• Home
  • »
  • News
  • »
  • lifestyle
  • »
  • Dementia: ಬುದ್ಧಿಮಾಂದ್ಯತೆ ಉಂಟಾಗುವ ಮೊದಲೇ ಅದನ್ನು ಪತ್ತೆ ಹಚ್ಚಲು ಇಲ್ಲಿದೆ ಸಲಹೆ

Dementia: ಬುದ್ಧಿಮಾಂದ್ಯತೆ ಉಂಟಾಗುವ ಮೊದಲೇ ಅದನ್ನು ಪತ್ತೆ ಹಚ್ಚಲು ಇಲ್ಲಿದೆ ಸಲಹೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

50ರ ನಂತರದ ಹರೆಯದಲ್ಲಿರುವ ಹಾಗೂ ಅತಿಯಾದ ರಕ್ತದೊತ್ತಡ ಹೊಂದಿರುವ ಇಲ್ಲವೆ ಯಾವುದೇ ರೀತಿಯ ವ್ಯಾಯಾಮಗಳನ್ನು ಮಾಡದಿರುವ ವ್ಯಕ್ತಿಗಳನ್ನು ಮಾನಿಟರ್ ಮಾಡುವ ಮೂಲಕ ಆರಂಭದಲ್ಲೇ ಮುಂದೆ ಎದುರಾಗುವ ಸಮಸ್ಯೆಗಳನ್ನು ಪತ್ತೆಹಚ್ಚಬಹುದು.

  • News18 Kannada
  • Last Updated :
  • Karnataka, India
  • Share this:

ಬುದ್ಧಿಮಾಂದ್ಯತೆ (Dementia) ಎಂಬುದು ಒಂದು ಬಗೆಯ ಮಾನಸಿಕ (Mental disease) ವ್ಯಾಧಿಯಾಗಿದ್ದು ಇದರಿಂದ ಬಳಲುತ್ತಿರುವವರು ನಿತ್ಯ ಸಂಕಷ್ಟ ಪಡುತ್ತಾರೆ ಎಂದರೆ ತಪ್ಪಿಲ್ಲ. ಆದರೆ, ಯಾರಿಗೆ ಆಗಲಿ ತಮಗೆ ಬುದ್ಧಿಮಾಂದ್ಯತೆ ಉಂಟಾಗಬಹುದೆಂದು ಗೊತ್ತಾಗುವುದಿಲ್ಲ. ಆ ಬಗ್ಗೆ ಕೆಲವು ಲಕ್ಷಣಗಳು ದಟ್ಟವಾಗಿ ಗೋಚರಿಸಲಾರಂಭಿಸಿದಾಗಲೇ ಹಲವು ಬಗೆಯ ಡಯಾಗ್ನಿಸಿಸ್ ಅಥವಾ ಪರೀಕ್ಷೆಗಳಿಗೆ (Test) ಒಳಪಡುತ್ತಾರೆ.


ಆದರೆ, ಇದೀಗ ಹೊಸ ಅಧ್ಯಯನವೊಂದರ ಪ್ರಕಾರ, ವಿಜ್ಞಾನಿಗಳು ಬುದ್ಧಿಮಾಂದ್ಯತೆ ಉಂಟಾಗುವ 9 ವರ್ಷಗಳ ಮುಂಚೆಯೇ ಅದನ್ನು ಹೇಗೆ ಗುರುತಿಸಬಹುದೆಂಬುದರ ಬಗ್ಗೆ ಕಂಡುಕೊಂಡಿದ್ದಾರೆಂದು ತಿಳಿದುಬಂದಿದೆ. ಅಲ್ಝೈಮರ್ ಅಸೋಸಿಯೆಷನ್ನಿನಿಂದ ಪ್ರಕಟಿತವಾದ ಅಲ್ಝೈಮರ್ ಆಂಡ್ ಡಿಮೆನ್ಷಿಯಾ ಎಂಬ ಜರ್ನಲ್ ಒಂದರಲ್ಲಿ ಈ ಬಗ್ಗೆ ಪ್ರಕಟಿಸಲಾಗಿದೆ.


ಈ ಮೂಲಕ ಭವಿಷ್ಯದಲ್ಲಿ ಸಂಭಾವ್ಯ ಬುದ್ಧಿಮಾಂದ್ಯತೆಗೊಳಗಾಗುವ ಜನರಿಗೆ ನೆರವು ನೀಡುವುದರ ಬಗ್ಗೆ ಈ ಹೊಸ ಸಂಶೋಧನೆ ಭರವಸೆ ನೀಡಿದ್ದಷ್ಟೇ ಅಲ್ಲದೆ ಕ್ಲಿನಿಕಲ್ ಪರೀಕ್ಷೆಗಳಿಗೆ ಸಿದ್ಧರಾಗಿರುವ ಜನರಿಗೂ ಉತ್ತಮವಾದ ರೀತಿಯಲ್ಲಿ ಚಿಕಿತ್ಸೆ ನೀಡಲು ಇದು ಸಹಾಯಕವಾಗಲಿದೆ ಎನ್ನಲಾಗಿದೆ.


ಇದನ್ನೂ ಓದಿ: Book: ಪುಸ್ತಕ ಬರೆಯುವ ಆಸೆಯಿದೆ, ಆದ್ರೆ ಬರಿಯೋಕೆ ಆಗ್ತಿಲ್ಲ ಅನ್ನೋರು ಇಲ್ಲಿ ಗಮನಿಸಿ


ಈ ಹೊಸ ಸಂಶೋಧನೆಯ ಲೇಖಕರಾಗಿರುವ ಸ್ವಾಡ್ಡಿವುದಿಪಾಂಗ್ ಅವರು ಹೇಳುವಂತೆ, ಅವರ ತಂಡವು ಬುದ್ಧಿಮಾಂದ್ಯತೆಗೊಳಗಾದ ರೋಗಿಗಳ ಇತಿಹಾಸವನ್ನು ಜಾಲಾಡಿದಾಗ ಅವರು ಈ ಸ್ಥಿತಿಗೊಳಪಡುವ ಹಲವು ವರ್ಷಗಳ ಹಿಂದೆಯೇ ಕೆಲವು ಅರಿವಿನ ದುರ್ಬಲತೆಯ ಲಕ್ಷಣಗಳನ್ನು ತೋರಿಸಿದ್ದಾರೆ ಎಂದಾಗಿದೆ.


ಮೆದುಳಿನ ಕುರಿತು ಸಂಶೋಧನೆ


ಅವರು, "ನಾವು ಅವರಲ್ಲಿ ಕಂಡುಕೊಂಡಂತಹ ದುರ್ಬಲತೆಗಳು ಸೂಕ್ಷ್ಮವಾಗಿದ್ದವಾದರೂ ಅವೆಲ್ಲವೂ ಅರಿವಿನ ಸ್ಥಿತಿಗೆ ಸಂಬಂಧಿಸಿದ್ದೇ ಆಗಿದ್ದವು. ನಮಗೆ ಸಿಕ್ಕ ಈ ಹೊಸ ತಿಳುವಳಿಕೆಯಿಂದ ನಾವು ಇತರೆ ಯಾರೇ ಆಗಲಿ ಭವಿಷ್ಯದಲ್ಲಿ ಬುದ್ಧಿಮಾಂದ್ಯತೆಗೆ ಒಳಪಡುವ ಸಾಧ್ಯತೆಯಿದ್ದಲ್ಲಿ ಅವರನ್ನು ಪ್ರಾರಂಭದಲ್ಲೇ ಗುರುತಿಸಿ ಅವರಿಗೆ ಸಮರ್ಪಕವಾದ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.


ಅತಿಯಾದ ರಕ್ತದೊತ್ತಡ ಹೊಂದಿದವರು


ಉದಾಹರಣೆಗೆ 50ರ ನಂತರದ ಹರೆಯದಲ್ಲಿರುವ ಹಾಗೂ ಅತಿಯಾದ ರಕ್ತದೊತ್ತಡ ಹೊಂದಿರುವ ಇಲ್ಲವೆ ಯಾವುದೇ ರೀತಿಯ ವ್ಯಾಯಾಮಗಳನ್ನು ಮಾಡದಿರುವ ವ್ಯಕ್ತಿಗಳನ್ನು ಮಾನಿಟರ್ ಮಾಡುವ ಮೂಲಕ ಆರಂಭದಲ್ಲೇ ಅವರನ್ನು ಸಂಭಾವ್ಯ ಈ ಮಾನಸಿಕ ಸ್ಥಿತಿಗೆ ಒಳಗಾಗುವುದರಿಂದ ತಪ್ಪಿಸಬಹುದಾಗಿದೆ" ಎನ್ನುತ್ತಾರೆ ವಿಜ್ಞಾನಿ ಸ್ವಾಡ್ಡಿವುದಿಪಾಂಗ್.


ಸಮಸ್ಯೆ-ಪರಿಹರಿಸುವ ಬಗೆ


ಈ ಅಧ್ಯಯನದಲ್ಲಿ ವಿಜ್ಞಾನಿಗಳು ಯುಕೆಯ ಬಯೋಬ್ಯಾಂಕ್ ನಿಂದ ದತ್ತಾಂಶಗಳನ್ನು ಸಂಗ್ರಹಿಸಿ ಸಮಗ್ರವಾಗಿ ವಿಶ್ಲೇಷಿಸಿದ್ದಾರೆ. ಅವರಿಗೆ ಈ ಒಟ್ಟಾರೆ ಅಧ್ಯಯನದಲ್ಲಿ ಎರಡು ಪ್ರಮುಖ ಆರಂಭಿಕ ಹಂತಗಳು ಈ ವ್ಯಾಧಿಗೆ ಸಂಬಂಧಿಸಿದಂತೆ ಕಂಡುಬಂದಿವೆ ಹಾಗೂ ಅವುಗಳೆಂದರೆ ಸಮಸ್ಯೆ-ಪರಿಹರಿಸುವ ಹಾಗೂ ನೆನಪಿಸಿಕೊಳ್ಳುವ ಸಾಮರ್ಥ್ಯ ಅಥವಾ ಸ್ಮರಣಶಕ್ತಿ.


ಈ ಸಂಶೋಧನಾ ಅಧ್ಯಯನದ ಇನ್ನೊಬ್ಬ ಲೇಖಕರಾದ ಡಾ. ಟಿಮ್ ರಿಟ್ಮ್ಯಾನ್ ಅವರು ಈ ಬಗ್ಗೆ ಇನ್ನೊಂದು ಅಂಶವನ್ನು ಹೇಳುತ್ತಾರೆ ಹಾಗೂ ಅದೆಂದರೆ, "ಜನರು ಸುಖಾಸುಮ್ಮನೆ ಚಿಂತೆಗೀಡಾಗುವ ಸಾಧ್ಯತೆಯಿಲ್ಲ, ಏಕೆಂದರೆ ಕೆಲವರು ಸ್ವಾಭಾವಿಕವಾಗಿ ಉತ್ತಮವಾದ ಸ್ಮರಣಶಕ್ತಿ ಹೊಂದಿರುವುದಿಲ್ಲ, ಅದೆಷ್ಟೋ ಆರೋಗ್ಯವಂತ ಜನರು ತಮ್ಮ ಸಹವರ್ತಿಗಳೊಂದಿಗೆ ಹೋಲಿಸಿದಾಗ ಅವರಿಗಿಂತ ಉತ್ತಮ ಅಥವಾ ಅವರಿಗಿಂತ ಕಳಪೆ ಪ್ರದರ್ಶನ ನೀಡುವವರಾಗಿರುತ್ತಾರೆ. ಇವೆಲ್ಲವೂ ಬುದ್ಧಿಮಾಂದ್ಯತೆಗೆ ಸಂಬಂಧಿಸಿದೆ ಎನ್ನಲಾಗುವುದಿಲ್ಲ. ಯಾರೇ ಆಗಲಿ ತಮ್ಮ ಸ್ಮರಣಶಕ್ತಿ ಅಥವಾ ಬುದ್ಧಿಕೌಶಲ್ಯಕ್ಕೆ ಸಂಬಂಧಿಸಿದಂತೆ ಆರಂಭದಲ್ಲೇ ವಿಪರೀತವಾದ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಗಮನಿಸಿದರೆ ಅಂತಹವರು ಈ ರೀತಿಯ ಕ್ಲಿನಿಕಲ್ ಟ್ರಯಲ್ ಗಳಿಗೆ ಒಳಗಾಗಬಹುದು" ಎಂದು.
ದಿ ಇಂಡಿಪೆಂಡೆಂಟ್ ಮಾಧ್ಯಮ ವರದಿ ಏನು ಹೇಳುತ್ತೆ? 


ದಿ ಇಂಡಿಪೆಂಡೆಂಟ್ ಮಾಧ್ಯಮ ವರದಿ ಮಾಡಿರುವಂತೆ ಅಧ್ಯಯನದಲ್ಲಿ ಯುಕೆ ಬಯೋಬ್ಯಾಂಕ್ ನಿಂದ ಸಂಗ್ರಹಿಸಲಾದ ಜನರ ದತ್ತಾಂಶಗಳಿಂದ ಕಂಡುಬಂದಿರುವ ವಿಷಯವೆಂದರೆ ಅಲ್ಝೈಮರ್ ಅಭಿವೃದ್ಧಿಪಡಿಸಿಕೊಂಡ ಜನರು ಇತರೆ ಆರೋಗ್ಯವಂತರಿಗಿಂತ ಅವರ ಜೊತೆ ನಡೆಸಲಾದ ಪರೀಕ್ಷೆಯಲ್ಲಿ ಬಹಳ ಕಳಪೆ ಪ್ರದರ್ಶನ ತೋರಿದ್ದರು. ಈ ಪರೀಕ್ಷೆಗಳು ಸಮಸ್ಯೆ ಪರಿಹರಿಸುವಿಕೆ, ಸ್ಮರಣೆ, ಪ್ರತಿಕ್ರಯಿಸುವ ಅವಧಿ ಮುಂತಾದ ಮಾನದಂಡಗಳನ್ನು ಹೊಂದಿತ್ತು.


ರಿಸರ್ಚ್ ಸಂಸ್ಥೆಯ ನೀತಿ ಮುಖ್ಯಸ್ಥರಾಗಿರುವ ಡೇವಿಡ್ ಥಾಮಸ್ ಪ್ರಕಾರ


ಇನ್ನು ಯುಕೆ ಸ್ಥಿತ ಅಲ್ಝೈಮರ್ಸ್ ರಿಸರ್ಚ್ ಸಂಸ್ಥೆಯ ನೀತಿ ಮುಖ್ಯಸ್ಥರಾಗಿರುವ ಡೇವಿಡ್ ಥಾಮಸ್ ಹೇಳುವಂತೆ, ಬುದ್ಧಿಮಾಂದ್ಯತೆ ಉಂಟಾಗುವುದನ್ನು ತಪ್ಪಿಸಿಕೊಳ್ಳಬೇಕೆಂದಿದ್ದಲ್ಲಿ ಅದರ ಆರಂಭಿಕ ಹಂತದಲ್ಲೇ ಆ ಬಗ್ಗೆ ತಿಳಿದುಕೊಂಡು, ಚಿಕಿತ್ಸೆಗಾಗಿ ಮುಂದುವರಿಯುವುದಾಗಿದೆ. ಏಕೆಂದರೆ, ಆರೋಗ್ಯ ಸೇವೆಗಳನ್ನು ಒದಗಿಸುವ ಅನೇಕ ಸಂಸ್ಥೆಗಳು ಯಾವುದೇ ಪ್ರಖರವಾದ ಲಕ್ಷಣಗಳು ಕಂಡುಬರದೆಯೇ ಮೆದುಳಿನಲ್ಲಿ ಏನಾದರೂ ಬದಲಾವಣೆಗಳಾಗಿದ್ದಲ್ಲಿ ಆ ಕುರಿತು ಪರೀಕ್ಷೆಗಳನ್ನು ನಡೆಸುವುದಿಲ್ಲ.


ಗಾರ್ಡಿಯನ್ ವರದಿ ಮಾಡಿರುವಂತೆ ಪ್ರಸ್ತುತ ಡಿಮೆನ್ಷಿಯಾ ಸ್ಥಿತಿಗೆ ಪರಿಣಾಮಕಾರಿಯಾದ ಕೆಲವೇ ಕೆಲವು ಚಿಕಿತ್ಸೆಗಳು ಮಾತ್ರವೇ ಲಭ್ಯವಿದೆ, ಕಾರಣ ಪರಿಣಿತರ ಪ್ರಕಾರ ಬುದ್ಧಿಮಾಂದ್ಯತೆ ಎಂಬುದು ಅದರ ಪ್ರಖರವಾದ ಲಕ್ಷಣಗಳನ್ನು ತೋರಿಸಲು ಆರಂಭಿಸಿದಾಗ ಮಾತ್ರವೇ ಅದರ ಉಪಸ್ಥಿತಿ ಕಂಡುಬರುತ್ತದೆ, ಆದರೆ ವಾಸ್ತವದಲ್ಲಿ, ಆ ಸ್ಥಿತಿಯ ಸಿದ್ಧತೆ ಹಲವು ವರ್ಷಗಳ ಹಿಂದಿನಿಂದಲೇ ಪ್ರಾರಂಭವಾಗಿರುತ್ತದೆ ಎಂದಾಗಿದೆ.

First published: