Weight Gain: ತೂಕ ಹೆಚ್ಚಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿ...!

ತಜ್ಞರ ಸಲಹೆಯ ಪ್ರಕಾರ ಮತ್ತು ನಿಮ್ಮ ಪರಿಶ್ರಮದ ಮೂಲಕ ನಿಮ್ಮ ದೇಹಕ್ಕೆ ಅನುಗುಣವಾದ ಆರೋಗ್ಯಕರ ತೂಕವನ್ನು ಹೊಂದುವ ಗುರಿಯನ್ನು ಸಾಧಿಸಬಹುದು. ನಿಮ್ಮ ತೂಕ ಕಡಿಮೆ ಇದ್ದರೆ, ಅದನ್ನು ಹೆಚ್ಚಿಸಿಕೊಳ್ಳಲು ಈ ಕೆಳಗೆ ಕೆಲವು ಸಲಹೆಗಳನ್ನು ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತೆಳ್ಳಗಾಗುವುದು ಸಾಮಾನ್ಯವಾಗಿ ಆರೋಗ್ಯಕರ. ಆದರೆ ನೀವು ಪೌಷ್ಟಿಕಾಂಶದ ಕೊರತೆಯಿಂದಾಗಿ ಅಥವಾ ಗರ್ಭಿಣಿಯಾಗಿದ್ದು ತೂಕ ಕಳೆದುಕೊಂಡಿದ್ದರೆ, ನಿಜಕ್ಕೂ ಅದು ಕಳವಳ ಪಡಬೇಕಾದ ವಿಷಯ. ಹಾಗಾಗಿ ನೀವು ಕಡಿಮೆ ತೂಕ ಹೊಂದಿದ್ದರೆ, ಆ ಕುರಿತು ಸರಿಯಾದ ಪರಿಶೀಲನೆಗೆ ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರನ್ನು ಭೇಟಿ ಮಾಡಲೇಬೇಕು. ಒಟ್ಟಾಗಿ, ಅವರ ಸಲಹೆಯ ಪ್ರಕಾರ ಮತ್ತು ನಿಮ್ಮ ಪರಿಶ್ರಮದ ಮೂಲಕ, ನಿಮ್ಮ ದೇಹಕ್ಕೆ ಅನುಗುಣವಾದ ಆರೋಗ್ಯಕರ ತೂಕವನ್ನು ಹೊಂದುವ  (Weight Gain) ಗುರಿಯನ್ನು ಸಾಧಿಸಬಹುದು.

ನಿಮ್ಮ ತೂಕ ಕಡಿಮೆ ಇದ್ದರೆ, ಅದನ್ನು ಹೆಚ್ಚಿಸಿಕೊಳ್ಳಲು ಈ ಕೆಳಗೆ ಕೆಲವು ಸಲಹೆಗಳನ್ನು ನೀಡಲಾಗಿದೆ:

skipping
ಪ್ರಾತಿನಿಧಿಕ ಚಿತ್ರ.


ಪದೇ ಪದೇ ತಿನ್ನುತ್ತಿರಿ : ನಿಮ್ಮ ತೂಕ ಕಡಿಮೆ ಇದ್ದಾಗ, ಬೇಗ ಹೊಟ್ಟೆ ತುಂಬಿದಂತೆ ಅನಿಸಬಹುದು. ಎರಡು ಅಥವಾ ಮೂರು ಹೊತ್ತಿಗೆ ಹೊಟ್ಟೆ ತುಂಬಾ ತಿನ್ನುವ ಬದಲು, ದಿನದಲ್ಲಿ 5 ರಿಂದ 6 ಬಾರಿ ಸ್ವಲ್ಪ ಸ್ವಲ್ಪ ಪ್ರಮಾಣದ ಆಹಾರವನ್ನು ತಿನ್ನಿ.

ಪೌಷ್ಟಿಕಾಂಶಯುಕ್ತ ಆಹಾರ ಆಯ್ಕೆ ಮಾಡಿಕೊಳ್ಳಿ : ಆರೋಗ್ಯಕರ ಆಹಾರಕ್ರಮದ ಭಾಗವಾಗಿ, ಸಂಪೂರ್ಣ ಧಾನ್ಯದ ಬ್ರೆಡ್, ಪಾಸ್ತಾಗಳು ಮತ್ತು ಧಾನ್ಯಗಳು; ಹಣ್ಣುಗಳು ಮತ್ತು ತರಕಾರಿಗಳು; ಹಾಲಿನ ಉತ್ಪನ್ನಗಳು, ತೆಳು ಪ್ರೋಟೀನ್ ಮೂಲಗಳು; ಒಣ ಬೀಜಗಳು ಮತ್ತು ಬೀಜಗಳನ್ನು ಆಯ್ಕೆ ಮಾಡಿಕೊಳ್ಳಿ.

ಇದನ್ನೂ ಓದಿ: Namita Weight Loss: ದೇಹದ ತೂಕ ಇಳಿಸಿಕೊಂಡು ಬಳುಕುವ ಬಳ್ಳಿಯಂತಾದ ನಟಿ ನಮಿತಾ..!

ಸ್ಮೂದಿ ಮತ್ತು ಶೇಕ್‍ಗಳನ್ನು ಸೇವಿಸಿ : ಡಯೆಟ್ ಸೋಡಾ, ಕಾಫಿ ಮತ್ತು ಕಡಿಮೆ ಕ್ಯಾಲೊರಿಯುಕ್ತ ಪಾನೀಯಗಳನ್ನು ಸೇವಿಸಬೇಡಿ. ಬದಲಿಗೆ, ಹಾಲು ಮತ್ತು ಹಣ್ಣುಗಳಿಂದ ತಯಾರಿಸಿದ ಆರೋಗ್ಯಕರ ಶೇಕ್‍ಗಳನ್ನು ಕುಡಿಯಿರಿ, ಅದಕ್ಕೊಂದಿಷ್ಟು ಪುಡಿ ಮಾಡಿದ ಅಗಸೆ ಬೀಜವನ್ನು ಸೇರಿಸಲು ಮರೆಯದಿರಿ. ಕೆಲವು ಕೇಸ್‍ಗಳಲ್ಲಿ ಮಾತ್ರ ದ್ರವ ಆಹಾರದ ಬದಲಿಯನ್ನು ಶಿಫಾರಸು ಮಾಡಬಹುದು.

ನೀರು ಸೇವನೆ ಬಗ್ಗೆ ಗಮನ ಇರಲಿ: ಊಟಕ್ಕೆ ಮುಂಚೆ ನೀರನ್ನು ಕುಡಿಯುವುದರಿಂದ ಹಸಿವು ಕುಂದುತ್ತದೆ ಎಂಬುವುದು ಕೆಲವರ ಅನುಭವ. ಅಂತಹ ಸಂದರ್ಭಗಳಲ್ಲಿ ಊಟ ಅಥವಾ ತಿಂಡಿಯ ಜೊತೆಗೆ ಅಧಿಕ ಕ್ಯಾಲೋರಿ ಉಳ್ಳ ಪಾನೀಯಗಳನ್ನು ಸೇವಿಸುವುದು ಉತ್ತಮ. ಇತರರಿಗೆ ಊಟವಾದ 30 ನಿಮಿಷಗಳ ನಂತರ ಕುಡಿಯುವುದು ಲಾಭದಾಯಕ ಆಗಬಹುದು.

ಸೇವಿಸುವ ಪ್ರತಿಯೊಂದು ಆಹಾರದ ಲೆಕ್ಕವಿರಲಿ : ಒಣ ಬೀಜಗಳು, ಪೀನಟ್ ಬಟರ್, ಚೀಸ್, ಒಣ ಹಣ್ಣುಗಳು ಮತ್ತು ಅವಕಾಡೋಗಳನ್ನು ತಿನ್ನಿ. ರಾತ್ರಿ ಮಲಗುವ ವೇಳೆ ಪೀನಟ್ ಬಟರ್, ಜೆಲ್ಲಿ ಸ್ಯಾಂಡ್‍ವಿಚ್ ಅಥವಾ ಬೆಣ್ಣೆ ಹಣ್ಣು, ತರಕಾರಿ ತುಂಡುಗಳು ಮತ್ತು ತೆಳು ಮಾಂಸ ಅಥವಾ ಚೀಸ್ ತಿನ್ನಿ.

ಹೆಚ್ಚಿನ ಸೇರ್ಪಡೆ : ನಿಮ್ಮ ಊಟದಲ್ಲಿ ಕ್ಯಾಲೋರಿಯನ್ನು ಹೆಚ್ಚಿಸಬೇಕು ಎಂದಾದಲ್ಲಿ, ಇನ್ನಷ್ಟು ತಿನಿಸುಗಳನ್ನು ಸೇರಿಸಿ- ಕ್ಯಾಸರೋಲ್‍ಗಳಲ್ಲಿ ಚೀಸ್ ಮತ್ತು ಬೇಯಿಸಿದ ಮೊಟ್ಟೆಗಳು ಹಾಗೂ ಸೂಪ್ ಮತ್ತು ಸ್ಟ್ಯೂಗಳಲ್ಲಿ ಕೊಬ್ಬು ರಹಿತ ಹಾಲು.

ಇದನ್ನೂ ಓದಿ: Weight Loss: ತೂಕ ಇಳಿಸಿಕೊಂಡ ನಂತರ ವಿವಾಹವಾದ ಹಾಸ್ಯ ನಟಿ Vidyullekha Raman

ಸಾಂದರ್ಭಿಕ ಸತ್ಕಾರ : ನೀವು ಕಡಿಮೆ ತೂಕ ಹೊಂದಿದ್ದರೂ ಕೂಡ, ಸಕ್ಕರೆ ಮತ್ತು ಕೊಬ್ಬು ಸೇವನೆಯ ಕುರಿತು ಎಚ್ಚರದಿಂದ ಇರುವುದನ್ನು ಮರೆಯದಿರಿ. ಅಪರೂಪಕ್ಕೆ ಐಸ್‍ಕ್ರೀಂ ಜೊತೆ ಒಂದು ತುಂಡು ಪೈ ಸೇವಿಸಿದರೆ ಪರವಾಗಿಲ್ಲ. ಆದರೆ ಹೆಚ್ಚಿನ ಟ್ರೀಟ್ , ಅಂದರೆ ಸತ್ಕಾರಗಳು ಆರೋಗ್ಯಕರ ಆಗಿರಬೇಕು ಮತ್ತು ಕ್ಯಾಲೋರಿಯ ಜೊತೆಗೆ ಪೌಷ್ಟಿಕಾಂಶವನ್ನು ಕೂಡ ಒದಗಿಸಬೇಕು. ಬ್ರಾನ್ ಮಫ್ಫಿನ್‍ಗಳು, ಮೊಸರು ಮತ್ತು ಗ್ರನೋಲಾ ಬಾರ್‍ಗಳು ಈ ನಿಟ್ಟಿನಲ್ಲಿ ಒಳ್ಳೆಯ ಆಯ್ಕೆ.

ವ್ಯಾಯಾಮ: ವ್ಯಾಯಾಮ, ಅದರಲ್ಲೂ ಮುಖ್ಯವಾಗಿ ಶಕ್ತಿ ತರಬೇತಿ , ನಿಮ್ಮ ಸ್ನಾಯುಗಳನ್ನು ರೂಪಿಸುವ ಮೂಲಕ ತೂಕವನ್ನು ಹೆಚ್ಚಿಸಲು ಸಹಾಯ ಮಾಡಬಹುದು. ವ್ಯಾಯಾಮದಿಂದ ನಿಮ್ಮ ಹಸಿವು ಕೂಡ ಹೆಚ್ಚಬಹುದು.
First published: