Breakfast Recipe: ರವೆಯಿಂದ ಉಪ್ಪಿಟ್ಟು ಮಾತ್ರವಲ್ಲ ರೊಟ್ಟಿ ಕೂಡ ಮಾಡಬಹುದು! ರೆಸಿಪಿ ಇಲ್ಲಿದೆ ಓದಿ

ರವೆಯಿಂದ ಉಪ್ಪಿಟ್ಟಿನ ಬದಲು ಬೇರೆ ಏನಾದ್ರೂ ಮಾಡ್ಬೇಕು ಅಂತ ಯೋಚಿಸುತ್ತಾ ಇದ್ದೀರಾ? ಹಾಗಿದ್ರೆ ರವೆಯಿಂದ ಸ್ವಲ್ಪ ಡಿಫ್ರೆಂಟ್ ಆಗಿ ರೊಟ್ಟಿ ಮಾಡಿ! ಅರೇ ಏನಿದು ರವೆಯಿಂದ ರೊಟ್ಟಿ ಮಾಡೋದಕ್ಕೆ ಆಗುತ್ತಾ ಅಂತಿದ್ದೀರಾ? ಹಾಗಿದ್ರೆ ನಾವು ಅದರ ರೆಸಿಪಿ ಬರೆದಿದ್ದೀವಿ ಓದಿ, ಮನೆಲಿ ಟ್ರೈ ಮಾಡಿ, ರವೆ ರೊಟ್ಟಿ ಮಾಡಿ, ಆರಾಂ ಆಗಿ ತಿನ್ನಿ…

ರವೆ ರೊಟ್ಟಿ

ರವೆ ರೊಟ್ಟಿ

  • Share this:
ಉಪ್ಪಿಟ್ಟು ಯಾರಿಗೆ ಗೊತ್ತಿಲ್ಲ ಹೇಳಿ. ಅದೆಷ್ಟೋ ಮಂದಿಗೆ ಉಪ್ಪಿಟ್ಟು ಅಂದರೆ ಪ್ರಾಣ, ಇನ್ನು ಕೆಲವರು ಉಪ್ಪಿಟ್ಟಿನ ಹೆಸರು ಕೇಳಿದ್ರೇ ಮೂಗು ಮುರಿಯುತ್ತಾರೆ. ಹೀಗಾಗಿ ರವೆಯಿಂದ ಉಪ್ಪಿಟ್ಟಿನ ಬದಲು ಬೇರೆ ಏನಾದ್ರೂ ಮಾಡ್ಬೇಕು ಅಂತ ಯೋಚಿಸುತ್ತಾ ಇದ್ದೀರಾ? ಹಾಗಿದ್ರೆ ರವೆಯಿಂದ ಸ್ವಲ್ಪ ಡಿಫ್ರೆಂಟ್‌ ಆಗಿ ರೊಟ್ಟಿ ಮಾಡಿ! ಅರೇ ಏನಿದು ರವೆಯಿಂದ ರೊಟ್ಟಿ ಮಾಡೋದಕ್ಕೆ ಆಗುತ್ತಾ ಅಂತಿದ್ದೀರಾ? ಹಾಗಿದ್ರೆ ನಾವು ಅದರ ರೆಸಿಪಿ ಬರೆದಿದ್ದೀವಿ ಓದಿ. ಇಲ್ಲಿ ಒಬ್ಬರಿಗೆ ಬೇಕಾದ ರವೆ ರೊಟ್ಟಿ ಮಾಡುವ ವಿಧಾನವನ್ನು ಹೇಳುತ್ತಿದ್ದೇವೆ, ನೀವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಅದರ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಿದ್ರೆ ಮತ್ತೇಕೆ ತಡ? ರೆಸಿಪಿ ಓದಿ, ಮನೆಲಿ ಟ್ರೈ ಮಾಡಿ, ರವೆ ರೊಟ್ಟಿ ಮಾಡಿ, ಆರಾಂ ಆಗಿ ತಿನ್ನಿ…



ರವೆ ರೊಟ್ಟಿಗೆ ಬೇಕಾಗುವ ಸಾಮಗ್ರಿಗಳು

ರವೆ -1 ಕಪ್

ಈರುಳ್ಳಿ – ಕತ್ತರಿಸಿದ್ದು

ಹಸಿಮೆಣಸಿನಕಾಯಿ – ಸಾಧಾರಣ ಸೈಜಿನದ್ದು 2

ಕೊತ್ತಂಬರಿ ಸೊಪ್ಪು – ಅರ್ಧ ಕಪ್

ತೆಂಗಿನಕಾಯಿ ತುರಿ – ಅರ್ಧ ಕಪ್

ಟೊಮೇಟೋ – ಸಣ್ಣ ಗಾತ್ರದ್ದು

ಅಡುಗೆ ಎಣ್ಣೆ

ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: Morning Breakfast: ಬೆಳಗಿನ ಉಪಾಹಾರಕ್ಕೆ ಆರೋಗ್ಯಕರ ಹಾಲಿನ ಅವಲಕ್ಕಿ

 ರವೆ ರೊಟ್ಟಿ ಮಾಡುವ ವಿಧಾನ

  • ಮೊದಲು ಒಂದು ಕಪ್ ರವೆ ತೆಗೆದುಕೊಂಡು ಅದನ್ನು ಕೇವಲ ಅದನ್ನು ಒಂದೇ ಒಂದು ನಿಮಿಷ ನೀರಿನಲ್ಲಿ ಹಾಕಿ, ಬಸಿಯಿರಿ.

  • ನೀರನ್ನು ಹೊರ ಚೆಲ್ಲುವಾಗ ರವೆ ಸೋರಿ ಹೋಗದಂತೆ ಜಾಗ್ರತೆ ವಹಿಸಿ.

  • ಬಳಿಕ ಅದಕ್ಕೆ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಹಾಕಿ

  • ಅದಕ್ಕೆ ಹಸಿಮೆಣಸಿನ ಕಾಯಿ ಚಿಕ್ಕದ್ದಾಗಿ ಕತ್ತರಿಸಿ ಹಾಕಿ

  • ಈ ಮಿಶ್ರಣಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ

  • ಬಳಿಕ ಕತ್ತಿರಿಸಿಟ್ಟುಕೊಂಡ ಟೊಮೋಟೆಗಳನ್ನು ಹಾಕಿ

  • ಕೊನೆಯಲ್ಲಿ ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕೈಯಿಂದ ಚೆನ್ನಾಗಿ ಕಲೆಸಿಟ್ಟುಕೊಳ್ಳಿ.

  • ಇಡ್ಲಿ ಹಿಟ್ಟಿಗಿಂತ ಗಟ್ಟಿಯಾಗಿ, ಚಪಾತಿ ಹಿಟ್ಟಿಗಿಂತ ಕೊಂಚ ತೆಳುವಾಗಿ ಹಿಟ್ಟು ರೆಡಿ ಮಾಡಿಕೊಳ್ಳಿ

  • ಬಳಿಕ ಒಲೆ ಮೇಲೆ ದೋಸೆ ಕಾವಲಿ ಇಟ್ಟು ದೋಸೆಗೆ ಹಾಕುವಂತೆ ಎಣ್ಣೆ ಹಾಕಿ, ರೆಡಿ ಮಾಡಿಟ್ಟುಕೊಳ್ಳಿ

  • ಕಾವಲಿ ಬಿಸಿಯಾದ ಬಳಿಕ ರೆಡಿ ಮಾಡಿಕೊಂಡ ರವೆ ಹಿಟ್ಟನ್ನು ಅದರ ಮೇಲೆ ಹಾಕಿ, ಕೈಯಿಂದ ರೊಟ್ಟಿಯಂತೆ ಒತ್ತುತ್ತಾ ಬನ್ನಿ

  • ಮುಖ್ಯವಾಗಿ ಬೆರಳಿನಿಂದ ಹಿಟ್ಟನ್ನು ನಿಧಾನಕ್ಕೆ ಕಾವಲಿಯ ತುಂಬಾ ಚಪಾತಿಯಂತೆ ಲಟ್ಟಿಸುತ್ತಾ ಬನ್ನಿ

  • ಕಾವಲಿಗೆ ಮುಚ್ಚಳ ಮುಚ್ಚಿ 2 ನಿಮಿಷ ಬೇಯಿಸಿ

  • ಬಳಿಕ ಅದಕ್ಕೆ ಮತ್ತೊಮ್ಮೆ ಎಣ್ಣೆ ಹಾಕಿ ತಿರುವು ಹಾಕಿ

  • 3ರಿಂದ 4 ನಿಮಿಷಕ್ಕೆಲ್ಲ ರವೆ ರೊಟ್ಟಿ ಬೇಯುತ್ತದೆ

  • ಬಳಿಕ ದೋಸೆ ಕಾವಲಿಯಿಂದ ತೆಗೆದು ಪ್ಲೇಟ್‌ಗೆ ಹಾಕಿ


  • ಈಗ ನಿಮ್ಮ ಬಿಸಿ ಬಿಸಿಯಾದ, ರುಚಿ ರುಚಿಯಾದ ರವೆ ರೊಟ್ಟಿ ರೆಡಿಯಾಗಿದೆ.


ಇದನ್ನೂ ಓದಿ: Breakfast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ತರಕಾರಿ ಶಾವಿಗೆ ಉಪ್ಪಿಟ್ಟು ತಯಾರಿಸಿ

ರವೆ ರೊಟ್ಟಿ ಜೊತೆ ಕಾಂಬಿನೇಶನ್ ಏನು?

ಸಾಮಾನ್ಯವಾಗಿ ರವೆ ರೊಟ್ಟಿ ಜೊತೆ ಆಲೂಗಡ್ಡೆ ಸಾಂಬಾರ್, ಬದನೆಕಾಯಿ ಸಾಂಬಾರ್, ನುಗ್ಗೇಕಾಯಿ ಸಾಂಬಾರ್ ಬೆಸ್ಟ್ ಕಾಂಬಿನೇಷನ್. ಇದಲ್ಲದೇ ಖಾರದ ಚಟ್ನಿ ಮಾಡಿಕೊಳ್ಳಬಹುದು. ಕರಾವಳಿ ಕಡೆ ರವೆ ರೊಟ್ಟಿ ಜೊತೆಗೆ ಜೋನಿ ಬೆಲ್ಲ, ತುಪ್ಪ ಹಾಕಿಕೊಂಡು ತಿನ್ನುತ್ತಾರೆ.
Published by:Annappa Achari
First published: