Sunday Special Recipe: ಸಖತ್ ಸಂಡೇಗೆ ಮಟನ್ ಕೀಮಾ ರೆಸಿಪಿ ..

Mutton Keema: ಮೊದಲನೆಯದಾಗಿ, ಮಟನ್ ಕೀಮಾವನ್ನು ತೊಳೆದು ಮತ್ತು ಕೀಮಾದಲ್ಲಿರುವ ಹೆಚ್ಚುವರಿ ನೀರನ್ನು  ಸೋಸಿಕೊಳ್ಳಿ. ಇಲ್ಲದಿದ್ದಲ್ಲಿ ಆ ನೀರು ಆಹಾರದ ರುಚಿಯನ್ನು ಹಾಳುಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಬ್ಬಗಳ ಜೊತೆ ಶ್ರಾವಣ(Shravana) ಕೂಡ ಮುಗಿದಿದೆ. ಈ ಮಾಸದಲ್ಲಿ ಹೆಚ್ಚಿನ ಜನರು ಮಾಂಸಹಾರವನ್ನು(Nonveg) ಸೇವನೆ ಮಾಡುವುದಿಲ್ಲ.  ಇದೀಗ ಬಹುತೇಕ ಎಲ್ಲರ ಮನೆಗಳಲ್ಲಿ ನಾನ್​ ವೆಜ್ ಮಾಡುತ್ತಾರೆ. ಅದರಲ್ಲೂ ಭಾನುವಾರ , ರಜೆ ಇರುವ ಕಾರಣ ಮತ್ತು ಸುಮಾರು ಒಂದು ತಿಂಗಳ ನಂತರ ನಾನ್​ ವೆಜ್ ಮಾಡುವಾಗ ಮಟನ್​ ಕೈಮಾ(Mutton Keema) ಮಾಡಿದರೇ ಹೇಗಿರತ್ತೆ. ಸಂಡೆ ಸ್ಪೆಷಲ್ ರೆಸಿಪಿಯಲ್ಲಿ ಇವತ್ತು ಮಟನ್ ಕೈಮಾ ರೆಸಿಪಿ.

ಬೇಕಾಗುವ ಸಾಮಾಗ್ರಿ

500 ಗ್ರಾಂ  ಮಾಂಸ/ಕೀಮಾ

2 ಚಮಚ ಎಣ್ಣೆ

2 ಈರುಳ್ಳಿ ಸಣ್ಣಗೆ ಕತ್ತರಿಸಿ

1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್

1/4 ಟೀಸ್ಪೂನ್ ಅರಿಶಿನ ಪುಡಿ

1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ

ಇದನ್ನೂ ಓದಿ: ಸಖತ್ ಸಂಡೇಗೆ ಚಿಕನ್ ಪುಳಿಮುಂಚಿ, ರೆಸಿಪಿ ಇಲ್ಲಿದೆ..ಟ್ರೈ ಮಾಡಿ!

2 ಹಸಿರು ಮೆಣಸಿನಕಾಯಿಯನ್ನು (ಉದ್ದವಾಗಿ ಕತ್ತರಿಸಿ)

1/2 ಟೀಸ್ಪೂನ್ ಗರಂ ಮಸಾಲಾ ಪುಡಿ

1.1/2 ಕಪ್ ನೀರು

2 ಚಮಚ  ಕೊತ್ತಂಬರಿ ರು

ಚಿಗೆ ಉಪ್ಪು

3 ಮಧ್ಯಮ ಗಾತ್ರದ ಟೊಮ್ಯಾಟೊ, (ಸಣ್ಣಗೆ  ಕತ್ತರಿಸಿ)

1/2 ಟೀಸ್ಪೂನ್ ಕಪ್ಪು ಮೆಣಸು

ಜೋಳದ ಪುಡಿ

ಮಾಡುವ ವಿಧಾನ

ಮಾಂಸವನ್ನು ಕೀಮಾ ಮಾಡಿಕೊಳ್ಳಿ, ಅಂಗಡಿಯಲ್ಲಿ ಸಾಮಾನ್ಯವಾಗಿ ಮಾಡಿಕೊಡುತ್ತಾರೆ. ಮಾಂಸವನ್ನು ಎಂದಿಗೂ ದಪ್ಪವಾಗಿ ಕತ್ತರಿಸಬೇಕು.ದಪ್ಪವಾಗಿ ಕೊಚ್ಚಿದ ಮಾಂಸವು ಅತ್ಯುತ್ತಮ ರುಚಿಯನ್ನು ಹೊಂದಿರುತ್ತದೆ ಎಂಬುದು ನಾನ್​ ವೆಜ್​ ಪ್ರಿಯರ ಅಭಿಪ್ರಾಯ.

ಮೊದಲನೆಯದಾಗಿ, ಮಟನ್ ಕೀಮಾವನ್ನು ತೊಳೆದು ಮತ್ತು ಕೀಮಾದಲ್ಲಿರುವ ಹೆಚ್ಚುವರಿ ನೀರನ್ನು  ಸೋಸಿಕೊಳ್ಳಿ. ಇಲ್ಲದಿದ್ದಲ್ಲಿ ಆ ನೀರು ಆಹಾರದ ರುಚಿಯನ್ನು ಹಾಳುಮಾಡುತ್ತದೆ.  ನಂತರ ಪ್ರೆಶರ್ ಕುಕ್ಕರ್ ಅಥವಾ ಒಂದು  ಪಾತ್ರೆಯನ್ನು ತೆಗೆದುಕೊಳ್ಳಿ.ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ ಸೇರಿಸಿ ಮತ್ತು ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವವರೆಗೆ  ಸರಿಯಾಗಿ ಹುರಿಯಿರಿ.  ಈರುಳ್ಳಿಯ ಹಸಿ ವಾಸನೆಯನ್ನು ಹೋಗಲಾಡಿಸಲು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಸರಿಯಾಗಿ ಮಿಶ್ರಣ  ಮಾಡಿ.

ಆ ಮಿಶ್ರಣಕ್ಕೆ ಮಟನ್ ಕೀಮಾ ಸೇರಿಸಿ ಮತ್ತು ಚೆನ್ನಾಗಿ  ಮತ್ತೊಮ್ಮೆ ಮಿಶ್ರಣ ಮಾಡಿ, ಹುರಿದುಕೊಳ್ಳಿ. ಕೀಮಾ ಬಣ್ಣ ಬದಲಾಗುವವರೆಗೆ ಹುರಿಯಬೇಕು ಹಾಗೂ ಯಾವುದೇ ಕಾರಣಕ್ಕೂ ನೀರಿನ ಅಂಶ ಉಳಿಯಬಾರದು.  ಮಿಶ್ರಣ ಸರಿಯಾಗಿ ಬೆಂದ ಮೇಲೆ ಅದಕ್ಕೆ ಉಪ್ಪು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಸೇರಿಸಿ, ಮಿಶ್ರಣ ಮಾಡಿ ಮತ್ತು ಕೆಲವು ನಿಮಿಷಗಳ ಕಾಲ ಹುರಿದು ಅದರಲ್ಲಿ ಎಣ್ಣೆ ಬರುವವರೆಗೆ ಚನ್ನಾಗಿ  ಬೇಯಿಸಿ.

ಅದಕ್ಕೆ ಕತ್ತರಿಸಿದ ಟೊಮ್ಯಾಟೊ, ಗರಂ ಮಸಾಲ ಪುಡಿ, ಕರಿಮೆಣಸು ಪುಡಿ ಸೇರಿಸಿ, ಮಿಶ್ರಣ ಮಾಡಿ ಮತ್ತು ಈ ಮಿಶ್ರಣವನ್ನು  ಟೊಮ್ಯಾಟೊ ಮೃದುವಾಗುವವರೆಗೆ ಬೇಯಿಸಬೇಕು. ಟೊಮ್ಯಾಟೊ ಬೆಂದ ನಂತರ  ಸುಮಾರು ಒಂದೂವರೆ ಕಪ್ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.

ಇದನ್ನೂ ಓದಿ: ಸೂಪರ್ ಸಂಡೇಗೆ ಮಟನ್ ಕೂರ್ಮಾ ರೆಸಿಪಿ ಇಲ್ಲಿದೆ..

ಅದನ್ನು 3 ಸೀಟಿ ಬರುವವರೆಗೂ ಬೇಯಿಸಿ ಅಥವಾ ಅದು ಮೃದುವಾಗುವವರೆಗೂ ಬೇಯಿಸಿ. ನಂತರ ಹಬೆಯನ್ನು ಕಡಿಮೆ ಮಾಡಿ. ತಾಜಾ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.ಅದರಲ್ಲಿ ಆಕಸ್ಮಿಕವಾಗಿ ನೀರು ಉಳಿದಿದ್ದರೆ ಕೆಲವು ನಿಮಿಷ ಬೇಯಿಸಿ. ನಂತರ ಆಫ್ ಮಾಡಿ. ಇದನ್ನು ರೊಟ್ಟಿ, ಅನ್ನ ಅಥವಾ ಪರಾಠದೊಂದಿಗೆ  ಸೇವಿಸಿದರೆ ಅದ್ಭುತವಾಗಿರುತ್ತದೆ.
Published by:Sandhya M
First published: