Walking Tips: ದಿನಕ್ಕೆ ಹತ್ತು ನಿಮಿಷ ವಾಕಿಂಗ್ ಮಾಡಿದ್ರೆ ಪ್ರಯೋಜನಗಳು ಹಲವಾರು

Weight Loss: . ವಾಕಿಂಗ್(Walking) ಒಂದು ಉಪಯುಕ್ತ ಸಾಧನವಾಗಿದೆ, ವಿಶೇಷವಾಗಿ ತೂಕ ಇಳಿಸಿಕೊಳ್ಳಲು(Weight Loss) ಪ್ರಯತ್ನಿಸುವವರಿಗೆ. ಆದರೆ ತೂಕ ಇಳಿಸಿಕೊಳ್ಳಲು ವಾಕಿಂಗ್ ಒಂದೇ ಮಾರ್ಗವಲ್ಲ. ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಸಹ ಮುಖ್ಯವಾಗುತ್ತದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಹವು ಸದೃಢವಾಗಿರಲು ಸರಿಯಾದ ವ್ಯಾಯಾಮದ(Exercise) ಅಗತ್ಯವಿದೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಅಧಿಕ ತೂಕದ(Weight) ಸಮಸ್ಯೆಯನ್ನು ತಡೆಯಬಹುದು. ವ್ಯಾಯಾಮ ನಿಯಮಿತವಾಗಿಲ್ಲದಿದ್ದಾಗ ಕೆಲವೊಮ್ಮೆ ದಿನನಿತ್ಯದ ವಾಕಿಂಗ್ ಸಹ ಪ್ರಯೋಜನಕಾರಿ ಎಂದು ಅನೇಕ ಅಧ್ಯಯನಗಳು ಸಾಬೀತು ಮಾಡಿದೆ. ಜನರು ಹೆಚ್ಚು ಕಾಲ ನಡೆಯಬೇಕು ಮತ್ತು ಕಡಿಮೆ ಕುಳಿತುಕೊಳ್ಳಬೇಕು ಎಂದು ಯುಎಸ್(US) ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ವಾಕಿಂಗ್(Walking) ಒಂದು ಉಪಯುಕ್ತ ಸಾಧನವಾಗಿದೆ, ವಿಶೇಷವಾಗಿ ತೂಕ ಇಳಿಸಿಕೊಳ್ಳಲು(Weight Loss) ಪ್ರಯತ್ನಿಸುವವರಿಗೆ. ಆದರೆ ತೂಕ ಇಳಿಸಿಕೊಳ್ಳಲು ವಾಕಿಂಗ್ ಒಂದೇ ಮಾರ್ಗವಲ್ಲ. ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಸಹ ಮುಖ್ಯವಾಗುತ್ತದೆ.  

ಹೃದಯದ ಆರೋಗ್ಯವನ್ನು ಸುಧಾರಿಸುವುದು.

ಹೃದ್ರೋಯದ ಸಮಸ್ಯೆಗಳು ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹಾಗಾಗಿ ಹೃದಯದ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.ಕೆಲವು ಸಂಶೋಧನೆಗಳು ಹೃದ್ರೋಗ ಮತ್ತು ದೀರ್ಘಾಯುಷ್ಯದ ಅಪಾಯವನ್ನು ಕಡಿಮೆ ಮಾಡಲು ಸಾಕಷ್ಟು ವಾಕಿಂಗ್ ಮಾಡುವುದು ಸೂಕ್ತ ಎಂದು ಸೂಚಿಸುತ್ತದೆ.

ಮಾನಸಿಕ ಆರೋಗ್ಯ

ಇದನ್ನೂ ಓದಿ: ರೆಡಿಯಾಗಲು ಸಮಯ ಇಲ್ವಾ? ಈ ಟಿಪ್ಸ್ ಫಾಲೋ ಮಾಡಿ

ದೇಹ ಹಾಗೂ ಮನಸ್ಸಿನ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ನಿತ್ಯ ನಡೆಯುವುದರಿಂದ ವ್ಯಕ್ತಿಯ ಜ್ಞಾನ ವೃದ್ಧಿಯಾಗುವುದಲ್ಲದೆ ಮನಃಶಾಂತಿಯೂ ದೊರೆಯುತ್ತದೆ. ಖಿನ್ನತೆ ಮತ್ತು ಆತಂಕದಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೊಜ್ಜು ನಿಭಾಯಿಸಬೇಕು

ಸ್ಥೂಲಕಾಯತೆಯು ಹೃದ್ರೋಗ, ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್​ಗೆ ಕಾರಣವಾಗಬಹುದು. ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ತೂಕ ಹೊಂದಿರುವವರು ವಾಕಿಂಗ್ ಮಾಡಲು ಪ್ರಾರಂಭಿಸಿದರೆ ಸುಲಭವಾಗಿ ತೂಕವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಅಧ್ಯಯನಗಳು ಸಾಬೀತು ಮಾಡಿದೆ.

 ವ್ಯಾಯಾಮೇತರ ಚಟುವಟಿಕೆಗಳನ್ನು ಹೆಚ್ಚಿಸುವುದು..

ನಾನ್-ಎಕ್ಸರ್ಸೈಸ್ ಆಕ್ಟಿವಿಟಿ ಥರ್ಮೋಜೆನೆಸಿಸ್ (NEAT) ಅನ್ನು ಹೆಚ್ಚಿಸಬೇಕು ಏಕೆಂದರೆ ಯಾವಾಗಲೂ ವ್ಯಾಯಾಮ ಮಾಡಲು ಸಾಧ್ಯವಿಲ್ಲ. ಅಂದರೆ ವಾಕಿಂಗ್, ಪಾತ್ರೆ ತೊಳೆಯುವುದು ಮತ್ತು ಮನೆಯನ್ನು ಸ್ವಚ್ಛಗೊಳಿಸುವಂತಹ ವ್ಯಾಯಾಮ ಮಾಡಬೇಕು. ವಾರದಲ್ಲಿ ಸ್ವಲ್ಪ ವಾಕಿಂಗ್ ಹೋಗುವುದರಿಂದ 200 ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಸ್ವಲ್ಪ ಪ್ರಯತ್ನದಿಂದ ಗಣನೀಯ ಪ್ರಮಾಣದಲ್ಲಿ ಕ್ಯಾಲೊರಿಗಳನ್ನು ಸುಡಬಹುದು.

ವಾಕಿಂಗ್ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಹೀಗೆ ಮಾಡಿ

ವಾಕಿಂಗ್ ಮಾಡುವಾಗ ಹೆಚ್ಚು ಬಿಸಿಲು ಇರದಂತೆ ನೋಡಿಕೊಳ್ಳಿ, ಅದು ನಿಮಗೆ ಹೆಚ್ಚು ಆಯಾಸವನ್ನ ಉಂಟು ಮಾಡುತ್ತದೆ. ಅಲ್ಲದೇ ಮಳೆ ಕೂಡ ಇರಬಾರದು. ಮಳೆ ಇದ್ದರೆ ನೀವು ಕೆಲ ದಿನಗಳ ಕಾಲ ವಾಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ.

ನೀರು ಸೇವನೆ ಮಾಡುವುದನ್ನ ಮರೆಯಬಾರದು

ಹೆಚ್ಚು ದೂರ ವಾಕಿಂಗ್ ಮಾಡುವುದಾದರೆ ನೀರು ಕುಡಿದು ಹೊರಡುವುದು ಒಳ್ಳೆಯದು. ಕನಿಷ್ಠ 30 ರಿಂದ 60 ನಿಮಿಷಗಳ ಮೊದಲು ಎರಡು ಕಪ್ ನೀರು ಕುಡಿಯಿರಿ. ನಿಮ್ಮ ನಡಿಗೆಯಿಂದ ಹಿಂತಿರುಗಿದಾಗ ದೇಹವನ್ನು ಮರು-ಹೈಡ್ರೇಟ್ ಮಾಡಲು ಒಂದು ಲೋಟ ನೀರು ಕುಡಿಯಿರಿ. ಯಾವುದೇ ಸಕ್ಕರೆ ಸೋಡಾ ಅಥವಾ ಎಲೆಕ್ಟ್ರೋಲೈಟ್ ಪಾನೀಯಗಳನ್ನು ಕುಡಿಯಬೇಡಿ.

ಒಳ್ಳೆಯ ಶೂಗಳನ್ನು ಬಳಸಿ.

ಅನೇಕ ಜನರು ವಾಕಿಂಗ್‌ಗಾಗಿ ಸ್ಯಾಂಡಲ್‌ಗಳನ್ನು ಬಳಸುತ್ತಾರೆ. ಆದರೆ ಇದು ಸರಿಯಲ್ಲ. ಬದಲಿಗೆ ಒಳ್ಳೆಯ ಶೂಗಳನ್ನು ಬಳಸುವುದು ಉತ್ತಮ. ನೀವು ಬಹಳ ದೂರ ನಡೆದರೂ  ನಿಮ್ಮ ಕಾಲುಗಳಿಗೆ ಹೆಚ್ಚು ನೋವು ಉಂಟಾಗವುದಿಲ್ಲ.

ಸರಿಯಾದ ವೇಗವನ್ನು ಆರಿಸಿ.

ಇದನ್ನೂ ಓದಿ:ಹಾಗಲಕಾಯಿ ಕಹಿ ಅಂತಾ ಮೂಗು ಮುರಿಯಬೇಡಿ - ಇದರಲ್ಲಿದೆ ಹಲವಾರು ಆರೋಗ್ಯಕರ ಪ್ರಯೋಜನಗಳು

ನಡಿಗೆಯ ಮಧ್ಯದಲ್ಲಿ ವಿರಾಮ ನೀಡುವುದರಿಂದ ಕ್ಯಾಲೊರಿಗಳನ್ನು ಉತ್ತಮವಾಗಿ ಸುಡುತ್ತದೆನಿಮ್ಮ ಹೃದಯ ಬಡಿತವನ್ನು ಹೆಚ್ಚಿಸಲು ಪ್ರತಿ ಐದು ನಿಮಿಷಗಳಿಗೊಮ್ಮೆ ಪವರ್ ವಾಕ್ ಮಾಡಿ ಪವರ್ ವಾಕಿಂಗ್ ನಿಮಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
Published by:Sandhya M
First published: