Breakfast Tips: ಬಾಳೆಹಣ್ಣಿನ ಇಡ್ಲಿ ಟ್ರೈ ಮಾಡಿದ್ದೀರಾ? ಬೆಳಗಿನ ತಿಂಡಿಗೆ ತಿಂದ್ರೆ ಆರೋಗ್ಯಕ್ಕೂ ಒಳ್ಳೆಯದಂತೆ!

Raw Banana Idli : ಮಕ್ಕಳಿಗೆ ತಿಂಡಿ ಮಾತ್ರ ಅಲ್ಲ ಹಣ್ಣುಗಳು ಸಹ ದೂರ. ಆದರೆ ಈ ತಿಂಡಿ ಮಾತ್ರ ಹಣ್ಣನ್ನು ಸಹ ಮಕ್ಕಳಿಗೆ ನೀಡುತ್ತೆ. ಅದೇ ಬಾಳೆಹಣ್ಣಿನ ಇಡ್ಲಿ. ರವೆ ಇಡ್ಲಿ ಗೊತ್ತು ಇದ್ಯಾವುದು ಬಾಳೆಹಣ್ಣಿನ ಇಡ್ಲಿ(Banana Idli) ಅಂತೀರಾ. ಹಾಗಾದ್ರೆ ಈ ಸ್ಪೆಷಲ್ ಇಡ್ಲಿ ಮಾಡೋದು ಹೇಗೆ ಅನ್ನೋದು ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಬೆಳಗಿನ ತಿಂಡಿ(Breakfast) ಮಾಡುವುದು ಬಹಳ ಕಷ್ಟಕರವಾದ ಕೆಲಸ. ಸಮಯ ಇರಲಿ ಇಲ್ಲದಿರಲಿ ಏನು ಮಾಡಬೇಕು ಎಂಬುದು ತಿಳಿಯುವುದಿಲ್ಲ. ಅದರಲ್ಲೂ ಮಕ್ಕಳಿರುವ ಮನೆಯಲ್ಲಿ ಅಸಾಧ್ಯ ಎನ್ನವ ಭಾವನೆ ಬರುತ್ತದೆ. ಮಕ್ಕಳಿಗೆ(Children) ಯಾವುದೇ ತಿಂಡಿ ಆಗುವುದಿಲ್ಲ. ಅದೆಷ್ಟೇ ಆರೋಗ್ಯಕರವಾಗಿರಲಿ ಅವರ ಹೊಟ್ಟೆಗೆ ಹೋಗುವುದಿಲ್ಲ. ಅದೇ ತಿಂಡಿಗಳನ್ನು ಸಿಂಗಾರ ಮಾಡಿ ಕೊಟ್ಟರೆ ಕೆಲ ತುತ್ತುಗಳು ಹೊಟ್ಟೆ ಸೇರುತ್ತದೆ. ಪ್ರತಿದಿನ ಏನಾದರೂ ವಿಭಿನ್ನ ಮಾಡುವುದು ನಿಜಕ್ಕೂ ಸುಲಭದ ಮಾತಲ್ಲ. ಏನಪ್ಪ ತಿಂಡಿ ಮಾಡೋದು ಅಂತ ಚಿಂತೆ ಮಾಡ್ತಿದ್ರೆ ಇಲ್ಲಿದೆ ಅದಕ್ಕೆ ಪರಿಹಾರ. ಮಕ್ಕಳಿಗೆ ತಿಂಡಿ ಮಾತ್ರ ಅಲ್ಲ ಹಣ್ಣುಗಳು ಸಹ ದೂರ. ಆದರೆ ಈ ತಿಂಡಿ ಮಾತ್ರ ಹಣ್ಣನ್ನು ಸಹ ಮಕ್ಕಳಿಗೆ ನೀಡುತ್ತೆ. ಅದೇ ಬಾಳೆಹಣ್ಣಿನ ಇಡ್ಲಿ. ರವೆ ಇಡ್ಲಿ ಗೊತ್ತು ಇದ್ಯಾವುದು ಬಾಳೆಹಣ್ಣಿನ ಇಡ್ಲಿ(Banana Idli) ಅಂತೀರಾ. ಹಾಗಾದ್ರೆ ಈ ಸ್ಪೆಷಲ್ ಇಡ್ಲಿ ಮಾಡೋದು ಹೇಗೆ ಅನ್ನೋದು ಇಲ್ಲಿದೆ ನೋಡಿ.

ಬಾಳೆಹಣ್ಣಿನ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು

1 ಕಚ್ಚಾ ಅಥವಾ ಹಸಿರು ಬಾಳೆಹಣ್ಣು, ಇದನ್ನು  ಬೇಯಿಸಿಟ್ಟುಕೊಳ್ಳಬಹುದು ಅಥವಾ, ಸಿಪ್ಪೆ ಸುಲಿದು ತುರಿದು ಸಹ ಇಟ್ಟುಕೊಂಡಿರಬಹುದು.

1/3 ಕಪ್ ರವೆ

2 ಹಸಿರು ಮೆಣಸಿನಕಾಯಿಗಳು (ಸಣ್ಣದಾಗಿ ಕತ್ತರಿಸಿಕೊಳ್ಳಿ)

1 ಟೀಸ್ಪೂನ್ ಶುಂಠಿ, ತುರಿದುಕೊಳ್ಳಿ

ರುಚಿಗೆ ತಕ್ಕಷ್ಟು ಉಪ್ಪು

1 ಕಪ್ ಮೊಸರು

2 ಟೀಸ್ಪೂನ್ ತುರಿದ ತೆಂಗಿನಕಾಯಿ

ಒಂದು ಹಿಡಿ ಕೊತ್ತಂಬರಿ ಸೊಪ್ಪು (ಸಣ್ಣದಾಗಿ ಹೆಚ್ಚಿಕೊಳ್ಳಿ)

ನೀರು

ಇದನ್ನೂ ಓದಿ:ಕೇವಲ 10 ನಿಮಿಷದಲ್ಲಿ ಮಾಡ್ಬೋದು ಈ ಸಬ್ಬಕ್ಕಿ ಉಪ್ಪಿಟ್ಟು -ಇಲ್ಲಿದೆ ರೆಸಿಪಿ

1 ಟೀಸ್ಪೂನ್ ಎನೋ ಹಣ್ಣಿನ ಉಪ್ಪು

ಕೆಲವು ಬೇಯಿಸಿದ ಕಚ್ಚಾ ಬಾಳೆಹಣ್ಣಿನ ಚೂರುಗಳು

ಒಗ್ಗರಣೆಗೆ

1 ಚಮಚ ಎಣ್ಣೆ

1-2 ಒಣ ಕೆಂಪು ಮೆಣಸಿನಕಾಯಿ

½ ಟೀಸ್ಪೂನ್ ಸಾಸಿವೆ ಬೀಜಗಳು

10 ರಿಂದ 12  ಕರಿಬೇವಿನ ಎಲೆಗಳು

1 ಟೀಸ್ಪೂನ್ ಉದ್ದಿನ ಬೇಳೆ

ಬಾಳೆಹಣ್ಣಿನ ಇಡ್ಲಿ ಮಾಡುವ ವಿಧಾನ

ಒಂದು ದೊಡ್ಡ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಅದಕ್ಕೆ ಒಣ ಕೆಂಪು ಮೆಣಸಿನಕಾಯಿ ಮತ್ತು ಸಾಸಿವೆ ಸಾಕಿ. ಸಾಸಿವೆ ಸಿಡಿಯುವುದನ್ನ ನಿಲ್ಲಿಸಿದ ನಂತರ , ಉದ್ದಿನಬೇಳೆ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.

ಈಗ ರವೆ ಸೇರಿಸಿ ತಿಳಿ ಕಂದು ಬಣ್ಣ ಬರುವವರೆಗೆ ಚನ್ನಾಗಿ ಹುರಿಯಿರಿ. ನಂತರ ಅದನ್ನು ತಣ್ಣಗಾಗಲು ಬಿಡಿ.

ಒಂದು ಬಟ್ಟಲಿನಲ್ಲಿ ತುರಿದ ಬಾಳೆಹಣ್ಣು, ಹದಗೊಳಿಸಿದ ರವೆ ಹಾಕಿ ಚನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ಮೊಸರು, ತುರಿದ ತೆಂಗಿನಕಾಯಿ, ಶುಂಠಿ, ಹಸಿರು ಮೆಣಸಿನಕಾಯಿಗಳು, ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಒಟ್ಟಿಗೆ  ಹಾಕಿ ಚನ್ನಾಗಿ ಮಿಶ್ರಣ ಮಾಡಿ.

ನಂತರ ಅದಕ್ಕೆ ಸ್ವಲ್ಪ ನೀರು ಸೇರಿಸಿ ಕಲಸಿ ದಪ್ಪ ಹಿಟ್ಟನ್ನು ತಯಾರಿಸಿ. 15-20 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಅಗತ್ಯವಿದ್ದರೆ ಹೆಚ್ಚಿನ ನೀರನ್ನು ಸೇರಿಸುವ ಮೂಲಕ  ಹಿಟ್ಟನ್ನು ತಯಾರಿಸಿ. ನಂತರ ಅದಕ್ಕೆ ಎನೋ ಹಣ್ಣಿನ ಉಪ್ಪನ್ನು ಸೇರಿಸಿ  ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಇಡ್ಲಿ ಮಾಡುವ ತಟ್ಟೆಯಲ್ಲಿ ತುಪ್ಪವನ್ನು ಹಚ್ಚಿ ಕತ್ತರಿಸಿದ ಹಸಿ ಬಾಳೆಹಣ್ಣನ್ನು ಇರಿಸಿ ಮತ್ತು ನಂತರ ಅದರ ಮೇಲೆ ತಯಾರಿಸಿಕೊಂಡಿರುವ ಹಿಟ್ಟನ್ನು ಹಾಕಿ. ಕಡಿಮೆ ಮಧ್ಯಮ ಉರಿಯಲ್ಲಿ ಪ್ರೆಶರ್ ಕುಕ್ಕರ್‌ನಲ್ಲಿ 15 ನಿಮಿಷಗಳ ಕಾಲ ಸೀಟಿಯಿಲ್ಲದೆ ಬೇಯಿಸಿ.

ಇದನ್ನೂ ಓದಿ: ಬೆಳಗಿನ ಗಡಿಬಿಡಿಯಲ್ಲಿ ಕೇವಲ 10 ನಿಮಿಷದಲ್ಲಿ ತಯಾರಿಸಿ ಈ ಘಮ ಘಮಿಸುವ ಟೊಮ್ಯಾಟೋ ಬಾತ್

ನಂತರ ಗ್ಯಾಸ್​ ಆಫ್ ಮಾಡಿ ಅದನ್ನು ಇನ್ನೊಂದು ಪಾತ್ರೆಗೆ ಕೆಲ ನಿಮಿಷಗಳ ನಂತರ ವರ್ಗಾಯಿಸಿದರೆ ರುಚಿ ರುಚಿಯಾದ ಬಾಳೆಹಣ್ಣಿನ ಇಡ್ಲಿ ರೆಡಿ. ಇದನ್ನು ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್ ಜೊತೆ  ಸೇವಿಸಿದರೆ ಸೂಪರ್ ಟೇಸ್ಟ್​.
Published by:Sandhya M
First published: