Beauty Tips: ಚಳಿಗಾಲದಲ್ಲಿ ಉಗುರು ಒರಟಾಗಿದೆಯಾ? ಹಾಗಾದ್ರೆ ಹೀಗೆ ಮಾಡಿ

How To Take Of Your Nails In Winter: ಚಳಿಗಾಲದಲ್ಲಿ ನಿಮ್ಮ ಕೈಗಳನ್ನು ನಿರಂತರವಾಗಿ ತೊಳೆಯುವುದು ಮತ್ತು ಒಣಗಿಸುವುದು ನಿಮ್ಮ ಉಗುರುಗಳ ನೈಸರ್ಗಿಕ ತೇವಾಂಶವನ್ನ ಹಾಳುಮಾಡುತ್ತದೆ.  ಇದರಿಂದಾಗಿ ಅವುಗಳನ್ನು ಸುಲಭವಾಗಿ  ಕಟ್ ಆಗುತ್ತವೆ. ಪದೇ ಪದೇ ಒದ್ದೆಯಾಗದಂತೆ ರಕ್ಷಿಸಲು ಮನೆಕೆಲಸಗಳಲ್ಲಿ ತೊಡಗಿರುವಾಗ ಗ್ಲೌಸ್​ಗಳನ್ನು ಧರಿಸುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಳಿಗಾಲವು(Winter) ನಿಮಗೆ ಬೆಚ್ಚಗಿನ ಅನುಭವವನ್ನುನೆನಪಿಸಬಹುದು, ಆದರೆ ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ(Health Problem) ಕಾರಣವಾಗುತ್ತದೆ. ಈ ಶೀತ ತಾಪಮಾನವು ಉಗುರಿನ ಆರೋಗ್ಯವನ್ನು ಸಹ ಹಾಳು ಮಾಡುತ್ತದೆ. ಈ ಚಳಿಗಾಲದ ಸಮಯದಲ್ಲಿ ಉಗುರುಗಳು(Nails) ಒರಣಾಗುವ, ಬಿರುಕು ಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಉಗುರುಗಳ ಆರೋಗ್ಯ ಮತ್ತು ಸೌಂದರ್ಯವನ್ನು(Beauty) ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾದ್ರೆ ಚಳಿಗಾಲದಲ್ಲಿ ಉಗುರಿನ ಆರೋಗ್ಯ ಕಾಪಾಡುವುದು ಹೇಗೆ ಎನ್ನುವುದು ಇಲ್ಲಿದೆ. 

ಸರಿಯಾದ ಲೋಷನ್ ಬಳಸಿ

ಪರಿಪೂರ್ಣವಾದ ಕೈ ಲೋಷನ್ ಅನ್ನು ಆಯ್ಕೆಮಾಡುವಾಗ, ಆಲ್ಫಾ ಹೈಡ್ರಾಕ್ಸಿ ಆಮ್ಲಗಳು, ಲ್ಯಾನೋಲಿನ್ ಅಥವಾ ಯೂರಿಯಾ  ಇರುವಂತಹವುಗಳನ್ನು ನೋಡಿ. ಇವೆಲ್ಲವೂ ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಗ್ಲೈಸಿನ್, ಟೈರೋಸಿನ್, ಲಿಪಿಡ್‌ಗಳು ಮತ್ತು ವಿಟಮಿನ್‌ಗಳಂತಹ ಅಮೈನೋ ಆಮ್ಲಗಳಿರುವ ಲೋಷನ್​ಗಳು ಒರಟುತನವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇಲ್ಲದಿದ್ದರೆ, ನಿಮ್ಮ ಉಗುರುಗಳ ಮೇಲೆ ಮಸಾಜ್ ಮಾಡಲು ನಿಮ್ಮ ಸಾಮಾನ್ಯ ಚಳಿಗಾಲದ ದೇಹದ ಕ್ರೀಮ್ ಅನ್ನು ಸಹ ನೀವು ಬಳಸಬಹುದು.

ಗ್ಲೌಸ್​ ಬಳಸಿ

ಚಳಿಗಾಲದಲ್ಲಿ ನಿಮ್ಮ ಕೈಗಳನ್ನು ನಿರಂತರವಾಗಿ ತೊಳೆಯುವುದು ಮತ್ತು ಒಣಗಿಸುವುದು ನಿಮ್ಮ ಉಗುರುಗಳ ನೈಸರ್ಗಿಕ ತೇವಾಂಶವನ್ನ ಹಾಳುಮಾಡುತ್ತದೆ.  ಇದರಿಂದಾಗಿ ಅವುಗಳನ್ನು ಸುಲಭವಾಗಿ  ಕಟ್ ಆಗುತ್ತವೆ. ಪದೇ ಪದೇ ಒದ್ದೆಯಾಗದಂತೆ ರಕ್ಷಿಸಲು ಮನೆಕೆಲಸಗಳಲ್ಲಿ ತೊಡಗಿರುವಾಗ ಗ್ಲೌಸ್​ಗಳನ್ನು ಧರಿಸುವುದು ಉತ್ತಮ.

ಇದನ್ನೂ ಓದಿ: ಅತಿಯಾಗಿ ಬೆವರುವ ಸಮಸ್ಯೆ ಇದ್ರೆ ಇಲ್ಲಿದೆ ಪರಿಹಾರ

ನಿಮ್ಮ ಚರ್ಮ ಮತ್ತು ಉಗುರುಗಳು ಸ್ವಲ್ಪ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡಲು ರಾತ್ರಿ ಮಲಗುವಾಗ ನೀವು ಗ್ಲೌಸ್​ಗಳನ್ನು ಧರಿಸಬಹುದು. ನಿಮ್ಮ ಬಳಿ ಗ್ಲೌಸ್​ ಇಲ್ಲದಿದ್ದರೆ ನಿಮ್ಮ ಕೈಗಳನ್ನು ತೊಳೆದ ನಂತರ, ತೆಂಗಿನಕಾಯಿ, ಆಲಿವ್ ಅಥವಾ ಸೋಯಾ ಹೀಗೆ ಯಾವುದಾದರೂ ಎಣ್ಣೆಯನ್ನು, ನಿಮ್ಮ ಒದ್ದೆಯಾದ ಉಗುರುಗಳ ಮೇಲೆ ಮಸಾಜ್ ಮಾಡಿ ಮತ್ತು ನಂತರ ಅವುಗಳನ್ನು ಹಾಗೆಯೇ ಒಣಗಲು ಬಿಡಿ.

ಬೆಚ್ಚಗಿನ ನೀರಿನಲ್ಲಿ ನೆನೆಸಿ

ನಿಮ್ಮ ಉಗುರುಗಳಿಗೆ ಕೆಲವು TLC ಅನ್ನು ತೋರಿಸಲು ಉತ್ತಮ ಮಾರ್ಗವೆಂದರೆ ಅವುಗಳನ್ನು ವಾರಕ್ಕೊಮ್ಮೆ ಉಗುರು ಬೆಚ್ಚಗಿನ ನೀರಿನಲ್ಲಿ 10 ನಿಮಿಷಗಳಿಗಿಂತ ಹೆಚ್ಚು ಕಾಲ ನೆನೆಸಿ, ಅಲ್ಲದೇ ಉಗುರುಗಳಿಗೆ ಎಣ್ಣೆಯನ್ನು ಹಚ್ಚಿ. ಇದು  ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡಲು.

ಹೆಚ್ಚು ನೈಲ್ ಪಾಲಿಶ್ ಬಳಸಬೇಡಿ

ನಿಮ್ಮ ಉಗುರುಗಳನ್ನು ಉಸಿರಾಡಲು ನೀವು ಬಿಡುವುದು ಮುಖ್ಯ, ಆದ್ದರಿಂದ ನೇಲ್ ಪಾಲಿಷ್ ಅನ್ನು ಬಳಸುವಾಗ ಸ್ವಲ್ಪ ದಿನಗಳ ಬಿಡುವ ನೀಡಿ. ಅಂದರೆ ನೀವು ಒಂದು ನೈಲ್ ಪಾಲಿಶ್ ತೆಗೆದು ತಕ್ಷಣವೇ ಇನ್ನೊಂದು ಪಾಲಿಶ್ ಹಚ್ಚಬೇಡಿ. ಕೆಲ ದಿನಗಳ ಬಿಡುವು ನೀಡಿ. ಪಾಲಿಶ್‌ನಲ್ಲಿರುವ ರಾಸಾಯನಿಕಗಳು ನಿಮ್ಮ ಉಗುರುಗಳನ್ನು ದುರ್ಬಲಗೊಳಿಸಬಹುದು. ಇನ್ನು ನಿಮ್ಮ ನೇಲ್ ಪಾಲಿಷ್ ರಿಮೂವರ್​ನಲ್ಲಿ ಅಸಿಟೋನ್  ಇರದಂತೆ ಖಚಿತಪಡಿಸಿಕೊಳ್ಳಿ ಏಕೆಂದರೆ ಅದು ನಿಮ್ಮ ಉಗುರುಗಳನ್ನು ಮತ್ತಷ್ಟು ಒಣಗಿಸಿ ಹಾನಿಗೊಳಿಸಬಹುದು.

ಉದ್ದ ಉಗುರು ಬೆಳಸಬೇಡಿ

ಉದ್ದವಾದ ಉಗುರುಗಳು ಮುರಿದು ಹೋಗುವ ಸಾಧ್ಯತೆಯನ್ನು ಹೆಚ್ಚಿಸುವುದರಿಂದ ನಿಮ್ಮ ಉಗುರುಗಳನ್ನು ಚಿಕ್ಕದಾಗಿ ಇಟ್ಟುಕೊಳ್ಳುವುದು ಉತ್ತಮ. ನಿಮ್ಮ ಕೈಗಳನ್ನು ತೊಳೆದ ನಂತರ ಅಥವಾ ಸ್ನಾನ ಮಾಡಿದ ತಕ್ಷಣ ನಿಮ್ಮ ಉಗುರುಗಳನ್ನು ಕತ್ತರಿಸಬೇಡಿ. ಏಕೆಂದರೆ ಒದ್ದೆಯಾದ ಉಗುರುಗಳು ಸುಲಭವಾಗಿ ಒಡೆಯುತ್ತವೆ.

ಹೆಚ್ಚು ನೀರು ಕುಡಿಯಿರಿ.

ನಿಮ್ಮ ಆಹಾರವು ನಿಮ್ಮ ಉಗುರುಗಳ ಆರೋಗ್ಯದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುವುದರಿಂದ, ನೀವು ಸಾಕಷ್ಟು ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳನ್ನು ಸೇವನೆ ಮಾಡಿ.

ಇದನ್ನೂ ಓದಿ: ಎಡೆಬಿಡದೆ ಸುರಿಯುತ್ತಿರುವ ಈ ಮಳೆಯಲ್ಲಿ ಮಗುವಿನ ತ್ವಚೆಯ ರಕ್ಷಣೆಗೆ ಇಲ್ಲಿದೆ ಟಿಪ್ಸ್

ಇದಲ್ಲದೆ, ನಿಮ್ಮ ದೇಹವು ಒಳಗಿನಿಂದ ಹೈಡ್ರೇಟ್ ಆಗುವುದರಿಂದ ನೀವು ನಿಮ್ಮನ್ನು ಹೈಡ್ರೀಕರಿಸಿದಂತೆ ನೋಡಿಕೊಳ್ಳುವುದು ಸಹ ಮುಖ್ಯವಾಗಿದೆ. ಪ್ರತಿದಿನ ಕನಿಷ್ಠ ಎಂಟು ಲೋಟ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ.
Published by:Sandhya M
First published: