ಗರಿಗರಿ ಸಮೋಸಾ (Samosa) ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಮಳೆಗಾಲದಲ್ಲಂತೂ ಸಂಜೆ (Evening) ಆಗ್ತಾ ಏನಾದ್ರೂ ತಿನ್ನಲೇಬೇಕು ಎಂದು ಅನಿಸೋದಂತು ಪಕ್ಕಾ. ಯಾವಾಗ್ಲಾದ್ರೂ ಮನೆಯಲ್ಲೇ ಸಮೋಸ ಮಾಡಿದ್ದೀರಾ? ಮಾಡಿದ ಸಮೋಸ ನಿಮಗೆ ಇಷ್ಟ ಆಗಿತ್ತಾ? ವೆಜ್ ಸಮೋಸಾ ಓಕೆ ಆದ್ರೆ ಚಿಕನ್ ಸಮೋಸ (Chicken Samosa) ಬಗ್ಗೆ ನಿಮಗೇನಾದರೂ ಐಡಿಯಾ ಇದೆಯಾ? ಈ ಲೇಖನದಲ್ಲಿ ನಾವು ಚಿಕನ್ ಸಮೋಸ ಮಾಡುವ ರೆಸಿಪಿ ನೋಡೋಣ. ವೀಕೆಂಡ್ ಅಲ್ವಾ ಸಂಜೆ ಮಳೆಗೆ ಕೂತು ಸಖತ್ ಟೇಸ್ಟಿ (Tasty) ಆಗಿರುವ ಗರಿಗರಿ ಚಿಕನ್ ಸಮೋಸಾ ಮಾಡುವ ವಿಧಾನವನ್ನು ನೋಡೋಣ. ಚಿಕನ್ ಸಮೋಸಾ ಮಾಡುವುದು ತುಂಬಾ ಸರಳ ಅಂತೆಯೇ ಇದು ಹೆಚ್ಚು ರುಚಿಕರವಾಗಿದೆ ಕೂಡ. ಮೊದಲೇ ಇದಕ್ಕೆ ಬೇಕಾದ ಸಿದ್ಧತೆಯನ್ನು ನೀವು ಮಾಡಿಕೊಂಡಲ್ಲಿ ಮಕ್ಕಳ ಜೊತೆ ಬಿಸಿಬಿಸಿ ಸಮೋಸಾವನ್ನು ಚಟ್ನಿಯೊಂದಿಗೆ ಉಣಬಡಿಸಬಹುದು.
ಕೇವಲ 20 ನಿಮಿಷಗಳಲ್ಲಿ ಈ ಗರಿಗರಿಯಾದ ಚಿಕನ್ ಸಮೋಸಾನ್ನು
ನೀವು ಆರು ಜನರಿಗೆ ಆಗುವಷ್ಟು ತಯಾರು ಮಾಡಬಹುದು.
ಇದನ್ನೂ ಓದಿ: Food Recipe: ರೆಸ್ಟೊರೆಂಟ್ ಶೈಲಿಯ ಪಿಜ್ಜಾವನ್ನು ಮನೆಯಲ್ಲಿಯೇ ತಯಾರಿಸಬೇಕಾ? ಇಲ್ಲಿದೆ ಸಿಂಪಲ್ ರೆಸಿಪಿ
ಬೇಕಾಗುವ ಸಾಮಾಗ್ರಿಗಳು
*ಸಣ್ಣದಾಗಿ ಪೀಸ್ ಪೀಸ್ ಮಾಡಿರುವ ಚಿಕನ್ - 1 ಕಪ್
*ಮೆಣಸಿನ ಹುಡಿ - 1 1/2 ಚಮಚ
*ಗರಮ್ ಮಸಾಲಾ - 1 ಚಮಚ
*ಅರಿಶಿನ ಹುಡಿ - 1/2 ಚಮಚ
ಜೀರಿಗೆ - 1 ಚಮಚ
*ಕಾಳುಮೆಣಸು - 1/2 ಚಮಚ
*ಕೊತ್ತಂಬರಿ ಹುಡಿ - 2 ಚಮಚ
*ಉಪ್ಪು ರುಚಿಗೆ ತಕ್ಕಷ್ಟು
* ಹುರಿಯಲು ಅಗತ್ಯವಾದಷ್ಟು ಎಣ್ಣೆ
*ಈರುಳ್ಳಿ - 3 (ಸಣ್ಣದಾಗಿ ಹೆಚ್ಚಿರುವುದು)
*ಬೆಳ್ಳುಳ್ಳಿ ಪೇಸ್ಟ್ - 1 ಚಮಚ
*ಶುಂಠಿ ಪೇಸ್ಟ್ - 1 1/2 ಚಮಚ
(ಜೊತೆಗೆ ಪೇಸ್ಟ್ ಮಾಡಿದರು ಆಗಬಹುದು)
*ಹಸಿಮೆಣಸು - 3 (ಸಣ್ಣದಾಗಿ ಹೆಚ್ಚಿಕೊಂಡಿರುವುದು)
*ಮೊಟ್ಟೆ - 1
*ಮೈದಾ - 2 ಕಪ್
*ನೀರು ಬೇಕಾದಷ್ಟು
ಇದನ್ನೂ ಓದಿ: Non-Veg Recipe: ಸೈಡ್ ಡಿಶ್ಗೆ ಮಾಡಿ ಸ್ಪೈಸಿ ಚಿಕನ್ ಸ್ಟಿಕ್, ರೆಸಿಪಿ ಇಲ್ಲಿದೆ ನೋಡಿ
ಮಾಡುವ ವಿಧಾನ
ಮೊದಲು ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಮತ್ತು ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ ಕಾದಿರುವಂತಹ ಎಣ್ಣೆಗೆ ಹಾಕಿ. ಈರುಳ್ಳಿಯು ಕೆಂಬಣ್ಣಕ್ಕೆ ತಿರುಗಿದಾಗ ಅದಕ್ಕೆ ತಯಾರು ಮಾಡಿದಂತಹ ಶುಂಠಿ ಮತ್ತು ಬೆಳ್ಳುಳ್ಳಿ ಅನ್ನು ಹಾಕಿ ಚೆನ್ನಾಗಿ ತಿರುಗಿಸಿ.
ಮುಂದೆ ಸಣ್ಣದಾಗಿ ಕೊಚ್ಚಿದ ಚಿಕನ್ ಅನ್ನು ಅದಕ್ಕೆ ಸೇರಿಸಿ, ಜೀರಿಗೆ ಹುಡಿ ಮೂರರಿಂದ ನಾಲ್ಕು ಕಾಳು ಮೆಣಸು ಕೊತ್ತಂಬರಿ ಪುಡಿ ಅರಶಿನ ಗರಂ ಮಸಾಲಾ ಮೆಣಸಿನ ಹುಡಿ ಮತ್ತು ಹಸಿಮೆಣಸು ಹಾಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಪ್ಯಾನ್ನಲ್ಲಿ ಬೇಯಿಸಿಕೊಳ್ಳಿ ಚೆನ್ನಾಗಿ ಬೆಂದ ನಂತರ ಇದನ್ನು ಪಕ್ಕದಲ್ಲಿರಿಸಿಕೊಳ್ಳಿ.
ಈಗ ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಹಿಟ್ಟನ್ನು ಸಿದ್ಧಪಡಿಸಿ ಮೈದಾ, ಮೊಟ್ಟೆ, ಸ್ವಲ್ಪ ಉಪ್ಪನ್ನು ಹಿಟ್ಟಿಗೆ ಹಾಕಿ. ಚೆನ್ನಾಗಿ ಎಲ್ಲವನ್ನೂ ಮಿಶ್ರ ಮಾಡಿ. ಇದನ್ನು ಸುಮಾರು 15 ನಿಮಿಷ ಹಾಗೆಯೇ ಬಿಡಿ. 15 ನಿಮಿಷಗಳ ನಂತರ ಹಿಟ್ಟನ್ನು ಸಣ್ಣ ಉಂಡೆ ಮಾಡಿಕೊಂಡು ಸ್ವಲ್ಪ ಲಟ್ಟಿಸಿಕೊಳ್ಳಿ. ಹಿಟ್ಟಿನಿಂದ ಸಣ್ಣ ಉಂಡೆಯನ್ನು ಸಿದ್ಧಪಡಿಸಿ ಮತ್ತು ಚಪ್ಪಟೆ ಹಾಳೆಗಳಲ್ಲಿ ರೋಲ್ ಮಾಡಿಕೊಳ್ಳಿ. ಚಿಕನ್ ಸ್ಟಫಿಂಗ್ ಅನ್ನು ಹಿಟ್ಟಿನೊಳಗೆ ತುಂಬಿಸಿ.
ಹೀಗೆಯೇ ಕೆಲವೊಂದನ್ನು ಮಾಡಿಕೊಳ್ಳಿ, ತಳವಿರುವ ಪ್ಯಾನ್ ಅನ್ನು ತೆಗೆದುಕೊಳ್ಳಿ. ಎಣ್ಣೆ ಕಾದ ನಂತರ ತಯಾರಿಸಿಕೊಂಡ ಸಮೋಸ ಹಾಕಿ. ಎರಡೂ ಬದಿ ಚೆನ್ನಾಗಿ ಹುರಿದುಕೊಳ್ಳಿ ಮತ್ತು ಸಮೋಸಾ ಚಿನ್ನದ ಬಣ್ಣಕ್ಕೆ ಬರುವವರೆಗೆ ಕರಿಯಿರಿ.
ಸರ್ವಿಂಗ್ ಪ್ಲೇಟ್ನಲ್ಲಿ ಸಮೋಸಾವನ್ನು ಇರಿಸಿ ಮತ್ತು ಬಿಸಿಯಾಗಿ ಸೇವಿಸಲು ನೀಡಿ. ಎಣ್ಣೆಯಿಂದ ಹೊರತೆಗೆದ ನಂತರ ಕಿಚನ್ ಟವಲ್ನಲ್ಲಿ ಅದನ್ನು ತೆಗೆದಿರಿಸಿಕೊಳ್ಳಿ. ಸರ್ವಿಂಗ್ ಪ್ಲೇಟ್ನಲ್ಲಿ ಸಮೋಸಾವನ್ನು ಇರಿಸಿ ಮತ್ತು ಬಿಸಿಯಾಗಿ ಸೇವಿಸಲು ನೀಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ