Black Coffee Side Effects: ನೀವು ಬ್ಲ್ಯಾಕ್ ಕಾಫಿ ಹೆಚ್ಚು ಕುಡಿತೀರಾ? ಹಾಗಾದ್ರೆ ಇದನ್ನು ಓದಲೇಬೇಕು

Side Effects Of Black Coffee: ಇವರು ಉತ್ತರಿಸಿದ ಪ್ರಶ್ನಾವಳಿಗಳ ಆಧಾರದ ಮೇಲೆ ಕಹಿ ರುಚಿಯುಳ್ಳ ಕಾಫಿ ಕುಡಿದವರಿಗೂ ಮತ್ತು ಇವರಲ್ಲಿರುವ ಮನೋರೋಗಿಯ ಮತ್ತು ಹಿಂಸಾಚಾರದ ಗುಣಲಕ್ಷಣಗಳೊಂದಿಗೆ ಧನಾತ್ಮಕವಾಗಿ ಸಂಬಂಧ ಹೊಂದಿದೆ ಎಂಬ ಊಹೆಯನ್ನು ಫಲಿತಾಂಶಗಳು ದೃಢಪಡಿಸಿವೆ ಎಂದು ವರದಿ ತೋರಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಹುತೇಕರಿಗೆ ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣವೇ ಕುಡಿಯಲು ಒಂದು ಕಪ್ ಬಿಸಿ(Coffee) ಬಿಸಿಯಾದ ಕಾಫಿ ಬೇಕಾಗುತ್ತದೆ. ಕಾಫಿ ಕುಡಿಯದೆ ಅವರಿಗೆ ಬೆಳಗ್ಗೆ ನಿದ್ರೆಯಿಂದ(Sleep) ಎದ್ದ ಹಾಗೆಯೇ ಅನ್ನಿಸುವುದಿಲ್ಲ. ನಮಗೆ ಕಾಫಿ ಎಂದಾಕ್ಷಣ ತಟ್ಟನೆ ನೆನಪಾಗುವುದು ಬೆಳಗಿನ ಬೆಡ್ ಕಾಫಿ ಮತ್ತು ಸಂಜೆಯ ಹೊತ್ತು ಮನೆಯ ಮೇಲೆ ಕುಳಿತುಕೊಂಡು ಇಡೀ ದಿನದ ಅನುಭವ ಮೆಲುಕು ಹಾಕುತ್ತಾ ಕುಡಿಯುವ ಕಾಫಿ .ಕಾಫಿ ಕುಡಿಯುವುದು ಸಹ ಒಂದು ರೀತಿಯ ಚಟ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಒಮ್ಮೆ ಕಾಫಿ ಕುಡಿದವರೂ ಮತ್ತದೇ ಸಮಯಕ್ಕೆ ಮತ್ತೊಮ್ಮೆ ಕುಡಿಯಲು ಬಯಸುತ್ತಾರೆ. ಇಲ್ಲದಿದ್ದರೆ ಅವರಿಗೆ ಯಾವುದೇ ಕೆಲಸ ಮಾಡುವುದಕ್ಕೆ ಮನಸ್ಸೇ ಬರುವುದಿಲ್ಲ ಎಂದು ಬಹುತೇಕರು ಹೇಳುವುದನ್ನು ನಾವು ಕೇಳಿರುತ್ತೇವೆ.

ಕೆಲವರಂತೂ ನಾನು ಇಂದು ಕಾಫಿ ಕುಡಿದೇ ಇಲ್ಲಾ, ಅದಕ್ಕೆ ತಲೆ ನೋಯುತ್ತಿದೆ ಎಂದು ಹೇಳುತ್ತಾರೆ . ಕಾಫಿಗೆ ಅನೇಕ ಔಷಧೀಯ ಗುಣಗಳಿದ್ದು ಎಲ್ಲವೂ ಆರೋಗ್ಯಕ್ಕೆ ಅನುಕೂಲಕರವೇ ಆಗಿದೆ ಎಂದು ತುಂಬಾ ಜನರು ಹೇಳುವುದನ್ನು ಸಹ ನಾವು ಕೇಳಿರುತ್ತೇವೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತು ಇಲ್ಲಿ ನಾವು ನೆನಪಿನಲ್ಲಿಟ್ಟು ಕೊಳ್ಳಬೇಕಾಗುತ್ತದೆ. ಆದರೆ ಅದೇಕೆ ಇವತ್ತು ನಾವು ಈ ಕಾಫಿ ಬಗ್ಗೆ ಮಾತಾಡುತ್ತಿದ್ದೇವೆ ಎಂದು ನಿಮ್ಮಲ್ಲಿ ಪ್ರಶ್ನೆಯೊಂದು ಮೂಡುತ್ತಿರಬೇಕು.

ಈ ಬ್ಲ್ಯಾಕ್ ಕಾಫಿಯನ್ನು ಮಿತವಾಗಿ ಕುಡಿದರೆ ಅಷ್ಟೊಂದು ಸಮಸ್ಯೆಯಿಲ್ಲ, ಆದರೆ ಇದನ್ನು ಯಾವ ವ್ಯಕ್ತಿಯು ಹೆಚ್ಚಾಗಿ ಕುಡಿಯುವವರೋ ಅವರಲ್ಲಿ ಮನೋರೋಗಿ ಮತ್ತು ಹಿಂಸಾತ್ಮಕ ಗುಣಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.

ಇದನ್ನೂ ಓದಿ: PCOS ಗೆ ಕುಂಬಳಕಾಯಿ ಮದ್ದು! ಹೀಗೆ ಬಳಸಿ ಅಂತಾರೆ ವೈದ್ಯರು

ಈ ಅಧ್ಯಯನ ನಡೆಸುತ್ತಿರುವ ಆಸ್ಟ್ರಿಯಾದ ಇನ್ಸ್‌ಬ್ರಕ್ ವಿಶ್ವವಿದ್ಯಾಲಯದ ಸಂಶೋಧಕರು ಹೇಗೆ ಈ ಕಹಿ ರುಚಿಯುಳ್ಳ ಕಾಫಿ ಮತ್ತು ಆಹಾರ ಆದ್ಯತೆಗಳು ಸಮಾಜ ವಿರೋಧಿ ವ್ಯಕ್ತಿತ್ವ ಗುಣಲಕ್ಷಣಗಳೊಂದಿಗೆ ಸಂಬಂಧ ಹೊಂದಿರಬಹುದು ಎಂದು ತನಿಖೆ ನಡೆಸಿದರು.

ಅಮೇರಿಕದಲ್ಲಿರುವ 2 ಸಮುದಾಯಗಳನ್ನು ಮಾದರಿಯಾಗಿಟ್ಟುಕೊಂಡು ಸುಮಾರು 953 ಜನರು ತಮ್ಮ ಅಭಿರುಚಿಯ ಆದ್ಯತೆಗಳನ್ನು ಸ್ವಯಂ ವರದಿ ಮಾಡಿದರು. ಮನೋರೋಗಿ, ನಾರ್ಸಿಸಿಸಮ್, ಹಿಂಸಾಚಾರ, ಆಕ್ರಮಣಶೀಲತೆ ಮತ್ತು ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡುವ ವ್ಯಕ್ತಿತ್ವ ಪ್ರಶ್ನಾವಳಿಗಳಿಗೆ ಉತ್ತರಿಸಿದರು.

ಇವರು ಉತ್ತರಿಸಿದ ಪ್ರಶ್ನಾವಳಿಗಳ ಆಧಾರದ ಮೇಲೆ ಕಹಿ ರುಚಿಯುಳ್ಳ ಕಾಫಿ ಕುಡಿದವರಿಗೂ ಮತ್ತು ಇವರಲ್ಲಿರುವ ಮನೋರೋಗಿಯ ಮತ್ತು ಹಿಂಸಾಚಾರದ ಗುಣಲಕ್ಷಣಗಳೊಂದಿಗೆ ಧನಾತ್ಮಕವಾಗಿ ಸಂಬಂಧ ಹೊಂದಿದೆ ಎಂಬ ಊಹೆಯನ್ನು ಫಲಿತಾಂಶಗಳು ದೃಢಪಡಿಸಿವೆ ಎಂದು ವರದಿ ತೋರಿಸುತ್ತದೆ.

ಈ ಮೂಲಕ ಪಡೆದುಕೊಂಡ ದತ್ತಾಂಶವು ವ್ಯಕ್ತಿತ್ವ ಮತ್ತು ನಾವು ಸೇವಿಸುವ ಆಹಾರ ಪದಾರ್ಥಗಳು ಹಾಗೂ ಕುಡಿಯುವ ಪಾನೀಯಗಳು ನಮ್ಮ ಸರ್ವವ್ಯಾಪಿ ನಡವಳಿಕೆಗಳ ಮೇಲೆ ಪ್ರಭಾವ ಬೀರುತ್ತವೆ ಎಂಬುದರ ಬಗ್ಗೆ ವಿನೂತನ ಒಳನೋಟಗಳನ್ನು ಒದಗಿಸುತ್ತದೆ.

ಇದನ್ನೂ ಓದಿ: ಉಗುರಿನ ಬಣ್ಣದಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು-ಹೇಗೆ ಅಂತೀರಾ?ಇದನ್ನ ಓದಿ

ಕಹಿ ರುಚಿಯುಳ್ಳ ಆಹಾರಗಳು ಹೆಚ್ಚಿದ ಹಿಂಸಾತ್ಮಕ ನಡುವಳಿಕೆಯನ್ನು ವ್ಯಕ್ತಿಯಲ್ಲಿ ಬೆಳೆಸುತ್ತದೆ ಎಂಬುದನ್ನು ಈ ಅಧ್ಯಯನದಿಂದ ತಿಳಿದುಕೊಳ್ಳಲಾಗಿದೆ. ನಾವು ತೆಗೆದುಕೊಳ್ಳುವ ಆಹಾರವು ಸಹ ನಮ್ಮ ನಡುವಳಿಕೆಯ ಮೇಲೆ ಭಾರಿ ಪ್ರಭಾವವನ್ನು ಬೀರಬಲ್ಲದು ಎಂದು ನಾವು ಇದರಿಂದ ತಿಳಿದುಕೊಳ್ಳಬಹುದು.
First published: