Breakfast Recipe: ಪರೋಟ ಅಂದ್ರೆ ಇಷ್ಟನಾ? ಹಾಗಾದ್ರೆ ಮನೆಯಲ್ಲಿಯೇ ಮಾಡಿ ಬಾಯಿ ನೀರೂರಿಸುವ ಗೋಬಿ ಪರೋಟ

Gobi Paratha: ಎಲ್ಲವನ್ನು ಸರಿಯಾಗಿ ಹುರಿದ ಮೇಲೆ ಮೆಣಸಿನ ಕಾಯಿ, ಧನಿಯಾ, ಅರಿಶಿನಪುಡಿ, ಹುಳಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಹಾಗೆಯೇ  ಉಪ್ಪು ಮತ್ತು ಗರಮ್ ಮಸಾಲೆಯನ್ನು ಸೇರಿಸಿ,

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರವಾಗಿರುತ್ತದೆ. ಕೆಲವು ಭಕ್ಷ್ಯಗಳು ಜಾಗತಿಕ ಜನಪ್ರಿಯತೆ ಪಡೆದರೆ, ಇನ್ನಿತರೆ ಭಕ್ಷ್ಯಗಳನ್ನು ಕಡಿಮೆ ಜನರು ಪ್ರಯತ್ನಿಸಿ ಮಾಡಿಕೊಳ್ಳುವುದುಂಟು. ನಾವು ಹೇಗೆ ದೋಸಾ, ಇಡ್ಲಿ ಮತ್ತು ವಡಾ ಮಾಡಿಕೊಂಡು ತಿನ್ನಲು ಇಷ್ಟ ಪಡುತ್ತೇವೆ. ಕೆಲವೊಮ್ಮೆ ನಮಗೆ ಉತ್ತರ ಭಾರತೀಯ ಶೈಲಿಯ ತಿಂಡಿಗಳು ಸಹ ಇಷ್ಟವಾಗುತ್ತದೆ. ಅದರಲ್ಲೂ ಪರೋಟ(Paratha) ಎಲ್ಲರ ನೆಚ್ಚಿನ ತಿಂಡಿಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಪರೋಟಗಳಲ್ಲಿ ಸಹ ಹಲವಾರು ವಿಧಗಳಿದೆ. ಆಲೂ ಪರೋಟ, ಮಲಬಾರ್ ಪರೋಟ, ಮೂಲಂಗಿ ಪರೋಟ ಹೀಗೆ. ಇನ್ನು ಕೆಲವರಿಗೆ ಗೋಬಿ ಪರೋಟ (Gobi Paratha)  ಬಹಳ ಇಷ್ಟವಾಗುತ್ತದೆ. ಆದರೆ ಅದನ್ನು ಮಾಡಲು ಪರದಾಡುತ್ತಾರೆ. ಹಾಗಾದ್ರೆ ಗೋಬಿ ಪರೋಟ ಮಾಡುವುದು ಹೇಗೆ ಎಂಬುದು ಇಲ್ಲಿದೆ

ಗೋಬಿ ಪರೋಟ ಮಾಡಲು ಬೇಕಾಗುವ ಸಾಮಾಗ್ರಿಗಳು

1 ಕಪ್‌ ಅಗತ್ಯಕ್ಕೆ ತಕ್ಕಷ್ಟು ಗೋಧಿ ಹಿಟ್ಟು

1 ಕಪ್‌ ಕತ್ತರಿಸಿದ ಹೂಕೋಸು

1/2 ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು

ಅಗತ್ಯಕ್ಕೆ ತಕ್ಕಷ್ಟು ಉಪ್ಪು

ಅಗತ್ಯಕ್ಕೆ ತಕ್ಕಷ್ಟು ಗರಂ ಮಸಾಲ ಪುಡಿ

1 ಚಮಚ ಖಾರದ ಪುಡಿ

1 ಚಮಚ ಒಣ ಮಾವಿನಕಾಯಿ ಪುಡಿ

ಇದನ್ನೂ ಓದಿ: ಆರೋಗ್ಯಕ್ಕೆ ಪ್ರಯೋಜನಕರ ಈ ಮೊಳಕೆ ಕಾಳಿನ ದೋಸೆ- ಇಲ್ಲಿದೆ ರೆಸಿಪಿ

1 ಚಮಚ ಕೊತ್ತಂಬರಿ ಪುಡಿ

1 ಚಮಚ ಜೀರಿಗೆ

1/4 ಚಮಚ ಅರಿಶಿಣ

1 ಕತ್ತರಿಸಿದ ಹಸಿಮೆಣಸಿನಕಾಯಿ

1 ಅಗತ್ಯಕ್ಕೆ  ತಕ್ಕಷ್ಟು ನೀರು

ಗೋಬಿ ಪರೋಟ ಮಾಡುವ ವಿಧಾನ

ಹೂಕೋಸನ್ನು ಬಿಡಿಸಿ, ಉಪ್ಪಿನ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿ. ನಂತರ ಸಣ್ಣದಾಗಿ ಹೆಚ್ಚಿಕೊಂಡು ಇಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಗೋಧಿಹಿಟ್ಟು, ಉಪ್ಪು ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟಿಗೆ ಸ್ವಲ್ಪ ಎಣ್ಣೆಯನ್ನು ಸೇರಿಸಿ, ಚೆನ್ನಾಗಿ ನಾದಿಕೊಳ್ಳಿ. ನಿಮಗೆ ಪರೋಟ ಮಾಡಿ ಅಭ್ಯಾಸವಿದ್ರೆ ಹಿಟ್ಟು ತಯಾರಿಸುವ ವಿಧಾನ ತಿಳಿದಿರುತ್ತದೆ.

ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಹೆಚ್ಚಿಕೊಂಡ ಹೂಕೋಸನ್ನು ಸೇರಿಸಿ, ಚೆನ್ನಾಗಿ ಬೇಯಿಸಿ.ನಂತರ ಅದರೊಟ್ಟಿಗೆ ಹೆಚ್ಚಿಕೊಂಡ ಹಸಿ ಮೆಣಸಿನಕಾಯನ್ನು ಸೇರಿಸಿ, 30 ನಿಮಿಷಗಳ ಕಾಲ ಚನ್ನಾಗಿ ಹುರಿಯಿರಿ.

ಎಲ್ಲವನ್ನು ಸರಿಯಾಗಿ ಹುರಿದ ಮೇಲೆ ಮೆಣಸಿನ ಕಾಯಿ, ಧನಿಯಾ, ಅರಿಶಿನಪುಡಿ, ಹುಳಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಹಾಗೆಯೇ  ಉಪ್ಪು ಮತ್ತು ಗರಮ್ ಮಸಾಲೆಯನ್ನು ಸೇರಿಸಿ, 2-4 ನಿಮಿಷಗಳ ಕಾಲ ಎಲ್ಲಾ ಪದಾರ್ಥಗಳು ಬೆರೆಯುವಂತೆ ಬೇಯಿಸಿ.

ಈಗ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಒಂದು ನಿಮಿಷಗಳ ಕಾಲ ಬೇಯಿಸಿ. ಗೋಧಿ ಹಿಟ್ಟನ್ನು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ. ನಂತರ ಅದನ್ನು ಲಟ್ಟಿಸಿ, ಅದರೊಳಗೆ ಹೂಕೋಸಿನ ಮಿಶ್ರಣವನ್ನು ಸೇರಿಸಿ, ಸರಿಯಾಗಿ ಮುಚ್ಚಿ. ಬಳಿಕ ಪುನಃ ಚಪಾತಿಯ ಆಕಾರದಲ್ಲಿ ಲಟ್ಟಿಸಿ. ಚಪಾತಿಯ ಒಳಗೆ ತುಂಬಿದ ಮಿಶ್ರಣ ಹೊರಗೆ ಬರದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.

ಇದನ್ನೂ ಓದಿ: ಫಟಾ ಫಟ್ ತಯಾರಿಸಿ ರುಚಿ ರುಚಿಯಾದ ವಾಂಗಿ ಬಾತ್

ಈಗ ತವಾ ಅನ್ನು ಕಾಯಲು ಗ್ಯಾಸ್​ ಮೇಲೆ ಇಡಿ. ತವಾ ಕಾದ ನಂತರ ಲಟ್ಟಿಸಿಕೊಂಡ ಪರೋಟವನ್ನು ಹಾಕಿ.ಪರೋಟದ ಎರಡು ಭಾಗದಲ್ಲೂ ಎಣ್ಣೆ ಅಥವಾ ತುಪ್ಪವನ್ನು ಹಚ್ಚಿ. ಹೊಂಬಣ್ಣಕ್ಕೆ ಬರುವ ಹಾಗೆ ಬೇಯಿಸಿದರೆ ಗೋಬಿ ಪರೋಟ ರೆಡಿ.
Published by:Sandhya M
First published: