Dosa Health Benefits: ದೋಸೆ ಬರೀ ರುಚಿಕರ ಮಾತ್ರವಲ್ಲ ಆರೋಗ್ಯಕರ ಕೂಡ

Health benefits Of Dosa: ನಾವು ಸಾಮಾನ್ಯವಾಗಿ ಮನೆಯಲ್ಲಿ ದೋಸೆಯನ್ನು ತಯಾರು ಮಾಡುತ್ತೇವೆ. ಗರಿ ಗರಿಯಾದ ಮಸಾಲೆ ದೋಸೆಯಿಂದ ಹಿಡಿದು ದಪ್ಪನೆಯ ಈರುಳ್ಳಿ ದೋಸೆಯವರೆಗೂ ನಾವು ವಿವಿಧ ರೀತಿಯನ್ನು ಮಾಡುತ್ತೇವೆ. ಪ್ರತಿಯೊಬ್ಬರಿಗೂ ದೋಸೆ(Dosa) ಎಂದರೆ ಇಷ್ಟ. ಕೆಲವರು ಹೋಟೆಲ್​ಗೆ ಹೋಗಿ ಸಹ ದೋಸೆಯನ್ನು ತಿನ್ನುತ್ತಾರೆ. ಅದು ಟೇಸ್ಟಿ. ಆದರೆ ನಿಮಗೆ ಗೊತ್ಥಾ ದೋಸೆ ಎಷ್ಟು ಟೇಸ್ಟಿಯೋ ಅಷ್ಟು ಆರೋಗ್ಯಕರ(Health Benefits) ಅಂತ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಹಾರವೇ ಜೀವನ(Food Is Life) ಮತ್ತು ಇದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಈ ಮಧ್ಯೆ, ಆಹಾರವು ಆರೋಗ್ಯಕರವಾಗಿರಬೇಕು ಎಂಬುದು ಸತ್ಯ. ನೀವು ಆರೋಗ್ಯವಾಗಿರಲು ಆರೋಗ್ಯಕರವಾದ ಆಹಾರವನ್ನು ತಿನ್ನಬೇಕು.  ನೀವು ಏನೇ ತಿನ್ನುತ್ತಿದ್ದರೂ ಅದು ನೇರವಾಗಿ ನಿಮ್ಮ ದೇಹದ ಮೇಲೆ ಧನಾತ್ಮಕ ಅಥವಾ ನಕಾರಾತ್ಮಕವಾಗಿ ಅರ್ಥದಲ್ಲಿ ಪರಿಣಾಮ ಬೀರುತ್ತದೆ. ಹಾಗಾಗಿ ಆರೋಗ್ಯದ ಮೇಲೆ ಆಹಾರದ ಪರಿಣಾಮವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂಬುದು ಮುಖ್ಯ. ಹಾಗೆಯೇ ನಾವು ಸಾಮಾನ್ಯವಾಗಿ ಮನೆಯಲ್ಲಿ ದೋಸೆಯನ್ನು ತಯಾರು ಮಾಡುತ್ತೇವೆ. ಗರಿ ಗರಿಯಾದ ಮಸಾಲೆ ದೋಸೆಯಿಂದ ಹಿಡಿದು ದಪ್ಪನೆಯ ಈರುಳ್ಳಿ ದೋಸೆಯವರೆಗೂ ನಾವು ವಿವಿಧ ರೀತಿಯನ್ನು ಮಾಡುತ್ತೇವೆ. ಪ್ರತಿಯೊಬ್ಬರಿಗೂ ದೋಸೆ(Dosa) ಎಂದರೆ ಇಷ್ಟ. ಕೆಲವರು ಹೋಟೆಲ್​ಗೆ ಹೋಗಿ ಸಹ ದೋಸೆಯನ್ನು ತಿನ್ನುತ್ತಾರೆ. ಅದು ಟೇಸ್ಟಿ. ಆದರೆ ನಿಮಗೆ ಗೊತ್ಥಾ ದೋಸೆ ಎಷ್ಟು ಟೇಸ್ಟಿಯೋ ಅಷ್ಟು ಆರೋಗ್ಯಕರ(Health Benefits) ಅಂತ. ಹೌದು. ದೋಸೆ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.

ದೋಸೆಯ ಆರೋಗ್ಯ ಪ್ರಯೋಜನಗಳು

 ಜೀರ್ಣಿಸಿಕೊಳ್ಳಲು ಸುಲಭ

ನೀವು ದೋಸೆಯನ್ನು ತಿನ್ನುವುದರಿಂದ ಸಿಗುವ ಉತ್ತಮ ಲಾಭ ಎಂದರೆ ಅದು ಜೀರ್ಣಿಸಿಕೊಳ್ಳಲು ಅತ್ಯಂತ ಸುಲಭ. ಅಲ್ಲದೇ ಅದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಸಹ ಪರಿಣಾಮ ಬೀರುತ್ತದೆ. ಇದನ್ನು ಸಾಮಾನ್ಯವಾಗಿ ಅಕ್ಕಿ ಮತ್ತು  ಉದ್ದಿನ ಬೇಳೆಯನ್ನು ಬಳಸಿ  ತಯಾರಿಸಲಾಗುತ್ತದೆ, ಇದು ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿದ್ದು. ನಮ್ಮ ಜೀರ್ಣಕ್ರಿಯೆಯನ್ನ ಹೆಚ್ಚು ಮಾಡುತ್ತದೆ.  

ಇದನ್ನೂ ಓದಿ: ಅಣಬೆ ಅಂದ್ರೆ ಮೂಗು ಮುರಿತೀರಾ? ಹಾಗಾದ್ರೆ ಇದನ್ನು ಓದಿ

ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲ

ನಿಮಗೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವುದು ಸಾಮಾನ್ಯ. ಹಾಗಾಗಿ ದೋಸೆಯ ಈ ಪ್ರಯೋಜನ ನಿಮಗೆ ನಿಜಕ್ಕೂ ಉಪಯುಕ್ತ. ದೋಸೆ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿದ್ದು, ಇದು ನಿಮ್ಮ ದೇಹಕ್ಕೆ ವಿವಿಧ ಕಾರ್ಯಗಳನ್ನು ನಿರ್ವಹಿಸಲು ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ತೂಕ ಇಳಿಸುವ ಆಹಾರದಲ್ಲಿರುವ ಜನರಿಗೆ ದೋಸೆ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಹೇಳಲಾಗುತ್ತದೆ.  

ಹೆಚ್ಚಿನ ಪ್ರೋಟೀನ್​ ಇರುತ್ತದೆ

ನಿಮ್ಮ ಆಹಾರದಲ್ಲಿ ಪ್ರೋಟೀನ್ ಸೇವನೆ ಅಗತ್ಯ ಎಂಬುದು ಎಲ್ಲರಿಗೂ ತಿಳಿದಿದೆ. ನಿಮಗೆ ಹೆಚ್ಚು ಪ್ರೋಟೀನ್ ಪಡೆಯಲು ದೋಸೆ ಸಹಾಯ ಮಾಡುತ್ತದೆ.  ಪ್ರೋಟೀನ್ ನಿಮ್ಮ ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸಲು ಅಗತ್ಯವಾದ ದೇಹದ ಪೋಷಕಾಂಶವಾಗಿದ್ದು, ದೋಸೆಯನ್ನು ನಿಮ್ಮ ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮಗೆ ಸಹಾಯ ಮಾಡುತ್ತದೆ. ಏಕೆಂದರೆ ಇದು ನಿಮ್ಮ ದೇಹಕ್ಕೆ ಮಧ್ಯಮ ಪ್ರಮಾಣದ ಪ್ರೋಟೀನ್ ಅನ್ನು ಪೂರೈಸುತ್ತದೆ ಎಂಬುದು ಸಾಬೀತಾಗಿದೆ.

ಕಡಿಮೆ ಕ್ಯಾಲೋರಿ ಇರುತ್ತದೆ

ನಿಜವಾಗಿಯೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವವರು ಮತ್ತು ಹೆಚ್ಚಿನ ಪ್ರಮಾಣದ ಕ್ಯಾಲೊರಿ ಅಂಶವಿರುವ ಆಹಾರವನ್ನು ಸೇವಿಸದಿರುವವರಿಗೆ ದೋಸೆ ಉತ್ತಮ ಆಯ್ಕೆ.  ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ, ಆದ್ದರಿಂದ ನೀವು ದೋಸೆಯನ್ನು ಯಾವುದೇ ಚಿಂತೆಯಿಲ್ಲದೆ ತಿನ್ನಬಹುದು. ಆರೋಗ್ಯಕರ ಆಹಾರವು ನಿಮ್ಮ ಹಸಿವನ್ನು ನೀಗಿಸುವಾಗ ಕಡಿಮೆ ಕ್ಯಾಲೋರಿ ಹೊಂದಿರಬೇಕು ಹಾಗಾಗಿ ಈ ದೋಸೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇದು ನಿಮ್ಮ ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕೊಬ್ಬು ಕಡಿಮೆ ಇರುತ್ತದೆ

ಇದನ್ನೂ ಓದಿ: ಕೇಕ್ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಂತೆ, ಏನೆಲ್ಲಾ ಪ್ರಯೋಜನಗಳಿವೆ ನೋಡಿ...

ದೋಸೆ  ಮಾಡಲು ಅತಿ ಕಡಿಮೆ ಪ್ರಮಾಣದ ಎಣ್ಣೆ ಅಥವಾ ತುಪ್ಪ ಬೇಕಾಗಿರುವುದರಿಂದ ಕೊಬ್ಬಿನ ಅಂಶ ಕಡಿಮೆ ಇರುತ್ತದೆ. ಅಲ್ಲದೇ ಇದು ತುಂಬಾ ಕಡಿಮೆ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ನಿಮಗೆ ಗೊತ್ತಿರುವ ಹಾಗೆ  ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬು ಹೃದಯ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೃದಯದ ಆರೋಗ್ಯದ ದೃಷ್ಟಿಯಿಂದ ಸಹ ದೋಸೆ ಉತ್ತಮ ಎಂಬುದು ಸಾಬೀತಾಗಿದೆ.
Published by:Sandhya M
First published: