Health Tips: ಸಾಮಾನ್ಯ ಉಪ್ಪಿನ ಬದಲಾಗಿ ಈ ವಸ್ತುಗಳನ್ನು ಟ್ರೈ ಮಾಡಿ ..

Salt Side Effects: ಉಪ್ಪು ಅಯೋಡಿನ್‍ (Iodine)ಮೂಲವಾಗಿದೆ. ಇದು ಥೈರಾಯ್ಡ್ ರೋಗ ಬಾರದಂತೆ ತಡೆಯಲು, ನಮ್ಮ ದೇಹದಲ್ಲಿ ದ್ರವಾಂಶ ಸಮತೋಲನದಲ್ಲಿರುವಂತೆ ಮಾಡುವ ಪೋಷಕಾಂಶವಾಗಿದೆ. ಆದರೆ ಅತಿಯಾದರೆ ಅಮೃತವೂ ವಿಷವೆಂಬಂತೆ ಇದನ್ನು ವಿಷಕಾರಿಯನ್ನಾಗಿಸುವ ಅಂಶ ಇದರಲ್ಲಿದೆ. ಅದುವೇ ಸೋಡಿಯಂ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಉಪ್ಪಿಗಿಂತ(Salt) ರುಚಿ ಬೇರೆ ಇಲ್ಲ ಎಂಬ ಮಾತನ್ನು ಎಲ್ಲರೂ ಕೇಳಿಯೂ ಇರುತ್ತಾರೆ, ಅನುಭವಕ್ಕೂ ಬಂದಿರುತ್ತದೆ. ಅಡುಗೆಯ(Food) ರಾಜನಾಗಿರುವ ಉಪ್ಪಿಲ್ಲದ ಊಟವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಉಪ್ಪು ಇಲ್ಲದಿರಲಿ ಸ್ವಲ್ಪ ಉಪ್ಪು ಕಡಿಮೆಯಾದರೂ ಊಟ ಮಾಡಲು ಹಿಂದೆ ಮುಂದೆ ನೋಡುತ್ತೇವೆ. ಪದಾರ್ಥ ಎಷ್ಟೇ ರುಚಿಯಾಗಿದ್ದರೂ ಅದಕ್ಕೆ ಉಪ್ಪು ಇಲ್ಲದಿದ್ದರೆ ರುಚಿಯೆಲ್ಲಾ ಸಂಪೂರ್ಣ ವ್ಯರ್ಥವೇ.


ಉಪ್ಪು ಅಯೋಡಿನ್‍ (Iodine)ಮೂಲವಾಗಿದೆ. ಇದು ಥೈರಾಯ್ಡ್ ರೋಗ ಬಾರದಂತೆ ತಡೆಯಲು, ನಮ್ಮ ದೇಹದಲ್ಲಿ ದ್ರವಾಂಶ ಸಮತೋಲನದಲ್ಲಿರುವಂತೆ ಮಾಡುವ ಪೋಷಕಾಂಶವಾಗಿದೆ. ಆದರೆ ಅತಿಯಾದರೆ ಅಮೃತವೂ ವಿಷವೆಂಬಂತೆ ಇದನ್ನು ವಿಷಕಾರಿಯನ್ನಾಗಿಸುವ ಅಂಶ ಇದರಲ್ಲಿದೆ. ಅದುವೇ ಸೋಡಿಯಂ. ಇದನ್ನು ಅತಿಯಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಮೂತ್ರ ಪಿಂಡದ ಸಮಸ್ಯೆಗಳು, ದೀರ್ಘಾವಧಿಯ ಹೃದಯ ರೋಗಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದಷ್ಟು ಕಡಿಮೆ ಸೋಡಿಯಂ ಸೇವನೆ ಮಾಡಬೇಕು. 


ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಬ್ಬ ಮನುಷ್ಯನ ದೇಹಕ್ಕೆ 1.5 ಗ್ರಾಂನಿಂದ 2.3 ಗ್ರಾಂ ಉಪ್ಪು ಸಾಕಾಗುತ್ತದೆ.  ಇನ್ನು ಹೆಚ್ಚು ಉಪ್ಪಿನ  ಬಳಕೆ ಬೇಕಾದಲ್ಲಿ ಐದು ಪರ್ಯಾಗಳನ್ನು ಬಳಸಬಹುದು.


1. ಸಮುದ್ರ ಉಪ್ಪು
ಸಮುದ್ರದ ಉಪ್ಪನ್ನು ಆವಿಯಾದ ಸಮುದ್ರದ ನೀರಿನಿಂದ ಪಡೆಯಲಾಗುತ್ತದೆ. ಖನಿಜಗಳಿಂದ ಸಮೃದ್ಧವಾಗಿರುವ ಸಂಸ್ಕರಿಸದ ವೈವಿಧ್ಯಮಯ ಉಪ್ಪು. ವಿವಿಧ ಬಣ್ಣಗಳು ಮತ್ತು ವೈವಿಧ್ಯಗಳಲ್ಲಿ ಲಭ್ಯವಿರುವ ಇದು ನಿಮ್ಮ ಆಹಾರಕ್ಕೆ ಒಂದು ವಿಶಿಷ್ಟವಾದ ಸ್ವಾದ ನೀಡುತ್ತದೆ ಮತ್ತು ಸಾಮಾನ್ಯ ಉಪ್ಪಿನ ಬಳಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರೋಗ್ಯ ಪ್ರಯೋಜನಗಳ ದೃಷ್ಟಿಯಿಂದ, ಸಮುದ್ರದ ಉಪ್ಪು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ನೆಗಡಿ ಕಡಿಮೆ ಮಾಡುತ್ತದೆ ಮತ್ತು ತೂಕ  ಇಳಿಸುವ ಪ್ರಕ್ರಿಯೆಗೆ ಸಹಾಯಕವಾಗಿದೆ.


ಇದನ್ನೂ ಓದಿ: ಪಿರಿಯಡ್ಸ್ ಹೊಟ್ಟೆ ನೋವಿಗೆ ಈ ಜ್ಯೂಸ್​ಗಳು ರಾಮಬಾಣ

2. ಹಿಮಾಲಯನ್ ಗುಲಾಬಿ ಉಪ್ಪು
ಹಿಮಾಲಯನ್ ಗುಲಾಬಿ ಉಪ್ಪು ಅದರ ಪೌಷ್ಟಿಕಾಂಶದ ಮೌಲ್ಯದಿಂದಾಗಿ ಇತ್ತೀಚೆಗೆ ಅಪಾರ ಜನಪ್ರಿಯತೆ ಗಳಿಸಿದೆ. ಇದು 84 ಖನಿಜಗಳನ್ನು ಹೊಂದಿದೆ. ದೇಹದ ಪಿಎಚ್ ಸಮತೋಲನ ಕಾಪಾಡಿಕೊಳ್ಳಲು, ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಿಸಲು, ನಿದ್ರೆಯ ಗುಣಮಟ್ಟ ಸುಧಾರಿಸಲು ಮತ್ತು ವಯಸ್ಸಾಗುವಿಕೆ ನಿಧಾನಗೊಳಿಸಲು, ತಜ್ಞರು ಹಿಮಾಲಯನ್ ಗುಲಾಬಿ ಉಪ್ಪನ್ನು ನಿಯಮಿತ ಮತ್ತು ಸೀಮಿತ ಪ್ರಮಾಣದಲ್ಲಿ ಸೇವಿಸುವಂತೆ ಸಲಹೆ ನೀಡುತ್ತಾರೆ.


3. ಪೌಷ್ಟಿಕಾಂಶದ ಯೀಸ್ಟ್
ವಿಚಿತ್ರವೆನಿಸಿದರೂ, ನಿಷ್ಕ್ರಿಯಗೊಳಿಸಿದ ಯೀಸ್ಟ್ ಅನ್ನು ಉಪ್ಪಿನ ಬದಲಿಗೆ ಬಳಸಬಹುದು. ವಿಟಮಿನ್‍ - ಬಿ ಮತ್ತು ಫೋಲಿಕ್ ಆ್ಯಸಿಡ್ ಉತ್ತಮ ಮೂಲವಾಗಿದೆ, ಇದು ಆಹಾರಕ್ಕೆ ಒಂದು ವಿಶಿಷ್ಟವಾದ ಸ್ವಾದ ಸುವಾಸನೆ ನೀಡುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಸಸ್ಯಾಹಾರಿಗಳು ಸೇವಿಸುವ ಆಹಾರಕ್ಕೆ ಬಳಸಿದರೆ ಚೀಸ್ ತರಹದ ಪರಿಮಳ ನೀಡುತ್ತದೆ.


4. ಕಲ್ಲಿನ ಉಪ್ಪು
ಸಾಮಾನ್ಯವಾಗಿ ಉಪ್ಪು ಗಣಿಗಳಲ್ಲಿ ಮತ್ತು ಭೂಗತ ಖನಿಜ ನಿಕ್ಷೇಪಗಳಲ್ಲಿ ಕಂಡುಬರುತ್ತದೆ, ಕಲ್ಲು ಉಪ್ಪು ಹರಳುಗಳು ಸಾಮಾನ್ಯ ಉಪ್ಪಿಗೆ ಉತ್ತಮ ಪರ್ಯಾಯವಾಗಿದೆ. ಇದನ್ನು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರದಲ್ಲಿರಿಸಬಹುದು. ಉತ್ತಮ ಜೀರ್ಣಕ್ರಿಯೆಗೆ ಸಹಾಯಕ, ಆರೋಗ್ಯ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ: ಖಾರ ಅಂತ ಅಳ್ಬೇಡಿ, ಹಸಿಮೆಣಸಿನಕಾಯಿ ತಿಂದ್ರೆ ಬೇಗ ಸಣ್ಣಗಾಗ್ತಾರಂತೆ!

5. ಹಿಮಾಲಯನ್ ಕಪ್ಪು ಉಪ್ಪು
ಇದರ ರುಚಿ ಸ್ವಲ್ಪ ಕಹಿ ಇರುತ್ತದೆ. ಹಿಮಾಲಯನ್ ಕಪ್ಪು ಉಪ್ಪನ್ನು ಕಾಲಾ ನಮಕ್ ಎಂದು ಕರೆಯುತ್ತಾರೆ, ಇದನ್ನು ನಿಂಬೆ ಪಾನಕ, ಹಣ್ಣು ಸಲಾಡ್ ಮತ್ತು ಗೋಲ್ಗೊಪ್ಪ, ಪಾನಿಪೂರಿ ರೀತಿಯ ಪದಾರ್ಥಗಳಿಗೆ ಬಳಸಲಾಗುತ್ತದೆ. ಕಡಿಮೆ ಸೋಡಿಯಂ ಅಂಶ ಇರುವ ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ದೃಷ್ಟಿ ಸುಧಾರಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.


Published by:Sandhya M
First published: