Wooden Tableware: ಮರದ ಊಟದ ಪರಿಕರಗಳು ಪರಿಸರ, ಆರೋಗ್ಯದ ದೃಷ್ಟಿಯಿಂದ ಎಷ್ಟು ಸುರಕ್ಷಿತವಾದುದು?

ಮರವು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಒಳಗೊಂಡಿದೆ. ಆಹಾರ ಮಾಲಿನ್ಯದಿಂದ ಉಂಟಾಗುವ ರೋಗಗಳನ್ನು ಕಡಿಮೆ ಮಾಡುವ ಮರವು ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಜೀವಿಗಳು ಉಲ್ಬಣಗೊಳ್ಳುವುದನ್ನು ತಡೆಯುತ್ತದೆ.

ಮರದ ಊಟದ ಪರಿಕರಗಳು

ಮರದ ಊಟದ ಪರಿಕರಗಳು

  • Share this:
    ಪ್ಲಾಸ್ಟಿಕ್ ವಿಷಕಾರಿಯಾಗಿದ್ದು (Plastic Is Poision) ಹಾಗೂ ಮರುಬಳಕೆ ಮಾಡಲು ಸಾಧ್ಯವಿಲ್ಲ. ಅಡುಗೆ ಮನೆಯಲ್ಲಿ ಪ್ಲಾಸ್ಟಿಕ್ ಬಳಕೆ ಅದೇ ರೀತಿ ಊಟದ ಟೇಬಲ್‌ಗಳನ್ನು ಆದಷ್ಟು ಪ್ಲಾಸ್ಟಿಕ್‌ನಿಂದ ಮುಕ್ತವಾಗಿಸಿಕೊಳ್ಳಬೇಕು. ನಮ್ಮ ಆರೋಗ್ಯಕ್ಕೆ ಹಾಗೂ ಪರಿಸರಕ್ಕೆ ಪ್ಲಾಸ್ಟಿಕ್ ಹಾನಿಕಾರಕವಾಗಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಪ್ಲಾಸ್ಟಿಕ್ ಮುಕ್ತ ಊಟದ ಪರಿಕರಗಳು ಹಾಗೂ ಅಡುಗೆ ಮನೆಯ ಪರಿಕರಗಳು ಆರೋಗ್ಯ ವರ್ಧಿಸುವಲ್ಲಿ ಪ್ರಮುಖವಾಗಿರುವುದು ಮಾತ್ರವಲ್ಲದೆ ಅಡುಗೆ ಕೌಶಲ್ಯವನ್ನು ವರ್ಧಿಸಲಿವೆ.

    ಈ ದಿಸೆಯಲ್ಲಿ ಮರದಿಂದ (Wooden Tableware) ತಯಾರಿಸಿದ ಊಟದ ಪರಿಕರಗಳು ಅದೇ ರೀತಿ ಅಡುಗೆ ಮನೆಯ ಪರಿಕರಗಳಲ್ಲಿ ಹೆಚ್ಚಾಗಿ ಮರದ ಸಾಮಾಗ್ರಿಗಳನ್ನು ಬಳಸಿಕೊಳ್ಳಬೇಕು ಏಕೆ ಎಂಬುದನ್ನು ತಿಳಿದುಕೊಳ್ಳೋಣ. ಅಡುಗೆ ಮನೆಗಳಲ್ಲಿ ಹಾಗೂ ಊಟದ ಪರಿಕರಗಳಲ್ಲಿ ಮರದ ಉತ್ಪನ್ನವನ್ನು ಬಳಸುವುದರಿಂದ ಹೊಸದಾದ ನಾವೀನ್ಯತೆ ಏರ್ಪಡುತ್ತದೆ. ಜೊತೆಗೆ ಅಂದವಾಗಿ ಕೂಡ ಕಾಣುತ್ತದೆ. ಇವುಗಳು ಬಳಸಲು ಸುಲಭವಾಗಿರುತ್ತವೆ ಹಾಗೂ ಆರೋಗ್ಯಕ್ಕೂ ಸುರಕ್ಷಿತವಾಗಿರುತ್ತವೆ. ದೀರ್ಘಕಾಲ ಬಾಳಿಕೆ ಬರುವ ಮರದ ಪರಿಕರಗಳನ್ನು ತೊಳೆಯುವುದು ಸುಲಭವಾಗಿದೆ.

    ಮರದ ಪರಿಕರಗಳನ್ನು ಬಳಸುವುದರಿಂದ ಉಂಟಾಗುವ ಪ್ರಯೋಜನಗಳೇನು?

    ನಿಮ್ಮ ಅಡುಗೆ ಮನೆಯ ಶೆಲ್ಫ್‌ನಲ್ಲಿ ಮರದಿಂದಲೇ ತಯಾರಿಸಿದವುಗಳನ್ನು ಪರಿಕರಗಳನ್ನು ಹಾಗೂ ಊಟದ ಪರಿಕರಗಳಲ್ಲಿ ಹೆಚ್ಚಾಗಿ  ಏಕೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

    ಪ್ರತಿಕ್ರಿಯಾತ್ಮಕವಲ್ಲ ಹಾಗೂ ಸುರಕ್ಷಿತವಾದುದು

    ಮರವು ನೈಸರ್ಗಿಕವಾಗಿದ್ದು, ವಿಷಕಾರಿಯಲ್ಲ ಹಾಗೂ ಪ್ರತಿಕ್ರಿಯಾತ್ಮಕವಲ್ಲ ಎಂಬ ಅಂಶವನ್ನು ಗಮನಿಸಬೇಕು. ಮರದ ಪರಿಕರಗಳು ಆಹಾರದಲ್ಲಿ ಇರುವ ಆಮ್ಲಗಳೊಂದಿಗೆ ಪ್ರತಿಕ್ರಿಯಿಸುವುದಿಲ್ಲ. ಇದರಿಂದ ಆಹಾರ ಸೇವನೆಯನ್ನು ಸುರಕ್ಷಿತವಾಗಿಸುತ್ತವೆ.

    ವಾಹಕವಲ್ಲ

    ಮರ ವಾಹಕವಲ್ಲವಾದ್ದರಿಂದ ಮರದ ಅಡುಗೆ ಸಾಮಾನುಗಳು ಬಳಸಲು ಸುರಕ್ಷಿತವಾಗಿರುತ್ತವೆ. ಕಬ್ಬಿಣ ಅಥವಾ ಸ್ಟೀಲ್ ಪಾತ್ರೆಗಳನ್ನು ಬಳಸುವ ಸಮಯದಲ್ಲಿ ಗಾಯಗಳು ಸಂಭವಿಸುವ ಅಪಾಯವಿರುತ್ತದೆ.

    ದೀರ್ಘಕಾಲ ಬಾಳಿಕೆ ಬರುತ್ತದೆ

    ದೀರ್ಘಕಾಲ ಬಾಳಿಕೆ ಬರುವ ಅಡುಗೆ ಪರಿಕರಗಳನ್ನು ಬಳಸುವ ಮೂಲಕ ಪರಿಸರ ಸಂರಕ್ಷಣೆ ನಡೆಸುವುದು ಆದ್ಯ ಕರ್ತವ್ಯವಾಗಿದೆ. ಸ್ಟೀಲ್ ಅಥವಾ ಕಬ್ಬಿಣದಂತೆಯೇ, ಮರದ ಪರಿಕರಗಳು ಹಲವಾರು ವರ್ಷಗಳವರೆಗೆ ತುಕ್ಕು ಹಿಡಿಯುವ ಅಪಾಯವಿಲ್ಲದೆಯೇ ಬಳಸಬಹುದಾಗಿದೆ. ಇದರಿಂದ ಪರಿಸರ ಸ್ನೇಹಿಯಾದ ವಸ್ತುಗಳ ಬಳಕೆಯನ್ನು ನಾವು ಮಾಡಬಹುದು ಜೊತೆಗೆ ಬಳಕೆಯನ್ನು ಸಮರ್ಥನೀಯವಾಗಿಸುತ್ತದೆ.

    ನೈಸರ್ಗಿಕ ಹಾಗೂ ಬ್ಯಾಕ್ಟೀರಿಯಾ ವಿರೋಧಿ

    ಮರವು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಒಳಗೊಂಡಿದೆ. ಆಹಾರ ಮಾಲಿನ್ಯದಿಂದ ಉಂಟಾಗುವ ರೋಗಗಳನ್ನು ಕಡಿಮೆ ಮಾಡುವ ಮರವು ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಜೀವಿಗಳು ಉಲ್ಬಣಗೊಳ್ಳುವುದನ್ನು ತಡೆಯುತ್ತದೆ.

    ಹೆಚ್ಚು ಸದ್ದು ಮಾಡುವುದಿಲ್ಲ:

    ಮರದ ಊಟದ ಮೇಜು ಇಲ್ಲವೇ ಪರಿಕರಗಳು ಅಧಿಕ ಸಪ್ಪಳವನ್ನುಂಟು ಮಾಡುವುದಿಲ್ಲ. ಇವುಗಳನ್ನು ನಿರ್ವಹಿಸುವುದು ಸುಲಭ ಹಾಗೂ ಪ್ರಕೃತಿಯೊಂದಿಗಿನ ಸಂಪರ್ಕವನ್ನು ಮರದ ಪರಿಕರಗಳು ಉಂಟುಮಾಡುತ್ತವೆ. ಇದರಿಂದ ಪರಿಸರ ಹಾಗೂ ಅಡುಗೆ ಕೋಣೆ ಕೂಡ ಸಪ್ಪಳವಾಗಿರುವುದಿಲ್ಲ. ರಚನಾತ್ಮಕ ವಿನ್ಯಾಸಗಳನ್ನು ಮರದ ಪರಿಕರಗಳು ಒಳಗೊಂಡಿರುವುದರಿಂದ ಕಲಾತ್ಮಕ ಕೆತ್ತನೆಗಳು ಹಾಗೂ ವಿನ್ಯಾಸಗಳನ್ನು ಮರದ ಪರಿಕರಗಳಲ್ಲಿ ಕಾಣಬಹುದಾಗಿದೆ. ಕಲಾತ್ಮಕವಾಗಿ ಆಹ್ಲಾದಮಯವಾಗಿರುವ ಈ ಪರಿಕರಗಳು ಮನಸ್ಸಿನ ಮೇಲೂ ಧನಾತ್ಮಕ ಪ್ರಭಾವನ್ನುಂಟು ಮಾಡುತ್ತವೆ.

    ಇದನ್ನು ಓದಿ: Explainer: ಭಾರತೀಯ ಬಾಹ್ಯಾಕಾಶ ಸಂಘ ಎಂದರೇನು? ಬಾಹ್ಯಾಕಾಶ ಕ್ಷೇತ್ರಕ್ಕೆ ಇದು ಹೇಗೆ ಮಹತ್ವದ್ದಾಗಿದೆ?

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
    Published by:HR Ramesh
    First published: