Hacks For Dry Nail Polish: ನೈಲ್ ಪಾಲಿಶ್ ಡ್ರೈ ಆಗಿದೆ ಅಂತ ಬೇಸರ ಬೇಡಾ.. ಈ ಹ್ಯಾಕ್ಸ್​ ಟ್ರೈ ಮಾಡಿ..

Tips To Restore Dry Nail Polish: ದಪ್ಪವಾದ ನೈಲ್  ಪಾಲಿಶ್ ಅನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಅದನ್ನು ಸಂಪೂರ್ಣವಾಗಿ ವ್ಯರ್ಥ ಮಾಡದೆ ಮರು ಉಪಯೋಗಿಸಲು ಸಾಧ್ಯವಾಗುವ ಕೆಲ ತಂತ್ರಗಳು ಇದೆ. ಅದೃಷ್ಟವಶಾತ್ ನಿಮ್ಮ ಉಗುರು ಬಣ್ಣವನ್ನು  ಮತ್ತೆ ಬಳಕೆ ಮಾಡಲು ಸಹಾಯ ಮಾಡಲು ಕೆಲವು ಪರೀಕ್ಷಿತ ವಿಧಾನಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಗಮನಿಸಿ ನೋಡಿ ಹೆಚ್ಚು ದಿನಗಳ ಕಾಲ ನೈಲ್​ ಪಾಲಿಶ್ ಬಳಕೆ ಮಾಡದಿದ್ದರೆ, ಅದು ಒಣಗಿ ಹೋಗುತ್ತದೆ.  ಹೆಚ್ಚಿನ ಮಹಿಳೆಯರು ಮನೆಯಲ್ಲಿಯೇ ನೈಲ್ ಆರ್ಟ್ ಮಾಡಿಕೊಳ್ಳುವುದರಿಂದ ಹೆಚ್ಚು ನೈಲ್ ಪಾಲಿಶ್​ಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಅದರ ಬಳಕೆ ಕಡಿಮೆಯಾದಾಗ ಅದು ಒಣಗಿಹೋಗಿ, ಬಳಸಲು ಸಾಧ್ಯವಾಗುವುದಿಲ್ಲ. ಅದು ನಿಜಕ್ಕೂ ಬೇಸರದ ಸಂಗತಿ. ಕೆಲವೊಮ್ಮೆ ಅರ್ಧ ಬಾಟಲ್ ಪಾಲಿಶ್ ಹಾಗೆಯೆ ಉಳಿದಿರುತ್ತದೆ. ಅದು ನಮ್ಮ ನೆಚ್ಚಿನ ಬಣ್ಣವಾಗಿದ್ರೆ ಬಹಳ ನೋವಾಗುತ್ತದೆ.

ದಪ್ಪವಾದ ನೈಲ್  ಪಾಲಿಶ್ ಅನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಅದನ್ನು ಸಂಪೂರ್ಣವಾಗಿ ವ್ಯರ್ಥ ಮಾಡದೆ ಮರು ಉಪಯೋಗಿಸಲು ಸಾಧ್ಯವಾಗುವ ಕೆಲ ತಂತ್ರಗಳು ಇದೆ. ಅದೃಷ್ಟವಶಾತ್ ನಿಮ್ಮ ಉಗುರು ಬಣ್ಣವನ್ನು  ಮತ್ತೆ ಬಳಕೆ ಮಾಡಲು ಸಹಾಯ ಮಾಡಲು ಕೆಲವು ಪರೀಕ್ಷಿತ ವಿಧಾನಗಳಿವೆ. ಆದರೆ ಯಾವಾಗಲೂ ಅಷ್ಟೇ ಮೊದಲು ನೈಲ್ ಪಾಲೀಶ್ ಬಣ್ಣ ಒಣಗಳು ಬಿಡಬಾರದು.

ನೈಲ್ ಪಾಲಿಶ್ ಒಣಗದಂತೆ ತಡೆಯುವ ಕೆಲ ವಿಧಾನಗಳು  

ಬಾಟಲಿಯನ್ನು ತಂಪಾದ ಸ್ಥಳದಲ್ಲಿ ಸ್ಥಿರವಾದ ಉಷ್ಣತೆಯೊಂದಿಗೆ ಹೆಚ್ಚು ಬಿಸಿ ಅಥವಾ ತಣ್ಣಗಾಗದಂತೆ ಸಂಗ್ರಹಿಸಿ.

ಬಾತ್​ ರೂಮ್​ನಲ್ಲಿ ಇಡಬೇಡಿ. ಏಕೆಂದರೆ ತಾಪಮಾನವು ನಿರಂತರವಾಗಿ ವಾತಾವರಣದೊಂದಿಗೆ ಬದಲಾಗುತ್ತದೆ. ಅದು ನೈಲ್ ಪಾಲಿಶ್ ಒಣಗಲು ಕಾರಣವಾಗುತ್ತದೆ.

ಇದನ್ನೂ ಓದಿ: ಒಂದು ಸೀತಾಫಲ ಹಣ್ಣಿನಲ್ಲಿದೆ ನೂರು ಆರೋಗ್ಯ ಪ್ರಯೋಜನಗಳು ..

ಇದನ್ನು ನೇರ ಸೂರ್ಯನ ಬೆಳಕು ಮತ್ತು ಶಾಖದಿಂದ ದೂರವಿಡಿ.ಬಾಟಲಿಯನ್ನು ಶೆಲ್ಫ್ ಅಥವಾ ಡ್ರಾಯರ್‌ನಲ್ಲಿ ಇರಿಸಿ.

ಒಣಗಿರುವ ನೈಲ್ ಪಾಲಿಶ್ ಮರು ಬಳಕೆ ಮಾಡುವ ವಿಧಾನಗಳು

ನೇಲ್ ಪಾಲಿಶ್ ಥಿನ್ನರ್​ ಬಳಸಿ

ನಿಮ್ಮ ಉಗುರು ಬಣ್ಣ  ಒಣಗಿದ್ದರೆ ಮತ್ತು ಉತ್ಪನ್ನವನ್ನು ನಾಶ ಅದರ ಮರುಬಳಕೆ ಮಾಡಲು ಇದು ನಿಜವಾಗಿಯೂ ಉತ್ತಮ ವಿಧಾನವಾಗಿದೆ. ಸಾಮಾನ್ಯವಾಗಿ, ಅನೇಕ ನೇಲ್ ಪಾಲಿಶ್ ಬ್ರಾಂಡ್‌ಗಳು ತಮ್ಮದೇ ಆದ ಥಿನ್ನರ್​ ಆಯ್ಕೆ ಮಾಡಿಕೊಳ್ಳಬಹುದು.  ಒಂದು ಬಾಟಲಿಗೆ ಒಂದು ಡ್ರಾಪ್ ಅಥವಾ ಎರೆಡು ಡ್ರಾಪ್ ಥಿನ್ನರ್​  ಹಾಕಿ. ಸಾಧ್ಯವಾದರೆ ಐಡ್ರಾಪರ್ ಬಳಸಿ. ನಂತರ ಅದನ್ನು ಮಿಶ್ರಣ ಮಾಡಲು ನೈಲ್ ಪಾಲಿಶ್ ಬಾಟಲ್ ಕ್ಯಾಪ್ ಹಾಕಿ ಹಿಂದೆ ಮುಂದೆ ಮಾಡಿ.  ಕೆಲ ಸಮಯದ ನಂತರ ನಿಮ್ಮ ಉಗುರಿಗೆ ಬಳಕೆ ಮಾಡಿ ನೋಡಿ. ಆದರೆ ಹೆಚ್ಚು ಡ್ರಾಪ್ ಹಾಕುವುದು ಒಳ್ಳೆಯದಲ್ಲ, ಏಕೆಂದರೆ ಅದು ನೈಲ್ ಪಾಲಿಶ್​ ಅನ್ನು ನೀರಾಗಿಸಬಹುದು, ಮತ್ತೆ ಅದನ್ನು ಗಟ್ಟಿ ಮಾಡುವುದು ಕಷ್ಟ.

ಪಾಲಿಶ್ ಮಿಶ್ರಣ ಮಾಡಿ

ಉತ್ಪನ್ನವು ಸ್ವಲ್ಪ ದಪ್ಪವಾಗಿದ್ದರೆ ನಿಮ್ಮ ಉಗುರು ಬಣ್ಣವನ್ನು ನಿಧಾನವಾಗಿ ಮಿಶ್ರಣ ಮಾಡುವುದು  ಒಳ್ಳೆಯದು. ಬಾಟಲಿಯನ್ನು ಮುಚ್ಚಿ,  ಮತ್ತು ಅದನ್ನು ತಲೆಕೆಳಗಾಗಿ ಮಾಡಿ. ಇದು ಪಾಲಿಶ್ ಅನ್ನು ನಿಧಾನವಾಗಿ ಬೆಚ್ಚಗಾಗಲು ಮತ್ತು ತೆಳುವಾಗಿಸಲು ಸಹಾಯ ಮಾಡುತ್ತದೆ. ನೆನಪಿಡಿ, ನಾವು ಮೇಲೆ ಹೇಳಿದಂತೆ, ಅಲುಗಾಡಿಸುವುದು ಒಳ್ಳೆಯದಲ್ಲ ಏಕೆಂದರೆ ಅದು ಗಾಳಿಯ ಗುಳ್ಳೆಗಳನ್ನು ಸೃಷ್ಟಿಸುತ್ತದೆ.

ಬಿಸಿ ನೀರು

ಒಣಗಿದ ನೈಲ್ ಪಾಲಿಶ್​ಗೆ ಬಿಸಿ ನೀರು ಉತ್ತಮ ತಂತ್ರವಾಗಿದೆ. ನೀವು ಮಾಡಬೇಕಾಗಿರುವುದು ಪಾಲಿಷ್ ಅನ್ನು ಬಿಸಿಮಾಡಲು ಬಾಟಲಿಯನ್ನು ಬಿಸಿ ನೀರಿನಲ್ಲಿ ಹಾಕುವುದು. ಈ ವಿಧಾನವನ್ನು ಅನುಸರಿಸಲು  ಉತ್ತಮ ಮಾರ್ಗವೆಂದರೆ ಬಿಸಿನೀರನ್ನು ಒಂದು ಬಟ್ಟಲಿನಲ್ಲಿ ಹಾಕಿ  ಅದರಲ್ಲಿ ನೈಲ್ ಪಾಲಿಶ್ ಬಾಟಲಿಯನ್ನು ಸುಮಾರು 2 ನಿಮಿಷಗಳ ಕಾಲ ಇರಿಸಿ.

ನೇಲ್ ಪಾಲಿಶ್ ರಿಮೂವರ್ ಸೇರಿಸಿ

ಇದನ್ನೂ ಓದಿ: ಕೊತ್ತಂಬರಿ ಸೊಪ್ಪಿಗೂ , ಪಾರ್ಸ್ಲಿಗೂ ವ್ಯತ್ಯಾಸ ಕಂಡುಕೊಳ್ಳುವುದು ಕಷ್ಟ ಆಗ್ತಿದೆಯಾ? ಇಲ್ಲಿದೆ ಸೂಪರ್ ಟಿಪ್ಸ್

ಒಣಗಿದ ನೈಲ್ ಪಾಲಿಶ್ ಬಾಟಲಿಯನ್ನು ಎಸೆಯುವ ಮೊದಲು  ಅದಕ್ಕೆ ನೈಲ್ ಪಾಲಿಶ್ ರಿಮೂವರ್​ನ ಕೆಲವು ಹನಿಗಳನ್ನು ಸೇರಿಸಿ ಮತ್ತು ಬಾಟಲಿಯನ್ನು ಮಿಶ್ರಣ ಮಾಡಿ. ಕೆಲ ಸಮಯದ ನಂತರ ನಿಮ್ಮ ಉಗುರುಗಳಿಗೆ ಹಚ್ಚಿ ನೋಡಿ.  ಇದು ತ್ವರಿತ ಪರಿಹಾರವಾಗಿ ಕೆಲಸ ಮಾಡುತ್ತದೆ. ಆದರೆ  ಅಸಿಟೋನ್  ಬಳಕೆ ಬೇಡ. ನಿಮ್ಮ ಉಗುರು ಬಣ್ಣವನ್ನು ಹಾಳು ಮಾಡುತ್ತದೆ.
Published by:Sandhya M
First published: