Child Care: ಮಕ್ಕಳಲ್ಲಿ ಈ ಲಕ್ಷಣಗಳಿದ್ರೆ ಅದು ಮಧುಮೇಹದ ಸೂಚನೆ ಇರಬಹುದು ಎಚ್ಚರ..

Type 2 Diabetes In Kids: ದೈಹಿಕ ಚಟುವಟಿಕೆಯ ಕೊರತೆಯು ಮಕ್ಕಳು ಟೈಪ್ -2 ಮಧುಮೇಹದ ಅಪಾಯವನ್ನು ಹೆಚ್ಚಿಸಿದೆ. ಏಕೆಂದರೆ ಜಡ ಜೀವನಶೈಲಿ ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಉಂಟುಮಾಡುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಲವಾರು ವರ್ಷಗಳಿಂದ ಟೈಪ್ 2 ಡಯಾಬಿಟಿಸ್(Type 2 diabetes)  ವಯಸ್ಕರಿಗೆ ಮಾತ್ರ  ಬರುತ್ತದೆ ಎಂದು  ನಂಬಲಾಗುತಿತ್ತು. ವಾಸ್ತವವಾಗಿ, ಟೈಪ್ 2 ಡಯಾಬಿಟಿಸ್ ಅನ್ನು ಒಮ್ಮೆ ವಯಸ್ಕ-ಆರಂಭದ ಮಧುಮೇಹ ಎಂದು ಕರೆಯಲಾಗುತ್ತಿತ್ತು. ಆದರೆ ಒಂದು ಕಾಲದಲ್ಲಿ ಮುಖ್ಯವಾಗಿ ವಯಸ್ಕರು ಎದುರಿಸುತ್ತಿದ್ದ ರೋಗವು ಮಕ್ಕಳಲ್ಲಿ(Childrens) ಹೆಚ್ಚು ಸಾಮಾನ್ಯವಾಗುತ್ತಿದ್ದು, ಇದು ಆತಂಕಕಾರಿ ವಿಚಾರವಾಗಿದೆ. ಹಾಗಾಗಿ ಮಕ್ಕಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಂಡಲ್ಲಿ ಕೂಡಲೇ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.

ಹಾಗಾದ್ರೆ ಮಕ್ಕಳಲ್ಲಿ ಮಧುಮೇಹವಿರುವುದರ ಲಕ್ಷಣಗಳೇನು?

1.  ಅತಿಯಾದ ಆಯಾಸನಿಮ್ಮ ಮಗುವು ಅಸಾಧಾರಣವಾಗಿ ದಣಿದಂತೆ ಅಥವಾ  ಹೆಚ್ಚು ನಿದ್ರಿಸುವುದು ಕಂಡುಬಂದರೆ, ರಕ್ತದಲ್ಲಿನ ಸಕ್ಕರೆಯ ಬದಲಾವಣೆಯು ಅವರ ಶಕ್ತಿಯ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಥ.

2. ಪದೇ ಪದೇ ಮೂತ್ರ ವಿಸರ್ಜನೆ

ರಕ್ತದಲ್ಲಿನ ಅತಿಯಾದ ಸಕ್ಕರೆ ಮಟ್ಟವು ಮೂತ್ರಕ್ಕೆ ಅತಿಯಾದ ಸಕ್ಕರೆ ಹೋಗಲು ಕಾರಣವಾಗಬಹುದು,. ಇದು ನಿಮ್ಮ ಮಗುವನ್ನು ಪದೇ ಪದೇ ಮೂತ್ರ ಮಾಡಲು ಕಾರಣವಾಗಬಹುದು.

3. ಹಸಿವು ಹೆಚ್ಚಳ.

ಇದನ್ನೂ ಓದಿ: ಸ್ತನದ ಆರೋಗ್ಯ ಕಾಪಾಡಲು ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ

ಮಧುಮೇಹ ಹೊಂದಿರುವ ಮಕ್ಕಳು ತಮ್ಮ ದೇಹದ ಜೀವಕೋಶಗಳಿಗೆ  ಶಕ್ತಿ ಒದಗಿಸಲು ಸಾಕಷ್ಟು ಇನ್ಸುಲಿನ್ ಹೊಂದಿರುವುದಿಲ್ಲ. ಆಹಾರವು ಶಕ್ತಿಯ ಅತ್ಯುತ್ತಮ ಮೂಲವಾಗುತ್ತದೆ, ಆದ್ದರಿಂದ ಮಕ್ಕಳು ಹೆಚ್ಚಾಗಿ ಹಸಿವನ್ನು ಅನುಭವಿಸುತ್ತಾರೆ. ಈ ಸ್ಥಿತಿಯನ್ನು ಪಾಲಿಫೇಜಿಯಾ ಅಥವಾ ಹೈಪರ್ಫೇಜಿಯಾ ಎಂದು ಕರೆಯಲಾಗುತ್ತದೆ.

ಮಕ್ಕಳಲ್ಲಿ ಮಧುಮೇಹ ಕಾಣಿಸಿಕೊಳ್ಳಲು ಕಾರಣವೇನು?

ಬೊಜ್ಜು: ಭಾರತದಲ್ಲಿ ಸುಮಾರು 1.4 4 ಕೋಟಿ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆಯಿದೆ ಎಂಬುದು ತಿಳಿದುಬಂದಿದೆ.  ಭಾರತವು ಬೊಜ್ಜು ಹೊಂದಿರುವ ಮಕ್ಕಳಲ್ಲಿ ಎರಡನೇ ಸ್ಥಾನದಲ್ಲಿದೆ. ಬೊಜ್ಜು ಟೈಪ್ -2 ಮಧುಮೇಹದ ಬೆಳವಣಿಗೆಯನ್ನು ಮಕ್ಕಳಲ್ಲಿ  ಹೆಚ್ಚು ಮಾಡುತ್ತದೆ.

ದೈಹಿಕ ಚಟುವಟಿಕೆಯ ಕೊರತೆ: ದೈಹಿಕ ಚಟುವಟಿಕೆಯ ಕೊರತೆಯು ಮಕ್ಕಳು ಟೈಪ್ -2 ಮಧುಮೇಹದ ಅಪಾಯವನ್ನು ಹೆಚ್ಚಿಸಿದೆ. ಏಕೆಂದರೆ ಜಡ ಜೀವನಶೈಲಿ ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಉಂಟುಮಾಡುತ್ತಿದೆ. ಈಗಿನ ಮಕ್ಕಳು ಮೊಬೈಲ್​ನಲ್ಲಿ ಹೆಚ್ಚು ಮುಳುಗಿರುತ್ತಾರೆ ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಪೋಷಕರು ತಮ್ಮ ಮಕ್ಕಳ ಟೈಪ್ -2 ಮಧುಮೇಹದ ಅಪಾಯ ಕಡಿಮೆ ಮಾಡಲು ಅಥವಾ ಅದು ಬರದಂತೆ ತಡೆಯಲು  ತಮ್ಮ ಮಕ್ಕಳ ಆಹಾರ ಮತ್ತು ದೈಹಿಕ ಚಟುವಟಿಕೆಯನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.

ಸರಿಯಾದ ಸಮಯಕ್ಕೆ ಆಹಾರ ಸೇವಿಸಿ, ಸರಿಯಾದ ಸಮಯಕ್ಕೆ ಮಲಗಿಸಿ ಹಾಗೂ ಏಳಿಸಿ. ಊಟದಲ್ಲಿ ಕಾರ್ಬೋಹೈಡ್ರೇಟ್ ಹಾಗೂ ಪ್ರೊಟೀನ್​ಸಮ ಪ್ರಮಾಣದಲ್ಲಿರಲಿ. ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.

ಸಮತೋಲಿತ ಆಹಾರವನ್ನು ಸೇವಿಸುವ ಮತ್ತು ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಮಿತಿಗೊಳಿಸುವುದು ಬಹಳ ಮುಖ್ಯ. ಇದರ  ಸಮತೋಲಿತ ಸೇವನೆ ಮಕ್ಕಳು ಅಧಿಕ ತೂಕ ಹೊಂದುವ ಮತ್ತು ಮಧುಮೇಹ ಬರುವ ಸಾಧ್ಯತೆ ಕಡಿಮೆ ಮಾಡುತ್ತದೆ.

ವ್ಯಾಯಾಮ ಮಾಡಿ: ಮಧುಮೇಹವನ್ನು ತಡೆಗಟ್ಟಲು ನಿಯಮಿತವಾದ ವ್ಯಾಯಾಮ ಮುಖ್ಯವಾಗಿದೆ. ಮನೆಯ ಹೊರಗೆ ಆಟವಾಡುವ ಅಭ್ಯಾಸವನ್ನು ಮಾಡಿಸಿ. ಮೊಬೈಲ್ ಹೆಚ್ಚು ಬಳಕೆ ಮಾಡಲು ಬಿಡಬೇಡಿ.

ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ. ಆರೋಗ್ಯಕರ ಆಹಾರ ಮತ್ತು ವ್ಯಾಯಾಮದ ಅಭ್ಯಾಸಗಳು ಮಕ್ಕಳಿಗೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ABC ಜ್ಯೂಸ್ ಆರೋಗ್ಯ ಪ್ರಯೋಜನಗಳನ್ನು ಕೇಳಿದ್ರೆ ಪ್ರತಿದಿನ ಸೇವಿಸದೆ ಇರಲ್ಲ.

ಹೆಚ್ಚು ನೀರು ಕುಡಿಯಲು ಪ್ರೋತ್ಸಾಹಿಸಿ. , ಸಾಫ್ಟ್ ಡ್ರಿಂಕ್‌ ಗಳನ್ನು ಕುಡಿಯುವುದನ್ನು ತಪ್ಪಿಸಿ. ಬದಲಾಗಿ ಫ್ರೆಶ್ ಹಣ್ಣಿನ ಜ್ಯೂಸ್ ಕುಡಿಯುವುದನ್ನು ಪ್ರೋತ್ಸಾಹಿಸಿ, ಅದು ಮಕ್ಕಳ ಆರೋಗ್ಯವನ್ನು ಕಾಪಾಡುತ್ತದೆ. ಮಕ್ಕಳ ಆಹಾರದಲ್ಲಿ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ ಕೊಡಿ.  ಅನ್ನ ಕಡಿಮೆ ಸೇವಿಸಿದರೂ ತೊಂದರೆಯಿಲ್ಲ. ತರಕಾರಿ, ಬೇಳೆಕಾಳು ಹೆಚ್ಚಿರುವುದು ಮಕ್ಕಳ ಆರೋಗ್ಯಕ್ಕೆ ಮುಖ್ಯವಾಗುತ್ತದೆ.
Published by:Sandhya M
First published: