Child Health: ಮಕ್ಕಳಿಗೆ ಆರೋಗ್ಯಕರ ತಿಂಡಿ ನೀಡುವುದು ಹೇಗೆ ಎಂಬ ಚಿಂತೆನಾ? ಇಲ್ಲಿದೆ ಪರಿಹಾರ

Snacks For Kids: ಬೆಳೆಯುತ್ತಿರುವ ಮಕ್ಕಳು ಸಕ್ರಿಯವಾಗಿ ಮತ್ತು ಬಲಶಾಲಿಯಾಗಿರುವುದು ಬಹಳ ಮುಖ್ಯ.  ಇದರಿಂದ ಅವರು ಶೈಕ್ಷಣಿಕ, ಕ್ರೀಡೆ ಮತ್ತು ಇತರ ಪಠ್ಯೇತರ ಚಟುವಟಿಕೆಗಳ ಮೇಲೆ ಗಮನ  ಕೇಂದ್ರೀಕರಿಸಲು  ಸಹಾಯವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Food : ನಿಮ್ಮ ಮಕ್ಕಳನ್ನು ಆರೋಗ್ಯವಾಗಿಡುವುದು ಅತ್ಯಂತ ಮಹತ್ವದ ಮತ್ತು ಸವಾಲಿನ ಕೆಲಸ. ಇನ್ನು ಮಕ್ಕಳ ಆರೋಗ್ಯವನ್ನು ಕಾಪಾಡಲು ಇರುವ ಸುಲಭ ಮಾರ್ಗ ಅವರಿಗೆ ಆರೋಗ್ಯಕರ ಆಹಾರ ನೀಡುವುದು. ಮಕ್ಕಳು ಹೆಚ್ಚಾಗಿ ಜಂಕ್ ಫುಡ್​ಗಳತ್ತ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ, ಆದರೆ ಅದು ಅವರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆದರೆ ಅದೇ ಆರೋಗ್ಯಕರವಾದ ಆಹಾರವನ್ನು ಆಕರ್ಷಕವಾಗಿ ಮಾಡಿ ಕೊಟ್ಟರೆ ಮಕ್ಕಳು ತಿನ್ನುತ್ತಾರೆ. ಅವರಿಗೆ ಅದರಲ್ಲಿ ಯಾವುದೋ ಒಂದು ವಿಶೇಷತೆ ಕಂಡಾಗ ಮಕ್ಕಳು ಬಹು ಬೇಗ ಆಕರ್ಷಿತರಾಗುತ್ತಾರೆ.  

ಇಂದಿನ ಮಕ್ಕಳು ಫಾಸ್ಟ್ ಫುಡ್ ಬ್ರಾಂಡ್‌ಗಳ ಆಕರ್ಷಕ ಹೆಸರುಗಳು, ಜಾಹೀರಾತು, ರುಚಿ ಮತ್ತು ಮುಖ್ಯವಾಗಿ  ಅದು ತಯಾರಿಸಲಾಗಿರುವ ವಿಭಿನ್ನ ರೀತಿಗೆ ಆಕರ್ಷಿತರಾಗುತ್ತಾರೆ ಎಂಬುದನ್ನು ನಾವು ಮರೆಯಬಾರದು. ಮಕ್ಕಳಿಗೆ ಆರೋಗ್ಯಕರ ತಿಂಡಿಗಳನ್ನು ನೀಡಲು ಇರುವ  ಒಳ್ಳೆಯ ಉಪಾಯ ಎಂದರೆ ಅದನ್ನು ವಿಭಿನ್ನವಾಗಿ, ಮಕ್ಕಳಿಗೆ ಇಷ್ಟವಾಗುವಂತೆ ಮಾಡಬೇಕು. ಹಾಗಾದರೆ ಮಕ್ಕಳಿಗೆ ಯಾವ ರೀತಿ ಆರೋಗ್ಯಕರ ಸ್ನ್ಯಾಕ್ಸ್ ನೀಡಬೇಕು ಎಂಬುದು ಇಲ್ಲಿದೆ.

ಬೆಳೆಯುತ್ತಿರುವ ಮಕ್ಕಳು ಸಕ್ರಿಯವಾಗಿ ಮತ್ತು ಬಲಶಾಲಿಯಾಗಿರುವುದು ಬಹಳ ಮುಖ್ಯ.  ಇದರಿಂದ ಅವರು ಶೈಕ್ಷಣಿಕ, ಕ್ರೀಡೆ ಮತ್ತು ಇತರ ಪಠ್ಯೇತರ ಚಟುವಟಿಕೆಗಳ ಮೇಲೆ ಗಮನ  ಕೇಂದ್ರೀಕರಿಸಲು  ಸಹಾಯವಾಗುತ್ತದೆ. ಇದರರ್ಥ ನಾವು ಸಾಕಷ್ಟು ಪ್ರೋಟೀನ್, ವಿಟಮಿನ್ ಮತ್ತು ಫೈಬರ್ ಹೊಂದಿರುವ ಪದಾರ್ಥಗಳನ್ನು ಮನೆಯಲ್ಲಿ  ಸಂಗ್ರಹಿಸಬೇಕು. ಮಕ್ಕಳಿಗೆ ತಿಂಡಿ ನೀಡುವುದು ಪೋಷಕಾಂಶಯುಕ್ತ ಆಹಾರವನ್ನು ನೀಡಲು ಒಂದು  ಒಳ್ಳೆಯ ಅವಕಾಶ ಎಂಬುದನ್ನ ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರೋಟೀನ್ ಭರಿತ ಆಹಾರಗಳನ್ನು ನೀಡಿ. ಬಾಳೆಹಣ್ಣು ಅಥವಾ ಸೇಬಿನಂತಹ ಫೈಬರ್ ಹೆಚ್ಚಿರುವ ಹಣ್ಣುಗಳು,  ಜೊತೆಗೆ ಮಿಲ್ಕ್ ಶೇಕ್ ರೂಪದಲ್ಲಿ  ಸಹ ಹಣ್ಣುಗಳನ್ನು ನೀಡುವುದು ಉತ್ತಮ. ಜೊತೆಗೆ ಬೇಕರಿ ಉತ್ಪನ್ನಗಳಾದ ಚಿಪ್ಸ್, ಕೋಲಾ, ಕರಿದ ಆಹಾರಗಳನ್ನು ಹೆಚ್ಚಾಗಿ ಸೇವಿಸದಂತೆ ನೋಡಿಕೊಳ್ಳಿ.

ಬೆಳೆಯುತ್ತಿರುವ ಮಕ್ಕಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಮೂರು ಪೋಷಕಾಂಶಗಳ ಅಗತ್ಯ ಹೆಚ್ಚಿದೆ. ಮಕ್ಕಳು ಇಷ್ಟಪಡುವ ಕಬ್ಬಿಣದಂಶವಿರುವ ಆಹಾರವೆಂದರೆ ಡ್ರೈ ಫ್ರೂಟ್ಸ್ . ನಿಮ್ಮ ಮಕ್ಕಳಿಗೆ ನೀವು ಹಾಲು ಮತ್ತು ಮೊಸರು ಮತ್ತು ಮಾಂಸದ ಆಹಾರಗಳನ್ನು ನೀಡುವುದರಿಂದ ಅವರಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಅಲ್ಲದೇ,  ಪ್ರೋಟೀನ್ ಯುಕ್ತ ಆಹಾರಗಳಾದ ದಾಲ್, ಬೇಳೆಕಾಳು, ಸೋಯಾ, ಮೊಟ್ಟೆ, ಚಿಕನ್ ಇತ್ಯಾದಿ ಮಕ್ಕಳ ಊಟದಲ್ಲಿ ಕಡ್ಡಾಯವಾಗಿ ಇರಬೇಕು.

ಇದನ್ನೂ ಓದಿ: ಮಧುಮೇಹ ಸಮಸ್ಯೆ ಹೊಂದಿರುವವರು ಈ ಹಣ್ಣುಗಳ ಸೇವನೆ ಮಾಡಬಾರದು

ನಿಮ್ಮಲ್ಲಿ ಹೆಚ್ಚು ಗೊಂದಲವಿದ್ದಲ್ಲಿ  ಇದನ್ನು ಟ್ರೈ ಮಾಡಿ.

ರಾಗಿ ಉಂಡೆ

ಬೇಕಾಗುವ ಪದಾರ್ಥಗಳು:

1 ಕಪ್ ರಾಗಿ ಹಿಟ್ಟು

1/2 ಕಪ್  ಸಕ್ಕರೆ

1/2 ಕಪ್ ತೆಂಗಿನತುರಿ

1/4 ಕಪ್ ಮೊಳಕೆಯೊಡೆದ ಹೆಸರು ಕಾಳು

3-4 ಏಲಕ್ಕಿ

1-2 ಟೀಸ್ಪೂನ್ ತುಪ್ಪ

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

ತೆಂಗಿನಕಾಯಿ,  ಸಕ್ಕರೆ, ಏಲಕ್ಕಿ ಪುಡಿಮಾಡಿ ಇಟ್ಟುಕೊಳ್ಳಿ.

ಹೆಸರು ಕಾಳನ್ನು ಆವಿಯಲ್ಲಿ  ಸರಿಯಾಗಿ ಬೇಯಿಸಿ, ಹೆಚ್ಚು ಮೆತ್ತಗಾಗಬಾರದು.

ನಂತರ ಅರ್ಧ ಕಪ್ ನೀರಿನಲ್ಲಿ ಉಪ್ಪು  ಸೇರಿಸಿ, ರಾಗಿ ಹಿಟ್ಟನ್ನು ಅದರಲ್ಲಿ ಕಲಸಿ. ನಂತರ ಮಸ್ಲಿನ್ ಬಟ್ಟೆಯನ್ನು ಸ್ಟೀಮರ್ ಮೇಲೆ ಹಾಕಿ ಮತ್ತು ರಾಗಿ ಹಿಟ್ಟನ್ನು ಮಧ್ಯಮ ಉರಿಯಲ್ಲಿ 15 ನಿಮಿಷಗಳ ಕಾಲ ಸ್ಟೀಮ್ ಮಾಡಿ.

ರಾಗಿ ಹಿಟ್ಟು ಬೆಂದ ನಂತರ ಅದನ್ನು ಅಗಲವಾದ  ತಟ್ಟೆಗೆ ಹಾಕಿಕೊಂಡು ರುಬ್ಬಿದ ಮಿಶ್ರಣ ಮತ್ತು ಬೇಯಿಸಿದ  ಹೆಸರು ಕಾಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಉಂಡೆ ಮಾಡಿದರೆ ರುಚಿಯಾದ ರಾಗಿ ಉಂಡೆ ರೆಡಿ.
Published by:Sandhya M
First published: