ಈ ವೀಕೆಂಡ್ ನಲ್ಲಿ(Weekend) ಅದು ಈ ಮಳೆಯಲ್ಲಿ ಸಂಜೆ ಹೊತ್ತಿಗೆ ಏನಾದರೂ ತಿನ್ನಬೇಕು ಅಂತ ಅನಿಸುವುದು ಕಾಮನ್. ಅದರಲ್ಲೂ ನಾನ್ ವೆಜ್ (Non-Veg) ಪ್ರಿಯರಿಗಂತೂ ಏನಾದರೂ ನಾನ್ ವೆಜ್ ತಿಂಡಿ ತಿನ್ನಬೇಕು ಎಂದು ಈ ಹೊತ್ತಿಗೆ ಅನಿಸದೇ ಇರುವುದಿಲ್ಲ. ಮಳೆ ಬರ್ತಾ ಹೊರಗಡೆ ಹೋಗೋದು ತುಂಬಾ ಕಷ್ಟ ಅಲ್ವಾ. ಹಾಗಿದ್ರೆ ಯಾಕೆ ಸುಮ್ನೆ ಟೆನ್ಶನ್ ಮಾಡ್ತೀರಾ ಮನೆಯಲ್ಲೇ ಕೂತು ಸೂಪರ್ ಆಗಿರೋ ಮಟನ್ ಸೂಪ್ (Mutton Soup) ಮಾಡುವ ರೆಸಿಪಿ (Recipe) ಬಗ್ಗೆ ಇಂದು ಲೇಖನದಲ್ಲಿ ನೋಡೋಣ. ಮಟನ್ ಸೂಪ್ ಕೇವಲ ಬಾಯಿಗೆ ರುಚಿ ಮಾತ್ರವಲ್ಲ ಇದು ಆರೋಗ್ಯಕ್ಕೆ ಕೂಡ ತುಂಬಾ ಸಹಕಾರಿ ಅಂತೆ. ಇದನ್ನ ಒಮ್ಮೆ ತಿಂದೋರು ಮತ್ತೆ ಮತ್ತೆ ತಿನ್ಬೇಕು ಅಂತ ಯೋಚ್ನೆ ಮಾಡಿದ್ದಂತೂ ಸುಳ್ಳಲ್ಲ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಆರೋಗ್ಯಕರ ಕೀಲುಗಳ ಬೆಳವಣಿಗೆಗೆ ಸಹಕಾರಿ, ಕ್ಯಾಲ್ಸಿಯಂ, ಪ್ರೋಟಿನ್, ಮಿನರಲ್ಸ್, ಅಮೀನೋ ಆಸಿಡ್ಸ್ ಅಂಶಗಳುಳ್ಳ, ಉರಿಯೂತ, ಅಲರ್ಜಿ ನಿವಾರಕ ಈ ಮಟನ್ ಸೂಪ್. ಹಾಗಿದ್ದರೆ ಸೂಪರ್ ಆಗಿರೋ ಮಟನ್ ಸೂಪ್ ರೆಸಿಪಿ ನೋಡೋಣ.
ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಟೇಸ್ಟಿ ಫುಡ್; ಮಸಾಲ ಪೂರಿ with ಆಲೂ ಕರಿ
ಬೇಕಾಗಿರುವ ಸಾಮಗ್ರಿಗಳು
ಕುರಿಯ ಕಾಲುಗಳು -8
ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸುಮಾರು ಅರ್ಧ ಚಮಚ
ಸಣ್ಣಗೆ ಹೆಚ್ಚಿದ ನೀರುಳ್ಳಿ- 3
ಹಸಿರು ಮೆಣಸಿನಕಾಯಿ ಸುಮಾರು 2 ರಿಂದ 3
ಟೊಮೆಟೊ 1
ಕೊತ್ತಂಬರಿ ಸೊಪ್ಪು ಸುಮಾರು ಒಂದು ಬಟ್ಟಲು
ಕೆಂಪು ಮೆಣಸಿನ ಪುಡಿ ಒಂದು ಚಮಚ( ಖಾರ ನೋಡಿ ಮತ್ತೆ ಸೇರಿಸಬಹುದು)
ಕರಿಮೆಣಸು ಪುಡಿ 1 ಚಮಚ
ಹುರಿಗಡಲೆ ಸುಮಾರು 1/2 ಚಮಚ
ಎಣ್ಣೆ 2 ಚಮಚ
ಗರಂ ಮಸಾಲ ಪುಡಿ 1 1/2 ಚಮಚ
ಅರಶಿನ ಪುಡಿ ಅರ್ಧ ಚಮಚ
ಏಲಕ್ಕಿ 4 ರಿಂದ 5 ಕಾಳುಗಳು
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯಕ್ಕೆ ತಕ್ಕಂತೆ ನೀರು
ಇದನ್ನೂ ಓದಿ: Fish VS Chicken: ಆರೋಗ್ಯಕರ ಜೀವನಶೈಲಿಗೆ ಮೀನು ಮತ್ತು ಚಿಕನ್ ಎರಡರಲ್ಲಿ ಯಾವುದು ಬೆಸ್ಟ್?
ಮಟನ್ ಸೂಪ್ ಮಾಡುವ ವಿಧಾನ
ತಂದು ಇಟ್ಟಿರುವ ಅಂತಹ ಮಟನ್ ಕಾಲುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಅದನ್ನು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ ಅದೇ ಕುಕ್ಕರ್ ಗೆ ಅರಿಶಿನಪುಡಿ ಏಲಕ್ಕಿ ಪುಡಿ ಮತ್ತು ಕರಿಮೆಣಸು ಪುಡಿಯನ್ನು ಸೇರಿಸಿ. ಹಾಗೆ ಮುಂದೆ 5 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಕುಕ್ಕರ್ ನಲ್ಲಿ ಬೇಯಿಸಿ. ( 2 ವಿಷಲ್).
ನಂತರ ಹುರಿಗಡಲೆ ಮತ್ತು ತೆಂಗಿನತುರಿ ಪೇಸ್ಟನ್ನು ನಯವಾಗಿ ತಯಾರು ಮಾಡಿಟ್ಟುಕೊಳ್ಳಿ. ಈಗ ಪ್ಯಾನ್ ನಲ್ಲಿ ಎಣ್ಣೆ ಹಾಕಿ ಚಿಕ್ಕದಾಗಿ ಹೆಚ್ಚಿರುವ ಈರುಳ್ಳಿ ಮತ್ತು ಹಸಿ ಮೆಣಸು ಸೇರಿಸಿ ಈರುಳ್ಳಿ ಕೆಂಪು ಬಣ್ಣಕ್ಕೆ ಬರುವಷ್ಟು ಕಾಲ ಅದನ್ನು ಬೇಯಿಸಿ,ಇದೀಗ ಅದೇ ಮಿಶ್ರಣಕ್ಕೆ ತಯಾರಿಸಿದಂತಹ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಬೆರೆಸಿ. ಇದನ್ನು ಕೇವಲ 30 ರಿಂದ 4೦ ಸೆಕೆಂಡುಗಳ ಕಾಲ ಮಾತ್ರ ಹುರಿಯಬೇಕು.
ನಂತರ ಸಣ್ಣಗೆ ಹೆಚ್ಚಿದ ಟೊಮೆಟೊ ಮತ್ತು ತೆಂಗಿನತುರಿ ಹುರಿಗಡಲೆ ಪೇಸ್ಟನ್ನು ಹಾಕಿ ಅದರ ಎಣ್ಣೆ ಬಿಡುವಷ್ಟು ಸಮಯ ಅದನ್ನು ಚೆನ್ನಾಗಿ ಬೇಯಿಸಿ, ಹಾಗೆ ಮುಂದೆ ಪ್ರೆಷರ್ ಕುಕ್ಕರ್ ಮುಚ್ಚಳ ತೆರೆಯಿರಿ ಮತ್ತು ತಯಾರ್ ಆಗಿರುವಂತಹ ಮಸಾಲಾ ಪುಡಿಯನ್ನು ಹಾಕಿ ಹಾಗೆ ಅದೇ ಮಿಶ್ರಣವನ್ನು ಸುಮಾರು ಹತ್ತು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುಕ್ಕರ್ ನಲ್ಲಿ ಬೇಯಿಸಿ.
ಕೊನೆಗೆ ಕುಕ್ಕರ್ ತಣ್ಣಗಾದ ನಂತರ ಸಣ್ಣಗೆ ಹೆಚ್ಚಿ ದಂತಹ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಬೆಂದ ಕುರಿಯ ಕಾಲಿನಿಂದ ಬರುವ ಅಂಶಗಳು ಆರೋಗ್ಯಕ್ಕೆ ಅತ್ಯುತ್ತಮ ಮದ್ದಿನ ಮೂಲವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ