• Home
  • »
  • News
  • »
  • lifestyle
  • »
  • Breakfast Recipe: ಕೇವಲ 10 ನಿಮಿಷದಲ್ಲಿ ಮಾಡಿ ಬಿಸಿಬಿಸಿ ಶಾವಿಗೆ ಉಪ್ಪಿಟ್ಟು

Breakfast Recipe: ಕೇವಲ 10 ನಿಮಿಷದಲ್ಲಿ ಮಾಡಿ ಬಿಸಿಬಿಸಿ ಶಾವಿಗೆ ಉಪ್ಪಿಟ್ಟು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Semya UpmaPr Shavige Uppittu: ಅನೇಕ ಮನೆಗಳಲ್ಲಿ ಉಪ್ಪಿಟ್ಟು ಬಹಳ ಸಾಮಾನ್ಯವಾಗಿರುತ್ತವೆ ಮತ್ತು ಮುಖ್ಯವಾಗಿ ಬೆಳಗಿನ ತಿಂಡಿಗೆ ಮಾಡಲಾಗುತ್ತದೆ. ಆದರೆ ಮಕ್ಕಳಿಗೆ ಉಪ್ಪಿಟ್ಟು ಅಂದರೆ ಇಷ್ಟವಾಗುವುದಿಲ್ಲ. ಆದರೆ ಅದನ್ನು ಮಾಡುವ ಹಲವಾರು ವಿಧಾನಗಳಿಗೆ. ಉಪ್ಪಿಟ್ಟಿನಲ್ಲಿ ಸಹ ವೆರೈಟಿ ಇದೆ. ಸಬ್ಬಕ್ಕಿ ಉಪ್ಪಿಟ್ಟು, ಓಟ್ಸ್ ಒಪ್ಪಿಟ್ಟು, ಹೀಗೆ.

ಮುಂದೆ ಓದಿ ...
  • Share this:

ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ.


ಅನೇಕ ಮನೆಗಳಲ್ಲಿ ಉಪ್ಪಿಟ್ಟು ಬಹಳ ಸಾಮಾನ್ಯವಾಗಿರುತ್ತವೆ ಮತ್ತು ಮುಖ್ಯವಾಗಿ ಬೆಳಗಿನ ತಿಂಡಿಗೆ ಮಾಡಲಾಗುತ್ತದೆ. ಆದರೆ ಮಕ್ಕಳಿಗೆ ಉಪ್ಪಿಟ್ಟು ಅಂದರೆ ಇಷ್ಟವಾಗುವುದಿಲ್ಲ. ಆದರೆ ಅದನ್ನು ಮಾಡುವ ಹಲವಾರು ವಿಧಾನಗಳಿಗೆ. ಉಪ್ಪಿಟ್ಟಿನಲ್ಲಿ ಸಹ ವೆರೈಟಿ ಇದೆ. ಸಬ್ಬಕ್ಕಿ ಉಪ್ಪಿಟ್ಟು, ಓಟ್ಸ್ ಒಪ್ಪಿಟ್ಟು, ಹೀಗೆ. ಅದರಲ್ಲೂ ಹೆಚ್ಚು ಪ್ರಸಿದ್ದವಾದ ವಿಧ ಎಂದರೆ ಶಾವಿಗೆ ಉಪ್ಪಿಟ್ಟು. ಹುಳಿ ಹುಳಿ ಖಾರ ಖಾರ ರುಚಿಯಾಗಿರುವ ಈ ಉಪ್ಪಿಟ್ಟು ಅಂದ್ರೆ ಮಕ್ಕಳಿಗೂ ಇಷ್ಟ. ಅಲ್ಲದೇ ಶಾವಿಗೆ ಉದ್ದವಿರುವುದರಿಂದ ಇದನ್ನು ಮ್ಯಾಗಿ ಅಂದುಕೊಂಡು ಇಷ್ಟಪಟ್ಟು ತಿನ್ನುತ್ತಾರೆ. ಹಾಗಾದ್ರೆ ಕೆವಲ 10 ನಿಮಿಷದಲ್ಲಿ ಶಾವಿಗೆ ಉಪ್ಪಿಟ್ಟು ಮಾಡುವ ವಿಧಾನ ಇಲ್ಲಿದೆ ಶಾವಿಗೆ


ಉಪ್ಪಿಟ್ಟು ಮಾಡಲು ಬೇಕಾಗುವ ಪದಾರ್ಥಗಳು


ಇದನ್ನೂ ಓದಿ: ಬೆಳಗಿನ ತಿಂಡಿಗೆ ಟ್ರೈ ಮಾಡಿ ಹುಳಿ ಹುಳಿ -ಸ್ಪೈಸಿ ಸ್ಟೈಸಿ ಹೇರಳೆಕಾಯಿ ಚಿತ್ರಾನ್ನ


  1. 5 ಕಪ್ ಶಾವಿಗೆ

  2. 3 ಕಪ್ ನೀರು

  3. 1/2 ಟೀಸ್ಪೂನ್  ಉದ್ದಿನ ಬೇಳೆ

  4. 1 ದೊಡ್ಡ ಈರುಳ್ಳಿ

  5. 1 ಟೊಮ್ಯಾಟೊ

  6. 2 ಹಸಿರು ಮೆಣಸಿನಕಾಯಿ

  7. 6 ಕರಿ ಬೇವಿನ ಎಲೆ

  8. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ

  9. 1/4 ಟೀಸ್ಪೂನ್  ಅರಿಶಿನ ಪುಡಿ

  10.  8 ಟೀಸ್ಪೂನ್ ಅಡುಗೆ ಎಣ್ಣೆ

  11.  ರುಚಿಗೆ ತಕ್ಕಷ್ಟು ಉಪ್ಪು

  12.  2ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ

  13.  1/2ಕಪ್ ತೆಂಗಿನ ತುರಿ

  14.  1/2ಟೀಸ್ಪೂನ್ ಸಾಸಿವೆ.


ಶಾವಿಗೆ ಉಪ್ಪಿಟ್ಟು ಮಾಡುವ ವಿಧಾನ


ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಶಾವಿಗೆಯನ್ನು ಹಾಕಿ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೂ ಮೊದಲು  ಈರುಳ್ಳಿ, ಟೊಮ್ಯಾಟೊ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟುಕೊಳ್ಳಿ.


ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಸಾಸಿವೆ ಮತ್ತು ಉದ್ದಿನ ಬೆಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ.ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೊ ಹಾಕಿ.


ನಂತರ ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೊ ಮೆತ್ತಗಾಗುವವರೆಗೆ ಚನ್ನಾಗಿ ಹುರಿಯಿರಿ.ಅಳತೆ ಪ್ರಕಾರ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದಾಗ ಕೂಡಲೇ ಹುರಿದಿಟ್ಟ ಶಾವಿಗೆ ಹಾಕಿ ಮುಚ್ಚಿ ಇಡಿ.


ಇದನ್ನೂ ಓದಿ: ಮಸಾಲೆ ದೋಸೆಯಷ್ಟೇ ಟೇಸ್ಟಿ ಈ ಪಾಲಕ್ ದೋಸೆ -ನೀವು ಟ್ರೈ ಮಾಡಿ


ಎರಡು ನಿಮಿಷದ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮುಚ್ಚಿ. ಮತ್ತೆ ಮುಚ್ಚಳ ಮುಚ್ಚಿ 2-3 ನಿಮಿಷಗಳ ಕಾಲ ಬೇಯಲು ಬಿಡಿ. ಗ್ಯಾಸ್ ಆಫ್ ಮಾಡಿ. 5 ನಿಮಿಷಗಳ ಹಾಗೆಯೇ ಬಿಡಿ ನಂತರ ಸೇವಿಸಿ.

Published by:Sandhya M
First published: