದುಕೊಳ್ಳುವುದು ನಿಮಗೆ ತೊಂದರೆಯಾಗಬಹುದು.

5. ಶಕ್ತಿ-ತರಬೇತಿಯನ್ನು ಪ್ರಾರಂಭಿಸಿ

ದೈನಂದಿನ ಚಟುವಟಿಕೆಗಳಲ್ಲಿ ಶಕ್ತಿ-ತರಬೇತಿಯನ್ನು ಅಳವಡಿಸಲು ಕೇತನ್ ಮಾವಿನ್ಕುರ್ವೆ ಶಿಫಾರಸು ಮಾಡುತ್ತಾರೆ. ಸಾಮಥ್ರ್ಯ-ತರಬೇತಿಯು ನಿಮಗೆ ಸ್ನಾಯುವಿನ ದ್ರವ್ಯರಾಶಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ನಿಮ್ಮ ಸ್ನಾಯುಗಳು ಬಲವಾಗುತ್ತವೆ, ನೀವು ಗಾಯಗೊಳ್ಳುವ ಸಾಧ್ಯತೆ ಕೂಡ ಕಡಿಮೆಯಾಗುತ್ತದೆ. ನಿಮ್ಮ ಸ್ಥಳೀಯ ಕಿರಾಣಿ ಅಂಗಡಿಗೆ ಕಾರನ್ನು ತೆಗೆದುಕೊಳ್ಳುವ ಬದಲು ನಡೆದುಕೊಂಡು ಹೋಗುವುದಕ್ಕೆ ಪ್ರಾಶಸ್ತ್ಯ ನೀಡಿ. ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಲಿಫ್ಟ್ ಬದಲು ಮೆಟ್ಟಿಲು ಹತ್ತಿ.

6. ತಿನ್ನುವುದರ ಮೇಲೆ ಗಮನವಿರಲಿ

ತಾಲೀಮಿಗಿಂತ ನಿಮ್ಮ ತೂಕ ಇಳಿಸುವ ಪ್ರಯಾಣದಲ್ಲಿ ಆಹಾರವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದಾಗ್ಯೂ ಒಂದು ದಶಕ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಿಂದಲೂ ಮುಂದುವರೆಸಿರುವ ಅಭ್ಯಾಸಗಳನ್ನು ಬಿಡುವುದು ವ್ಯಾಯಾಮ ಮಾಡುವುದಕ್ಕಿಂತ ಸುಲಭವಾಗಿದೆ.

ಇದನ್ನೂ ಓದಿ: Sunny Leone: ಫಿಟ್ನೆಸ್​ಗಾಗಿ ಸೈಕ್ಲಿಂಗ್ ಮಾಡಲಾರಂಭಿಸಿದ ಮಾದಕ ನಟಿ ಸನ್ನಿ ಲಿಯೋನ್​..!

"ಆಲ್ಫಾ ಕೋಚ್‍ನಲ್ಲಿ, ನಾವು ನಮ್ಮ ಗ್ರಾಹಕರ ದಿನಚರಿಯಲ್ಲಿ ಸಣ್ಣ ಬದಲಾವಣೆಗಳನ್ನು ಸೇರಿಸುತ್ತೇವೆ" ಎಂದು ಮಾವಿನ್ಕುರ್ವೆ ಅವರು ಹೇಳುತ್ತಾರೆ. "ನಿಮಗೆ ಸಲಾಡ್ ತಿನ್ನುವ ಅಭ್ಯಾಸವಿಲ್ಲದಿದ್ದರೆ, ವಾರಕ್ಕೆ ಕೇವಲ ಎರಡು ಸಲಾಡ್ ಡಿನ್ನರ್‍ಗಳನ್ನು ಮಾಡುವಂತೆ ನಾವು ಕೇಳುತ್ತೇವೆ. ನೀವು ದಿನಕ್ಕೆ ಮೂರು ಸಿಗರೇಟು ಸೇದುತ್ತಿದ್ದರೆ, ಒಂದಕ್ಕೆ ಕಡಿವಾಣ ಹಾಕುವಂತೆ ನಾವು ಕೇಳುತ್ತೇವೆ ಎನ್ನುತ್ತಾರೆ.
Published by:Anitha E
First published: