Relationship Tips: ಬ್ರೇಕಪ್​ ನೋವಿನಿಂದ ಹೊರಬರಲು ಇಲ್ಲಿದೆ ಸೂಪರ್ ಟಿಪ್ಸ್

Breakup: ನೀವು  ನಮ್ಮ ಸಂಗಾತಿಯೊಂದಿಗೆ ಕಳೆದ ಕ್ಷಣಗಳು ನೆನಪಾಗುವುದು ಸಹಜ. ಆ ದಿನಗಳು ನೆನಪಾದಾಗ ನೋವಾಗುತ್ತದೆ. ಆದರೆ ಅದರಿಂದ ಹೊರ ಬರಲು ಪ್ರಯತ್ನ ಮಾಡಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮ್ಮ ಸಂಗಾತಿಯೊಂದಿಗೆ ದೂರವಾಗಿದ್ದೀರಿ ಎಂದರೆ ಅದು ನಿಜಕ್ಕೂ ನಿಮಗೆ ನೋವಿನ ಸಂಗತಿ. ನೀವು ದುಃಖದಲ್ಲಿ ಮುಳುಗಿರುತ್ತೀರಿ. ನಿಮಗೆ ಎಲ್ಲವೂ ಮುಗಿದು ಹೋಯಿತು ಎಂಬ ಭಾವ ಆವರಿಸುತ್ತದೆ. ಒಂದು ರೀತಿಯಲ್ಲಿ ಬ್ರೇಕಪ್ ನಿಮಗೆ ನಿಮ್ಮನ್ನ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಯಾರೆಂದು ತಿಳಿಯುವಂತೆ ಮಾಡುತ್ತದೆ. ನಿಮಗೆ ಬೇಜಾರಾಗುವುದು ಸಹಜ ಆದರೆ ಅದರ ಯೋಚನೆಯಲ್ಲಿಯೇ ಕಾಲ ಕಳೆಯಬಾರದು. ಬ್ರೇಕಪ್​ನಿಂದ ಹೊರ ಬರಲು ಏನು ಮಾಡಬೇಕು ಎಂಬ ಸಲಹೆ ಇಲ್ಲಿದೆ.

ಬ್ರೇಕಪ್ ಆದಾಗ ನಮ್ಮ ಬಗ್ಗೆ ನಮಗೆ ನಂಬಿಕೆ ಇರಬೇಕು. ಯಾವಾಗಲೂ ಅದೇ ಗುಂಗಿನಲ್ಲಿ ಇರಬೇಡಿ. ಹಳೆಯದನ್ನೆಲ್ಲ ಮರೆತರೆ ನೆಮ್ಮದಿ ಸಿಗುತ್ತದೆ. ನೀವು ಹಳೆಯ ಪ್ರೀತಿಯನ್ನು ನೆನಪಿಸಿಕೊಂಡಷ್ಟು ನೋವು ಹೆಚ್ಚಾಗುತ್ತದೆ. ನೀವು ಸ್ವಲ್ಪ ಸಮಯ ತೆಗೆದುಕೊಳ್ಳಿ. ಆದರೆ ಹೆಚ್ಚು ಆಲೋಚನೆ ಮಾಡಬೇಡಿ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಆಲೋಚಿಸಿ. ಏನು ಆಗಿಯೇ ಇಲ್ಲ ಎನ್ನುವಂತೆ ಇರಿ. ನೀವು ಹೆಚ್ಚು ಯೋಚಿಸಿದಷ್ಟು, ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆ ಘಟನೆಯನ್ನು ಮರೆತು, ಸಂಪೂರ್ಣವಾಗಿ ಹೊರಬಂದು ಹೊಸ ವ್ಯಕ್ತಿಯಾಗಿ.

ನೀವು  ನಮ್ಮ ಸಂಗಾತಿಯೊಂದಿಗೆ ಕಳೆದ ಕ್ಷಣಗಳು ನೆನಪಾಗುವುದು ಸಹಜ. ಆ ದಿನಗಳು ನೆನಪಾದಾಗ ನೋವಾಗುತ್ತದೆ. ಆದರೆ ನೀವು ಕುಗ್ಗಬಾರದು. ನೀವು ಒಬ್ಬಂಟಿಯಾಗಿ ಇದ್ದಷ್ಟು ನಿಮಗೆ ಸಂಗಾತಿಯ ನೆನಪು ಕಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಿರಿ. ಹೆಚ್ಚು ಜನರು ಸುತ್ತ ಇದ್ದಾಗ ನಿಮಗೆ ಬೇರೆ ಆಲೋಚನೆಗಳು ಬರುವುದಿಲ್ಲ, ಹಾಗೂ ಅವರೊಂದಿಗೆ ಸಂತೋಷದಿಂದ ಕಾಲ ಕಳೆದರೆ ಎಲ್ಲ ನೋವುಗಳು ಮಾಯವಾಗುತ್ತದೆ. ನಿಮಗೆ ಏಕಾಂಗಿ ಎಂದು ಯಾವತ್ತಿಗೂ ಅನಿಸಬಾರದು. ನೀವು ಸಾಧ್ಯವಾದಷ್ಟು ವಿಭಿನ್ನ ಚಟುವಟಿಕೆಗಳನ್ನು ಮಾಡಿ, ನಿಮ್ಮ ಗಮನವನ್ನು ಬೇರೆಡೆ ಹರಿಸಿ. ಹೆಚ್ಚು ಸಂತೋಷದಿಂದಿರಲು ಪ್ರಯತ್ನಿಸಿ.

ಇದನ್ನೂ ಓದಿ: ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಿದೆ ವರ್ಕ್‌ ಫ್ರಮ್‌ ಹೋಂ!

ನೀವು ಹಳೆಯ ಘಟನೆಗಳನ್ನು ಮರೆಯಬೇಕು ಎಂದರೆ ನಿಮ್ಮ ಗಮನವನ್ನು ಬೇರೆಡೆ ಹರಿಸಬೇಕು. ನಿಮಗೆ ಇಷ್ಟದ ಕೆಲಸಗಳನ್ನು ಮಾಡಿ. ನಿಮಗೆ ಹಾಡು ಹೇಳುವುದು ಇಷ್ಟವೆಂದರೆ ಹಾಡು ಹೇಳಿ, ಬೆಳಗ್ಗೆ ಎದ್ದು ವಾಕ್ ಹೋಗಿ ಇದು ನಿಮಗೆ ತಾಜಾತನ ನೀಡುತ್ತದೆ. ಇನ್ನು ಡ್ರಾಯಿಂಗ್ ಮಾಡುವ ಹವ್ಯಾಸವಿದ್ದರೆ ಅದನ್ನು ಮಾಡಿ, ಇಷ್ಟವಾದ ಅಡುಗೆಗಳನ್ನು ಮಾಡಿ ಅಥವಾ ಯಾವುದನ್ನ ಮಾಡಬೇಕು ಎಂದು ಇಷ್ಟಪಟ್ಟಿದ್ದೀರೋ ಅದನ್ನೇ ಮಾಡಿ. ಅಲ್ಲದೇ ನಿಮಗೆ ಟ್ರಿಪ್ ಹೋಗಬೇಕು ಎಂದು ಅನಿಸಿದರೆ ಗೆಳೆಯರ ಜೊತೆ ಹೋಗಿ. ಸುತ್ತಾಡಿ. ನಿಮ್ಮ ಮನಸ್ಸನ್ನು ಸಂತೋಷವಾಗಿರಿಸಲು ಏನು ಬೇಕೋ ಅದನ್ನು ಮಾಡಿ.

ನಿಮ್ಮನ್ನು ಬ್ಯೂಸಿಯಾಗಿ ಇಟ್ಟುಕೊಳ್ಳುವುದು ನಿಮಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಒಂದು ಒಳ್ಳೆಯ ಉಪಾಯವೆಂದರೆ ಡೈರಿ ಬರೆಯಿರಿ. ನಿಮ್ಮ ನೋವು ಮತ್ತು ಕೋಪವನ್ನು ಬರೆದು ಮನಸ್ಸನ್ನು ಹಗುರ ಮಾಡಿಕೊಳ್ಳಿ. ಅದನ್ನ ನೀವು ಓದಿದಾಗ ನಿಮಗೆ ಅನಿಸುತ್ತದೆ, ನಾನು ಹಳೆಯ ಆಲೋಚನೆಗಳನ್ನು ಬಿಟ್ಟು ಮುಂದೆ ಹೋಗಬೇಕು, ಇನ್ನು ಜೀವನದಲ್ಲಿ ಸಾಧಿಸುವುದು ಬಹಳಷ್ಟಿದೆ ಎಂದು.

ಮತ್ತೊಂದು ಪ್ರಮುಖವಾದ ಅಂಶವೆಂದರೆ ಆಗಿ ಹೋದ ಘಟನೆಗಳನ್ನು ಒಮ್ಮೆ ಅವಲೋಕಿಸಿ, ನಿಮ್ಮನ್ನು ಬಿಟ್ಟು ಹೋದ ಸಂಗಾತಿಯನ್ನು ಮತ್ತು ಅವರನ್ನ ನಂಬಿದಕ್ಕಾಗಿ ನಿಮ್ಮನ್ನ ನೀವು ಕ್ಷಮಿಸಿ. ನಮಗೆ ನೋವು ಕೊಟ್ಟವರನ್ನು ಕ್ಷಮಿಸುವುದು ಕಷ್ಟ, ಆದರೆ ಅವರ ಬಗ್ಗೆ ದ್ವೇಷ ಬೆಳೆಸಿಕೊಂಡರೆ ಅದು ನಮ್ಮ ಬದುಕಿಗೆ ಮುಳ್ಳಾಗುತ್ತದೆ. ಅಲ್ಲದೇ, ಆ ದ್ವೇಷ ನಮ್ಮನ್ನ ನೋವಿನಿಂದ ಹೊರ ಬರಲು ಬಿಡುವುದಿಲ್ಲ. ನಾವು ಜೀವನದಲ್ಲಿ ಏನೇ ಬಂದರೂ ಧೈರ್ಯದಿಂದ ಎದುರಿಸಬೇಕು. ಆಲೋಚನೆಗಳು ನಮ್ಮ ಮನಸ್ಸನ್ನು ಹಾಳು ಮಾಡುತ್ತದೆ. ಆಗಿದ್ದು ಆಗಲಿ ಎಂದು ಎಲ್ಲವನ್ನು ಹಾಗೂ ಎಲ್ಲರನ್ನು ಮರೆತು ಮುಂದುವರೆಯಬೇಕು.
Published by:Sandhya M
First published: