Non-Veg Recipe: ಭಾನುವಾರಕ್ಕೆ ಟೇಸ್ಟೀ ಚಿಕನ್ 65! ರುಚಿಕರವಾದ ಅಡುಗೆ ರೆಸಿಪಿ ಇಲ್ಲಿದೆ

ಈ ವೀಕೆಂಡ್ ಗೆ ಸಕತ್ ಟೇಸ್ಟೀ‌ ಆಗಿರುವ ಚಿಕನ್ 65 ರೆಸಿಪಿ ಮಾಡ್ಬೇಕು ಅಂತ ಅನ್ಕೊಂಡಿದ್ದೀರಾ? ಇಲ್ಲಿದೆ ನೋಡಿ ಸೂಪರ್ ಚಿಕನ್ 65 ರೆಸಿಪಿ‌.

ಚಿಕನ್ 65

ಚಿಕನ್ 65

  • Share this:
    ವೀಕೆಂಡ್ ಗೆ ಏನಾದ್ರೂ ಸ್ಪೆಷಲ್ ರೆಸಿಪಿ‌ (Special Recipe) ಮಾಡ್ಲೇ ಬೇಕು ಅಲ್ವಾ? ಮಳೆಗಾಲ ಬೇರೆ ಸಂಜೆ ಆಗ್ತಾ ಎಣ್ಣೆಯಲ್ಲಿ ಕರಿದ ತಿಂಡಿ‌ ಮಾಡ್ಬೇಕು ಅನ್ಸೋದು‌ ಸಾಮಾನ್ಯ. ಈ ವೀಕೆಂಡ್ ಗೆ ಸಕತ್ ಟೇಸ್ಟೀ‌ ಆಗಿರುವ ಚಿಕನ್ 65 (Chicken 65) ರೆಸಿಪಿ ಮಾಡ್ಬೇಕು ಅಂತ ಅನ್ಕೊಂಡಿದ್ದೀರಾ? ಇಲ್ಲಿದೆ ನೋಡಿ ಸೂಪರ್ ಚಿಕನ್ 65 ರೆಸಿಪಿ‌. ಚಿಕನ್ 65ನ್ನು ಎರಡು ರೀತಿಯಲ್ಲಿ ತಯಾರಿಸಬಹುದು. ತುಂಬಾ ಡ್ರೈ ಬೇಕೆನ್ನುವವರು ಡ್ರೈ ಆಗಿ ಮಾಡಬಹುದು, ಆದರೆ ಚಪಾತಿ (Chapathi), ಪರೋಟ ಜೊತೆ ತಿನ್ನುವಾಗ ಚಿಕನ್ 65 ಸ್ವಲ್ಪ ಗ್ರೇವಿ (Gravy) ರೀತಿ ಇದ್ದರೆ ಚೆಂದ. ಈ ಅಡುಗೆಯನ್ನು ತಯಾರಿಸಲು ಸಾಮಾನ್ಯವಾಗಿ ಚಿಕನ್ ಮಾಡಲು ಬಳಸುವ ಸಾಮಾಗ್ರಿಗಳು ಇದ್ದರೆ ಸಾಕು. ಈ ರೆಸಿಪಿ ಸುಲಭವಾಗಿ ಮಾಡಬಹುದಾಗಿದ್ದು ತಯಾರಿಸುವ ವಿಧಾನ ನೋಡಿ ಇಲ್ಲಿದೆ.

    ಇದನ್ನೂ ಓದಿ: Breakfast Recipe: ಕೇರಳ ಸ್ಟೈಲ್ ಟೊಮೆಟೋ ಕರಿ; ಚಪಾತಿ, ರೋಟಿಗೆ ಬೆಸ್ಟ್ ಕಾಂಬಿನೇಷನ್

    ಚಿಕನ್ 65 ರೆಸಿಪಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು

    1) ಸುಮಾರು ಒಂದುವರೆ ಕೆಜಿ ಎಷ್ಟು ಚರ್ಮ ತೆಗೆದ ಕೋಳಿ ಮಾಂಸ
    2) ಒಂದು ದೊಡ್ಡ ಚಮಚದಷ್ಟು ಅಕ್ಕಿ ಪುಡಿ
    3) ಒಂದು ದೊಡ್ಡ ಚಮಚದಷ್ಟು ಜೋಳದ ಪುಡಿ
    4) ಒಂದು ದೊಡ್ಡ ಚಮಚದಷ್ಟು ಮೈದಾ ಹಿಟ್ಟು
    4) ಒಂದು ಚಿಕ್ಕ ಚಮಚದಲ್ಲಿ ಅರಸಿನ ಪುಡಿ
    5) ನಾಲ್ಕು ಚಿಕ್ಕ ಚಮಚದಷ್ಟು ಕೆಂಪು ಮೆಣಸಿನ ಪುಡಿ
    6) ಒಂದು ಚಿಕ್ಕ ಚಮಚದಲ್ಲಿ ಗರಂ ಮಸಾಲೆ ಪುಡಿ
    7) ಒಂದು ಚಮಚದಷ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್
    8) ನಿಂಬೆರಸ
    9) ಒಂದು ಹಸಿ ಮೊಟ್ಟೆ
    10) ಒಗ್ಗರಣೆಗೆ ಹಾಕಲು ಒಂದು ಚಿಕ್ಕ ಚಮಚದಷ್ಟು ಜೀರಿಗೆ
    11) ಕರಿಬೇವಿನ ಸೊಪ್ಪು ಐದರಿಂದ ಏಳು
    12) ಬೆಳ್ಳುಳ್ಳಿ ಮೂರರಿಂದ ನಾಲ್ಕು ಎಸಳು
    13) ಒಂದು ಸಣ್ಣ ಶುಂಠಿ ಪೀಸ್
    14) ಆರರಿಂದ ಎಂಟು ಕಾಯಿ ಮೆಣಸು
    15) ಒಂದು ದೊಡ್ಡ ಚಮಚದಲ್ಲಿ ರೆಡ್ ಚಿಲ್ಲಿ ಸಾಸ್
    16) ರುಚಿಗೆ ತಕ್ಕಷ್ಟು ಉಪ್ಪು
    17) ಸುಮಾರು ಅರ್ಧ ಲೀಟರಿಗೆ ಆಗುವಷ್ಟು ಅಡುಗೆ ಎಣ್ಣೆ

    ಇದನ್ನೂ ಓದಿ: Non-Veg Recipe: ಭಾನುವಾರಕ್ಕೆ ಬೊಂಬಾಟ್ Ghee ಚಿಕನ್ ಫ್ರೈ

    ಮಾಡುವ ವಿಧಾನ

    ಒಂದು ಹದವಾದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ತೊಳೆದು ಇಟ್ಟು ಕೊಂಡಂತಹ ಕೋಳಿ ಮಾಂಸವನ್ನು ಹಾಕಿ. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಒಂದು ನಿಂಬೆಯನ್ನು ಹಿಂದಿ ರಸ ಹಾಕಿ. ಅದೇ ರೀತಿ ಅದೇ ಪಾತ್ರೆಗೆ ಅರಶಿನ ಪುಡಿ ಸೇರಿಸಿ ಸ್ವಲ್ಪ ಗರಂ ಮಸಾಲೆ ಪುಡಿ ನಾಲ್ಕು ಚಿಕ್ಕ ಚಮಚದಷ್ಟು ಕೆಂಪು ಮೆಣಸಿನ ಪುಡಿ ಕರಿಮೆಣಸಿನ ಪುಡಿ ಹಾಕಿ. ತಯಾರು ಮಾಡಿದಂತಹ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಅದಕ್ಕೆ ಸೇರಿಸಿ. ಒಂದು ಹಸಿ ಮೊಟ್ಟೆಯನ್ನು ಹೊಡೆದು ಅದಕ್ಕೆ ಸೇರಿಸಿ ಹಾಗೆ ಮುಂದೆ ಅಕ್ಕಿಹಿಟ್ಟು ಮೈದಾ ಹಿಟ್ಟು ಜೋಳದ ಹಿಟ್ಟು ಗಳನ್ನು ಅಗತ್ಯಕ್ಕೆ ತಕ್ಕಷ್ಟು ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಸುಮಾರು ಅರ್ಧ ಗಂಟೆಗಳ ಕಾಲ ಈ ಮಸಾಲೆಯನ್ನು ಹಾಗೆ ನೆನೆಯಲು ಬಿಡಿ.

    ನಂತರ ಒಂದು ದೊಡ್ಡ ಬಾಣಲೆಯಲ್ಲಿ ತೆಗೆದುಕೊಂಡು ಅದಕ್ಕೆ ಕಾಲುಭಾಗದಷ್ಟು ಎಣ್ಣೆಯನ್ನು ಹಾಕಿ. ಎಣ್ಣೆ ಕಾದನಂತರ ತಯಾರು ಮಾಡಿದಂತಹ ಚಿಕ್ಕನ್ ಪೀಸನ್ನು ಒಂದೊಂದಾಗಿ ಎಣ್ಣೆಯಲ್ಲಿ ಬಿಡಿ ಮಧ್ಯಮ ಉರಿಯಲ್ಲಿ ಗ್ಯಾಸನ್ನು ಹಿಟ್ಟು ಕೆಂಬಣ್ಣಕ್ಕೆ ಬರುವತನಕ ಅದನ್ನು ಕಾಯಲು ಬಿಡಿ.

    ಹೀಗೆ ಎಲ್ಲಾ ಚಿಕ್ಕನ್ ಅನ್ನು ಮಾಡಿದ ಬಳಿಕ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ತೆಗೆದುಕೊಂಡು ಅದಕ್ಕೆ ಜೀರಿಗೆ ಚಿಕ್ಕದಾಗಿ ಹೆಚ್ಚಿದ ಶುಂಠಿ ಮತ್ತು ಚಿಕ್ಕದಾಗಿ ಹೆಚ್ಚಿದ ಬೆಳ್ಳುಳ್ಳಿ, ಉದ್ದವಾಗಿ ಹಚ್ಚಿದ ಕಾಯಿ ಮೆಣಸು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಐದರಿಂದ ಆರು ಕರಿಬೇವಿನ ಸೊಪ್ಪು ಹಾಗೂ ಪುಡಿ ಮಾಡಿದಂತಹ ಜೀರಿಗೆ-ಕೊತ್ತಂಬರಿ ಸುಮಾರು ಒಂದು ಚಮಚದಷ್ಟು ಕೆಂಪುಮೆಣಸಿನ ಪುಡಿ ಹಾಗೂ ರೆಡ್ ಚಿಲ್ಲಿ ಸಾಸ್ ಹಾಕಿ ರುಚಿಕೆ ತಕ್ಕಷ್ಟು ಉಪ್ಪು ಬೆರೆಸಿ ಕಾಯಿಸಿ ದಂತಹ ಚಿಕ್ಕನ್ ಅನ್ನು ಹಾಕಿ ಮಿಕ್ಸ್ ಮಾಡಿ
    Published by:Swathi Nayak
    First published: