Breakfast Recipe: ಕೆಂಪು ಕೆಂಪು ಬೀಟ್​ರೂಟ್​ ದೋಸೆ ಎಷ್ಟು ರುಚಿಕರ ನೋಡಿ- ನೀವೂ ಮಾಡಿ

Beetroot Dosa: ನಂತರ ಒಂದು ಚಿಕ್ಕ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಇದಕ್ಕೆ ಜೀರಿಗೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಬೆಳ್ಳುಳ್ಳಿ ಹಾಕಿ ಹುರಿಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South India) ಅತ್ಯಂತ ಜನಪ್ರಿಯ ತಿಂಡಿ(Breakfast) ಅಂದರೆ ದೋಸೆ(Dosa). ದೋಸೆಯಲ್ಲಿಯೇ ಹಲವಾರು ವಿಧಗಳನ್ನು ಮಾಡಲಾಗುತ್ತದೆ. ಮಧ್ಯಾಹ್ನದ ಊಟಕ್ಕೂ ಸಹ ಇದನ್ನು ಬೇಡವೆನ್ನುವವರಿಲ್ಲ. ದೋಸೆಗಳಲ್ಲಿ ಅಪಾರವಾದ ವಿಧಗಳಿವೆ. ಒಂದು ರಾತ್ರಿ ನೆನೆಸಿಡಬೇಕಾದ ಉದ್ದಿನ ದೋಸೆಯಿಂದ ಹಿಡಿದು ತಕ್ಷಣ ಮಾಡಬಹುದಾದ ಮೈದಾಹಿಟ್ಟಿನ ದೋಸೆ ಹಅಗೂ ನೀರುದೋಸೆ ಹೀಗೆ ಹಲವಾರು ವಿಧಗಳಿದೆ. ಇಂದು ದೋಸೆ ಹಿಟ್ಟು ಸಿದ್ಧ ರೂಪದಲ್ಲಿ ಅಂಗಡಿಗಳಲ್ಲಿ ಸಿಗುತ್ತಿರುವ ಕಾರಣ ನೆನೆಸಿಟ್ಟು ರುಬ್ಬುವ ತೊಂದರೆಯೇ ಇಲ್ಲ. ಆದರೆ ಮನೆಯಲ್ಲಿಯೇ ಅಕ್ಕಿ, ಉದ್ದಿನಬೇಳೆಯನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ರುಬ್ಬುವ ಮೂಲಕ ಹೆಚ್ಚಿನ ಕಷ್ಟವಿಲ್ಲದೇ ರುಚಿಕರ ದೋಸೆ ತಯಾರಿಸಬಹುದು.

ಹಿಂದಿನಿಂದಲೂ ಮಸಾಲೆ ದೋಸೆ ಎಲ್ಲರಿಗೂ ಇಷ್ಟ. ಈ ಮಸಾಲೆಯನ್ನು ಕೊಂಚ ಬದಲಿಸುವ ಮೂಲಕ ಈ ದೋಸೆಯ ರುಚಿಯನ್ನ ಭಿನ್ನವಾಗಿಸಿ ಇನ್ನಷ್ಟು ರುಚಿಕರವಾಗಿಸಬಹುದು. ಬೀಟ್​ರೂಟ್​ ದೋಸೆಯನ್ನು  ಹೆಚ್ಚಿನ ಮನೆಗಳಲ್ಲಿ ಮಾಡುವುದಿಲ್ಲ. ಆದರೆ ಅದು ಹೆಚ್ಚು ರುಚಿಕರವಾಗಿರುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಬ್ಬಿಣ ಮತ್ತು ಕ್ಯಾಲ್ಸಿಯಂ ರಕ್ತ ಮತ್ತು ಮೂಳೆಗಳಿಗೆ ಉಪಯುಕ್ತವಾಗಿವೆ. ಆಹಾರತಜ್ಞರ ಪ್ರಕಾರ ವಾರಕ್ಕೊಮ್ಮೆಯಾದರೂ ನಿಮ್ಮ ಆಹಾರದಲ್ಲಿ ಬೀಟ್‌ರೂಟ್ ಇರುವುದು ಆರೋಗ್ಯಕರ. ಹಾಗಾದ್ರೆ ಬೀಟ್​ರೂಟ್​ ದೋಸೆ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಬೀಟ್​ರೂಟ್​  ದೋಸೆ ಮಾಡಲು ಬೇಕಾಗಿರುವ ಸಾಮಾಗ್ರಿಗಳು 

2 ರಿಂದ 3 ಬೀಟ್​ರೂಟ್​

ರುಬ್ಬಿದ ದೋಸೆ ಹಿಟ್ಟು  2½ ಕಪ್

ಈರುಳ್ಳಿ - 3 (2 ಮಧ್ಯಮ ಮತ್ತು 1 ಚಿಕ್ಕ).

ಎಣ್ಣೆ - 2 ಚಿಕ್ಕಚಮಚ

ಜೀರಿಗೆ - 1½ ಚಮಚ

ಬೆಳ್ಳುಳ್ಳಿ- 3 ರಿಂದ 4 ಎಸಳು(ಚಿಕ್ಕದಾಗಿ ಹೆಚ್ಚಿಕೊಳ್ಳಿ)

ಇದನ್ನೂ ಓದಿ: ಬೆಳಗ್ಗೆ ತಿಂಡಿ ಏನು ಮಾಡೋದು ಅಂತ ಯೋಚನೆ ಬೇಡ ಘಮ ಘಮಿಸುವ ಬಿಸಿ ಬೇಳೆಬಾತ್ ಮಾಡಿ

ಕೊತ್ತಂಬರಿ ಎಲೆಗಳು- ಸ್ವಲ್ಪ ಚಿಕ್ಕದಾಗಿ ಹೆಚ್ಚಿಕೊಳ್ಳಿಕೆಂಪು

ಮೆಣಸಿನ ಪುಡಿ - 1½ ಚಮಚ (ಕಾಶ್ಮೀರಿ ಚಿಲ್ಲಿ ಪೌಡರ್ ಹೆಚ್ಚು ಉತ್ತಮ)

ಹಸಿಮೆಣಸು - 2 (ಚಿಕ್ಕದಾಗಿ ಹೆಚ್ಚಿದ್ದು)

ಉಪ್ಪು – ರುಚಿಗೆ ತಕ್ಕಷ್ಟು

ಬೀಟ್​ರೂಟ್​  ದೋಸೆ ಮಾಡುವ ವಿಧಾನ

2 ರಿಂದ 3 ಬೀಟ್​ರೂಟ್​ ತೆಗೆದುಕೊಂಡು ಚನ್ನಾಗಿ ತೊಳೆದುಕೊಂಡು ಕುಕ್ಕರಿನೊಳಗೆ ಮುಳುಗುವಷ್ಟು ನೀರಿನಲ್ಲಿಟ್ಟು ಉಪ್ಪು ಹಾಕಿ ಎರಡು ಅಥವಾ ಮೂರು ಸೀಟಿ ಬರುವವರೆಗೆ ಬೇಯಿಸಿ. ಬಳಿಕ ಸೀಟಿ ತೆಗೆಯದೇ ತಣ್ಣಗಾಗಲು ಬಿಡಿ.

ನಂತರ ಒಂದು ಚಿಕ್ಕ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಇದಕ್ಕೆ ಜೀರಿಗೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಕೊಂಚವೇ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಮೆಣಸಿನ ಪುಡಿ, ಹಸಿಮೆಣಸು, ಕೊತ್ತಂಬರಿ ಎಲೆಗಳನ್ನು ಹಾಕಿ ಹುರಿದುಕೊಳ್ಳಿ. ಅದನ್ನು ಆರಲು ಬಿಡಿ. ಎಲ್ಲ ಪದಾರ್ಥಗಳು ಆರಿದ ನಂತರ ಮತ್ತೊಮ್ಮೆ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಈಗ ಬೇಯಿಸಿದ ಬೀಟ್​ರೂಟ್​ ತೆಗೆದುಕೊಂಡು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.  ನಂತರ ಮಸಾಲೆಗಳ ಪೇಸ್ಟ್​ಗೆ ಈ ಮಿಶ್ರಣವನ್ನು ಸೇರಿಸಿ ಚನ್ನಾಗಿ ಕಲಸಿ.

ಎಲ್ಲ ಪದಾರ್ಥಗಳು ಹೆಚ್ಚು ನುಣ್ಣಗೆ ಪೇಸ್ಟ್​ ಆಗಬೇಕು.  ನಂತರ ಒಂದು ಪಾತ್ರೆಯಲ್ಲಿ ದೋಸೆಹಿಟ್ಟನ್ನು ಹಾಕಿ ಇದಕ್ಕೆ  ಈ ಮಿಶ್ರಣವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಉಪ್ಪು ಸೇರಿಸಿ ಇನ್ನಷ್ಟು ಚೆನ್ನಾಗಿ ಮಿಶ್ರಣ ಮಾಡಿ.  ಈಗ ಬೀಟ್​ರೂಟ್​ ದೋಸೆ ಹಿಟ್ಟು ರೆಡಿ. ನಂತರ ದೋಸೆ ಕಾವಲಿಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಚ್ಚಿ ಕಾಯಿಸಿ. ಕಾವಲಿ ನಾನ್ ಸ್ಟಿಕ್ ಆದರೆ ಎಣ್ಣೆ ಅಗತ್ಯವಿಲ್ಲ.

ಈಗ ದೋಸೆ ಹಿಟ್ಟನ್ನು ಒಂದು ಸೌಟಿನಲ್ಲಿ ತೆಗೆದುಕೊಂಡು ಹಿಟ್ಟು ಕಾವಲಿಯ ಎಲ್ಲಾ ಕಡೆಗೆ ಆವರಿಸುವಂತೆ ಹಾಕಿ. ಹೆಚ್ಚು ತೆಳುವಾಗಿರುವಂತೆ ಮಾಡಿ. ಅಗತ್ಯ ಎನಿಸಿದರೆ ಒಂದು ಚಮಚ ಎಣ್ಣೆಯನ್ನು ಅಂಚುಗಳಿಗೆ ಹಾಕಬಹುದು. ಈ ದೋಸೆಯನ್ನು ಮುಚ್ಚಳದಿಂದ ಮುಚ್ಚಿ ಸುಮಾರು ಒಂದರಿಂದ ಎರಡು ನಿಮಿಷ ಬೇಯಲು ಬಿಡಿ.

ಇದನ್ನೂ ಓದಿ: ಉಳಿದ ಅನ್ನದಿಂದಲೂ ಮೃದುವಾದ ಇಡ್ಲಿ ಮಾಡಬಹುದು, ಸುಲಭದ ರೆಸಿಪಿ ಇಲ್ಲಿದೆ

ನಂತರ ಅದನ್ನು ತೆಗೆದು ಒಂದು ಪ್ಲೇಟ್​ನಲ್ಲಿ ಹಾಕಿದರೆ ಸವಿಯಲು ಸಿದ್ಧ. ಇದರಲ್ಲಿ ಹೆಚ್ಚಿನ ಮಸಾಲೆಗಳಿರುವುದರಿಂದ ನಿಮಗೆ ಚಟ್ನಿಯ ಅವಶ್ಯಕತೆ ಸಹ ಇರುವುದಿಲ್ಲ. ಆದರೆ ನಿಮಗೆ ಅಗತ್ಯವಿದ್ದರೆ ಕಾಯಿ ಚಟ್ನಿಯ ಜೊತೆ ಸೇವಿಸಬಹುದು.
Published by:Sandhya M
First published: