Body Odour: ದೇಹದ ದುರ್ವಾಸನೆಯಿಂದ ಜನರೊಂದಿಗೆ ಬೆರೆಯಲು ಮುಜುಗರವಾಗ್ತಿದ್ರೆ ಹೀಗೆ ಮಾಡಿ

Tips To Control Body Odour : ವರಿದಾಗ ದೇಹದ ದುರ್ವಾಸನೆ ಬರುವುದು ಸಹಜ. ಆದರೆ ಕೆಲವರಿಗೆ ದೇಹದಿಂದ ನಿರಂತರ ವಾಸನೆ ಬರುತ್ತದೆ. ದಿನಕ್ಕೆ ಎರಡ್ಮೂರು ಬಾರಿ ಸ್ನಾನ ಮಾಡಿದರು ಸಹ ವಾಸನೆ ಹೋಗುವುದಿಲ್ಲ. ಸ್ವಲ್ಪ ಹೊತ್ತು ಫ್ರೆಶ್ ಆಗಿರುತ್ತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾವುದೇ ಒಂದು ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ನಿಮ್ಮ ದೇಹದ ದುರ್ಗಂಧದಿಂದ(Body Odour) ನಿಮಗೆ ಮುಜುಗರವಾಗಿದೆಯಾ?  ದುರ್ವಾಸನೆ(Bad Smell) ಯಾರಿಗೂ ಬೇಡ. ದೀರ್ಘಕಾಲ ಇರುವ ಯಾವುದೇ ವಸ್ತುವು ಯಾವುದೇ ದುರ್ವಾಸನೆ ಉಂಟುಮಾಡಬಹುದು. ಆದರೆ ನಮ್ಮ ದೇಹವೇ ದುರ್ವಾಸನೆ ಬೀರುತ್ತದೆ. ಇದು ಅಸಹನೀಯ ಎಂಬುದು ಸತ್ಯ. ಈ ವಾಸನೆಯಿಂದ ಹೆಚ್ಚಿನ ಜನರು ನಮ್ಮ ಹತ್ತಿರ ಬರಲು ಬಯಸುವುದಿಲ್ಲ. ಬೆವರಿದಾಗ ದೇಹದ ದುರ್ವಾಸನೆ ಬರುವುದು ಸಹಜ. ಆದರೆ ಕೆಲವರಿಗೆ ದೇಹದಿಂದ ನಿರಂತರ ವಾಸನೆ ಬರುತ್ತದೆ. ದಿನಕ್ಕೆ ಎರಡ್ಮೂರು ಬಾರಿ ಸ್ನಾನ ಮಾಡಿದರು ಸಹ ವಾಸನೆ ಹೋಗುವುದಿಲ್ಲ. ಸ್ವಲ್ಪ ಹೊತ್ತು ಫ್ರೆಶ್ ಆಗಿರುತ್ತೆ. ಆದರೆ ಮತ್ತೆ ಆ ದುರ್ವಾಸನೆ ನಿಮ್ಮನ್ನು ಸುತ್ತುವರಿಯುತ್ತದೆ. ಹಾಗಾದ್ರೆ ಸುಲಭವಾಗಿ ಈ ವಾಸನೆಯಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಮಾರ್ಗಗಳು  

ನಿಮ್ಮನ್ನು ನೀವು ಸ್ವಚ್ಛವಾಗಿರಿಸಿಕೊಳ್ಳಿ

ದಿನಕ್ಕೆ ಒಮ್ಮೆಯಾದರೂ ಸ್ನಾನ ಮಾಡಿ ಇದು ಬೆವರಿನ ಸಮಸ್ಯೆಗೆ ಪರಿಹಾರ ನೀಡುತ್ತದೆ ಅಲ್ಲದೆ,ನಿಮ್ಮ ಚರ್ಮದ ಮೇಲಿನ ಕೆಲವು ಬ್ಯಾಕ್ಟೀರಿಯಾಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಬೆವರು ವಾಸನೆ ಬರುವುದಿಲ್ಲ, ಆದರೆ ನಿಮ್ಮ ಚರ್ಮದ ಮೇಲೆ ವಾಸಿಸುವ ಬ್ಯಾಕ್ಟೀರಿಯಾಗಳು ಬೆವರಿನೊಂದಿಗೆ ಬೆರೆತಾಗ, ಸಾಕಷ್ಟು ದುರ್ವಾಸನೆ ಉಂಟುಮಾಡುತ್ತವೆ.

ಆಂಟಿ ಬ್ಯಾಕ್ಟೀರಿಯಲ್ ಸೋಪ್ ಬಳಸಿ

ಇದನ್ನೂ ಓದಿ: ಸಿಗರೇಟ್ ಅಭ್ಯಾಸ ಬಿಡಲು ಇ-ಸಿಗರೇಟ್ ಸಹಾಯ ಮಾಡುವುದಿಲ್ಲವಂತೆ

ಬ್ಯಾಕ್ಟೀರಿಯಾ ವಿರೋಧಿ ಸೋಪ್ ಬಾರ್‌ ಬಳಕೆ ಮಾಡಿ ಸ್ನಾನ ಮಾಡುವುದು ಉತ್ತಮ. ಕೆಲವು ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ, ಇದು ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ನಿಮ್ಮ ಬಟ್ಟೆಗಳನ್ನು ಸ್ವಚ್ಛವಾಗಿಡಿ.

ನೀವು ಹೆಚ್ಚು ಬೆವರುತ್ತಿರುವಾಗ ಆಗಾಗ್ಗೆ ಬಟ್ಟೆಗಳನ್ನು ಬದಲಾಯಿಸಿ. ತಾಜಾ ಬಟ್ಟೆಗಳು ದೇಹದ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಸಾಕ್ಸ್ ಅನ್ನು ಬದಲಾಯಿಸಲು ಮರೆಯದಿರಿ, ವಿಶೇಷವಾಗಿ ನೀವು ಪಾದದ ವಾಸನೆಯನ್ನು ಹೊಂದಿದ್ದರೆ. ನಿಮ್ಮ ಬೂಟುಗಳಲ್ಲಿ ಡಿಯೋಡರೆಂಟ್ ಪುಡಿಗಳನ್ನು ಬಳಸಿ.

ಬೇಡದ ಕೂದಲು ತೆಗೆಯಿರಿ

ಬಾಯಿಯ ದುರ್ವಾಸನೆಯನ್ನು ತೊಡೆದುಹಾಕಲು ವಿವಿಧ ಪುಡಿಗಳು ಮತ್ತು ದೇಹದ ಸ್ಪ್ರೇಗಳನ್ನು ಬಳಕೆ ಮಾಡಬಹುದು. ಹಾಗೆಯೆ ದೇಹದ ವಾಸನೆಯನ್ನು ಕಡಿಮೆ ಮಾಡಲು ದೇಹದಿಂದ ಅನಗತ್ಯ ಕೂದಲನ್ನು ಕಾಲ ಕಾಲಕ್ಕೆ ತೆಗೆದು ಹಾಕಬೇಕಾಗುತ್ತದೆ. ಹೆಚ್ಚಿನ ವಾಸನೆಯಿಂದ ಮುಕ್ತಿ ಸಿಗುತ್ತದೆ.

ಚಹಾ ಮತ್ತು ಕಾಫಿಯನ್ನು ಕಡಿಮೆ ಮಾಡಿ 

ದೇಹದಿಂದ ಬೆವರು ಉತ್ಪಾದನೆಯಲ್ಲಿ ಚಹಾ ಮತ್ತು ಕಾಫಿ ಪ್ರಮುಖ ಅಂಶಗಳಾಗಿವೆ. ಹಾಗಾಗಿ ಆಗಾಗ ಕಾಫಿ ಕುಡಿಯುವುದನ್ನು ತಪ್ಪಿಸಿ. ನೀವು ಸ್ನಾನ ಮಾಡಲು ಬಳಸುವ ನೀರಿನಲ್ಲಿ ಸ್ವಲ್ಪ ಪುದೀನಾವನ್ನು ಸೇರಿಸಿ ಚೆನ್ನಾಗಿ ಕುದಿಸಿ ಆ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮವು ತಾಜಾವಾಗಿರುತ್ತದೆ ಮತ್ತು ವಾಸನೆಯಿಂದ ಮುಕ್ತವಾಗಿರುತ್ತದೆ.

ಸ್ನಾನದ ಬಕೆಟ್ ನೀರಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ದೀರ್ಘಕಾಲದವರೆಗೆ ಬೆವರು ಮಾಡುವುದಿಲ್ಲ. ಬೆವರುವುದರಿಂದ ದುರ್ವಾಸನೆ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

ಬಾಯಿಯ ದುರ್ವಾಸನೆಗೆ 

ಬೆಳಿಗ್ಗೆ ನಿಮ್ಮ ಹಲ್ಲುಜ್ಜುವಾಗ, ನಾಲಿಗೆಯನ್ನು ಕ್ಲೀನರ್‌ನಿಂದ ಸ್ವಚ್ಛಗೊಳಿಸಲು ಮರೆಯಬೇಡಿ. ಸಂಪೂರ್ಣವಾಗಿ ಜೀರ್ಣವಾಗದ ಆಹಾರವು ಸ್ವಲ್ಪ ಸಮಯದ ನಂತರ ಕೊಳೆತು ದುರ್ವಾಸನೆ ಬೀರುವ ಅನಿಲಗಳನ್ನು ರೂಪಿಸುತ್ತದೆ. ಇವು ಬಾಯಿಯಿಂದ ಬಿಡುಗಡೆಯಾಗುತ್ತವೆ. ಇದು ಕೆಟ್ಟ ಉಸಿರಾಟಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ:ಹಾಗಲಕಾಯಿ ಕಹಿ ಅಂತಾ ಮೂಗು ಮುರಿಯಬೇಡಿ - ಇದರಲ್ಲಿದೆ ಹಲವಾರು ಆರೋಗ್ಯಕರ ಪ್ರಯೋಜನಗಳು

ನಾವು ಸೇವಿಸುವ ಕೆಲವು ಆಹಾರಗಳು ನಾಲಿಗೆಯ ಮೇಲೆ ಸಂಗ್ರಹವಾಗುತ್ತವೆ. ಇದು ಬಾಯಿಯ ದುರ್ವಾಸನೆಯನ್ನೂ ಉಂಟುಮಾಡುತ್ತದೆ ಆದ್ದರಿಂದ ನಾಲಿಗೆಯನ್ನು ಸ್ವಚ್ಛಗೊಳಿಸುವುದು ಉತ್ತಮ.
Published by:Sandhya M
First published: