Signs Of Infertility : ನಿಮಗೂ ಹೀಗೆಲ್ಲ ಆಗುತ್ತಿದ್ರೆ ಅದು ಬಂಜೆತನದ ಲಕ್ಷಣವಾಗಿರಬಹುದು ..

Women Health: ಕೆಲವೊಂದು ಲಕ್ಷಣಗಳು ನಮಗೆ ಸಮಸ್ಯೆಯ ಮುನ್ಸೂಚನೆ ನೀಡುತ್ತದೆ. ಅಂಥಹ ಲಕ್ಷಣಗಳನ್ನು(Signs) ನಿರ್ಲಕ್ಷಿಸಬಾರದು. ಆರೋಗ್ಯಕರ ವಯಸ್ಸಿನಲ್ಲಿರುವ ದಂಪತಿಗಳಿಗೆ ಅಂದರೆ 29 ರಿಂದ 33 ರ ವಯಸ್ಸಿನಲ್ಲಿ , ಸರಿಯಾದ ಗರ್ಭಧಾರಣೆಯ ಸಾಧ್ಯತೆಗಳು ಇನ್ನೂ ಕಡಿಮೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಂಜೆತನ(Infertility) ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಮಕ್ಕಳನ್ನು ಪಡೆಯಬೇಕು ಎಂದು ಬಯಸುವ ಅದೆಷ್ಟೋ ಮಹಿಳೆಯರು ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಸಾಮಾನ್ಯವಾಗಿ ಮಕ್ಕಳನ್ನು ಹೊಂದಲು ಸಿದ್ದರಿರುವಾಗ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಲಾಗುತ್ತದೆ. ಸಮಸ್ಯೆ ಇದ್ದರೆ ಚಿಕಿತ್ಸೆಯನ್ನು ಸಹ ನೀಡಲಾಗುತ್ತದೆ. ಆದರೆ ಕೆಲವೊಂದು ಲಕ್ಷಣಗಳು ನಮಗೆ ಸಮಸ್ಯೆಯ ಮುನ್ಸೂಚನೆ ನೀಡುತ್ತದೆ. ಅಂಥಹ ಲಕ್ಷಣಗಳನ್ನು(Signs) ನಿರ್ಲಕ್ಷಿಸಬಾರದು. ಆರೋಗ್ಯಕರ ವಯಸ್ಸಿನಲ್ಲಿರುವ ದಂಪತಿಗಳಿಗೆ ಅಂದರೆ 29 ರಿಂದ 33 ರ ವಯಸ್ಸಿನಲ್ಲಿ , ಸರಿಯಾದ ಗರ್ಭಧಾರಣೆಯ ಸಾಧ್ಯತೆಗಳು ಇನ್ನೂ ಕಡಿಮೆ (ಕೇವಲ 25%) ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಬಂಜೆತನದ ಲಕ್ಷಣಗಳು ಯಾವುವು ಎಂಬುದು ಇಲ್ಲಿದೆ.

. ಅನಿಯಮಿತ  ಋತು ಚಕ್ರ

ಅನಿಯಮಿತ  ಋತುಚಕ್ರದ ಅವಧಿ ಹೊಂದಿರುವ ಮಹಿಳೆಯರು ಅಂಡೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ, ಇದು ಅಂತಿಮವಾಗಿ ಗರ್ಭಿಣಿಯಾಗುವ ಪ್ರಕ್ರಿಯೆಯಲ್ಲಿ  ಸಮಸ್ಯೆಯನ್ನು ಉಂಟುಮಾಡುತ್ತದೆ. ಆದರೆ, ಋತುಚಕ್ರದ ಸಮಯದಲ್ಲಿ ರಕ್ತದ  ಹರಿವು ಒಂದು ಲಕ್ಷಣ. ಭಾರೀ ಹರಿವು ಮತ್ತು  ರಕ್ತದ ಹರಿವೆ ಇಲ್ಲದಿರುವುದು ಮಹಿಳೆಯರಲ್ಲಿ ಬಂಜೆತನದ ಕೆಲವು ಪ್ರಮುಖ ಲಕ್ಷಣಗಳು ಎನ್ನಲಾಗುತ್ತದೆ. ಬಂಜೆತನದ ಮತ್ತೊಂದು ಲಕ್ಷಣ ಎಂದರೆ ಹೆಚ್ಚು ನೋವು ಮತ್ತು ಮಲ ಮತ್ತು ಮೂತ್ರ ಮಾಡುವ ಸಮಯದಲ್ಲಿ ನೋವಿನ ಜೊತೆ ರಕ್ತಸ್ರಾವವಾಗುವುದು. 3 ತಿಂಗಳಿಗೂ ಹೆಚ್ಚು ಕಾಲ ತಮ್ಮ ಋತುಚಕ್ರವನ್ನು ಹೊಂದಿರದ ಮಹಿಳೆಯರು ತಕ್ಷಣವೇ  ವೈದ್ಯರನ್ನು ಭೇಟಿ ಮಾಡುವುದು ಮುಖ್ಯ. ಯಾವುದೇ ಪಿರಿಯಡ್ಸ್  ಆಗಿಲ್ಲ  ಎಂದರೆ ಅಂಡೋತ್ಪತ್ತಿ ಮಾಡುತ್ತಿಲ್ಲ ಎಂದು ಅರ್ಥೈಸಬಹುದು.

ಮುಖದಲ್ಲಿ ಮೊಡವೆಗಳು ಹೆಚ್ಚಾಗುತ್ತದೆ

ಮಹಿಳೆಯರಲ್ಲಿ, ಹಠಾತ್ ಬದಲಾವಣೆಗಳಾಗುತ್ತದೆ.  ಅಂದರೆ ಏಕಾಏಕಿ ಮತ್ತು ಮೊಡವೆಗಳು ಬರುವುದು  ಬಂಜೆತನದ ಸೂಚನೆ. ಇದಕ್ಕೆ  ಕಾರಣ ಹಾರ್ಮೋನುಗಳ ಬದಲಾವಣೆ.  ಅದು ಅಂತಿಮವಾಗಿ ಪಿಸಿಓಎಸ್ ಮತ್ತು ಗರ್ಭಧಾರಣೆಗೆ ಸಂಬಂಧಿಸಿದ ಇತರ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ: ಸಣ್ಣ ನೆಲ್ಲಿಕಾಯಿಯಲ್ಲಿದೆ ದೊಡ್ಡ ಪ್ರಯೋಜನ ..

ಕೂದಲು ಬೆಳವಣಿಗೆ ಮತ್ತು ತೂಕ ಹೆಚ್ಚಳ

ತೂಕ ಹೆಚ್ಚಾಗುವುದು ಮತ್ತು ಕೂದಲು ಬೆಳವಣಿಗೆ/ನಷ್ಟವು ಎರಡು ಕೂಡ ಬಂಜೆತನದ ಲಕ್ಷಣ. ಮಹಿಳೆಯರಲ್ಲಿ ಗಮನಾರ್ಹವಾಗಿ ಮತ್ತು ಹಠಾತ್ ಕೂದಲು ಬೆಳವಣಿಗೆಯಾಗಲು ಮುಖ್ಯ ಕಾರಣ, ಈ  ಸಂದರ್ಭದಲ್ಲಿ, ದೇಹವು ಅತಿಯಾದ ಪುರುಷ ಹಾರ್ಮೋನುಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದು ಸಾಮಾನ್ಯವಾಗಿ PCOS ಸಮಸ್ಯೆಯಿಂದ ಉಂಟಾಗುತ್ತದೆ. ಮುಖದ  ಮೇಲೆ ಕೂದಲು ಬೆಳವಣಿಗೆ  ಮತ್ತೊಂದು ಸೂಚನೆ. ಮತ್ತೊಂದೆಡೆ, ಕೆಲವು  ಮಹಿಳೆಯರಿಗೆ ಕೂದಲು ಉದುರುತ್ತದೆ.

ಇದು ಸಾಮಾನ್ಯವಾಗಿ ರಕ್ತಹೀನತೆ ಮತ್ತು ಥೈರಾಯ್ಡ್ ಸಮಸ್ಯೆಗಳನ್ನು ಕೂಡ ಉಂಟುಮಾಡುತ್ತದೆ. ಪಿಸಿಓಎಸ್- ಸಾಮಾನ್ಯವಾಗಿ ಬಂಜೆತನಕ್ಕೆ ಅತ್ಯಂತ ಸ್ಪಷ್ಟವಾದ ಕಾರಣ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ತೂಕ ಹೆಚ್ಚಳವಾಗುತ್ತದೆ.  ಇದಿಷ್ಟೇ ಅಲ್ಲದೇ ಮಹಿಳೆಯರಲ್ಲಿ ಬಂಜೆತನದ ವಿವಿಧ ಲಕ್ಷಣಗಳು ಕಾಣಿಸುತ್ತದೆ. ಕೆಲವೊಂದು ಬಾರಿ ಅವರ ದೇಹ ಪ್ರಕೃತಿಯ ಅನುಸಾರವಾಗಿ ಲಕ್ಷಣಗು ಗೋಚರಿಸುತ್ತದೆ.

ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಯಾದಂತೆ ಅವರಲ್ಲಿ ಒತ್ತಡ, ಖಿನ್ನತೆ ಹೆಚ್ಚಾಗುತ್ತದೆ.  ಅವರಿಗೆ ಮೂಡ್ ಸ್ವಿಂಗ್ ಹೆಚ್ಚಾಗುತ್ತದೆ.

ಬಿಳಿ ಮುಟ್ಟು ಉಂಟಾಗುತ್ತದೆ

ಇದನ್ನೂ ಓದಿ: ಸೂರ್ಯಕಾಂತಿ ಬೀಜವನ್ನು ಸೇವಿಸಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ. .

ಇನ್ನು ಹೆಚ್ಚಿನ ಮಹಿಳೆಯರ ಸಾಮಾನ್ಯ ಸಮಸ್ಯೆ,  ಇದು ಸಾಮಾನ್ಯ ಎನಿಸಬಹುದು ಆದರೆ ಹೆಚ್ಚಾದಾಗ ಇದು ಅಪಾಯವನ್ನು ಉಂಟು ಮಾಡುತ್ತದೆ. ಬಿಳಿಮುಟ್ಟು ಹೋಗುವಾಗ ಹೆಚ್ಚು ಹೊಟ್ಟೆ ನೋವು ಬರುವುದು, ವಾಸನೆ ಇವೆಲ್ಲ ಬಂಜೆತನದ ಲಕ್ಷಣ. ಕೆಲವೊಮ್ಮೆ  ದೇಹದಲ್ಲಿ ಉಷ್ಟಾಂಶ ಹೆಚ್ಚಾದಾಗ ಸಹ ಹೀಗೆ ಆಗುತ್ತದೆ, ಆದರೆ ಸುಮಾರು 3 ತಿಂಗಳುಗಳಿಗಿಂತ ಹೆಚ್ಚು ಸಮಯ ಈ ಸಮಸ್ಯೆ ಕಾಣಿಸಿಕೊಂಡಲ್ಲಿ  ವೈದ್ಯರನ್ನ ಭೇಟಿ ಮಾಡುವುದು ಬಹಳ ಮುಖ್ಯವಾಗುತ್ತದೆ.
Published by:Sandhya M
First published: