Failed IVF: ಅದೆಷ್ಟೇ ಪ್ರಯತ್ನ ಮಾಡಿದ್ರು IVF ಫೇಲ್​ ಆಗ್ತಿದ್ರೆ ಏನು ಮಾಡಬೇಕು? ಡಾಕ್ಟರ್​ ಹೇಳೋದೇನು ಕೇಳಿ

Failed IVF Reason: ಇನ್ನು IVF ಫೇಲ್​ ಆದ ನಂತರ ಮತ್ತೊಂದು IVF ಪ್ರಯತ್ನಕ್ಕೆ ಹೋಗುವ ಮೊದಲು, ನಿಮ್ಮ ಮೊದಲ ಪ್ರಯತ್ನ ವಿಫಲವಾಗಿದ್ದು ಏಕೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ವೈದ್ಯರೊಂದಿಗೆ ವಿವರವಾದ ಚರ್ಚೆಯನ್ನು ನಡೆಸುವುದು ಸೂಕ್ತ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿನ ದಿನಗಳ ಜೀವನಶೈಲಿ (Lifestyle) ಹಾಗೂ ಆಹಾರದ (food) ಕಾರಣದಿಂದ ಗರ್ಭಿಣಿಯಾಗಲು (Pregnant) ಹಲವಾರು ಜನರು ಕಷ್ಟಪಡಬೇಕಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೆಲ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ ಬಹಳ ಪರದಾಡಬೇಕಾಗುತ್ತದೆ. ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿದ ನಂತರ ದಂಪತಿಗಳು ಇನ್-ವಿಟ್ರೊ ಫಲೀಕರಣವನ್ನು (IVF) ಆರಿಸಿಕೊಳ್ಳುತ್ತಾರೆ. IVF ಪ್ರಕ್ರಿಯೆಯು ಯಶಸ್ವಿಯಾಗದಿದ್ದರೂ ಸಹ, ನಿರಾಶೆ ಉಂಟಾಗುವುದು ಸಾಮಾನ್ಯವಾಗಿದೆ. ಇದೊಂದು ಭಾವನಾತ್ಮಕ ರೋಲರ್ ಕೋಸ್ಟರ್ ರೈಡ್ ಆಗಿದ್ದು, ನಿಭಾಯಿಸುವುದು ಸುಲಭವಲ್ಲ. ಆದರೆ ಯಶಸ್ಸು ಮತ್ತು ವೈಫಲ್ಯಗಳು ಜೀವನದ ಒಂದು ಭಾಗವಾಗಿದೆ. IVF ಫೇಲ್​ ಆದರೆ ಅದು ಪ್ರಪಂಚದ ಅಂತ್ಯವಲ್ಲ. ಈ ಸಮಯದಲ್ಲಿ ಏನು ಮಾಡಬೇಕು ಎನ್ನುವುದರ ಕುರಿತು ಬೆಂಗಳೂರಿನ ರಾಧಾಕೃಷ್ಣ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ ವಿದ್ಯಾ ಭಟ್ (Vidya Bhat) ​ ಮಾಹಿತಿ ನೀಡಿದ್ದಾರೆ.  

IVF ಸಹಾಯ ಮಾಡುತ್ತದೆ ಎಂಬುದರಲ್ಲಿ ಅನುಮಾನವಿಲ್ಲ

ನೀವು ಬಹಳ ಸಮಯದಿಂದ ಮಗುವಿಗೆ ಪ್ರಯತ್ನಿಸುತ್ತಿರುವಾಗ, IVF ಭರವಸೆಯ ದಾರಿದೀಪವಾಗಿ ಕಾಣುತ್ತದೆ. ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುತ್ತೇವೆ. ಆದರೆ ಈ ಐವಿಎಫ್​ ಫೇಲ್​ ಆದಾಗ ಮೊದಲು ನೀವು ವೈದ್ಯರ ಸಲಹೆ ಪಡೆಯಬೇಕು. ನಂತರವೇ ಮುಂದಿನ ಹೆಜ್ಜೆ ಇಡಬೇಕು.  ಈ IVF ಸಕ್ಸಸ್​​ ಆಗುವ ಮಟ್ಟ ಕೇವಲ 40 ರಿಂದ 50% ಮಾತ್ರ ಎಂದು ನೀವು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ಡಾ ವಿದ್ಯಾ ಭಟ್​ ಹೇಳುತ್ತಾರೆ. ಆದ್ದರಿಂದ ಮೂರು ಬಾರಿ ಭ್ರೂಣ ವರ್ಗಾವಣೆಗಳ ನಂತರ ಸುಮಾರು 87.5% ನಷ್ಟು ಗರ್ಭಧಾರಣೆಯ ದರವನ್ನು ನೋಡಬಹುದು ಎನ್ನುತ್ತಾರೆ.

ಇನ್ನು IVF ಫೇಲ್​ ಆದ ನಂತರ ಮತ್ತೊಂದು IVF ಪ್ರಯತ್ನಕ್ಕೆ ಹೋಗುವ ಮೊದಲು, ನಿಮ್ಮ ಮೊದಲ ಪ್ರಯತ್ನ ವಿಫಲವಾಗಿದ್ದು ಏಕೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ವೈದ್ಯರೊಂದಿಗೆ ವಿವರವಾದ ಚರ್ಚೆಯನ್ನು ನಡೆಸುವುದು ಸೂಕ್ತ. ಮೊದಲ ಬಾರಿಯಾದ ತಪ್ಪುಗಳನ್ನು ಸರಿಪಡಿಸಬಹುದೇ, ಎರಡನೇ IVF ಮೊದಲು ಏನೆಲ್ಲಾ ಚೇಂಜ್​ ಮಾಡಿಕೊಳ್ಳಬೇಕು ಎಂಬ ಅರಿವು ಇರಬೇಕು.

ಎರಡನೇ ಬಾರಿ ಪ್ರಯತ್ನ ಮಾಡುವ ಮುನ್ನ ಈ ಅಂಶಗಳು ನೆನಪಿರಲಿ 

ವಿವಿಧ ಔಷಧಿ ಪ್ರೋಟೋಕಾಲ್ಗಳು

PGD/PGS ನಂತಹ ಜೆನೆಟಿಕ್ ಸ್ಕ್ರೀನಿಂಗ್

ಇಮ್ಯುನೊಥೆರಪಿ

ಅಸಿಸ್ಟೆಡ್ ಹ್ಯಾಚಿಂಗ್

ಇನ್ನುಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ನಿಮ್ಮ ಎರಡನೇ ಪ್ರಯತ್ನದ ಯಶಸ್ಸನ್ನು ಹೇಗೆ ಉತ್ತಮಗೊಳಿಸುವುದು ಎಂಬುದನ್ನು ಕಲಿಯುವುದರ ಹೊರತಾಗಿ ಹೆಚ್ಚಿನ ಮಾಹಿತಿ ಪಡೆಯುವುದು ಮುಖ್ಯವಾಗಿದೆ.

ಇದನ್ನೂ ಓದಿ: ನವರಾತ್ರಿಯ 9 ದಿನಗಳು ದೇವಿಗೆ ಈ ನೈವೇದ್ಯ ಮಾಡಿದ್ರೆ ಬಹಳ ಒಳ್ಳೆಯದಂತೆ

ಐವಿಎಫ್ ವೈಫಲ್ಯಕ್ಕೆ ಕಾರಣವಾಗುವ ಅಂಶಗಳು ಇಲ್ಲಿದೆ

ಭ್ರೂಣ ಮತ್ತು ಎಂಡೊಮೆಟ್ರಿಯಮ್  ಒಂದನೊಂದು ಸೇರಿದಾಗ ಇದ್ದಾಗ ಇಂಪ್ಲಾಂಟೇಶನ್ ಸಂಭವಿಸುತ್ತದೆ. ಎಂಡೊಮೆಟ್ರಿಯಂನಲ್ಲಿ (ಗರ್ಭಾಶಯದ ಒಳಪದರ) ಭ್ರೂಣಗಳನ್ನು ಸ್ವೀಕರಿಸಿದಾಗ ಮಾತ್ರ  ಮಹಿಳೆ ಗರ್ಭ ಧರಿಸಬಹುದು. ಆದ್ದರಿಂದ, ಒಂದು  ಬಾರಿ ವೈಫಲ್ಯ ಸಂಭವಿಸಿದಾಗ, ಅದಕ್ಕೆ ನಿರ್ದಿಷ್ಟವಾಗಿ ಕಾರಣವನ್ನು ಹುಡುಕಬಹುದು. ಮೊದಲು ಭ್ರೂಣವನ್ನು ಪರೀಕ್ಷೆ ಮಾಡಬೇಕು. ಏಕೆಂದರೆ ಭ್ರೂಣವು ಉತ್ತಮ ಗುಣಮಟ್ಟವನ್ನು ಹೊಂದಿರಬೇಕು ಹಾಗೂ ಭ್ರೂಣದ ಗುಣಮಟ್ಟವನ್ನು ಸುಧಾರಿಸಲು ಕ್ರಮ ತೆಗೆದುಕೊಳ್ಳಬೇಕು.

3 ನೇ ದಿನದಲ್ಲಿ ಭ್ರೂಣಗಳನ್ನು ವರ್ಗಾಯಿಸಿದರೆ ಬಹುಶಃ ಅವು ಒಳಗೆ ಬೆಳೆಯುವ ಸಾಮರ್ಥ್ಯವಿದೆಯೇ ಎಂಬುದು ತಿಳಿದಿಲ್ಲ. ಆದ್ದರಿಂದ, ಆ ರೋಗಿಗಳಲ್ಲಿ ಬ್ಲಾಸ್ಟೊಸಿಸ್ಟ್ ಡಿ 5 ಭ್ರೂಣ ವರ್ಗಾವಣೆಗೆ ಆದ್ಯತೆ ನೀಡಬೇಕು ಏಕೆಂದರೆ ಈ ಮಾರ್ಗ  ಉತ್ತಮ ಗರ್ಭಧಾರಣೆಗೆ ಸಹಾಯ ಮಾಡುತ್ತದೆ, ಅಲ್ಲದೇ ಇದು ಫೇಲ್ ಆಗುವ ಸಾಧ್ಯತೆ ಕಡಿಮೆ.

ನಿಮಗೆ ಪದೇ ಪದೇ IVF ಫೇಲ್​ ಆದಾಗ ಬೇಸರ ಮಾಡಿಕೊಳ್ಳುವುದರ ಬದಲು ನೀವು ಸರೊಗೆಸಿ ಮಾರ್ಗವನ್ನು ಬಳಸಿಕೊಳ್ಳಬಹುದು. ಹಾಗಾಗಿ ಫೇಲ್​ ಆದಾಗ ಹತಾಶೆಯಾಗುವ ಬದಲು ಬೇರೆ ಮಾರ್ಗಗಳನ್ನು ಅನುಸರಿಸುವುದು ಬಹಳ ಮುಖ್ಯ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: ಗಲ್ಲಿಗೊಂದು ಚಾಟ್​ ಸೆಂಟರ್​ ಇದ್ದರೂ ಬೆಂಗಳೂರಿನ ಈ ಸ್ಥಳಗಳಲ್ಲೇ ಸಿಗೋದಂತೆ ಟೇಸ್ಟೀ ಫುಡ್​

ಪದೇ ಪದೇ IVF ವೈಫಲ್ಯವನ್ನು ತಪ್ಪಿಸಲು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಉತ್ತಮ ಸಮತೋಲಿತ  ಹಾಗೂ ಪೋಷಕಾಂಶಯುಕ್ತ ಆಹಾರ ಸೇವಿಸಿ, ನಿಯಮಿತವಾಗಿ ವ್ಯಾಯಾಮ ಮಾಡಿ, ಧ್ಯಾನ ಮಾಡಿ, ಗರಿಷ್ಠ ತೂಕವನ್ನು ಕಾಪಾಡಿಕೊಳ್ಳಿ ಮತ್ತು ಬಂಜೆತನದ ಸರಿಯಾದ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಕನಿಷ್ಠ 8 ಗಂಟೆಗಳ ಉತ್ತಮ ನಿದ್ರೆ ಬಹಳ ಅವಶ್ಯಕ ಎಂಬುದನ್ನ ನೆನಪಿಡಿ.
Published by:Sandhya M
First published: