Lemon And Chilli: ಮನೆಯಲ್ಲಿ ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟುವುದರ ವೈಜ್ಞಾನಿಕ ಕಾರಣ ತಿಳಿದ್ರೆ ಆಶ್ಚರ್ಯವಾಗುತ್ತೆ

Lemon And Chilli: ಇವುಗಳಲ್ಲಿ ಪ್ರತಿಯೊಂದೂ ನಿಗೂಢ ಅರ್ಥಗಳನ್ನು ಹೊಂದಿದೆ. ಕುಂಬಳಕಾಯಿಗೆ ನಿಂಬೆ ಮತ್ತು ಮೆಣಸಿನಕಾಯಿಯನ್ನು ಕಟ್ಟುವುದು ಭಾರತದಲ್ಲಿ ಸಾಮಾನ್ಯವಾದ ಆಚರಣೆಗಳಲ್ಲಿ ಒಂದಾಗಿದೆ. ಯಾಕೆ ಹೀಗೆ ಮಾಡುತ್ತಾರೋ ಗೊತ್ತಿಲ್ಲ. ಆದರೆ ಸಂಪ್ರದಾಯ, ಪದ್ಧತಿಯಂತೆ ಮಾಡುತ್ತಿದ್ದಾರೆ. ಅದನ್ನೇ ಪಾಲಿಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ ಸಂಸ್ಕೃತಿ(Indian Tradition) ಮತ್ತು ಸಂಪ್ರದಾಯಗಳು ಹೆಚ್ಚಾಗಿ ಆಚರಣೆಯಲ್ಲಿವೆ. ಇತರ ದೇಶಗಳಿಗೆ ಹೋಲಿಸಿದರೆ ಇವು ಸ್ವಲ್ಪ ಹೆಚ್ಚು ವಿಭಿನ್ನ ನಂಬಿಕೆಯನ್ನು ಹೊಂದಿದ್ದೇವೆ. ಪ್ರತಿದಿನ ಹಲವಾರು ಆಚರಣೆಗಳನ್ನು ಅನುಸರಿಸುವುದು ಭಾರತೀಯ ಜೀವನ ವಿಧಾನವಾಗಿದೆ. ಆದರೂ ಕೆಲವು ಸಂಪ್ರದಾಯಗಳು ಕೆಲವು ಪ್ರದೇಶಗಳಿಗೆ ಸೀಮಿತವಾಗಿವೆ. ಕೆಲವು ಪದ್ಧತಿಗಳು ದೇಶಾದ್ಯಂತ ಒಂದೇ ರೀತಿ ಇವೆ. ನಾವು ಅನುಸರಿಸುವ ಪದ್ಧತಿಗಳು ಮತ್ತು ಸಂಪ್ರದಾಯಗಳ(Rituals) ಎಲ್ಲಾ ಅರ್ಥಗಳನ್ನು ತಿಳಿದುಕೊಳ್ಳಲು ನಾವು ಬಯಸುವುದಿಲ್ಲ. ಕೆಲವರಿಗೆ ಗೊತ್ತಿರಬಹುದು.. ಕೆಲವರಿಗೆ ಗೊತ್ತಿಲ್ಲದಿರಬಹುದು.

ಆದರೆ ಇವುಗಳಲ್ಲಿ ಪ್ರತಿಯೊಂದೂ ನಿಗೂಢ ಅರ್ಥಗಳನ್ನು ಹೊಂದಿದೆ. ಕುಂಬಳಕಾಯಿಗೆ ನಿಂಬೆ(Lemon) ಮತ್ತು ಮೆಣಸಿನಕಾಯಿಯನ್ನು(Chilli) ಕಟ್ಟುವುದು ಭಾರತದಲ್ಲಿ ಸಾಮಾನ್ಯವಾದ ಆಚರಣೆಗಳಲ್ಲಿ ಒಂದಾಗಿದೆ. ಯಾಕೆ ಹೀಗೆ ಮಾಡುತ್ತಾರೋ ಗೊತ್ತಿಲ್ಲ. ಆದರೆ ಸಂಪ್ರದಾಯ, ಪದ್ಧತಿಯಂತೆ ಮಾಡುತ್ತಿದ್ದಾರೆ. ಅದನ್ನೇ ಪಾಲಿಸುತ್ತಿದ್ದಾರೆ. ಕುಂಬಳಕಾಯಿಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳನ್ನು ನೇತು ಹಾಕಿದರೆ ದುಷ್ಟಶಕ್ತಿಗಳು ಮತ್ತು ಶಕ್ತಿಗಳು ಮನೆಗೆ ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಆ ಕಾಲದಲ್ಲಿ ಇತ್ತು.

ಹಾಗಾದ್ರೆ ಇದರ ವೈಜ್ಞಾನಿಕ ಕಾರಣಗಳೇನು?

ಇದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ ಆದರೆ ಇದರ ಹಿಂದೆ ಒಳ್ಳೆಯ ವಿಜ್ಞಾನವೇ ಇದೆ ಎಂಬುದು ಸತ್ಯ. ಈಗಿನ ಕಾಲದಲ್ಲಿ ಎಲ್ಲೆಂದರಲ್ಲಿ ಟೆರೇಸ್, ದೊಡ್ಡ ದೊಡ್ಡ ಕಟ್ಟಡಗಳು ಕಾಣಸಿಗುತ್ತವೆ. ಕೆಲವೆಡೆ ಗುಡಿಸಲುಗಳು ಮಾತ್ರ ಗೋಚರಿಸುತ್ತವೆ. ಈ ಹಿಂದೆ ಹೀಗಿರಲಿಲ್ಲ. ಹಲವರು ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಹೆಂಚು, ಬಂಡೆಗಳಿರಲಿಲ್ಲ. ಇದರಿಂದ ಸಣ್ಣಪುಟ್ಟ ಹುಳುಗಳು, ಸೊಳ್ಳೆಗಳು ಮನೆಗೆ ನುಗ್ಗುವ ಸಾಧ್ಯತೆ ಹೆಚ್ಚಿತ್ತು. ಈಗಿನ ಕಾಲದಲ್ಲಿ ಸೊಳ್ಳೆಗಳಿಂದ ಪಾರಾಗಲು ಸೊಳ್ಳೆ ಬ್ಯಾಟ್ ಮತ್ತು ಕಾಯಿಲ್ ಬಳಸುತ್ತೇವೆ ಆದರೆ  ಆಗಿನ ಕಾಲದಲ್ಲಿ ಅವೆಲ್ಲ ಲಭ್ಯವಿರಲಿಲ್ಲ.

ಇದನ್ನೂ ಓದಿ: ಕೂದಲಿನ ಸಮಸ್ಯೆಗೆ ಶಾಂಪೂ ಒಂದೇ ಸಾಕಾಗಲ್ಲ,ಇವುಗಳನ್ನು ಕೂಡ ತಿನ್ನಿ

ಹಾಗಾಗಿ ಮನೆಯಲ್ಲಿ ಗೋಡೆಗಳಿಗೆ ನಿಂಬೆ ಮೆಣಸಿನಕಾಯಿ. ಇಲ್ಲವೇ ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಸೊಳ್ಳೆಗಳು, ನೊಣಗಳು ಮತ್ತು ಇತರ ಕೀಟಗಳು ಮನೆಗೆ ಪ್ರವೇಶಿಸದಂತೆ ತಡೆಯುತ್ತದೆ. ನಿಂಬೆಹಣ್ಣನ್ನು ದಾರಕ್ಕೆ ಕಟ್ಟುವುದರಿಂದ ನಿಂಬೆಯಲ್ಲಿರುವ ಸಿಟ್ರಸ್ ಆಸಿಡ್ ವಾಸನೆ ಮತ್ತು ಹುಳುಗಳನ್ನು ಹೋಗಲಾಡಿಸುತ್ತದೆ. ಮೆಣಸಿನಕಾಯಿಯಲ್ಲಿನ ಖಾರವು ಮನೆಯೊಳಗೆ ಹುಳುಗಳು ಬರದಂತೆ ತಡೆಯುತ್ತದೆ ಎಂಬುದು ಸಾಬೀತಾಗಿದೆ.

ವಾಹನಗಳ ಮೇಲೆ ನಿಂಬೆ ಮತ್ತು ಮೆಣಸಿನಕಾಯಿ ನೇತು ಹಾಕುವುದರ ಹಿಂದಿನ ವೈಜ್ಞಾನಿಕ ಕಾರಣ  

ಆಗಿನ ಸಮಯದಲ್ಲಿ ತಂತ್ರಜ್ಞಾನ ಹೆಚ್ಚು ಮುಂದುವರೆದಿರಲಿಲ್ಲ. ಮೊದಲೆಲ್ಲ ರಸ್ತೆಗಳಲ್ಲಿ ಬರೀ ಮರಗಳು, ಕೊಳಕು , ಹಾವುಗಳು , ಕಿಟಗಳು ಓಡಾಡುತ್ತಿದ್ದವು. ಆದ್ದರಿಂದ, ಈ ರೀತಿಯ ಪ್ರದೇಶಗಳಿಂದ ಪ್ರಯಾಣಿಸುವಾಗ, ಹಾವು ಕಡಿತ ಮತ್ತು ಇತರ ವಿಷಕಾರಿ ಜೀವಿಗಳ ಅಪಾಯವಿರಬಹುದು ಆದ್ದರಿಂದ ಅಂತಹ ಸಂದರ್ಭಗಳಲ್ಲಿ ನಿಂಬೆ ಮತ್ತು ಮೆಣಸಿನಕಾಯಿಯನ್ನು  ಕಚ್ಚಿರುವ ಜೀವಿಗಳು ವಿಷಕಾರಿಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಬಳಕೆ ಮಾಡಲಾಗುತ್ತಿತ್ತು.

ವಿಷಕಾರಿ ಜೀವಿಗಳು ಕಚ್ಚಿದರೆ ವ್ಯಕ್ತಿಗೆ ರುಚಿ ತಿಳಿಯುವುದಿಲ್ಲ. ಏಕೆಂದರೆ ಅವನ ನರಗಳು ಪಾರ್ಶ್ವವಾಯುವಿಗೆ ಒಳಗಾಗುತ್ತವೆ. ಆದ್ದರಿಂದ ರುಚಿ ತಿಳಿಯಲು ನಿಂಬೆ ಮತ್ತು ಮೆಣಸಿನಕಾಯಿಯನ್ನು ಬಳಸಲಾಗುತ್ತದೆ. ಅವುಗಳ ಹುಳಿ ಅಥವಾ ಮಸಾಲೆಯುಕ್ತ ರುಚಿ ತಿಳಿದರೆ ಕಚ್ಚಿರುವುದು ವಿಷಕಾರಿ ಜೀವಿಯಲ್ಲ ಎಂದು ತಿಳಿಯುತ್ತದೆ.

ನಮ್ಮ ಹಿರಿಯರು ಪುರಾತನ ಕಾಲದಿಂದಲೂ ಈ ಆಚರಣೆಯನ್ನು ಅನುಸರಿಸುತ್ತಾ ಬಂದಿರುವುದರಿಂದ ನಾವು ಇಂದಿಗೂ ಈ ಆಚರಣೆಯನ್ನು ನಡೆಸುತ್ತಿದ್ದೇವೆ. ಅದರಲ್ಲಿ ವಿಜ್ಞಾನವಿದೆ ಎಂಬುದನ್ನ ಮಾತ್ರ ಇಂದಿಗೂ ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದೇವೆ. ಪದ್ಧತಿಯೂ ಇರುವುದರಿಂದ ಆ ವಿಧಾನವನ್ನು ಅನುಸರಿಸಬೇಡಿ, ಅದನ್ನು ಅರ್ಥ ಮಾಡಿಕೊಳ್ಳಿ.

ಇದನ್ನೂ ಓದಿ: ಖರ್ಜೂರ ಜಾಸ್ತಿ ತಿಂದ್ರೆ ಈ ಸಮಸ್ಯೆಗಳು ಬರಬಹುದು ಎಚ್ಚರ

ಅದಕ್ಕಾಗಿಯೇ ಯಾವುದೇ ಮನೆಯ ಬಾಗಿಲಿಗೆ ನಿಂಬೆ ಮತ್ತು ಮೆಣಸನ್ನು ನೇತು ಹಾಕಲಾಗುತ್ತದೆ. ಹಲವರಿಗೆ ಅವುಗಳ ಉಪಯೋಗ ಗೊತ್ತಿಲ್ಲದಿದ್ದರೂ.. ದೊಡ್ಡವರು ಮಾತುಗಳನ್ನುಕೇಳಿಸಿಕೊಂಡು ಮಾಡುತ್ತಿದ್ದಾರೆ. ಏನೇ ಆಗಲಿ, ಯಾವಾಗ ಬೇಕಾದರೂ.ಕೆಲವೊಂದು ಆಚರಣೆಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಅವುಗಳ ಹಿಂದೆ ಹಲವು ಅರ್ಥಗಳು ಅಡಗಿವೆ ಎಂಬುದನ್ನ ಮರೆಯಬಾರದು.
Published by:Sandhya M
First published: