Kidney Health: ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಲು ಹೀಗೆ ಮಾಡಿ..

Tips For Healthy Kidney: ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಪಿಎಚ್, ಉಪ್ಪು ಮತ್ತು ಪೊಟ್ಯಾಶಿಯಮ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನೂ ನಿಯಂತ್ರಿಸುವ ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ನಿಯಂತ್ರಿಸುವ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

Health Tips: ನಮ್ಮ ದೇಹದಲ್ಲಿ ಬಹುತೇಕ ಕಾರ್ಯಗಳನ್ನು ನಿರ್ವಹಿಸುವುದು ಯಾವ ಅಂಗ ನಿಮಗೆ ಗೊತ್ತೇ? ನಮ್ಮ ಕೈ ಮುಷ್ಟಿ ಗಾತ್ರದಲ್ಲಿರುವ ಎರಡು ಮೂತ್ರಪಿಂಡಗಳು(Kidney) ನಮ್ಮ ದೇಹದಲ್ಲಿ ನಡೆಯುವಂತಹ ಅನೇಕ ಕ್ರಿಯೆಗಳನ್ನು ನಿರ್ವಹಿಸುತ್ತದೆ.ಅದಕ್ಕಾಗಿ ಮೂತ್ರಪಿಂಡಗಳನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ನಾವು ಹೆಚ್ಚಾಗಿ ಮೂತ್ರಪಿಂಡಗಳ ಸಮಸ್ಯೆಯಿಂದ ಬಳಲುವವರನ್ನು ನೋಡಿರುತ್ತೇವೆ.ಈ ಎರಡು ಮೂತ್ರಪಿಂಡಗಳು ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ದೇಹದಲ್ಲಿರುವ ರಕ್ತದಿಂದ ಅನೇಕ ತರಹದ ಕಲ್ಮಶವನ್ನು, ತ್ಯಾಜ್ಯ ಮತ್ತು ನೀರು ಎಲ್ಲವನ್ನೂ ಫಿಲ್ಟರ್ ಮಾಡುತ್ತವೆ. ನಂತರ ಈ ತ್ಯಾಜ್ಯ ಮೂತ್ರಕೋಶಕ್ಕೆ ಹೋಗಿ ಅಲ್ಲಿ ಸಂಗ್ರಹವಾಗಿ ಅಲ್ಲಿಂದ ಮೂತ್ರದಿಂದ ಹೊರ ಹೋಗುತ್ತದೆ.


ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಪಿಎಚ್, ಉಪ್ಪು ಮತ್ತು ಪೊಟ್ಯಾಶಿಯಮ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನೂ ನಿಯಂತ್ರಿಸುವ ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ನಿಯಂತ್ರಿಸುವ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ.


ನಮ್ಮ ಒಟ್ಟಾರೆ ಆರೋಗ್ಯಕ್ಕೆ ನಮ್ಮ ಮೂತ್ರಪಿಂಡಗಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಅವಶ್ಯಕವಾಗಿದೆ.  ತಜ್ಞರ ಈ  ಸಲಹೆಗಳನ್ನು ಪಾಲಿಸುವುದರಿಂದ ನಿಮ್ಮ ಎರಡು ಮೂತ್ರಪಿಂಡಗಳನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.


ವ್ಯಾಯಾಮ ಮಾಡಿ, ಫಿಟ್ ಆಗಿರಿ


ಪ್ರತಿದಿನ ತಪ್ಪದೆ ವ್ಯಾಯಾಮ ಮಾಡುವುದರಿಂದ ನಿಮ್ಮ ಮೂತ್ರಪಿಂಡಗಳು ಆರೋಗ್ಯವಾಗಿಟ್ಟುಕೊಳ್ಳಬಹುದು. ಇದರಿಂದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ. ವ್ಯಾಯಾಮ ಮಾಡುವುದರಿಂದ ನಿಮ್ಮ ರಕ್ತದೊತ್ತಡ ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ವ್ಯಾಯಾಮ ಮಾಡುವುದು ಒಟ್ಟಾರೆ ಆರೋಗ್ಯವನ್ನು ಸಹ ಸುಧಾರಿಸುತ್ತದೆ.


ಇದನ್ನೂ ಓದಿ: ಬ್ರಹ್ಮ ಕಮಲದಲ್ಲಿ ಎಷ್ಟೆಲ್ಲ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

ಮಧುಮೇಹದಿಂದ ಬಳಲುತ್ತಿದ್ದರೆ, ಅದನ್ನುನಿಯಂತ್ರಿಸಿಕೊಳ್ಳಿ


ನೀವು ಮಧುಮೇಹದಿಂದ ಬಳಲುತ್ತಿದ್ದರೆ, ನಿಮ್ಮ ಮೂತ್ರಪಿಂಡಗಳ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಿಮ್ಮ ದೇಹದ ಜೀವಕೋಶಗಳು ನಿಮ್ಮ ರಕ್ತದಲ್ಲಿನ ಗ್ಲೂಕೋಸ್‌ ಬಳಸಲು ಸಾಧ್ಯವಾಗದಿದ್ದಾಗ, ನಿಮ್ಮ ರಕ್ತ ಫಿಲ್ಟರ್ ಮಾಡಲು ನಿಮ್ಮ ಮೂತ್ರಪಿಂಡಗಳು ಹೆಚ್ಚು ಶ್ರಮಿಸಬೇಕಾಗುತ್ತದೆ ಮತ್ತು ಹಲವಾರು ವರ್ಷಗಳ ಶ್ರಮದಲ್ಲಿಇದು ಮಾರಣಾಂತಿಕವೂ ಆಗಬಹುದು. ಅದಕ್ಕಾಗಿ ನಿಮಗೆ ಮಧುಮೇಹ ಇದ್ದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅವಶ್ಯಕ.ಮಧುಮೆಹಿಗಳು ಹೆಚ್ಚು ಕಾಳಜಿವಹಿಸಬೇಕಾದ ಅವಶ್ಯಕತೆ ಇದೆ.


ನಿಮ್ಮ ರಕ್ತದೊತ್ತಡವನ್ನು ಆಗಾಗ ಪರೀಕ್ಷಿಸಿಕೊಳ್ಳಿ


ಅಧಿಕ ರಕ್ತದೊತ್ತಡವು ಮೂತ್ರಪಿಂಡಗಳ ಹಾನಿಗೆ ಕಾರಣವಾಗಬಹುದು. ಮಧುಮೇಹ, ಹೃದ್ರೋಗ ಅಥವಾ ಅಧಿಕ ಕೊಲೆಸ್ಟ್ರಾಲ್‌ನಂತಹ ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಅಧಿಕ ರಕ್ತದೊತ್ತಡ ಸಂಭವಿಸಿದರೆ, ನಿಮ್ಮ ದೇಹದ ಮೇಲೆ ಇದು ಭಾರಿ ಪರಿಣಾಮ ಬೀರಬಹುದು.


ಆರೋಗ್ಯಕರ ರಕ್ತದೊತ್ತಡವು 120/80 ಆಗಿದ್ದು, ನಿಮ್ಮ ಜೀವನಶೈಲಿ ಮತ್ತು ಆಹಾರದ ಬದಲಾವಣೆಗಳು ಈ ಹಂತದಲ್ಲಿ ನಿಮ್ಮ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡಬಹುದು. ನಿಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ.ಹೆಚ್ಚು ಇದ್ದಲ್ಲಿ ವೈದ್ಯರ ಸಲಹೆ ಪಡೆದು, ಪರಿಹಾರ ಮಾಡಿಕೊಳ್ಳುವುದು ಸೂಕ್ತ.


ತೂಕ ಕಡಿಮೆ ಮಾಡಿಕೊಳ್ಳಿಮತ್ತುಆರೋಗ್ಯಕರ ಆಹಾರಸೇವಿಸಿ


ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಜನರು ಹೆಚ್ಚಾಗಿ ಮೂತ್ರಪಿಂಡಗಳ ಸಮಸ್ಯೆಗೆ ತುತ್ತಾಗುತ್ತಾರೆ. ಕಡಿಮೆ ಸೋಡಿಯಂ ಇರುವ ತಾಜಾ ಪದಾರ್ಥಗಳನ್ನು ತಿನ್ನುವತ್ತ ಗಮನಹರಿಸಿ.ಹಾಗೂ ಹೆಚ್ಚು ಪೋಷಕಾಂಶಯುಕ್ತ ಆಹಾರ ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ.  ನೀವು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡು, ದೇಹದ ತೂಕ ಕಡಿಮೆ ಮಾಡಿಕೊಳ್ಳುವುದರ ಜೊತೆ, ಅಗತ್ಯ ಪೋಷಕಾಂಶಗಳು ದೇಹವನ್ನು ಸೇರುವುದು ಮುಖ್ಯವಾಗುತ್ತದೆ.


ಇದನ್ನೂ ಓದಿ: ಪದೇ ಪದೇ ತಲೆಸುತ್ತು, ತಲೆನೋವು ಬರುತ್ತಿದೆಯಾ? ಹಾಗಾದ್ರೆ ನಿಮಗೆ ಈ ಕೊರತೆ ಇದೆ..

ಸಾಕಷ್ಟುನೀರು ಕುಡಿಯಿರಿ


ದಿನಕ್ಕೆ 8 ಲೋಟ ನೀರು ಕುಡಿಯುವುದರಿಂದ ಅದು ನಿಮ್ಮನ್ನು ಹೈಡ್ರೇಟ್ ಆಗಿರಲು ಪ್ರೋತ್ಸಾಹಿಸುತ್ತದೆ. ನಿಯಮಿತ, ಸ್ಥಿರವಾದ ನೀರಿನ ಸೇವನೆಯು ನಿಮ್ಮ ಮೂತ್ರಪಿಂಡಗಳಿಗೆ ತುಂಬಾ ಒಳ್ಳೆಯದು.


ನೀವು ಮೂತ್ರಪಿಂಡದ ಅನಾರೋಗ್ಯದಿಂದ ಬಳಲುತ್ತಿದ್ದರೆ, ನಿಯಮಿತ ಮೂತ್ರಪಿಂಡದ ಕಾರ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಒಳ್ಳೆಯದು.


Published by:Sandhya M
First published: